ಚಂದೌಸಿ ಮತ್ತು ಸಿಕಂದರಾಬಾದ್ನ ಸಂತ್ರಸ್ತರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿ.ಎಂ.ಎನ್.ಆರ್.ಎಫ್.) ಪರಿಹಾರವನ್ನು ಘೋಷಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಈ ರೀತಿ ಟ್ವೀಟ್ ಮಾಡಿದೆ;
"ಚಂದೌಸಿ ಮತ್ತು ಸಿಕಂದರಾಬಾದ್ ನಲ್ಲಿ ಸಂಭವಿಸಿದ ದುರಂತಗಳಲ್ಲಿ ಮೃತಪಟ್ಟ ಪ್ರತಿಯೊಬ್ಬರ ಸಂಬಂಧಿಕರಿಗೂ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿ.ಎಂ.ಎನ್.ಆರ್.ಎಫ್.) ರೂ. 2ಲಕ್ಷಗಳ ಪರಿಹಾರವನ್ನು ಪ್ರಧಾನಮಂತ್ರಿ @narendramodi ಅವರು ಘೋಷಿಸಿದ್ದಾರೆ. ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ನೀಡಲಾಗುವುದು."
PM @narendramodi has announced an ex-gratia of Rs. 2 lakh from PMNRF to the next of kin of each deceased in the tragedies in Chandausi and Secunderabad. Those injured would be given Rs. 50,000.
— PMO India (@PMOIndia) March 17, 2023