ನಿಮ್ಮ ಘನತೆವೆತ್ತ ಪ್ರಧಾನ ಮಂತ್ರಿ ಆಂಡ್ರ್ಯೂ ಹೋಲ್ನೆಸ್,
ಎರಡೂ ದೇಶಗಳ ಪ್ರತಿನಿಧಿಗಳು,
ಮಾಧ್ಯಮ ಸಹೋದ್ಯೋಗಿಗಳು,
ನಮಸ್ಕಾರ!
ಪ್ರಧಾನ ಮಂತ್ರಿ ಹೋಲ್ನೆಸ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಇದು ಪ್ರಧಾನಮಂತ್ರಿ ಹೋಲ್ನೆಸ್ ಅವರ ಮೊದಲ ದ್ವಿಪಕ್ಷೀಯ ಭಾರತ ಭೇಟಿಯಾಗಿದೆ. ಅದಕ್ಕಾಗಿಯೇ ನಾವು ಈ ಭೇಟಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತೇವೆ.ಪ್ರಧಾನ ಮಂತ್ರಿ ಹೋಲ್ನೆಸ್ ಅವರು ಬಹಳ ಹಿಂದಿನಿಂದಲೂ ಭಾರತದ ಸ್ನೇಹಿತರಾಗಿದ್ದಾರೆ. ಹಲವಾರು ಬಾರಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ದೊರೆತಿದೆ. ಮತ್ತು ಪ್ರತಿ ಬಾರಿಯೂ, ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ಅವರ ಆಲೋಚನೆಗಳಲ್ಲಿ ಅವರ ಬದ್ಧತೆಯನ್ನು ನಾನು ಅರಿತುಕೊಂಡಿದ್ದೇನೆ. ಅವರ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಇಡೀ ಕೆರಿಬಿಯನ್ ಪ್ರದೇಶದೊಂದಿಗಿನ ನಮ್ಮ ಬಾಂಧವ್ಯವನ್ನು ವರ್ಧಿಸುತ್ತದೆ ಎಂದು ನನಗೆ ವಿಶ್ವಾಸವಿದೆ.
ಸ್ನೇಹಿತರೇ,
ಭಾರತ ಮತ್ತು ಜಮೈಕಾದ ಸಂಬಂಧವು ನಮ್ಮ ಹಂಚಿಕೆಯ ಇತಿಹಾಸ, ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಜನರ ನಡುವಿನ ಬಲವಾದ ಸಂಬಂಧಗಳಲ್ಲಿ ಬೇರೂರಿದೆ. ನಾಲ್ಕು C ಗಳು ನಮ್ಮ ಸಂಬಂಧಗಳನ್ನು ಗುರುತಿಸುತ್ತವೆ - ಸಂಸ್ಕೃತಿ, ಕ್ರಿಕೆಟ್, ಕಾಮನ್ವೆಲ್ತ್ ಮತ್ತು CARICOM. ಇಂದಿನ ಸಭೆಯಲ್ಲಿ, ನಾವು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದೇವೆ ಮತ್ತು ಹಲವಾರು ಹೊಸ ಉಪಕ್ರಮಗಳನ್ನು ಗುರುತಿಸಿದ್ದೇವೆ. ಭಾರತ ಮತ್ತು ಜಮೈಕಾ ನಡುವೆ ವ್ಯಾಪಾರ ಮತ್ತು ಹೂಡಿಕೆ ಬೆಳೆಯುತ್ತಿದೆ. ಜಮೈಕಾದ ಅಭಿವೃದ್ಧಿಯ ಪಯಣದಲ್ಲಿ ಭಾರತವು ಯಾವಾಗಲೂ ವಿಶ್ವಾಸಾರ್ಹ ಮತ್ತು ಬದ್ಧ ಅಭಿವೃದ್ಧಿ ಪಾಲುದಾರನಾಗಿದೆ. ಈ ದಿಕ್ಕಿನಲ್ಲಿ ನಮ್ಮ ಎಲ್ಲಾ ಪ್ರಯತ್ನಗಳು ಜಮೈಕಾದ ಜನರ ಅಗತ್ಯತೆಗಳ ಸುತ್ತ ಕೇಂದ್ರೀಕೃತವಾಗಿವೆ. ITEC ಮತ್ತು ICCR ಸ್ಕಾಲರ್ಶಿಪ್ಗಳ ಮೂಲಕ, ನಾವು ಜಮೈಕನ್ನರ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಕೊಡುಗೆ ನೀಡಿದ್ದೇವೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸಣ್ಣ ಕೈಗಾರಿಕೆಗಳು, ಜೈವಿಕ ಇಂಧನ, ನಾವೀನ್ಯತೆ, ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ನಮ್ಮ ಅನುಭವವನ್ನು ಜಮೈಕಾದೊಂದಿಗೆ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ. ರಕ್ಷಣಾ ವಲಯದಲ್ಲಿ ಜಮೈಕಾ ಸೇನೆಯ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ನಾವು ಬೆಂಬಲ ನೀಡುತ್ತೇವೆ. ಸಂಘಟಿತ ಅಪರಾಧ, ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದನೆ ನಮ್ಮ ಸಾಮಾನ್ಯ ಸವಾಲುಗಳಾಗಿವೆ. ಈ ಸವಾಲುಗಳನ್ನು ಒಟ್ಟಾಗಿ ಎದುರಿಸಲು ನಾವು ಒಪ್ಪುತ್ತೇವೆ. ಬಾಹ್ಯಾಕಾಶದಲ್ಲಿ ನಮ್ಮ ಯಶಸ್ವಿ ಅನುಭವವನ್ನು ಜಮೈಕಾದೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.
ಸ್ನೇಹಿತರೇ,
ಇಂದಿನ ಸಭೆಯಲ್ಲಿ ನಾವು ಹಲವಾರು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ. ಎಲ್ಲಾ ಉದ್ವಿಗ್ನತೆ ಮತ್ತು ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಒಪ್ಪುತ್ತೇವೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಎಲ್ಲಾ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ತರುವುದು ಅನಿವಾರ್ಯ ಎಂದು ಭಾರತ ಮತ್ತು ಜಮೈಕಾ ಒಪ್ಪಿಕೊಂಡಿವೆ. ಈ ಸಂಸ್ಥೆಗಳನ್ನು ಆಧುನೀಕರಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.
ಸ್ನೇಹಿತರೇ,
ಭಾರತ ಮತ್ತು ಜಮೈಕಾ ವಿಶಾಲವಾದ ಸಾಗರಗಳಿಂದ ಬೇರ್ಪಟ್ಟಿರಬಹುದು, ಆದರೆ ನಮ್ಮ ಮನಸ್ಸುಗಳು, ನಮ್ಮ ಸಂಸ್ಕೃತಿಗಳು ಮತ್ತು ನಮ್ಮ ಇತಿಹಾಸಗಳು ಆಳವಾಗಿ ಹೆಣೆದುಕೊಂಡಿವೆ. ಸುಮಾರು 180 ವರ್ಷಗಳ ಹಿಂದೆ ಭಾರತದಿಂದ ಜಮೈಕಾಗೆ ವಲಸೆ ಬಂದ ಜನರು ನಮ್ಮ ಜನರ ನಡುವಿನ ಬಾಂಧವ್ಯಕ್ಕೆ ಬಲವಾದ ಅಡಿಪಾಯ ಹಾಕಿದರು. ಇಂದು, ಜಮೈಕಾವನ್ನು ತವರು ಎಂದು ಕರೆಯುವ ಭಾರತೀಯ ಮೂಲದ ಸುಮಾರು 70,000 ಜನರು ನಮ್ಮ ಹಂಚಿಕೆಯ ಪರಂಪರೆಯ ಜೀವಂತ ಉದಾಹರಣೆಯಾಗಿದೆ. ಅವರ ಕಾಳಜಿಗಾಗಿ ಮತ್ತು ಸಮುದಾಯವನ್ನು ಬೆಂಬಲಿಸಿದ್ದಕ್ಕಾಗಿ ನಾನು ಪ್ರಧಾನ ಮಂತ್ರಿ ಹೋಲ್ನೆಸ್ ಮತ್ತು ಅವರ ಸರ್ಕಾರಕ್ಕೆ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.
ಜಮೈಕಾದಲ್ಲಿ ಯೋಗ, ಬಾಲಿವುಡ್ ಮತ್ತು ಭಾರತದಿಂದ ಜಾನಪದ ಸಂಗೀತವನ್ನು ಅಳವಡಿಸಿಕೊಂಡಂತೆ, ಜಮೈಕಾದ "ರೆಗ್ಗೀ" ಮತ್ತು "ಡ್ಯಾನ್ಸ್ ಹಾಲ್" ಸಹ ಭಾರತದಲ್ಲಿ ಜನಪ್ರಿಯವಾಗುತ್ತಿವೆ. ಇಂದು ಆಯೋಜಿಸಲಾದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವು ನಮ್ಮ ಪರಸ್ಪರ ಸಂಬಂಧವನ್ನು ಬಲಪಡಿಸುತ್ತದೆ. ದೆಹಲಿಯ ಜಮೈಕಾ ಹೈಕಮಿಷನ್ ಮುಂಭಾಗದ ರಸ್ತೆಗೆ ‘ಜಮೈಕಾ ರಸ್ತೆ’ ಎಂದು ಹೆಸರಿಸಲು ನಿರ್ಧರಿಸಿದ್ದೇವೆ. ಈ ಮಾರ್ಗವು ಮುಂದಿನ ಪೀಳಿಗೆಗೆ ನಮ್ಮ ಶಾಶ್ವತ ಸ್ನೇಹ ಮತ್ತು ಸಹಕಾರದ ಸಂಕೇತವಾಗಿದೆ.
ಕ್ರಿಕೆಟ್ ಪ್ರೀತಿಸುವ ದೇಶಗಳಾಗಿ, ಕ್ರೀಡೆಗಳು ನಮ್ಮ ಸಂಬಂಧಗಳಲ್ಲಿ ಬಹಳ ಬಲವಾದ ಮತ್ತು ಪ್ರಮುಖ ಸಂಪರ್ಕ ಕೊಂಡಿಯಾಗಿದೆ . ಅದು "ಕರ್ಟ್ನಿ ವಾಲ್ಷ್" ನ ದಂತಕಥೆಯ ವೇಗದ ಬೌಲಿಂಗ್ ಆಗಿರಲಿ ಅಥವಾ "ಕ್ರಿಸ್ ಗೇಲ್" ನ ಸ್ಫೋಟಲ ಬ್ಯಾಟಿಂಗ್ ಆಗಿರಲಿ, ಭಾರತದ ಜನರಿಗೆ ಜಮೈಕಾದ ಕ್ರಿಕೆಟಿಗರ ಬಗ್ಗೆ ವಿಶೇಷ ಪ್ರೀತಿ ಇದೆ. ಕ್ರೀಡೆಯಲ್ಲಿ ನಮ್ಮ ಸಹಕಾರವನ್ನು ಗಾಢವಾಗಿಸುವ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಇಂದಿನ ಚರ್ಚೆಗಳ ಫಲಿತಾಂಶಗಳು ನಮ್ಮ ಸಂಬಂಧವನ್ನು "ಉಸೇನ್ ಬೋಲ್ಟ್" ಗಿಂತ ವೇಗವಾಗಿ ಮುನ್ನಡೆಸುತ್ತವೆ ಎಂದು ನನಗೆ ವಿಶ್ವಾಸವಿದೆ. ಇದು ನಮಗೆ ನಿರಂತರವಾಗಿ ಹೊಸ ಎತ್ತರವನ್ನು ತಲುಪಲು ಅನುವು ಮಾಡಿಕೊಡುತ್ತದೆ.
ಗೌರವಾನ್ವಿತರೇ,
ಮತ್ತೊಮ್ಮೆ, ನಾನು ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ತುಂಬಾ ಧನ್ಯವಾದಗಳು!
प्रधान मंत्री होलनेस और उनके डेलिगेशन का भारत में स्वागत करते हुए मुझे बहुत खुशी हो रही है।
— PMO India (@PMOIndia) October 1, 2024
आज पहली बार जमैका के प्रधान मंत्री भारत की द्विपक्षीय यात्रा पर आए हैं।
इसलिए हम इस यात्रा को विशेष महत्व देते हैं: PM @narendramodi
भारत और जमैका के संबंध हमारे साझा इतिहास, साझा लोकतान्त्रिक मूल्यों और मजबूत people-to-people ties पर आधारित हैं।
— PMO India (@PMOIndia) October 1, 2024
Four Cs हमारे संबंधों को अंकित करते हैं – Culture, Cricket, Commonwealth और CARICOM: PM @narendramodi
Digital Public Infrastructure, लघु उद्योग, biofuel, innovation, health, education, agriculture जैसे क्षेत्रों में हम अपना अनुभव जमैका के साथ साझा करने के लिए तैयार हैं।
— PMO India (@PMOIndia) October 1, 2024
रक्षा के क्षेत्र में भारत द्वारा जमैका की सेना की ट्रेनिंग और capacity building पर हम आगे बढ़ेंगे: PM…
भारत और जमैका एकमत हैं कि United Nations Security Council सहित सभी global institutions में सुधार आवश्यक है।
— PMO India (@PMOIndia) October 1, 2024
इन्हें समकालीन रूप देने के लिए हम साथ मिलकर काम करते रहेंगे: PM @narendramodi
हमने दिल्ली में जमैका उच्चायोग के सामने सड़क का नाम "जमैका मार्ग" रखने का निर्णय लिया है।
— PMO India (@PMOIndia) October 1, 2024
यह सड़क भावी पीढ़ियों के लिए हमारी गहरी मित्रता और हमारे सहयोग का मार्ग प्रशस्त करेगी: PM @narendramodi