'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್' ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮೂಲದ ಅಂತರಿಕ್ಷಯಾನ ಮತ್ತು ರಕ್ಷಣಾ ತಂತ್ರಜ್ಞಾನಗಳ ಉತ್ಪಾದನಾ ಕಂಪೆನಿ ಲಾಕ್ಹೀಡ್ ಮಾರ್ಟಿನ್ ನ ಬದ್ಧತೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಲಾಕ್ಹೀಡ್ ಮಾರ್ಟಿನ್ ನ ಸಿಇಒ, ಜಿಮ್ ಟೈಕ್ಲೆಟ್ ಅವರು ಗುರುವಾರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿ ಕಚೇರಿ,
"CEO of @LockheedMartin, ಜಿಮ್ ಟೈಕ್ಲೆಟ್ ಅವರು ಪ್ರಧಾನ ಮಂತ್ರಿಗಳಾದ ಶ್ರೀ @narendramodi ಅವರನ್ನು ಭೇಟಿ ಮಾಡಿದರು. ಲಾಕ್ಹೀಡ್ ಮಾರ್ಟಿನ್ ಭಾರತ-ಯುಎಸ್ ಅಂತರಿಕ್ಷಯಾನ ಮತ್ತು ರಕ್ಷಣಾ ಕೈಗಾರಿಕಾ ಸಹಕಾರದಲ್ಲಿ ಪ್ರಮುಖ ಪಾಲುದಾರ ಕಂಪೆನಿಯಾಗಿದೆ. 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್" ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಸಂಸ್ಥೆಯ ಬದ್ಧತೆಯನ್ನು ನಾವು ಸ್ವಾಗತಿಸುತ್ತೇವೆ" ಎಂದು ಬರೆದಿದೆ.
CEO of @LockheedMartin, Jim Taiclet met Prime Minister @narendramodi. Lockheed Martin is a key partner in India-US Aerospace and Defence Industrial cooperation. We welcome it's commitment towards realising the vision of 'Make in India, Make for the World.' https://t.co/15PuZ7a8JG
— PMO India (@PMOIndia) July 19, 2024