ಸರ್ಕಾರದ ವಿದ್ಯುನ್ಮಾನ ಮಾರುಕಟ್ಟೆ ಸ್ಥಳ(ಇ-ಮಾರ್ಕೆಟ್ ಪ್ಲೇಸ್-ಜಿಇಎಂ) 2021-22ನೇ ಸಾಲಿನಲ್ಲಿ ಗರಿಷ್ಠ ಅಂದರೆ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಸರಕುಗಳು ಮತ್ತು ಉತ್ಪನ್ನಗಳ ಖರೀದಿ ವಹಿವಾಟು ನಡೆಸಿರುವುದನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಸರ್ಕಾರದ ವಿದ್ಯುನ್ಮಾನ-ಮಾರುಕಟ್ಟೆ ಸ್ಥಳವು(ಜಿಇಎಂ) ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ(ಎಂಎಸ್ಎಂಇ) ವಲಯವನ್ನು ಬಲಿಷ್ಟಗೊಳಿಸುತ್ತಿದೆ, ಇ-ಮಾರ್ಕೆಟ್ ಪ್ಲೇಸ್ ಗೆ ಶೇ.57 ರಷ್ಟು ಉತ್ಪನ್ನ ಅಥವಾ ಸರಕುಗಳ ಖರೀದಿ ಪ್ರಮಾಣ ಎಂಎಸ್ಎಂಇಯಿಂದಲೇ ಬರುತ್ತಿದೆ ಎಂದು ಪ್ರಧಾನ ಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
“ಜಿಇಎಂ ಇಂಡಿಯಾ ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂ. ಮೊತ್ತದ ವ್ಯಾಪಾರಾದೇಶ ಮೌಲ್ಯ ಪಡೆದಿರುವುದು ಬಹುದೊಡ್ಡ ಸಾಧನೆ. ಈ ಸಾಧನೆ ತಿಳಿದು ಸಂತಸವಾಗಿದೆ! ಹಿಂದಿನ ವರ್ಷಗಳಿಗೆ ಹೋಲಿಸಿದರೆ ಖರೀದಿ ಪ್ರಕ್ರಿಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಜಿಇಎಂ ವೇದಿಕೆಯು ಎಂಎಸ್ಎಂಇ ವಲಯವನ್ನು ಸಬಲೀಕರಿಸುತ್ತಿದೆ. ಈ ವಲಯದಿಂದ ಜಿಇಎಂಗೆ ಶೇ.57 ವ್ಯಾಪಾರದ ಆದೇಶ ಮೌಲ್ಯ ಬರುತ್ತಿದೆ.” ಎಂದಿದ್ದಾರೆ.
Happy to know that @GeM_India has achieved order value of Rs 1 Lakh Crore in a single year! This is a significant increase from previous years. The GeM platform is especially empowering MSMEs, with 57% of order value coming from MSME sector. pic.twitter.com/ylzSezZsjG
— Narendra Modi (@narendramodi) March 24, 2022