“ಸರ್ಕಾರದ ಅಭಿವೃದ್ಧಿ ಯೋಜನೆಗಳ ಪ್ರಯೋಜನ ಗರಿಷ್ಠ ಮಟ್ಟದಲ್ಲಿ ತಲುಪಿಸುವ ಗುರಿ ಸಾಧಿಸಲು ಮತ್ತು ಹೇಗೆ ಮೂಲಭೂತ ಸೌಕರ್ಯಗಳನ್ನು ಶೇಕಡ ನೂರಕ್ಕೆ ನೂರರಷ್ಟು ಜನಸಂಖ್ಯೆಗೆ ತಲುಪಿಸಬಹುದೆಂಬ ಬಗ್ಗೆ ಸ್ಪಷ್ಟ ನೀಲನಕ್ಷೆ ಬಜೆಟ್ ಒಳಗೊಂಡಿದೆ”
“ಬ್ರಾಂಡ್ ಬ್ಯಾಂಡ್ ಗ್ರಾಮಗಳಿಗೆ ಸೌಕರ್ಯವನ್ನಷ್ಟೇ ಒದಗಿಸುತ್ತಿಲ್ಲ, ಜೊತೆಗೆ ಗ್ರಾಮಗಳಲ್ಲಿ ಕೌಶಲ್ಯದ ಯುವಪಡೆ ಸೃಷ್ಟಿಸುತ್ತಿದೆ”
“ಕಂದಾಯ ಇಲಾಖೆ ಗ್ರಾಮೀಣ ಜನರ ಮೇಲಿನ ಅವಲಂಬನೆ ತಗ್ಗಿಸುವುದನ್ನು ನಾವು ಖಾತ್ರಿಪಡಿಸಬೇಕು”
“ಕಂದಾಯ ಇಲಾಖೆ ಗ್ರಾಮೀಣ ಜನರ ಮೇಲಿನ ಅವಲಂಬನೆ ತಗ್ಗಿಸುವುದನ್ನು ನಾವು ಖಾತ್ರಿಪಡಿಸಬೇಕು”
“ನಾನಾ ಯೋಜನೆಗಳಲ್ಲಿ ಶೇಕಡಾ ನೂರಕ್ಕೆ 100ರಷ್ಟು ಸಾಧಿಸಲು ನಾವು ಹೊಸ ತಂತ್ರಜ್ಞಾನಗಳಿಗೆ ಆದ್ಯತೆ ನೀಡಬೇಕು, ಇದರಿಂದ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ ಮತ್ತು ಗುಣಮಟ್ಟದಲ್ಲೂ ರಾಜೀಯಾಗಬೇಕಿಲ್ಲ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರಾಮೀಣಾಭಿವೃದ್ಧಿಯ ಮೇಲೆ ಕೇಂದ್ರ ಬಜೆಟ್‌ನ ಸಕಾರಾತ್ಮಕ ಪರಿಣಾಮಗಳ ಕುರಿತು ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಈ ಸರಣಿಯಲ್ಲಿ ಇದು ಎರಡನೇ ವೆಬಿನಾರ್ ಆಗಿದೆ. ಈ ಸಂದರ್ಭದಲ್ಲಿ ಸಂಬಂಧಿಸಿದ ಕೇಂದ್ರ ಸಚಿವರು, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಮತ್ತು ಇತರ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರದ ಎಲ್ಲಾ ನೀತಿಗಳು ಮತ್ತು ಕಾರ್ಯಗಳ ಹಿಂದೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್’ ಎಂಬ ಸ್ಪೂರ್ತಿಯ ಮಂತ್ರವಿದೆ ಎಂದು ಪುನರುಚ್ಚರಿಸುವ ಮೂಲಕ ಪ್ರಧಾನಮಂತ್ರಿ ಭಾಷಣ ಆರಂಭಿಸಿದರು. “ಆಜಾದಿ ಕಾ ಅಮೃತ ಕಾಲಕ್ಕಾಗಿ ನಮ್ಮ ಪ್ರತಿಜ್ಞೆಗಳು ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ ಸಾಕಾರಗೊಳ್ಳುತ್ತವೆ ಮತ್ತು ಪ್ರತಿಯೊಬ್ಬ ವ್ಯಕ್ತಿ, ವಿಭಾಗ ಮತ್ತು ಪ್ರದೇಶವು ಅಭಿವೃದ್ಧಿಯ ಸಂಪೂರ್ಣ ಪ್ರಯೋಜನ ಪಡೆದಾಗ ಮಾತ್ರ ಪ್ರತಿಯೊಬ್ಬರೂ ಆ ಪ್ರಯತ್ನವನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು.

ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನರಿಗೆ ಗರಿಷ್ಠ ಪ್ರಮಾಣದಲ್ಲಿ ತಲುಪಿಸುವಂತೆ ಮಾಡಲು ಮತ್ತು ಮೂಲಭೂತ ಸೌಕರ್ಯ ಶೇಕಡ ನೂರರಷ್ಟು ಜನಸಂಖ್ಯೆಗೆ ಹೇಗೆ ತಲುಪಬಹುದು ಎಂಬುದರ ಬಗ್ಗೆ ಬಜೆಟ್ ನೀಲನಕ್ಷೆಯನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು. “ಪಿಎಂ ಆವಾಸ್ ಯೋಜನೆ, ಗ್ರಾಮೀಣ ಸಡಕ್ ಯೋಜನೆ, ಜಲ ಜೀವನ್ ಮಿಷನ್, ಈಶಾನ್ಯ ಸಂಪರ್ಕ, ಹಳ್ಳಿಗಳಲ್ಲಿ ಬ್ರಾಡ್‌ ಬ್ಯಾಂಡ್‌ನಂತಹ ಪ್ರತಿಯೊಂದು ಯೋಜನೆಗಳಿಗೆ ಬಜೆಟ್ ಅಗತ್ಯ ಅನುದಾನ ಹಂಚಿಕೆ ಮಾಡಿದೆ" ಎಂದು ಅವರು ಹೇಳಿದರು. “ಅಂತೆಯೇ, ಬಜೆಟ್‌ನಲ್ಲಿ ಘೋಷಿಸಲಾದ ಕ್ರಿಯಾಶೀಲ ಗ್ರಾಮ ಕಾರ್ಯಕ್ರಮವು ಗಡಿ ಗ್ರಾಮಗಳಿಗೆ ಬಹಳ ಮುಖ್ಯವಾಗಿದೆ” ಎಂದು ಅವರು ಹೇಳಿದರು.

ಸರ್ಕಾರದ ಆದ್ಯತೆಗಳನ್ನು ಪ್ರಧಾನಮಂತ್ರಿ ವಿವರಿಸಿದರು ಮತ್ತು ಈಶಾನ್ಯ ಪ್ರದೇಶಕ್ಕಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ (ಪಿಎಂ-ಡಿವೈನ್) ಈಶಾನ್ಯ ಪ್ರದೇಶದಲ್ಲಿ ಗರಿಷ್ಠ ಮೂಲಭೂತ ಮೂಲಭೂತ ಸೌಕರ್ಯ ಒದಗಿಸುವುದನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದರು. ಅದೇ ರೀತಿ, ಸ್ವಾಮಿತ್ವ ಯೋಜನೆಯಡಿ 40 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ನೀಡಿರುವುದರಿಂದ ಗ್ರಾಮಗಳಲ್ಲಿನ ಮನೆಗಳು ಮತ್ತು ಭೂಮಿಯ ಗಡಿಯನ್ನು ಸರಿಯಾಗಿ ಗುರುತಿಸಲು ಸಹಾಯಕವಾಗಿದೆ ಎಂದರು.

ವಿಶಿಷ್ಟ ಭೂ ಗುರುತಿನ ಸಂಖ್ಯೆ- ಪಿನ್‌ನಂತಹ ಕ್ರಮಗಳಿಂದ, ಕಂದಾಯ ಅಧಿಕಾರಿಗಳ ಮೇಲೆ ಗ್ರಾಮೀಣ ಜನರ ಅವಲಂಬನೆ ತಗ್ಗಿಸಲಾಗುತ್ತದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಭೂ ದಾಖಲೆಗಳು ಮತ್ತು ಗಡಿ ಗುರುತಿಸುವಿಕೆ ಪರಿಹಾರಗಳನ್ನು ಸಂಯೋಜಿಸಲು ರಾಜ್ಯ ಸರ್ಕಾರಗಳನ್ನು ಕಾಲಮಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. “ವಿವಿಧ ಯೋಜನೆಗಳಲ್ಲಿ ಶೇ.100ರಷ್ಟು ಗುರಿ ಸಾಧನೆಗೆ ನಾವು ಹೊಸ ತಂತ್ರಜ್ಞಾನದತ್ತ ಹೆಚ್ಚಿನ ಗಮನ ಹರಿಸಬೇಕು, ಇದರಿಂದ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ ಮತ್ತು ಗುಣಮಟ್ಟದಲ್ಲಿ ರಾಜಿಯಾಗಬೇಕಿಲ್ಲ” ಎಂದು ಅವರು ಹೇಳಿದರು.

ಜಲ ಜೀವನ್ ಮಿಷನ್ ಅಡಿಯಲ್ಲಿ 4 ಕೋಟಿ ನೀರಿನ ಸಂಪರ್ಕ ನೀಡುವ ಗುರಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸಬೇಕೆಂದು ಸೂಚಿಸಿದರು. ಪ್ರತಿ ರಾಜ್ಯ ಸರ್ಕಾರವು ಕೊಳೆವೆ ಮಾರ್ಗಗಳು(ಪೈಪ್ ಲೈನ್) ಗುಣಮಟ್ಟ ಮತ್ತು ಪೂರೈಸಲು ಉದ್ದೇಶಿಸಿರುವ ನೀರಿನ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು. “ಈ ಯೋಜನೆಯ ಪ್ರಮುಖ ಲಕ್ಷಣವೆಂದರೆ, ಗ್ರಾಮ ಮಟ್ಟದಲ್ಲಿ ಮಾಲೀಕತ್ವದ ಪ್ರಜ್ಞೆ ಇರಬೇಕೆಂಬುದು ಮತ್ತು 'ಜಲ ಆಡಳಿತ'ವನ್ನು ಬಲವರ್ಧನೆಗೊಳಿಸಲಾಗಿದೆ. ಇದನ್ನು ಗಮನದರಿಸಿಕೊಂಡು 2024 ರ ವೇಳೆಗೆ ನಾವು ಪ್ರತಿ ಮನೆಗೂ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸಬೇಕು” ಎಂದು ಪ್ರಧಾನಮಂತ್ರಿ ಹೇಳಿದರು.

ಗ್ರಾಮೀಣ ಡಿಜಿಟಲ್ ಸಂಪರ್ಕವು ಇನ್ನು ಮುಂದೆ ಕೇವಲ ಮಹತ್ವಾಕಾಂಕ್ಷೆಯಾಗಿ ಉಳಿದಿಲ್ಲ ಆದರೆ ಇದು ಅತ್ಯಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. “ಬ್ರಾಡ್‌ಬ್ಯಾಂಡ್ ಹಳ್ಳಿಗಳಲ್ಲಿ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಹಳ್ಳಿಗಳಲ್ಲಿ ಕೌಶಲ್ಯಹೊಂದಿತ ಯುವಕರ ದೊಡ್ಡ ಸಮೂಹವನ್ನು ಸೃಷ್ಟಿಸುತ್ತದೆ” ಎಂದು ಅವರು ಹೇಳಿದರು. ಬ್ರಾಡ್‌ಬ್ಯಾಂಡ್, ದೇಶದಲ್ಲಿ ಸೇವಾ ವಲಯದ ಸಾಮರ್ಥ್ಯಗಳನ್ನು ವಿಸ್ತರಿಸಲಿದೆ ಎಂದು ಪ್ರಧಾನಿ ಹೇಳಿದರು. ಎಲ್ಲೆಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿಲಾಗಿದೆಯೋ ಅಂತಹ ಕಡೆ ಬ್ರಾಡ್ ಬ್ಯಾಂಡ್ ಸಾಮರ್ಥ್ಯಗಳ ಸರಿಯಾದ ಬಳಕೆಯ ಬಗ್ಗೆ ಸಮರ್ಪಕ ಜಾಗೃತಿಯ ಅಗತ್ಯತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದರು.

ಗ್ರಾಮೀಣ ಆರ್ಥಿಕತೆಯ ಅಡಿಪಾಯವೇ ಮಹಿಳಾ ಶಕ್ತಿ ಎಂದು ಪ್ರಧಾನಮಂತ್ರಿ ಅವರ ಪಾತ್ರವನ್ನು ಒತ್ತಿ ಹೇಳಿದರು. “ಆರ್ಥಿಕ ಸೇರ್ಪಡೆ ಅವರು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಸ್ವಯಂ ಸಹಾಯ ಗುಂಪುಗಳ ಮೂಲಕ ಮಹಿಳೆಯ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಉತ್ತೇಜಿಸಬೇಕಾದ ಅಗತ್ಯವಿದೆ “ಎಂದು ಹೇಳಿದರು.

“ಹಣದ ಲಭ್ಯತೆಗಿಂತ ಹೆಚ್ಚಾಗಿ, ಸೋಮಾರಿತನದ ಉಪಸ್ಥಿತಿ ಮತ್ತು ಸಮನ್ವಯದ ಕೊರತೆಯು ಸಮಸ್ಯೆಯಾಗಿದೆ” ಎಂದು ಅವರು ಹೇಳಿದರು. ಗಡಿಯ ಗ್ರಾಮಗಳನ್ನು ವಿವಿಧ ಸ್ಪರ್ಧೆಗಳ ವೇದಿಕೆಯನ್ನಾಗಿ ಆಯ್ಕೆ ಮಾಡುವುದು, ನಿವೃತ್ತ ಸರ್ಕಾರಿ ಅಧಿಕಾರಿಗಳು ತಮ್ಮ ಆಡಳಿತದ ಅನುಭವದೊಂದಿಗೆ ತಮ್ಮ ಗ್ರಾಮಗಳಿಗೆ ಪ್ರಯೋಜನವನ್ನು ದೊರಕಿಸಿಕೊಡುವುದು ಸೇರಿದಂತೆ ಹಲವು ವಿನೂತನ ಮಾರ್ಗಗಳ ಕುರಿತು ಅವರು ಸಲಹೆ ನೀಡಿದರು.

ಒಂದು ದಿನವನ್ನು ಗ್ರಾಮದ ಉದಯ ದಿನವನ್ನಾಗಿ ನಿರ್ಧರಿಸಿ ಮತ್ತು ಆ ದಿನವನ್ನು ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ಮನೋಭಾವನೆಯಿಂದ ಆಚರಿಸಬೇಕು, ಆಗ ಗ್ರಾಮದೊಂದಿಗಿನ ಜನರ ಬಾಂಧವ್ಯ ಗಟ್ಟಿಯಾಗುತ್ತದೆ ಹಾಗೂ ಗ್ರಾಮೀಣ ಜನರ ಬದುಕು ಹಸನಾಗುತ್ತದೆ ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರಗಳು ನೈಸರ್ಗಿಕ ಕೃಷಿಗಾಗಿ ಕೆಲವು ರೈತರನ್ನು ಆಯ್ಕೆ ಮಾಡುವುದು, ಅಪೌಷ್ಟಿಕತೆ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ತೊಡೆದುಹಾಕುವ ಬಗ್ಗೆ ನಿರ್ಧರಿಸುವ ಹಳ್ಳಿಗಳಂತಹ ಕ್ರಮಗಳು ಭಾರತದ ಇತರೆ ಹಳ್ಳಿಗಳಲ್ಲಿ ಫಲಿತಾಂಶ ಉತ್ತಮಗೊಳ್ಳಲು ಕಾರಣವಾಗುತ್ತವೆ ಎಂದು ಅವರು ಹೇಳಿದರು.

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
From PM Modi's Historic Russia, Ukraine Visits To Highest Honours: How 2024 Fared For Indian Diplomacy

Media Coverage

From PM Modi's Historic Russia, Ukraine Visits To Highest Honours: How 2024 Fared For Indian Diplomacy
NM on the go

Nm on the go

Always be the first to hear from the PM. Get the App Now!
...
India is a powerhouse of talent: PM Modi
December 31, 2024

The Prime Minister Shri Narendra Modi today remarked that India was a powerhouse of talent, filled with innumerable inspiring life journeys showcasing innovation and courage. Citing an example of the Green Army, he lauded their pioneering work as insipiring.

Shri Modi in a post on X wrote:

“India is a powerhouse of talent, filled with innumerable inspiring life journeys showcasing innovation and courage.

It is a delight to remain connected with many of them through letters. One such effort is the Green Army, whose pioneering work will leave you very inspired.”