ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವಾನ್ವಿತ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಜಿ-20 ಶೃಂಗ ಸಭೆ ಅಂಗವಾಗಿ 2023ರ ಸೆಪ್ಟೆಂಬರ್ 9ರಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು.
ಪ್ರಧಾನಿ ಸುನಕ್ ಅವರು 2022ರ ಅಕ್ಟೋಬರ್ ನಲ್ಲಿ ಪ್ರಧಾನಿಯಾದ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ.
ಜಿ-20 ಅಧ್ಯಕ್ಷತೆಗಾಗಿ ಭಾರತಕ್ಕೆ ಬೆಂಬಲ ನೀಡಿದ ಮತ್ತು ಜಿ-20ಯ ವಿವಿಧ ಉನ್ನತಮಟ್ಟದ ಸಭೆಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಬ್ರಿಟನ್‌ಗೆ ಅಭಿನಂದನೆ ಸಲ್ಲಿಸಿದರು.
ಇಬ್ಬರು ನಾಯಕರು ಭಾರತ ಮತ್ತು ಬ್ರಿಟನ್ ನಡುವೆ ವಿಶೇಷವಾಗಿ ಬರುವ 2030ರ ವೇಳೆಗೆ ಆರ್ಥಿಕತೆ, ಭದ್ರತೆ, ರಕ್ಷಣೆ ಮತ್ತು ತಂತ್ರಜ್ಞಾನ, ಹಸಿರು ತಂತ್ರಜ್ಞಾನ, ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಸಾಗಾಣೆ ವಲಯದ ನೀಲನಕ್ಷೆಯ ಸಮಗ್ರ ಕಾರ್ಯತಂತ್ರ ಸಹಭಾಗಿತ್ವದ ಪ್ರಗತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಮುಕ್ತವ್ಯಾಪಾರ ಒಡಂಬಡಿಕೆ ಸಂಧಾನ ಪ್ರಕ್ರಿಯೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು. ಮತ್ತು ಈ ವಲಯದಲ್ಲಿ ಬಾಕಿ ಉಳಿದ ವಿಷಯಗಳನ್ನು ಪರಸ್ಪರ ಲಾಭದಾಯಕವಾಗುವ, ಸಮತೋಲನ ರೀತಿಯಲ್ಲಿ ಬಗೆಹರಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ ಮತ್ತು ಆದಷ್ಟು ಬೇಗ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೊಳ್ಳುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ವಿಸ್ತೃತ ದ್ವಿಪಕ್ಷೀಯ ಸಮಾಲೋಚನೆಗಾಗಿ ತಮಗೆ ಸೂಕ್ತವಾದ ದಿನಾಂಕದಂದು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿ ಸುನಕ್ ಅವರನ್ನು ಇದೇ ಸಂದರ್ಭದಲ್ಲಿ ಆಹ್ವಾನಿಸಿದರು.
ಪ್ರಧಾನಿ ಸುನಕ್ ಅವರು ಈ ಆಹ್ವಾನವನ್ನು ಸ್ವೀಕರಿಸಿದರು ಮತ್ತು ಯಶಸ್ವಿಯಾಗಿ ಜಿ20 ಶೃಂಗಸಭೆ ನಡೆಸುತ್ತಿರುವ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು.
Great to have met PM @RishiSunak on the sidelines of the G20 Summit in Delhi. We discussed ways to deepen trade linkages and boost investment. India and UK will keep working for a prosperous and sustainable planet. pic.twitter.com/7kKC17FfgN
— Narendra Modi (@narendramodi) September 9, 2023