ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಯೋಗದ ಮಹತ್ವದ ಬಗ್ಗೆ ನೀಡಿರುವ ಹೇಳಿಕೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಯೋಗ ದಿನವು ನಮ್ಮೆಲ್ಲರನ್ನೂ ಇನ್ನಷ್ಟು ಹತ್ತಿರಕ್ಕೆ ತರಲಿ, ಈ ಭೂಗ್ರಹದ ಆರೋಗ್ಯವನ್ನು ಸುಧಾರಿಸಲಿ ಎಂದು ಪ್ರಧಾನ ಮಂತ್ರಿ ಹಾರೈದ್ದಾರೆ.
ವಿಭಜಿತ ಜಗತ್ತಿನಲ್ಲಿ, ಯೋಗವು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಒಂದುಗೂಡಿಸುತ್ತದೆ, ಅವರಿಗೆ ಇದು ಶಕ್ತಿ, ಸಾಮರಸ್ಯ ಮತ್ತು ಶಾಂತಿಯ ಮೂಲವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಅವರು;
"ಯೋಗದ ಮಹತ್ವದ ಬಗ್ಗೆ @UN ಮಹಾಪ್ರಧಾನ ಕಾರ್ಯದರ್ಶಿ @antonioguterres ಅವರು ಹೇಳಿರುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಯೋಗ ದಿನವು ನಮ್ಮೆಲ್ಲರನ್ನೂ ಹತ್ತಿರ ತರಲಿ ಮತ್ತು ನಮ್ಮ ಭೂಗ್ರಹದ ಆರೋಗ್ಯವನ್ನು ಸುಧಾರಿಸಲಿ” ಎಂದು ಹೇಳಿದ್ದಾರೆ.
Fully agree with @UN Secretary General @antonioguterres on the importance of Yoga. May Yoga Day bring us all closer and improve the health of our planet. https://t.co/enNyUJte32
— Narendra Modi (@narendramodi) June 21, 2023