ಗೌರವಾನ್ವಿತ ಪ್ರಧಾನ ಮಂತ್ರಿ 'ಪ್ರಚಂಡ' ಜೀ, ಎರಡೂ ನಿಯೋಗಗಳ ಸದಸ್ಯರೇ, ಮಾಧ್ಯಮದ ನಮ್ಮ ಸ್ನೇಹಿತರೇ,
ನಮಸ್ಕಾರ!
ಮೊದಲನೆಯದಾಗಿ, ನಾನು ಪ್ರಧಾನಮಂತ್ರಿ ಪ್ರಚಂಡ ಜೀ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನನಗೆ ನೆನಪಿದೆ, 9 ವರ್ಷಗಳ ಹಿಂದೆ, 2014 ರಲ್ಲಿ, ಅಧಿಕಾರ ವಹಿಸಿಕೊಂಡ ಮೂರು ತಿಂಗಳೊಳಗೆ, ನಾನು ನೇಪಾಳಕ್ಕೆ ನನ್ನ ಮೊದಲ ಭೇಟಿ ನೀಡಿದ್ದೆ. ಆ ಸಮಯದಲ್ಲಿ, ನಾನು ಭಾರತ-ನೇಪಾಳ ಸಂಬಂಧಗಳು, ಎಚ್ಐಟಿ-ಹೆದ್ದಾರಿಗಳು, ಐ-ವೇಗಳು ಮತ್ತು ಟ್ರಾನ್ಸ್-ವೇಗಳಿಗೆ "ಹಿಟ್" ಸೂತ್ರವನ್ನು ನೀಡಿದ್ದೆ. ನಮ್ಮ ಗಡಿಗಳು ನಮ್ಮ ನಡುವೆ ಅಡೆತಡೆಗಳಾಗದಂತೆ ನಾವು ಭಾರತ ಮತ್ತು ನೇಪಾಳದ ನಡುವೆ ಅಂತಹ ಸಂಪರ್ಕಗಳನ್ನು ಸ್ಥಾಪಿಸುತ್ತೇವೆ ಎಂದು ನಾನು ಹೇಳಿದ್ದೆ. ತೈಲವನ್ನು ಟ್ರಕ್ ಗಳ ಬದಲು ಪೈಪ್ ಲೈನ್ ಮೂಲಕ ರಫ್ತು ಮಾಡಬೇಕು. ಹಂಚಿಕೆಯ ನದಿಗಳ ಮೇಲೆ ಸೇತುವೆಗಳನ್ನು ನಿರ್ಮಿಸಬೇಕು. ನೇಪಾಳದಿಂದ ಭಾರತಕ್ಕೆ ವಿದ್ಯುತ್ ರಫ್ತು ಮಾಡಲು ಸೌಲಭ್ಯಗಳನ್ನು ರಚಿಸಬೇಕು.
ಸ್ನೇಹಿತರೇ,
ಇಂದು, 9 ವರ್ಷಗಳ ನಂತರ, ನಮ್ಮ ಪಾಲುದಾರಿಕೆ ನಿಜವಾಗಿಯೂ "ಹಿಟ್" ಆಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಕಳೆದ 9 ವರ್ಷಗಳಲ್ಲಿ, ನಾವು ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದೇವೆ. ನೇಪಾಳದ ಮೊದಲ ಐಸಿಪಿಯನ್ನು ಬಿರ್ಗಂಜ್ ನಲ್ಲಿ ತಯಾರಿಸಲಾಯಿತು. ನಮ್ಮ ಪ್ರದೇಶದ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಕೊಳವೆ ಮಾರ್ಗವನ್ನು ಭಾರತ ಮತ್ತು ನೇಪಾಳದ ನಡುವೆ ನಿರ್ಮಿಸಲಾಯಿತು. ನಮ್ಮ ನಡುವೆ ಮೊದಲ ಬ್ರಾಡ್ ಗೇಜ್ ರೈಲು ಮಾರ್ಗವನ್ನು ಸ್ಥಾಪಿಸಲಾಗಿದೆ. ಗಡಿಯುದ್ದಕ್ಕೂ ಹೊಸ ಪ್ರಸರಣ ಮಾರ್ಗಗಳನ್ನು ನಿರ್ಮಿಸಲಾಗಿದೆ. ನಾವು ಈಗ ನೇಪಾಳದಿಂದ 450 ಮೆಗಾವ್ಯಾಟ್ ಗಿಂತ ಹೆಚ್ಚು ವಿದ್ಯುತ್ ಆಮದು ಮಾಡಿಕೊಳ್ಳುತ್ತಿದ್ದೇವೆ. ನಾವು 9 ವರ್ಷಗಳ ಸಾಧನೆಗಳನ್ನು ವಿವರಿಸಲು ಪ್ರಾರಂಭಿಸಿದರೆ ಅದು ನಮಗೆ ಇಡೀ ದಿನ ತೆಗೆದುಕೊಳ್ಳುತ್ತದೆ.
ಸ್ನೇಹಿತರೇ,
ಇಂದು ಪ್ರಧಾನಮಂತ್ರಿ ಪ್ರಚಂಡ ಜೀ ಮತ್ತು ನಾನು ನಮ್ಮ ಪಾಲುದಾರಿಕೆಯನ್ನು ಭವಿಷ್ಯದಲ್ಲಿ ಸೂಪರ್ ಹಿಟ್ ಮಾಡಲು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಇಂದು ಸಾರಿಗೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ, ನೇಪಾಳದ ಜನರಿಗೆ ಹೊಸ ರೈಲು ಮಾರ್ಗಗಳ ಜೊತೆಗೆ, ಭಾರತದ ಒಳನಾಡಿನ ಜಲಮಾರ್ಗಗಳ ಸೌಲಭ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ. ಹೊಸ ರೈಲು ಸಂಪರ್ಕಗಳನ್ನು ಸ್ಥಾಪಿಸುವ ಮೂಲಕ ಭೌತಿಕ ಸಂಪರ್ಕವನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ.
ಇದರೊಂದಿಗೆ ನೇಪಾಳದ ರೈಲ್ವೆ ಸಿಬ್ಬಂದಿಗೆ ಭಾರತೀಯ ರೈಲ್ವೆ ಸಂಸ್ಥೆಗಳಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ನೇಪಾಳದ ದೂರದ ಪಶ್ಚಿಮ ಪ್ರದೇಶಕ್ಕೆ ಸಂಪರ್ಕವನ್ನು ಹೆಚ್ಚಿಸಲು, ಶಿರ್ಷಾ ಮತ್ತು ಜುಲಾಘಾಟ್ ನಲ್ಲಿ ಇನ್ನೂ ಎರಡು ಸೇತುವೆಗಳನ್ನು ನಿರ್ಮಿಸಲಾಗುವುದು.
ಗಡಿಯಾಚೆಗಿನ ಡಿಜಿಟಲ್ ಪಾವತಿಗಳ ಮೂಲಕ ಆರ್ಥಿಕ ಸಂಪರ್ಕದಲ್ಲಿ ಕೈಗೊಂಡ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ. ಸಾವಿರಾರು ವಿದ್ಯಾರ್ಥಿಗಳು, ಲಕ್ಷಾಂತರ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ರೋಗಿಗಳು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ. ಮೂರು "ಐಸಿಪಿ"ಗಳ ನಿರ್ಮಾಣದಿಂದ ಆರ್ಥಿಕ ಸಂಪರ್ಕವನ್ನು ಬಲಪಡಿಸಲಾಗುವುದು.
ಕಳೆದ ವರ್ಷ, ನಾವು ವಿದ್ಯುತ್ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಹೆಗ್ಗುರುತು ದೃಷ್ಟಿಕೋನ ದಾಖಲೆಯನ್ನು ಅಳವಡಿಸಿಕೊಂಡಿದ್ದೇವೆ. ಇದನ್ನು ಮುಂದಕ್ಕೆ ತೆಗೆದುಕೊಂಡು ಭಾರತ ಮತ್ತು ನೇಪಾಳ ನಡುವೆ ದೀರ್ಘಾವಧಿ ವಿದ್ಯುತ್ ವ್ಯಾಪಾರ ಒಪ್ಪಂದಕ್ಕೆ ಇಂದು ಅಂಕಿತ ಹಾಕಲಾಗಿದೆ. ಈ ಒಪ್ಪಂದದ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ನೇಪಾಳದಿಂದ 10,000 ಮೆಗಾವ್ಯಾಟ್ ವಿದ್ಯುತ್ ಆಮದು ಮಾಡಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ.
ಫುಕೋಟ್-ಕರ್ನಾಲಿ ಮತ್ತು ಲೋವರ್ ಅರುಣ್ ಜಲವಿದ್ಯುತ್ ಯೋಜನೆಗಳ ಒಪ್ಪಂದಗಳ ಮೂಲಕ ವಿದ್ಯುತ್ ಕ್ಷೇತ್ರದಲ್ಲಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲಾಗಿದೆ. ಮೋತಿಹರಿ-ಅಮ್ಲೆಖ್ಗಂಜ್ ಪೆಟ್ರೋಲಿಯಂ ಕೊಳವೆ ಮಾರ್ಗದ ಸಕಾರಾತ್ಮಕ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ಈ ಕೊಳವೆ ಮಾರ್ಗವನ್ನು ಚಿಟ್ವಾನ್ವರೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದಲ್ಲದೆ, ಪೂರ್ವ ನೇಪಾಳದ ಸಿಲಿಗುರಿಯಿಂದ ಝಾಪಾಗೆ ಮತ್ತೊಂದು ಹೊಸ ಪೈಪ್ ಲೈನ್ ಅನ್ನು ಸಹ ನಿರ್ಮಿಸಲಾಗುವುದು.
ಅದೇ ಸಮಯದಲ್ಲಿ, ಚಿತ್ವಾನ್ ಮತ್ತು ಝಾಪಾದಲ್ಲಿ ಹೊಸ ಶೇಖರಣಾ ಟರ್ಮಿನಲ್ ಗಳನ್ನು ಸಹ ಸ್ಥಾಪಿಸಲಾಗುವುದು. ನೇಪಾಳದಲ್ಲಿ ರಸಗೊಬ್ಬರ ಘಟಕ ಸ್ಥಾಪಿಸಲು ಪರಸ್ಪರ ಸಹಕಾರಕ್ಕೆ ನಾವು ಸಮ್ಮತಿಸಿದ್ದೇವೆ.
ಸ್ನೇಹಿತರೇ,
ಭಾರತ ಮತ್ತು ನೇಪಾಳದ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಬಹಳ ಹಳೆಯದು ಮತ್ತು ಬಹಳ ಬಲವಾಗಿವೆ. ಈ ಸುಂದರ ಕೊಂಡಿಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಪ್ರಧಾನಿ ಪ್ರಚಂಡ ಜೀ ಮತ್ತು ನಾನು ರಾಮಾಯಣ ಸರ್ಕ್ಯೂಟ್ ಗೆ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗೊಳಿಸಬೇಕು ಎಂದು ನಿರ್ಧರಿಸಿದ್ದೇವೆ. ನಮ್ಮ ಸಂಬಂಧಕ್ಕೆ ಹಿಮಾಲಯದ ಎತ್ತರವನ್ನು ನೀಡಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಮತ್ತು ಈ ಉತ್ಸಾಹದಲ್ಲಿ, ನಾವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇವೆ, ಅದು ಗಡಿ ಅಥವಾ ಇನ್ನಾವುದೇ ಸಮಸ್ಯೆಯಾಗಿರಲಿ.
ಗೌರವಾನ್ವಿತರೇ,
ಪ್ರಧಾನ ಮಂತ್ರಿ ಪ್ರಚಂಡ ಜೀ, ನೀವು ನಾಳೆ ಇಂದೋರ್ ಮತ್ತು ಧಾರ್ಮಿಕ ನಗರ ಉಜ್ಜಯಿನಿಗೆ ಭೇಟಿ ನೀಡಲಿದ್ದೀರಿ. ಉಜ್ಜಯಿನಿಗೆ ನಿಮ್ಮ ಭೇಟಿಯು ಉತ್ಸಾಹಭರಿತವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ, ಮತ್ತು ಪಶುಪತಿನಾಥದಿಂದ ಮಹಾಕಾಳೇಶ್ವರದವರೆಗಿನ ಈ ಪ್ರಯಾಣದಲ್ಲಿ ನೀವು ಆಧ್ಯಾತ್ಮಿಕ ಅನುಭವವನ್ನು ಸಹ ಪಡೆಯುತ್ತೀರಿ.
ತುಂಬ ಧನ್ಯವಾದಗಳು.
मुझे याद है, 9 साल पहले, 2014 में, कार्यभार सँभालने के तीन महीने के भीतर मैंने नेपाल की अपनी पहली यात्रा की थी।
— PMO India (@PMOIndia) June 1, 2023
उस समय मैंने भारत-नेपाल संबंधों के लिए एक “हिट” फार्मूला दिया था- हाईवेस, आई-ways, और ट्रांस-ways: PM
आज मैंने और प्रधान मंत्री प्रचण्ड जी ने भविष्य में अपनी पार्टनरशिप को सुपरहिट बनाने के लिए बहुत से महत्वपूर्ण निर्णय लिए हैं।
— PMO India (@PMOIndia) June 1, 2023
आज ट्रांजिट अग्रीमेंट संपन्न किया गया है: PM
भारत और नेपाल के धार्मिक और सांस्कृतिक संबंध बहुत पुराने और मजबूत हैं।
— PMO India (@PMOIndia) June 1, 2023
इस सुन्दर कड़ी को और मजबूती देने के लिए प्रधानमंत्री प्रचण्ड जी और मैंने निश्चय किया है कि रामायण सर्किट से संबंधित परियोजनाओं में तेजी लायी जानी चाहिए: PM