ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮೇರಿ ಮಾಟಿ ಮೇರಾ ದೇಶ್ ಅಭಿಯಾನಕ್ಕೆ ಎಲ್ಲ ಯಶಸ್ಸನ್ನು ಹಾರೈಸಿದ್ದಾರೆ ಮತ್ತು ದೇಶಾದ್ಯಂತದ ಮಣ್ಣಿನಿಂದ ತಯಾರಿಸಿದ ' ವಾಟಿಕಾ ' ' ಏಕ್ ಭಾರತ್ ಶ್ರೇಷ್ಠ ಭಾರತ್ ' ಆದರ್ಶವನ್ನು ಸಾಕಾರಗೊಳಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು
ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ,
" ಶುಭ ಹಾರೈಕೆಗಳು!" 'ಮೇರಿ ಮಾಟಿ-ಮೇರಾ ದೇಶ್ ' ಅಭಿಯಾನವು ನಮ್ಮ ಏಕತೆ ಮತ್ತು ಸಮಗ್ರತೆಯ ಸ್ಫೂರ್ತಿಯನ್ನು ಮತ್ತಷ್ಟು ಬಲಪಡಿಸಲಿದೆ. ಇದರ ಅಡಿಯಲ್ಲಿ, ದೇಶಾದ್ಯಂತ ಸಂಗ್ರಹಿಸಿದ ಮಣ್ಣಿನಿಂದ ಅಮೃತ ವಾಟಿಕಾವನ್ನು ರಚಿಸಲಾಗುವುದು, ಇದು ' ಏಕ್ ಭಾರತ್ ಶ್ರೇಷ್ಠ ಭಾರತ್ ' ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಈ 'ಅಮೃತ ಕಳಶ ಯಾತ್ರೆ'ಯಲ್ಲಿ ನಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳೋಣ,"ಎಂದಿದ್ದಾರೆ.
बहुत-बहुत शुभकामनाएं! ‘मेरी माटी-मेरा देश’ अभियान हमारी एकता और अखंडता की भावना को और सशक्त करने वाला है। मुझे विश्वास है कि इसके तहत देशभर से जमा की गई मिट्टी से एक ऐसी अमृत वाटिका का निर्माण होगा, जो ‘एक भारत श्रेष्ठ भारत’ की कल्पना को साकार करेगा। आइए, इस 'अमृत कलश यात्रा' में… https://t.co/Dgucz1eZwK
— Narendra Modi (@narendramodi) September 1, 2023