ಶಿಕ್ಷಣವನ್ನು ಉದ್ಯೋಗಾರ್ಹತೆ ಮತ್ತು ಉದ್ಯಮಶೀಲ ಸಾಮರ್ಥ್ಯಗಳೊಂದಿಗೆ ಬೆಸೆಯುವ ಪ್ರಯತ್ನಗಳನ್ನು ಬಜೆಟ್‌ ವಿಸ್ತರಿಸುತ್ತದೆ: ಪ್ರಧಾನಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸ್ತಾವಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವೆಬಿನಾರ್‌ನಲ್ಲಿ ಮಾತನಾಡಿದರು.

ಈ ಸಂದರ್ಭ ಮಾತನಾಡಿದ ಪ್ರಧಾನಿ ಅವರು, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ದೇಶದ ಯುವ ಜನರ ಆತ್ಮವಿಶ್ವಾಸವೂ ಅಷ್ಟೇ ಮುಖ್ಯ ಎಂದು ಹೇಳಿದರು. ಯುವ ಜನತೆಗೆ ಅವರ ಶಿಕ್ಷಣ ಮತ್ತು ಜ್ಞಾನದ ಮೇಲೆ ಸಂಪೂರ್ಣ ನಂಬಿಕೆ ಇದ್ದಾಗ ಮಾತ್ರ ಆತ್ಮವಿಶ್ವಾಸ ಮೂಡಲು ಸಾಧ್ಯ. ಅವರ ಶಿಕ್ಷಣವು ಅವರಿಗೆ ಉದ್ಯೋಗಾವಕಾಶ ಮತ್ತು ಅಗತ್ಯ ಕೌಶಲಗಳನ್ನು ಒದಗಿಸುತ್ತಿದೆ ಎಂದು ಅರಿವಾದಾಗ ಮಾತ್ರ ಯುವ ಜನತೆಗೆ ಆತ್ಮವಿಶ್ವಾಸ ಬರುತ್ತದೆ. ಇದೇ ಚಿಂತನೆಯೊಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು. ಪ್ರಾಥಮಿಕ ಪೂರ್ವ ಹಂತದಿಂದ ಹಿಡಿದು ಪಿಚ್‌.ಡಿ.ವರೆಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಸ್ತಾವನೆಗಳನ್ನು ಕ್ಷಿಪ್ರವಾಗಿ ಅನುಷ್ಠಾನಗೊಳಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು, ಈ ನಿಟ್ಟಿನಲ್ಲಿ ಬಜೆಟ್‌ ಬಹಳ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದರು.

ಈ ವರ್ಷದ ಆಯ-ವ್ಯಯದಲ್ಲಿ ಆರೋಗ್ಯದ ನಂತರ ಎರಡನೇ ಸ್ಥಾನದಲ್ಲಿ ಅತಿ ಹೆಚ್ಚು ಗಮನ ಹರಿಸಲಾದ ವಿಷಯಗಳೆಂದರೆ ಶಿಕ್ಷಣ, ಕೌಶಲ್ಯ, ಸಂಶೋಧನೆ ಮತ್ತು ಆವಿಷ್ಕಾರ ಎಂದು ಹೇಳಿದ ಪ್ರಧಾನಿ, ದೇಶದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಕರೆ ನೀಡಿದರು. ಕೌಶಲಾಭಿವೃದ್ಧಿ, ಕೌಶಲಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ತರಬೇತಿಗೆ ಈ ಬಜೆಟ್‌ನಲ್ಲಿ ಹಿಂದೆಂದು ಇಲ್ಲದಷ್ಟು ಒತ್ತು ನೀಡಲಾಗಿದೆ. ಉದ್ಯೋಗಾರ್ಹತೆ ಮತ್ತು ಉದ್ಯಮಶೀಲತೆಯ ಸಾಮರ್ಥ್ಯಗಳೊಂದಿಗೆ ಶಿಕ್ಷಣವನ್ನು ಬೆಸೆಯುವ ಪ್ರಯತ್ನಗಳನ್ನು ಈ ಬಜೆಟ್‌ ಮತ್ತಷ್ಟು ವಿಸ್ತರಿಸಿದೆ. ಈ ಪ್ರಯತ್ನಗಳ ಫಲವಾಗಿ ಇಂದು ಭಾರತವು ವೈಜ್ಞಾನಿಕ ಪ್ರಕಟಣೆಗಳು, ಪಿಎಚ್.ಡಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳ ವಿಷಯದಲ್ಲಿ ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದರು. ಜಾಗತಿಕ ಅನುಶೋಧನೆ ಸೂಚ್ಯಂಕದಲ್ಲಿ ಅಗ್ರ 50ನೇ ಶ್ರೇಯಾಂಕ ಪಡೆದಿರುವ ಭಾರತ, ಈ ನಿಟ್ಟಿನಲ್ಲಿ ನಿರಂತರವಾಗಿ ಸುಧಾರಿಸುತ್ತಿದೆ ಎಂದು ಅವರು ಹೇಳಿದರು. ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಅನುಶೋಧನಗಳ ಕಡೆಗೆ ನಿರಂತರ ಗಮನ ಹರಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳಿಗೆ ಹೊಸ ಅವಕಾಶಗಳು ಹೆಚ್ಚುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಲೆಗಳಲ್ಲಿ `ಅಟಲ್ ಟಿಂಕರಿಂಗ್ ಪ್ರಯೋಗಾಲಯʼಗಳಿಂದ ಹಿಡಿದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ʻಅಟಲ್ ಇನ್‌ಕ್ಯುಬೇಷನ್‌ ಕೇಂದ್ರʼಗಳವರೆಗೆ ಇದೇ ಮೊದಲ ಬಾರಿಗೆ ವಿಸ್ತೃತ ವಿಷಯಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ನವೋದ್ಯಮಗಳಿಗೆ ಹ್ಯಾಕಥಾನ್‌ಗಳ ಹೊಸ ಸಂಪ್ರದಾಯ ದೇಶದಲ್ಲಿ ಆರಂಭವಾಗಿದ್ದು, ಇದು ದೇಶದ ಯುವ ಜನಾಂಗ ಮತ್ತು ಉದ್ಯಮಗಳೆರಡಕ್ಕೂ ಒಂದು ದೊಡ್ಡ ಚಾಲಕ ಶಕ್ತಿಯಾಗಿ ಪರಿಣಮಿಸಿದೆ. ʻಸಂಶೋಧನೆ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ರಾಷ್ಟ್ರೀಯ ಉಪಕ್ರಮʼದ ಮೂಲಕ 3500ಕ್ಕೂ ಹೆಚ್ಚು ನವೋದ್ಯಮಗಳನ್ನು ಪೋಷಿಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಅದೇ ರೀತಿ ʻರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಯೋಜನೆʼ ಅಡಿಯಲ್ಲಿ, ʻಪರಮ್ ಶಿವಾಯ್‌ʼ, ʻಪರಮ್ ಶಕ್ತಿʼ ಮತ್ತು ʻಪರಮ್ ಬ್ರಹ್ಮʼ ಎಂಬ ಮೂರು ಸೂಪರ್ ಕಂಪ್ಯೂಟರ್‌ಗಳನ್ನು ವಾರಾಣಸಿಯ ಐಐಟಿ-ಬಿಎಚ್‌ಯು, ಐಐಟಿ-ಖರಗ್‌ಪುರ್ ಮತ್ತು ಪುಣೆಯ ʻಐಐಎಸ್‌ಇಆರ್‌ʼನಲ್ಲಿ ಸ್ಥಾಪಿಸಲಾಗಿದೆ. ದೇಶದ 10ಕ್ಕೂ ಹೆಚ್ಚು ಸಂಸ್ಥೆಗಳು ಇಂತಹ ಸೂಪರ್ ಕಂಪ್ಯೂಟರ್‌ಗಳನ್ನು ಪಡೆಯಲು ಉದ್ದೇಶಿಸಿವೆ ಎಂದು ಮಾಹಿತಿ ನೀಡಿದರು. ಮೂರು ʻಅತ್ಯಾಧುನಿಕ ವಿಶ್ಲೇಷಣಾತ್ಮಕ ಮತ್ತು ತಾಂತ್ರಿಕ ಸಹಾಯ ಸಂಸ್ಥೆಗಳುʼ (ಸಾಥ್‌) ಐಐಟಿ ಖರಗ್‌ಪುರ, ಐಐಟಿ ದೆಹಲಿ ಮತ್ತು ಐಐಟಿ-ಬಿಎಚ್‌ಯುಗಳಲ್ಲಿ ಸೇವೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದರು.

ಜ್ಞಾನ ಮತ್ತು ಸಂಶೋಧನೆಯನ್ನು ನಿರ್ಬಂಧಿಸುವುದು ದೇಶದ ಸಾಮರ್ಥ್ಯಕ್ಕೆ ಮಾಡುವ ದೊಡ್ಡ ಅನ್ಯಾಯ. ಬಾಹ್ಯಾಕಾಶ, ಪರಮಾಣು ಶಕ್ತಿ, ಡಿಆರ್‌ಡಿಒ ಮತ್ತು ಕೃಷಿ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪ್ರತಿಭಾವಂತರಿಗೆ ಹಲವು ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಪ್ರಧಾನಿ ಹೇಳಿದರು. ಇದೇ ಮೊದಲ ಬಾರಿಗೆ, ದೇಶವು ಮಾಪನಶಾಸ್ತ್ರಕ್ಕೆ (ಮೆಟ್ರಾಲಜಿ) ಸಂಬಂಧಿಸಿದ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿದ್ದು, ಇದು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಮ್ಮ ಜಾಗತಿಕ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಲು ದಾರಿ ಮಾಡುತ್ತದೆ. ಭೂ-ಪ್ರಾದೇಶಿಕ ದತ್ತಾಂಶವನ್ನು ಇತ್ತೀಚೆಗೆ ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದ್ದು, ಇದು ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತು ದೇಶದ ಯುವಜನರಿಗೆ ಅಪಾರ ಅವಕಾಶಗಳನ್ನು ತೆರೆದಿಡಲಿದೆ. ಇದರಿಂದ ಇಡೀ ಪರಿಸರ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನವಾಗಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 50 ಸಾವಿರ ಕೋಟಿ ರೂ. ತೆಗೆದಿರಿಸಲಾಗಿದೆ. ಇದು ಸಂಶೋಧನೆಗೆ ಸಂಬಂಧಿಸಿದ ಸಂಸ್ಥೆಗಳ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿ, ಶಿಕ್ಷಣ ಹಾಗೂ ಉದ್ಯಮಗಳ ನಡುವಿನ ಸಂಬಂಧಗಳನ್ನು ಸುಧಾರಿಸುತ್ತದೆ. ಜೈವಿಕ ತಂತ್ರಜ್ಞಾನ ಸಂಶೋಧನೆಗೆ ಅನುದಾನವನ್ನು ಶೇ.100ಕ್ಕಿಂತಲೂ ಮಿಗಿಲಾಗಿ ಹೆಚ್ಚಿಸಿರುವುದು ಸರಕಾರದ ಆದ್ಯತೆಗಳನ್ನು ಸೂಚಿಸುತ್ತದೆ ಎಂದರು. ಆಹಾರ ಭದ್ರತೆ, ಪೌಷ್ಟಿಕತೆ ಮತ್ತು ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಸಂಶೋಧನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಧಾನಿ ಕರೆ ನೀಡಿದರು.

ಭಾರತೀಯ ಪ್ರತಿಭೆಗಳಿಗೆ ಜಾಗತಿಕವಾಗಿ ಇರುವ ಬೇಡಿಕೆಯ ಬಗ್ಗೆ ಮಾತನಾಡಿದ ಪ್ರಧಾನಿ, ಕೌಶಲಾಭಿವೃದ್ಧಿಗೆ ಆದ್ಯತೆ ನೀಡಿ, ಅತ್ಯುತ್ತಮ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಯುವಜನರನ್ನು ಸಜ್ಜುಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ವಿವಿಗಳನ್ನು ಆಹ್ವಾನಿಸುವ ಮತ್ತು ಉದ್ಯಮಕ್ಕೆ ಅಗತ್ಯವಾದ ಕೌಶಲಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿರುವ ʻಸುಲಲಿತ ತರಬೇತಿ ಕಾರ್ಯಕ್ರಮʼ (ಈಸ್‌ ಆಫ್‌ ಡೂಯಿಂಗ್ ಅಪ್ರೆಂಟಿಸ್‌ಶಿಪ್‌) ದೇಶದ ಯುವ ಜನತೆಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂಧನ ಸ್ವಾವಲಂಬನೆಗೆ ʻಭವಿಷ್ಯದ ಇಂಧನʼ ಮತ್ತು ಹಸಿರು ಇಂಧನʼ ಅತ್ಯಗತ್ಯ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ ʻಜಲಜನಕ ಯೋಜನೆʼ ಒಂದು ಗಂಭೀರ ಸಂಕಲ್ಪವಾಗಿದೆ. ಭಾರತ ಜಲಜನಕಚಾಲಿತ ವಾಹನವನ್ನು ಪರೀಕ್ಷೆಗೆ ಒಳಪಡಿಸಿದ್ದು, ಸಾರಿಗೆಗೆ ಜಲಜನಕವನ್ನು ಇಂಧನವಾಗಿ ಬಳಸಲು ಮತ್ತು ಇದಕ್ಕಾಗಿ ಉದ್ಯಮವನ್ನು ಸಜ್ಜುಗೊಳಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಕರೆ ನೀಡಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಹೆಚ್ಚು ಹೆಚ್ಚು ಸ್ಥಳೀಯ ಭಾಷೆಯನ್ನು ಬಳಸುವಂತೆ ಪ್ರೋತ್ಸಾಹಿಸುತ್ತದೆ. ದೇಶದ ಮತ್ತು ಜಗತ್ತಿನ ಅತ್ಯುತ್ತಮ ವಿಷಯಗಳನ್ನು ಭಾರತೀಯ ಭಾಷೆಗಳಲ್ಲಿ ಹೇಗೆ ತಯಾರಿಸಬೇಕು ಎಂಬುದು ಈಗ ಎಲ್ಲ ಶಿಕ್ಷಣತಜ್ಞರ, ವಿಷಯ ಪರಿಣತರ ಮತ್ತು ಎಲ್ಲಾ ಭಾಷಾತಜ್ಞರ ಜವಾಬ್ದಾರಿಯಾಗಿದೆ. ಈಗಿನ ತಂತ್ರಜ್ಞಾನ ಯುಗದಲ್ಲಿ ಇದು ಸಂಪೂರ್ಣ ಸಾಧ್ಯ. ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ʻರಾಷ್ಟ್ರೀಯ ಭಾಷಾ ಅನುವಾದ ಯೋಜನೆʼಯು ಈ ನಿಟ್ಟಿನಲ್ಲಿ ಬಹಳ ಮಹತ್ವದ ಹೆಜ್ಜೆ ಎಂದು ಪ್ರಧಾನಿ ಮೋದಿ ಅವರು ಪ್ರತಿಪಾದಿಸಿದರು.

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.