ಆಸ್ಟ್ರೇಲಿಯಾ ದೇಶದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರೇ,

ಎರಡೂ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮ ಮಿತ್ರರೇ,

ನಮಸ್ಕಾರ!

ನನ್ನ ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತಿಥ್ಯ ಮತ್ತು ಗೌರವಕ್ಕಾಗಿ ನಾನು ಆಸ್ಟ್ರೇಲಿಯದ ಜನರಿಗೆ ಮತ್ತು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುಸುತ್ತೇನೆ. ನನ್ನ ಸ್ನೇಹಿತರಾದ ಪ್ರಧಾನಿ ಆಂಥೋನಿ  ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದ ಎರಡು ತಿಂಗಳೊಳಗೆ ನಾನು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಆರನೇ ಸಭೆಯಾಗಿದೆ.
ಇದು ನಮ್ಮ ಸಮಗ್ರ ಸಂಬಂಧಗಳ ಗಾಢವಾದ, ನಮ್ಮ ಅಭಿಪ್ರಾಯಗಳಲ್ಲಿನ ಒಮ್ಮತ ಮತ್ತು ನಮ್ಮ ಸಂಬಂಧಗಳ ಪರಿಪಕ್ವತೆಯನ್ನು ಪ್ರತಿಬಿಂಬಿಸುತ್ತದೆ. ನಾನು ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ, ನಮ್ಮ ಸಂಬಂಧಗಳು ಟಿ-20 ಮೋಡ್ಗೆ ಪ್ರವೇಶಿಸಿವೆ.

ಗಣ್ಯರೇ, ಮಹನೀಯರೇ,

ನಿನ್ನೆ ನೀವು ಹೇಳಿದಂತೆ ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳು ನಮ್ಮ ಬಾಂಧವ್ಯಗಳ ಬುನಾದಿ. ನಮ್ಮ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವು ನಮ್ಮ ಎರಡು ದೇಶಗಳ ನಡುವೆ ಪ್ರಮುಖ ಸೇತುವೆಯಾಗಿದೆ. ಕಳೆದ ಸಂಜೆ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮತ್ತು ನಾನು ಹ್ಯಾರಿಸ್ ಪಾರ್ಕ್ನ 'ಲಿಟಲ್ ಇಂಡಿಯಾ' ಅನಾವರಣಗೊಳಿಸಿದೆವು. ಇಲ್ಲಿನ ಈವೆಂಟ್ನಲ್ಲಿ ಪ್ರಧಾನ ಮಂತ್ರಿ ಅಲ್ಬನೀಸ್ ಅವರ ಜನಪ್ರಿಯತೆ ಎಷ್ಟು ಇತ್ತು ಎಂಬುದನ್ನು ನಾನು ಗ್ರಹಿಸಬಲ್ಲೆ.

ಸ್ನೇಹಿತರೇ,

ಇಂದು, ಪ್ರಧಾನ ಮಂತ್ರಿ ಆಂಥೋನಿ  ಅಲ್ಬನೀಸ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ಮುಂದಿನ ದಶಕದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಕುರಿತು ಮಾತನಾಡಿದ್ದೇವೆ. ಹೊಸ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ನಾವು ಸಮಗ್ರವಾಗಿ ಚರ್ಚೆ ನಡೆಸಿದ್ದೇವೆ. ಕಳೆದ ವರ್ಷ ಭಾರತ-ಆಸ್ಟ್ರೇಲಿಯಾ ECTA ಜಾರಿಗೆ ಬಂದಿತು. ಇಂದು ನಾವು CECA - ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದ್ದೇವೆ. ಇದು ನಮ್ಮ ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕೆ ಮತ್ತಷ್ಟು ಬಲ ಮತ್ತು ಹೊಸ ಆಯಾಮಗಳನ್ನು ನೀಡುತ್ತದೆ.

ಗಣಿಗಾರಿಕೆ ಮತ್ತು ಖನಿಜಗಳ ವಲಯಗಳಲ್ಲಿ ನಮ್ಮ ಕಾರ್ಯತಂತ್ರದ ಸಹಕಾರವನ್ನು ಬಲಪಡಿಸುವ ಕುರಿತು ನಾವು ರಚನಾತ್ಮಕ ಚರ್ಚೆ ನಡೆಸಿದ್ದೇವೆ. ನವೀಕರಿಸಬಹುದಾದ ಇಂಧನ ಶಕ್ತಿಯಲ್ಲಿ ಸಹಕಾರಕ್ಕಾಗಿ ನಾವು ಕೆಲವು ಸೂಕ್ಷ್ಮ ವಿಷಯಗಳನ್ನು ಗುರುತಿಸಿದ್ದೇವೆ. ಗ್ರೀನ್ ಹೈಡ್ರೋಜನ್ ಕುರಿತು ಕಾರ್ಯಪಡೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ನಿನ್ನೆ ನಾನು ಆಸ್ಟ್ರೇಲಿಯಾದ ಸಿಇಒಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಕುರಿತು ಚರ್ಚೆ ನಡೆಸಿದ್ದೇನೆ. ಈ ಸಭೆ ಅತ್ಯಂತ ಫಲಪ್ರದವಾಗಿತ್ತು. ಇಂದು ನಾನು ದುಂಡು ಮೇಜಿನ ಸಭೆಯಲ್ಲಿ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನದ ಸಹಕಾರದ ಬಗ್ಗೆ ಮಾತನಾಡುತ್ತೇನೆ.

ಇಂದು, ವಲಸೆ ಮತ್ತು ಇತರೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ನಮ್ಮ ದೇಶದ ನಡುವಿನ ಸಂಪರ್ಕ ಸೇತುವೆಯನ್ನು ಮತ್ತಷ್ಟು ಬಲಪಡಿಸುತ್ತದೆ. ನಿರಂತರವಾಗಿ ಬೆಳೆಯುತ್ತಿರುವ ಸಂಬಂಧವನ್ನು ಗಾಢವಾಗಿಸಲು, ನಾನು ನಿನ್ನೆ ಘೋಷಿಸಿದಂತೆ, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಹೊಸ ಕಾನ್ಸುಲೇಟ್ ಅನ್ನು ತೆರೆಯುವುದಾಗಿ ಆಸ್ಟ್ರೇಲಿಯಾ ಘೋಷಿಸಿದಂತೆ ನಾವು ಶೀಘ್ರದಲ್ಲೇ ಬ್ರಿಸ್ಬೇನ್ನಲ್ಲಿ ಹೊಸ ಭಾರತೀಯ ದೂತಾವಾಸ ಕಚೇರಿಯನ್ನು ತೆರೆಯುತ್ತೇವೆ.

ಸ್ನೇಹಿತರೇ,

ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿಯ ವಿಷಯ ಮತ್ತು ಈ ಹಿಂದೆ ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ಬಗ್ಗೆ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮತ್ತು ನಾನು ಚರ್ಚಿಸಿದ್ದೇವೆ. ಇಂದು ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಾವುದೇ ಅಂಶವು ಅವರಆಲೋಚನೆಗಳು ಅಥವಾ ಅವರ ಕಾರ್ಯಗಳಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ಪಷ್ಟ ಮತ್ತು ಸೌಹಾರ್ದ ಸಂಬಂಧವನ್ನು ಹಾನಿಗೊಳಿಸುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅವರು ತೆಗೆದುಕೊಂಡ ಕ್ರಮಗಳಿಗಾಗಿ ನಾನು ಪ್ರಧಾನ ಮಂತ್ರಿ ಅಲ್ಬನೀಸ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮತ್ತು ಅದೇ ಸಮಯದಲ್ಲಿ, ಅಂತಹ ಅಂಶಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುವುದಾಗಿ ಮತ್ತೊಮ್ಮೆ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಜತೆಯಾಗಿರುತ್ತೇವೆ ಎಂದು ಸ್ಪಷ್ಟಪಡಿಸುತ್ತೇನೆ. 

ಸ್ನೇಹಿತರೇ

ಭಾರತ-ಆಸ್ಟ್ರೇಲಿಯಾ ಸಂಬಂಧಗಳ ವ್ಯಾಪ್ತಿ ಕೇವಲ ನಮ್ಮ ಎರಡು ದೇಶಗಳಿಗೆ ಸೀಮಿತವಾಗಿಲ್ಲ. ಇದು ಪ್ರಾದೇಶಿಕ ಸ್ಥಿರತೆ, ಶಾಂತಿ ಮತ್ತು ಜಾಗತಿಕ ಕಲ್ಯಾಣಕ್ಕೂ ಸಂಬಂಧ ಹೊಂದಿದೆ. ಕೆಲವು ದಿನಗಳ ಹಿಂದೆ, ಹಿರೋಷಿಮಾದಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಅಲ್ಬನೀಸ್ ಜೊತೆಗೆ, ನಾವು ಇಂಡೋ-ಪೆಸಿಫಿಕ್ ಬಗ್ಗೆಯೂ ಚರ್ಚಿಸಿದ್ದೇವೆ. ಭಾರತ-ಆಸ್ಟ್ರೇಲಿಯಾ ಸಹಕಾರವು ಜಾಗತಿಕ ದಕ್ಷಿಣದ ಪ್ರಗತಿಗೆ ಸಹ ಪ್ರಯೋಜನಕಾರಿಯಾಗಿದೆ. ಇಡೀ ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವ ವಸುಧೈವ ಕುಟುಂಬಕಂನ ಭಾರತೀಯ ಸಂಪ್ರದಾಯವು ಭಾರತದ ಜಿ-20 ಅಧ್ಯಕ್ಷತೆಯ ಕೇಂದ್ರ ವಿಷಯವಾಗಿದೆ. G-20 ನಲ್ಲಿನ ನಮ್ಮ ಉಪಕ್ರಮಗಳಿಗೆ ಆಸ್ಟ್ರೇಲಿಯಾದ ಬೆಂಬಲಕ್ಕಾಗಿ ನಾನು ಪ್ರಧಾನ ಮಂತ್ರಿ ಅಲ್ಬನೀಸ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.

ಸ್ನೇಹಿತರೇ

ಈ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್  ಪಂದ್ಯಾವಳಿ ವೀಕ್ಷಿಸಲು ಆಗಮಿಸುವಂತೆ ನಾನು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮತ್ತು ಎಲ್ಲಾ ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳನ್ನು ಆಹ್ವಾನಿಸುತ್ತೇನೆ. ಆ ಸಮಯದಲ್ಲಿ ಕ್ರಿಕೆಟ್ ಜೊತೆಗೆ ದೀಪಾವಳಿಯ ಅದ್ಧೂರಿ ಆಚರಣೆಯನ್ನೂ ನೋಡಬಹುದು. ಮತ್ತು ನಾವೆಲ್ಲರೂ ಒಟ್ಟಾಗಿ ದೀಪಾವಳಿ ಆಚರಿಸೋಣ.

ಗಣ್ಯರೇ, 

ಈ ವರ್ಷದ ಸೆಪ್ಟೆಂಬರ್ನಲ್ಲಿ ನಡೆಯಲಿರುವ G-20 ಶೃಂಗಸಭೆಗಾಗಿ ನಿಮ್ಮನ್ನು ಮತ್ತೊಮ್ಮೆ ಭಾರತಕ್ಕೆ ಸ್ವಾಗತಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಮತ್ತೊಮ್ಮೆ ತುಂಬಾ ಧನ್ಯವಾದಗಳು!

ಹಕ್ಕು ಸ್ವಾಮ್ಯ:  ಇದು ಪ್ರಧಾನಿಯವರ ಅನುವಾದವಾಗಿದೆ. ಮೂಲ ಹಿಂದಿಯಲ್ಲಿ ನೀಡಲಾಗಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"