ದೇಶದಲ್ಲಿ ಕೇವಲ 4 ವರ್ಷಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದ ಮನೆಗಳ ಸಂಖ್ಯೆ 3 ರಿಂದ 13 ಕೋಟಿಗೆ ಏರಿಕೆಯಾಗಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಲ ಜೀವನ್ ಮಿಷನ್ ಯೋಜನೆಯು ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಮೈಲುಗಲ್ಲು ನಿರ್ಮಿಸುವ ಜತೆಗೆ ಜನರ ಜೀವನ ಸುಗಮ ಹಾಗೂ ಸಾರ್ವಜನಿಕ ಆರೋಗ್ಯ ಮಟ್ಟವನ್ನುಹೆಚ್ಚಿಸಿದೆ ಎಂದೂ ಬಣ್ಣಿಸಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ "ಎಕ್ಸ್" ಜಾಲತಾಣ ಸಂದೇಶಕ್ಕೆ ಪ್ರಧಾನಿಯವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
इस शानदार उपलब्धि के लिए बहुत-बहुत बधाई! ग्रामीण भारत के मेरे परिवारजनों तक पीने का शुद्ध पानी पहुंचे, इस दिशा में ‘जल जीवन मिशन’ मील का पत्थर साबित होने जा रहा है। यह ना सिर्फ उनकी परेशानियों को दूर करने में मददगार बना है, बल्कि उनके बेहतर स्वास्थ्य को भी सुनिश्चित कर रहा है। https://t.co/0yU6Y2feb9
— Narendra Modi (@narendramodi) September 5, 2023