ಲಕ್ಷದ್ವೀಪದಲ್ಲಿ “ಪೌಷ್ಟಿಕ ಉದ್ಯಾನ ಯೋಜನೆ”ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷದ್ವೀಪದ ಜನ ಹೊಸ ವಿಷಯಗಳನ್ನು ಕಲಿಯಲು ಮತ್ತು ಅಳವಡಿಸಿಕೊಳ್ಳಲು ಎಷ್ಟೊಂದು ಕಾತುರರಾಗಿದ್ದಾರೆ ಎಂಬುದನ್ನು ಈ ಉಪಕ್ರಮ ನಿರೂಪಿಸಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ದ್ಯೇಯದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಿದ್ದು, ಇದರ ಪರಿಣಾಮ 1000 ರೈತರಿಗೆ ತರಕಾರಿ ಬೀಜಗಳನ್ನು ಒದಗಿಸಲಾಗಿದೆ.
ಇದಲ್ಲದೇ ʼಮನೆಯ ಹಿತ್ತಲ ಕೋಳಿʼ ಯೋಜನೆಯಡಿ 600 ರೂಪಾಯಿಗೂ ಕಡಿಮೆ ಆದಾಯ ಹೊಂದಿರುವ ಲಕ್ಷದ್ವೀಪದ 7000 ಮಹಿಳೆಯರಿಗೆ ಕೋಳಿ ತಳಿಗಳನ್ನು ವಿತರಿಸಲಾಗಿದೆ.
ಈ ಕುರಿತು ಲಕ್ಷದ್ವೀಪದ ರಾಜ್ಯಪಾಲರು ಮಾಡಿರುವ ಟ್ವೀಟ್ ಗೆ ಪ್ರಧಾನಮಂತ್ರಿಯವರು ಪ್ರತಿಕ್ರಿಯೆ ನೀಡಿದ್ದಾರೆ.
सराहनीय प्रयास, बेहतरीन परिणाम! इस पहल ने दिखाया है कि लक्षद्वीप के लोग नई चीजें सीखने और अपनाने को लेकर कितने उत्साहित रहते हैं। https://t.co/5UFl57RtjK
— Narendra Modi (@narendramodi) June 10, 2023