Quote"ಮುಂದಿನ 25 ವರ್ಷಗಳ ʻಅಮೃತ ಕಾಲʼದಲ್ಲಿ ನಿಮ್ಮ ತಂಡ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ"
Quote"ಸಾಂಕ್ರಾಮಿಕ ರೋಗದ ನಂತರದ ಬದಲಾದ ವಿಶ್ವದ ಹೊಸ ಪರಿಸ್ಥಿತಿಯಲ್ಲಿ ಭಾರತವು ತನ್ನ ಪಾತ್ರವನ್ನು ಹೆಚ್ಚಿಸಬೇಕು ಮತ್ತು ವೇಗವಾಗಿ ಅಭಿವೃದ್ಧಿ ಹೋಂದಬೇಕಿದೆ"
Quote"ಆತ್ಮನಿರ್ಭರ್ ಭಾರತ್ ಮತ್ತು ʻಆಧುನಿಕ ಭಾರತʼವು 21ನೇ ಶತಮಾನದಲ್ಲಿ ನಮಗೆ ದೊಡ್ಡ ಗುರಿಗಳಾಗಿವೆ, ನೀವು ಸದಾ ಅವುಗಳತ್ತ ಗಮನಹರಿಸಬೇಕು"
Quote"ನಿಮ್ಮ ಎಲ್ಲ ವರ್ಷಗಳ ಸೇವೆಯಲ್ಲಿ, ಸೇವೆ ಮತ್ತು ಕರ್ತವ್ಯದ ಅಂಶಗಳು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿನ ಮಾನದಂಡವಾಗಿರಬೇಕು"
Quote"ನೀವು ಸಂಖ್ಯೆಗಳಿಗಾಗಿ ಕೆಲಸ ಮಾಡಬೇಡಿ, ಬದಲಿಗೆ ಜನರ ಜೀವನಕ್ಕಾಗಿ ಕೆಲಸ ಮಾಡಿ"
Quote"ಅಮೃತ ಕಾಲದ ಈ ಅವಧಿಯಲ್ಲಿ ನಾವು ಸುಧಾರಣೆ, ಕಾರ್ಯದಕ್ಷತೆ, ಪರಿವರ್ತನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಾಗಿದೆ. ಅದಕ್ಕಾಗಿಯೇ ಇಂದಿನ ಭಾರತವು 'ಸಬ್ ಕಾ ಪ್ರಯಾಸ್‌' ಆಶಯದೊಂದಿಗೆ ಮುನ್ನಡೆಯುತ್ತಿದೆ"
Quote"ಯಾವುದೇ ಸವಾಲುಗಳಿಲ್ಲದ ಸರಳವಾದ ಕೆಲಸ ಎಂದಿಗೂ ನಿಮಗೆ ಸಿಗಬಾರದೆಂದು ನೀವು ಪ್ರಾರ್ಥಿಸಬೇಕು"
Quote"ನೀವು ʻಆರಾಮ ವಲಯʼದ (ಕಂಫರ್ಟ್‌ ಝೋನ್‌) ಬಗ್ಗೆ ಹೆಚ್ಚು ಯೋಚಿಸಿದಷ್ಟೂ, ನಿಮ್ಮ ಪ್ರಗತಿ ಮತ್ತು ದೇಶದ ಪ್ರಗತಿಯನ್ನು ಹೆಚ್ಚಿನ ಮಟ್ಟದಲ್ಲಿ ನೀವು ತಡೆಯುತ್ತೀರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿʼಯಲ್ಲಿ(ಎಲ್‌ಬಿಎಸ್‌ಎನ್‌ಎಎ) ನಡೆದ 96ನೇ ಸಾಮಾನ್ಯ ಫೌಂಡೇಶನ್ ಕೋರ್ಸ್‌ನ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಹೊಸ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿದ ಅವರು ನವೀಕರಿಸಿದ ʻಹ್ಯಾಪಿ ವ್ಯಾಲಿʼ ಸಂಕೀರ್ಣವನ್ನೂ ಲೋಕಾರ್ಪಣೆ ಮಾಡಿದರು.

ಆರಂಭದಲ್ಲಿ, ಪ್ರಧಾನಮಂತ್ರಿಯವರು ಕೋರ್ಸ್ ಪೂರ್ಣಗೊಳಿಸಿದ ಅಧಿಕಾರಿಗಳಿಗೆ ಶುಭ ಕೋರಿದರು. ಹೋಳಿಯ ಸಂತೋಷದ ಸಂದರ್ಭದಲ್ಲಿ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ʻಆಜಾದಿ ಕಾ ಅಮೃತ್ ಮಹೋತ್ಸವʼದ ವರ್ಷದಲ್ಲಿ ಸಕ್ರಿಯ ಸೇವೆಗೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಈ ಬ್ಯಾಚ್‌ನ ಅನನ್ಯತೆಯ ಬಗ್ಗೆ ಅವರು ಗಮನ ಸೆಳೆದರು. "ಮುಂದಿನ 25 ವರ್ಷಗಳ ʻಅಮೃತ ಕಾಲʼದಲ್ಲಿ ನಿಮ್ಮ ಬ್ಯಾಚ್ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್‌ ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿ ಹೊರಹೊಮ್ಮುತ್ತಿರುವ ಹೊಸ ಬದಲಾವಣೆಗಳ ಕುರಿತು ಪ್ರಧಾನಿ ಒತ್ತಿ ಹೇಳಿದರು. 21ನೇ ಶತಮಾನದ ಈ ಹಂತದಲ್ಲಿ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಹೇಳಿದ ಅವರು, "ಬದಲಾದ ಈಗಿನ ಜಾಗತಿಕ ಪರಿಸ್ಥಿತಿಯಲ್ಲಿ, ಭಾರತವು ತನ್ನ ಪಾತ್ರವನ್ನು ಹೆಚ್ಚಿಸಬೇಕು ಮತ್ತು ವೇಗವಾಗಿ ಅಭಿವೃದ್ಧಿ ಹೊಂದಬೇಕಾಗಿದೆ", ಎಂದು ಅವರು ಆಶಿಸಿದರು. ʻಆತ್ಮನಿರ್ಭರ ಭಾರತ್ʼ ಮತ್ತು ʻಆಧುನಿಕ ಭಾರತʼವು 21ನೇ ಶತಮಾನದ ಅತಿದೊಡ್ಡ ಗುರಿಯಾಗಿದ್ದು, ಈ ಅವಧಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಗುರಿಯತ್ತ ವಿಶೇಷ ಗಮನ ಕೇಂದ್ರೀಕರಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. "ಈ ಅವಕಾಶವನ್ನು ಕಳೆದುಕೊಳ್ಳಲು ಸಲ್ಲದು,ʼʼ ಎಂದು ಅವರು ಸಲಹೆ ನೀಡಿದರು.

|

ನಾಗರಿಕ ಸೇವೆಗಳ ಬಗ್ಗೆ ಸರ್ದಾರ್ ಪಟೇಲ್ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸೇವಾ ಪ್ರಜ್ಞೆ ಮತ್ತು ಕರ್ತವ್ಯವು ತರಬೇತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. "ನಿಮ್ಮ ಇಡೀ ಸೇವಾವಧಿಯಲ್ಲಿ, ಸೇವೆ ಮತ್ತು ಕರ್ತವ್ಯದ ಈ ಅಂಶಗಳು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿನ ಮಾನದಂಡವಾಗಿರಬೇಕು," ಎಂದು ಅವರು ಹೇಳಿದರು. ಕರ್ತವ್ಯ ಪ್ರಜ್ಞೆ ಮತ್ತು ನಿರ್ದಿಷ್ಟ ಉದ್ದೇಶದೊಂದಿಗೆ ಮಾಡಿದಾಗ ಯಾವ ಕೆಲಸವೂ ಹೊರೆಯಲ್ಲ ಎಂದು ಅವರು ಹೇಳಿದರು. ಅಧಿಕಾರಿಗಳು ಉದ್ದೇಶದ ಪ್ರಜ್ಞೆಯೊಂದಿಗೆ ಸೇವೆಗೆ ಬಂದಿವುದಾಗಿ ನೆನಪಿಸಿದ ಪ್ರಧಾನಿಯವರು ಸಮಾಜ ಹಾಗೂ ದೇಶದ ಸನ್ನಿವೇಶದಲ್ಲಿ ಸಕಾರಾತ್ಮಕ ಬದಲಾವಣೆಯ ಭಾಗವಾಗಬೇಕೆಂದು ಅವರಿಗೆ ಕರೆ ನೀಡಿದರು.

ಯಾವುದೇ ಸಮಸ್ಯೆಯು ನೈಜ ಚಿತ್ರಣವು ಆಯಾ ಕ್ಷೇತ್ರದಲ್ಲಿ ಮಾತ್ರ ಸಿಗುವುದರಿಂದ ಅಧಿಕಾರಿಗಳು ಯಾವುದೇ ಕಡತಕ್ಕೆ ಸಂಬಂಧಿಸದಿಂತೆ ಆ ಕ್ಷೇತ್ರದ ಅನುಭವವನ್ನು ಪಡೆಯಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಕಡತಗಳು ಕೇವಲ ಸಂಖ್ಯೆಗಳು ಮತ್ತು ಅಂಕಿಅಂಶಗಳನ್ನು ಒಳಗೊಂಡಿಲ್ಲ. ಅವು ಅವು ಜನರ ಜೀವನ ಮತ್ತು ಆಕಾಂಕ್ಷೆಗಳನ್ನು ಒಳಗೊಂಡಿವೆ ಎಂದು ಅವರು ಬಣ್ಣಿಸಿದರು. "ನೀವು ಸಂಖ್ಯೆಗಳಿಗಾಗಿ ಕೆಲಸ ಮಾಡಬೇಕಾಗಿಲ್ಲ, ಬದಲಿಗೆ ಜನರ ಜೀವನಕ್ಕಾಗಿ ಕೆಲಸ ಮಾಡಬೇಕು," ಎಂದರು. ಶಾಶ್ವತ ಪರಿಹಾರ ನೀಡಲು ಅಧಿಕಾರಿಗಳು ಸದಾ ಸಮಸ್ಯೆಗಳು ಮತ್ತು ತಾರ್ಕಿಕತೆಯ ಮೂಲ ಕಾರಣವನ್ನು ಹೋಗಬೇಕು ಎಂದು ಪ್ರಧಾನಿ ಸಲಹೆ ನೀಡಿದರು.  ʻಅಮೃತ ಕಾಲʼದ ಈ ಅವಧಿಯಲ್ಲಿ ನಾವು ಸುಧಾರಣೆ, ಕಾರ್ಯದಕ್ಷತೆ, ಪರಿವರ್ತನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದರು. ಆದ್ದರಿಂದಲೇ ಇಂದಿನ ಭಾರತ 'ಸಬ್ ಕಾ ಪ್ರಯಾಸ್‌ʼ ಆಶಯದೊಂದಿಗೆ ಮುನ್ನಡೆಯುತ್ತಿದೆ. ಕೊನೆಯ ಸಾಲಿನಲ್ಲಿರುವ ಕೊನೆಯ ವ್ಯಕ್ತಿಯ ಕಲ್ಯಾಣದ ದೃಷ್ಟಿಯಿಂದ ಪ್ರತಿಯೊಂದು ನಿರ್ಧಾರವನ್ನು ಮೌಲ್ಯಮಾಪನ ಮಾಡಬೇಕು ಎಂಬ ಮಹಾತ್ಮ ಗಾಂಧಿ ಅವರ ಮಾತನ್ನು ಪ್ರಧಾನಿ ಸ್ಮರಿಸಿದರು.

|

ಸ್ಥಳೀಯ ಮಟ್ಟದಲ್ಲಿ ತಮ್ಮ ಜಿಲ್ಲೆಗಳ 5-6 ಸವಾಲುಗಳನ್ನು ಗುರುತಿಸಿ, ಆ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಪ್ರಧಾನಿ ಸಲಹೆ ನೀಡಿದರು. ಸವಾಲುಗಳನ್ನು ಗುರುತಿಸುವುದು ಸವಾಲುಗಳನ್ನು ಸರಿಪಡಿಸುವ ಮೊದಲ ಹೆಜ್ಜೆಯಾಗಿದೆ. ʻಪ್ರಧಾನಮಂತ್ರಿ ಆವಾಸ್ ಯೋಜನೆʼ, ʻಸೌಭಾಗ್ಯ ಯೋಜನೆʼ ಮತ್ತು ʻಮಹತ್ವಾಕಾಂಕ್ಷೆಯ ಜಿಲ್ಲೆಗಳ ಯೋಜನೆʼಗಳ ಮೂಲಕ ಒದಗಿಸಲಾದ ಪರಿಹಾರಗಳ ಬಗ್ಗೆ ವಿವರಿಸಿದರು. ಬಡವರಿಗೆ ಶಾಶ್ವತ ಮನೆಗಳು ಮತ್ತು ವಿದ್ಯುತ್ ಸಂಪರ್ಕವನ್ನು ಒದಗಿಸಬೇಕಾದ ಸವಾಲುಗಳನ್ನು ಸರಕಾರ ಗುರುತಿಸಿದ ಉದಾಹರಣೆಯನ್ನು ಅವರು ನೀಡಿದರು. ಈ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಅಚಲ ನಿರ್ಧಾರದ ಬಗ್ಗೆಯೂ ಅವರು ಮಾತನಾಡಿದರು. ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದ ಅವರು, ʻಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್ʼ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ಹೇಳಿದರು.

ನಾಗರಿಕ ಸೇವೆಗಳ ಕ್ಷೇತ್ರದಲ್ಲಿ ಅಂದರೆ ಹೊಸ ಸುಧಾರಣೆಗಳಾದ ʻಮಿಷನ್ ಕರ್ಮಯೋಗಿʼ ಮತ್ತು ʻಆರಂಭ್ʼ ಕಾರ್ಯಕ್ರಮಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಸವಾಲಿನ ಕೆಲಸದಲ್ಲಿ ತನ್ನದೇ ಆದ ಸಂತೋಷವಿದೆ. ಅದನ್ನು ಪಡೆಯುವ ಸಲುವಾಗಿ ಅಧಿಕಾರಿಗಳು ಎಂದಿಗೂ ತಮಗೆ ಸುಲಭವಾದ ಕೆಲಸ ಸಿಗಬಾರದೆಂದು ಪ್ರಾರ್ಥಿಸಬೇಕು ಎಂದು ಪ್ರಧಾನಿ ಹೇಳಿದರು. "ನೀವು ʻಆರಾಮ ವಲಯʼಕ್ಕೆ (ಕಂಫರ್ಟ್‌ ಜೋನ್‌) ಹೋಗುವ ಬಗ್ಗೆ ಹೆಚ್ಚು ಯೋಚಿಸಿದಷ್ಟೂ, ನಿಮ್ಮ ಪ್ರಗತಿ ಮತ್ತು ದೇಶದ ಪ್ರಗತಿಗೆ ನೀವು ಹೆಚ್ಚು ಹೆಚ್ಚು ಅಡ್ಡಿಯಾಗುತ್ತೀರಿ", ಎಂದು ಪ್ರಧಾನಿ ಎಚ್ಚರಿಸಿದರು.

ಅಕಾಡೆಮಿಯಿಂದ ನಿರ್ಗಮಿಸುವ ಸಮಯದಲ್ಲಿ ತಮ್ಮ ಆಕಾಂಕ್ಷೆಗಳು ಮತ್ತು ಯೋಜನೆಗಳನ್ನು ದಾಖಲಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಪ್ರಧಾನಿ, ಸಾಧನೆಯ ಮಟ್ಟವನ್ನು ಮೌಲ್ಯಮಾಪನ ಮಾಡಲು 25 ಅಥವಾ 50 ವರ್ಷಗಳ ನಂತರ ಅವುಗಳನ್ನು ಮರುಪರಿಶೀಲನೆ ಮಾಡುವಂತೆ ಸಲಹೆ ನೀಡಿದರು. ಭವಿಷ್ಯದ ಸಮಸ್ಯೆಗಳಲ್ಲಿ ಡೇಟಾ ವಿಜ್ಞಾನದ ಅಂಶ ದೊಡ್ಡದಿರುತ್ತದೆ ಮತ್ತು ಆ ಸಮಸ್ಯೆಗಳ ಪರಿಹಾರಕ್ಕೆ ದತ್ತಾಂಶವನ್ನು ಭೇದಿಸಿ ತಿಳಿಯುವ ಸಾಮರ್ಥ್ಯವವು ಮುಖ್ಯವಾಗಿರುತ್ತದೆ. ಆದ್ದರಿಂದ ಪಠ್ಯಕ್ರಮದಲ್ಲಿ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್ ಸಂಬಂಧಿತ ಕೋರ್ಸ್‌ಗಳು ಮತ್ತು ಸಂಪನ್ಮೂಲಗಳನ್ನು ಸೇರಿಸುವಂತೆ ಪ್ರಧಾನಿ ಸಲಹೆ ನೀಡಿದರು.

96ನೇ ಫೌಂಡೇಶನ್ ಕೋರ್ಸ್ – ಇದು ʻಎಲ್‌ಬಿಎಸ್‌ಎನ್‌ಎಎʼನಲ್ಲಿ ಹೊಸ ಬೋಧನಾಶಾಸ್ತ್ರ ಮತ್ತು ಕೋರ್ಸ್ ವಿನ್ಯಾಸದೊಂದಿಗೆ ʻಮಿಷನ್ ಕರ್ಮಯೋಗಿʼ ತತ್ವಗಳನ್ನು ಆಧರಿಸಿದ ಮೊದಲ ಸಾಮಾನ್ಯ ಫೌಂಡೇಶನ್ ಕೋರ್ಸ್ ಆಗಿದೆ. 16 ಸೇವೆಗಳು ಮತ್ತು 3 ರಾಯಲ್ ಭೂತಾನ್ ಸೇವೆಗಳ (ಆಡಳಿತಾತ್ಮಕ, ಪೊಲೀಸ್ ಮತ್ತು ಅರಣ್ಯ) 488 ಟ್ರೈನಿ ಅಧಿಕಾರಿಗಳನ್ನು (ಒಟಿ) ಈ ಬ್ಯಾಚ್ ಒಳಗೊಂಡಿದೆ.

ಯುವ ತಂಡದ ಸಾಹಸಮಯ ಮತ್ತು ನವೀನ ಮನೋಭಾವವನ್ನು ಬಳಸಿಕೊಳ್ಳಲು, ʻಮಿಷನ್ ಕರ್ಮಯೋಗಿʼ ತತ್ವಗಳನ್ನು ಆಧರಿಸಿದ ಹೊಸ ಬೋಧನಾ ಶಾಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಟ್ರೈನಿ ಅಧಿಕಾರಿಯನ್ನು ವಿದ್ಯಾರ್ಥಿ /ಸಾಮಾನ್ಯ ನಾಗರಿಕರ ಸ್ಥಿತಿಯಿಂದ ಸಾರ್ವಜನಿಕ ಸೇವಕರನ್ನಾಗಿ ಪರಿವರ್ತಿಸಲು ಇದರಲ್ಲಿ ಒತ್ತು ನೀಡಲಾಗಿದೆ. ಇದಕ್ಕಾಗಿ "ಸಬ್ ಕಾ ಪ್ರಯಾಸ್‌" ಆಶಯದೊಂದಿಗೆ ಪದ್ಮ ಪ್ರಶಸ್ತಿ ವಿಜೇತರ ಜೊತೆ ಸಂವಾದ ಹಾಗೂ ಗ್ರಾಮೀಣ ಭಾರತದ ನೈಜ ಅನುಭವಕ್ಕಾಗಿ ಗ್ರಾಮ ಭೇಟಿಯಂತಹ ಉಪಕ್ರಮಗಳನ್ನು ಇದರಲ್ಲಿ ಸೇರಿಸಲಾಗಿದೆ. ಇದರ ಭಾಗವಾಗಿ ಆ ಪ್ರದೇಶಗಳಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ಸವಾಲುಗಳನ್ನು ನೈಜವಾಗಿ ಅರ್ಥಮಾಡಿಕೊಳ್ಳಲು ಟ್ರೈನಿ ಅಧಿಕಾರಿಗಳು ದೂರದ/ಗಡಿ ಪ್ರದೇಶಗಳ ಹಳ್ಳಿಗಳಿಗೆ ಭೇಟಿ ನೀಡಿದರು. ನಿರಂತರ ಶ್ರೇಣೀಕೃತ ಕಲಿಕೆ ಮತ್ತು ಸ್ವಯಂ-ಮಾರ್ಗದರ್ಶಿ ಕಲಿಕೆಯ ತತ್ವಕ್ಕೆ ಅನುಗುಣವಾಗಿ ಪಠ್ಯಕ್ರಮಕ್ಕೆ ಮಾಡ್ಯುಲರ್ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. 'ಪರೀಕ್ಷೆ ಹೊರೆಯ ವಿದ್ಯಾರ್ಥಿ'ಯನ್ನು 'ಆರೋಗ್ಯವಂತ ಯುವ ನಾಗರಿಕ ಸೇವಕ'ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಆರೋಗ್ಯ ಪರೀಕ್ಷೆಗಳ ಜೊತೆಗೆ, ಫಿಟ್ನೆಸ್ ಪರೀಕ್ಷೆಗಳನ್ನು ಸಹ ನಡೆಸಲಾಯಿತು. ಎಲ್ಲಾ 488 ಟ್ರೈನಿ ಅಧಿಕಾರಿಗಳಿಗೆ ʻಕ್ರಾವ್ ಮಗಾʼ ಮತ್ತು ಇತರ ವಿವಿಧ ಕ್ರೀಡೆಗಳಲ್ಲಿ ಮೊದಲ ಹಂತದ ತರಬೇತಿಯನ್ನು ನೀಡಲಾಯಿತು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • krishangopal sharma Bjp December 18, 2024

    नमो नमो 🙏 जय भाजपा 🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
  • krishangopal sharma Bjp December 18, 2024

    नमो नमो 🙏 जय भाजपा 🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
  • krishangopal sharma Bjp December 18, 2024

    नमो नमो 🙏 जय भाजपा 🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
  • Mahendra singh Solanki Loksabha Sansad Dewas Shajapur mp November 07, 2023

    नमो नमो नमो नमो नमो
  • R N Singh BJP June 15, 2022

    jai
  • ranjeet kumar April 20, 2022

    jay🙏🎉🎉
  • Vigneshwar reddy Challa April 12, 2022

    jai modi ji sarkaar
  • Ajitsharma April 09, 2022

    Yogi bulldozer Bihar mein chalna chahie isliye Bihar mein gundagardi apraadhi pura bhar Gaya Bihar mein chalega Bihar mein vah jitna apraadhi hai jitna Dalal Hain jitna avaidh kabja kar rakha hai gundagardi kar rakha hai sabko dhandha chaupat ho jaega aur Bihar UP ki tarah ho jana chahie din mein public Suraksha nahin rahata hai Patna mein jyada gundagardi chalta hai aur Hajipur mein gundagardi jyada chalta hai Bihar ka sthiti pura din kharab hai kyon kharab hai Nitish jaisa ghatiya aadami kahin nahin neta dekhe Hain apna kursi bachane ke liye rajnitik aisa khelta hai public koi achcha usko nahin karta hai Bihar mein Yogi bulldozer chalna chahie Bihar mein jitna apraadhi hai sabko kam tamam ho jana chahie tabhi Bihar ka Suraksha chalega is baat ke liye Bihar ho jaega Swarg apraadhi hata ki Bihar Swarg ban jaega khubsurat ho jaega Bihar isliye बार-बार request kar rahe hain ki Yogi bulldozer Bihar mein chalna chahie jitna Gunda Mafia sab hai sabke kam tamam ho jana chahie humko school milega public kabhi school milega aur public bhi chain ke nind kahin bhi a sakta
  • SHARWANKUMARSHARMA March 29, 2022

    namo
  • ranjeet kumar March 28, 2022

    jay sri ram🙏🙏🙏🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
For PM Modi, women’s empowerment has always been much more than a slogan

Media Coverage

For PM Modi, women’s empowerment has always been much more than a slogan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಮಾರ್ಚ್ 2025
March 08, 2025

Citizens Appreciate PM Efforts to Empower Women Through Opportunities