ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಿಇಎಂ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದಕ್ಕಾಗಿ ಮಾರಾಟಗಾರರನ್ನು ಶ್ಲಾಘಿಸಿದ್ದಾರೆ.
ಜಿಇಎಂ ಪ್ಲಾಟ್ ಫಾರ್ಮ್ 2022-2023 ರ ವಿತ್ತೀಯ ವರ್ಷದಲ್ಲಿ, 2022 ರ ನವೆಂಬರ್ 29 ರವರೆಗೆ 1 ಲಕ್ಷ ಕೋಟಿ ರೂ.ಗಳ ಒಟ್ಟು ಸರಕು ಮೌಲ್ಯವನ್ನು ದಾಟುತ್ತದೆ.
ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್ ಗೆ ಉತ್ತರವಾಗಿ, ಪ್ರಧಾನಮಂತ್ರಿಯವರು ಮರು-ಟ್ವೀಟ್ ಹೀಗೆ ಮಾಡಿದ್ದಾರೆ:
"ಅದ್ಭುತ ಸುದ್ದಿ! ಭಾರತದ ಉದ್ಯಮಶೀಲತೆಯ ಉತ್ಸಾಹವನ್ನು ಪ್ರದರ್ಶಿಸುವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ವಿಷಯಕ್ಕೆ ಬಂದಾಗ @GeM_India ಗೇಮ್ ಚೇಂಜರ್ ಆಗಿದೆ. ಈ ವೇದಿಕೆಯಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ. ಇತರರು ಕೂಡಾ ಇದನ್ನು ಅನುಸರಿಸುವಂತೆ ಒತ್ತಾಯಿಸುತ್ತೇನೆ," ಎಂದು ಮರು-ಟ್ವೀಟ್ ಮಾಡಿದ್ದಾರೆ.
Excellent news! @GeM_India is a game changer when it comes to showcasing India’s entrepreneurial zeal and furthering transparency. I laud all those who are displaying their products on this platform and urge others to do the same. https://t.co/O2gioaxxrL
— Narendra Modi (@narendramodi) November 29, 2022