ಜನೌಷಧಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಸಾರ್ವಜನಿಕರು ಕೊರೋನಾ ಸೋಂಕಿನ ಬಗ್ಗೆ ವದಂತಿಗಳಿಂದ ದೂರವಿರಬೇಕು ಮತ್ತು ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಲು ಒತ್ತು ನೀಡಬೇಕು ಎಂದರು. ಜನರು ಹಸ್ತಲಾಘವ ಮಾಡುವುದನ್ನು ಬಿಡಬೇಕು ಮತ್ತು ಇತರೆ ಜನರನ್ನು ‘ನಮಸ್ತೆ’ ಎಂದು ಶುಭ ಕೋರುವುದನ್ನು ಆರಂಭಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಸೋಂಕು ನಿಯಂತ್ರಣಕ್ಕೆ ವಿಶೇಷ ವೈದ್ಯರ ತಂಡಗಳ ಮೂಲಕ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕೆಳಗಿನ ಸರಳ ಕ್ರಮಗಳನ್ನು ಪಾಲಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಸಾಧ್ಯವಾದಷ್ಟು ಜನರು ಭಾರೀ ಸಂಖ್ಯೆಯಲ್ಲಿ ಗುಂಪು ಸೇರುವುದರಿಂದ ದೂರವಿರಿ
ಸಾಬೂನಿನಿಂದ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಿ.
ನಿಮ್ಮ ಮುಖ, ಮೂಗು ಮತ್ತು ಬಾಯಿಯನ್ನು ಪದೇ ಪದೇ ಸ್ಪರ್ಶಿಸುವುದು ಬೇಡ.
ಪದೇ ಪದೇ ನಿಮಗೆ ಕೆಮ್ಮು ಅಥವಾ ಸೀನು ಬರುತ್ತಿದ್ದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಿ.
ನೀವು ಕೆಮ್ಮುವಾಗ ಮತ್ತು ಸೀನುವಾಗ ಇತರೆಯವರ ಮೇಲೆ ಅದರ ಕಣಗಳು ಬೀಳದಂತೆ ನೋಡಿಕೊಳ್ಳಿ.
ಮಾಸ್ಕ್ ಅಥವಾ ಕೈಚೀಲವನ್ನು ಧರಿಸಿ ಮತ್ತು ಇತರೆ ಜನರಿಂದ ಅಂತರವನ್ನು ಕಾಯ್ದುಕೊಳ್ಳಿ.
ನೀವು ಮಾಸ್ಕ್ ಅನ್ನು ಧರಿಸಿದರೆ ಅದನ್ನು ಶುಚಿಯಾದ ಕೈಗಳಿಂದ ಸರಿಯಾಗಿಟ್ಟುಕೊಳ್ಳಿ.