x17 ನೇ ಲೋಕಸಭೆಯು ಹಲವಾರು ಪ್ರಮುಖ ನಿರ್ಣಯಗಳಿಗೆ ಸಾಕ್ಷಿ. ಈ ಐದು ವರ್ಷಗಳು 'ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆಗೆ ಕಾರಣ'
"ಸೆಂಗೋಲ್ ಭಾರತೀಯ ಪರಂಪರೆಯ ಘೋಷಣೆಯ ಸಂಕೇತ ಮತ್ತು ಸ್ವಾತಂತ್ರ್ಯೋತ್ಸವದ ಕ್ಷಣಗಳಿಗೆ ನೆನಪಾಗಿದೆ"
ಭಾರತ ಈ ಅವಧಿಯಲ್ಲಿ ಜಿ20 ಅಧ್ಯಕ್ಷತೆ ವಹಿಸಿಕೊಳ್ಳಲು ಅವಕಾಶ ಪಡೆಯಿತು ಮತ್ತು ಪ್ರತಿಯೊಂದು ರಾಜ್ಯ ತನ್ನ ಶಕ್ತಿ ಹಾಗೂ ತನ್ನ ಗುರುತನ್ನು ಸಾಬೀತುಪಡಿಸಿತು.
"17 ನೇ ಲೋಕಸಭೆಯಲ್ಲಿ ಶತಮಾನಗಳಿಂದ ಹಲವಾರು ಪೀಳಿಗೆಗಳು ನಿರೀಕ್ಷೆ ಹೊಂದಿದ್ದ ಕೆಲಸವನ್ನು ಪೂರ್ಣಗೊಳಿಸಿದ ತೃಪ್ತಿ ನಮಗಿದೆ"
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾಜಿಕ ನ್ಯಾಯ ನೀಡುವ ನಮ್ಮ ಬದ್ಧತೆಯನ್ನು ನಾವು ತಲುಪುತ್ತಿದ್ದೇವೆ"
75 ವರ್ಷಗಳ ಕಾಲ ಅಪರಾಧ ಸಂಹಿತೆಯಡಿ ದೇಶ‌ ಬದುಕಿತ್ತು. ಇದೀಗ ನಾವು ನ್ಯಾಯ ಸಂಹಿತೆಯಡಿ ಬದುಕುವುದಾಗಿ ಹೆಮ್ಮೆಯಿಂದ ಹೇಳುತ್ತೇವೆ"
"ನಮ್ಮ ಪ್ರಜಾತಂತ್ರದ ವೈಭವಕ್ಕೆ ಅನುಗುಣವಾಗಿ ಚುನಾವಣೆಗಳು ಬರಲಿವೆ
“ಇಂದಿನ ರಾಮಮಂದಿರ ಭಾಷಣಗಳು ‘ಸಂವೇದನ’, ‘ಸಂಕಲ್ಪ’ ಮತ್ತು ‘ಸಹಾನುಭೂತಿ’ ಜೊತೆಗೆ “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಮಂತ್ರವನ್ನು ಒಳಗೊಂಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17 ನೇ ಲೋಕಸಭೆಯ ಕೊನೆಯ ದಿನದ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.

ಸದನ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇದು ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು, 17 ನೇ ಲೋಕಸಭೆಯ ಸದಸ್ಯರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶವನ್ನು ಮುನ್ನಡೆಸುವ ದಿಸೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸೈದ್ಧಾಂತಿಕ ಪಯಣ ಮತ್ತು ಅದರ ಸುಧಾರಣೆಗಾಗಿ ಸಮಯವನ್ನು ದೇಶಕ್ಕೆ ಅರ್ಪಿಸಲು ಇದು ವಿಶೇಷ ಸಂದರ್ಭವಾಗಿದೆ.  ಈ ಐದು ವರ್ಷಗಳು 'ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆಗೆ ಕಾರಣ'ವಾಗಿದೆ. ಇದರ ಅನುಭವವನ್ನು ಇಡೀ ದೇಶ ಇಂದು ನೋಡುತ್ತಿದೆ. ವಿಶ್ವಾಸದ ಪ್ರಯತ್ನಗಳಿಗೆ 17ನೇ ಲೋಕಸಭೆಗೆ ದೇಶದ ಜನರು  ಆಶೀರ್ವಾದ ಮಾಡಲಿದ್ದಾರೆ. ಸದಸ್ಯರ ಸಾಧನೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಎಲ್ಲರಿಗೂ, ವಿಶೇಷವಾಗಿ ಸಭಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು. ಸದಾ ನಗುತ್ತಿರುವ, ಸಮಲೋನನದಿಂದ ಮತ್ತು ನಿಷ್ಪಕ್ಷಪಾತವಾಗಿ ಸದನವನ್ನು ಮುನ್ನಡೆಸಿದಕ್ಕಾಗಿ ಸಭಾಧ್ಯಕ್ಷರನ್ನು ಅಭಿನಂದಿಸಿದರು.

ಕೊರೋನಾ ಸಂದರ್ಭದಲ್ಲಿ ಮಾನವೀಯ ಮೇಲೆ ಸಂಭವಿಸಿದ ಅತಿ ದೊಡ್ಡ ವಿಪತ್ತಿನ ಕುರಿತು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಸಂಸತ್ತಿನಲ್ಲಿ ನಾವು ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದೇವು ಮತ್ತು ದೇಶದ ಕೆಲಸ ಸ್ಥಗಿತಗೊಳ್ಳದಂತೆ ಸದನದ ಮೂಲಕ ನಾವು ಕಾರ್ಯನಿರ್ವಹಿಸಿದ್ದೇವೆ. ಸಾಂಕ್ರಾಮಿಕ ಸಂದರ್ಭದಲ್ಲಿ ಸಂಸದರ ನಿಧಿಯನ್ನು ತ್ಯಜಿಸಿದ ಮತ್ತು ವೇತನದ ಶೇ 30 ರಷ್ಟು ಹಣವನ್ನು ಕಡಿತಗೊಳಿಸಲು ಅನುಮತಿ ನೀಡಿದ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಜನತೆಯ ಪ್ರತಿಕೂಲ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಎಲ್ಲಾ ಸದಸ್ಯರಿಗೆ ಸಂಸತ್ ನಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದ ಕ್ಯಾಂಟಿನ್ ಸೌಲಭ್ಯವನ್ನು ಸಭಾಧ್ಯಕ್ಷರು ರದ್ದುಪಡಿಸಿದರು.

ಹೊಸ ಸಂಸತ್ ಭವನದ ರಚನೆ ಮತ್ತು ಪ್ರಸ್ತುತ ಅಧಿವೇಶನ ಇಲ್ಲಿ ನಡೆಯಲು ಕಾರಣರಾದ ಮತ್ತು ಎಲ್ಲಾ ಸದಸ್ಯರನ್ನು ಒಂದೇ ವೇದಿಕೆಗೆ ತಂದ ಕಾರಣಕ್ಕಾಗಿ ಸಭಾಧ್ಯಕ್ಷರನ್ನು ಶ್ಲಾಘಿಸಿದರು.

ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಲಾದ ಸೆಂಗೋಲ್ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇದು ಭಾರತದ ಪರಂಪರೆಯ ಪುನಶ್ಚೇತನ ಮತ್ತು ಸ್ವಾತಂತ್ರ್ಯ ಭಾರತದ ಮೊದಲ ಕ್ಷಣದ ಸ್ಮರಣೆಯ ಸಂಕೇತವಾಗಿದೆ ಎಂದು ಒತ್ತಿ ಹೇಳಿದರು. ಸೆಂಗೋಲ್ ವಾರ್ಷಿಕ ಸಮಾರಂಭದ ಭಾಗವನ್ನಾಗಿ ಮಾಡಿದ ಮತ್ತು ಸ್ವಾತಂತ್ರ್ಯಗಳಿಸಿದ ಸಾಧನೆಯ ಕ್ಷಣವಾಗಿ ಭವಿಷ್ಯದ ಪೀಳಿಗೆಗೆ ಇದರ ಸಂಕರ್ಪ ಕಲ್ಪಿಸಿ ಸ್ಫೂರ್ತಿಯ ಮೂಲವನ್ನಾಗಿ ಮಾಡಲಾಗಿದೆ ಎಂದರು.

ಭಾರತ ಈ ಅವಧಿಯಲ್ಲಿ ಜಿ20 ಅಧ್ಯಕ್ಷತೆ ವಹಿಸಿಕೊಳ್ಳಲು ಅವಕಾಶ ಪಡೆಯಿತು ಮತ್ತು ಪ್ರತಿಯೊಂದು ರಾಜ್ಯ ತನ್ನ ಸಾಮರ್ಥ್ಯ ಹಾಗೂ ತನ್ನ ಗುರುತನ್ನು ಸಾಬೀತುಪಡಿಸಿತು. ಇದೇ ರೀತಿ ಪಿ-20 ಶೃಂಗಸಭೆ ಭಾರತ ಪ್ರಜಾಪ್ರಭುತ್ವದ ತಾಯಿ ಎಂಬುದನ್ನು ನಿರೂಪಿಸಿತು.

ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ನಡೆಸುವ ಮೂಲಕ ರೀತಿ ರಿವಾಜುಗಳ ಮೂಲಕ ಪುಷ್ಪನಮನ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಿಸಿರುವ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು.  ಪ್ರತಿಯೊಂದು ರಾಜ್ಯಗಳಿಂದ ಇಬ್ಬರು ಅಂತಿಮ ಸ್ಪರ್ಧಿಗಳು ದೆಹಲಿಗೆ ಆಗಮಿಸಿ ಗಣ್ಯರ ಬಗ್ಗೆ ಮಾತನಾಡುತ್ತಾರೆ. ದೇಶದ ಸಂಸದೀಯ ಸಂಪ್ರದಾಯದ ಬಗ್ಗೆ ಲಕ್ಷಾಂತರ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಇದರಿಂದ ಸಾಧ್ಯವಾಗಿದೆ ಎಂದರು. ಸಂಸತ್ತಿನ ಗ್ರಂಥಾಲಯವನ್ನು ಸಾಮಾನ್ಯ ಜನರಿಗೆ ಮುಕ್ತಗೊಳಿಸಿದ ತೀರ್ಮಾನದ ಸಂದರ್ಭವನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.

ಸಂಸತ್ತಿನಲ್ಲಿ ಕಾಗದ ರಹಿತ ಪರಿಕಲ್ಪನೆ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಡಕಗೊಳಿಸಿ ವಿಶೇಷ ಉಪಕ್ರಮದ ಜಾರಿಗೆ ಕಾರಣರಾದ ಸ್ಪೀಕರ್ ಅವರಿಗೆ ಧನ್ಯವಾದ ಸಲ್ಲಿಸಿದರು.

ಸದಸ್ಯರು ಸಾಮೂಹಿಕ ಪ್ರಯತ್ನ ಮತ್ತು ಸದಸ್ಯರಲ್ಲಿ ಅರಿವು ಮೂಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡ ಕಾರಣ ಮತ್ತು ಸಭಾಧ್ಯಕ್ಷರ ಕೌಶಲ್ಯದಿಂದ 17 ನೇ ಲೋಕಸಭೆ ಫಲಪ್ರದವಾಗುವ ಜೊತೆಗೆ ಶೇ 97 ರಷ್ಟು ಕಲಾಪ ನಡೆಸಲು ಸಾಧ್ಯವಾಯಿತು. ಬರುವ 18 ನೇ ಲೋಕಸಭೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸದಸ್ಯರು ದೇಶದ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಫಲಪ್ರದತೆಯನ್ನು ಶೇ 100 ಕ್ಕೆ ಹೆಚ್ಚಿಸಬೇಕು ಎಂದರು. ಸದನ ಮಧ್ಯರಾತ್ರಿವರೆಗೂ ನಡೆದಿವೆ. 7 ಅಧಿವೇಶನಗಳು ಶೇ 100 ರಷ್ಟು ಫಲಪ್ರದವಾಗಿದ್ದವು. ಎಲ್ಲಾ ಸದಸ್ಯರು ತನ್ನ ಮನಸ್ಸಿನಿಂದ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಸಂಸತ್ತಿನ ಮೊದಲ ಅಧಿವೇಶನದಲ್ಲಿ 17 ಮಸೂದೆಗಳಿಗೆ ಅಂಗೀಕಾರ ದೊರೆಕಿತ್ತು ಎಂದರು.

ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭ ಸಂಸತ್ ಸದಸ್ಯರ ಸಂತಸಕ್ಕೆ ಕಾರಣವಾಗಿದ್ದು, ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ ಅಮೃತ ಮಹೋತ್ಸವ ಜನಾಂದೋಲನ ರೀತಿಯಲ್ಲಿ ಆಚರಿಸಲು ಕಾರಣರಾದ ಸದಸ್ಯರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಇದೇ ರೀತಿ ಸಂವಿಧಾನದ 75 ನೇ ವರ್ಷ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದರು.

21 ನೇ ಶತಮಾನದ ಭದ್ರ ಬುನಾದಿಯನ್ನು ಆ ಕಾಲದ ಆಟ ಬದಲಾಯಿಸುವ ಭಾರತದ ಸುಧಾರಣೆಗಳಲ್ಲಿ ಕಾಣಬಹುದು. “ತಲೆಮಾರುಗಳು ಜನತೆ ಕಾಯುತ್ತಿದ್ದ ಅನೇಕ ವಿಷಯಗಳನ್ನು 17 ನೇ ಲೋಕಸಭೆಯ ಮೂಲಕ ಸಾಧಿಸಲಾಗಿದೆ ಎಂದು ನಾವು ಬಹಳ ತೃಪ್ತಿಯಿಂದ ಹೇಳಬಹುದು. 370 ನೇ ವಿಧಿಯನ್ನು ರದ್ದುಪಡಿಸುವುದರೊಂದಿಗೆ ಸಂವಿಧಾನದ ಸಂಪೂರ್ಣ ವೈಭವ ಪ್ರಕಟವಾಗಿದೆ. ಇದು ಸಂವಿಧಾನ ರಚನಕಾರರಿಗೆ ಖುಷಿ ತಂದಿರಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾಜಿಕ ನ್ಯಾಯ ನೀಡುವ ನಮ್ಮ ಬದ್ಧತೆಯನ್ನು ನಾವು ತಲುಪುತ್ತಿದ್ದೇವೆ" ಎಂದರು.

ಭಯೋತ್ಪಾದನೆಯ ಸಂದರ್ಭವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿಯವರು, ಭಯೋತ್ಪಾದಕರ ವಿರುದ್ಧ ಸದನ ಕಠಿಣ ನಿಯಮಗಳನ್ನು ರೂಪಿಸಿ ಬಲಗೊಳಿಸಿದೆ. ಇದು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಯ ಸಂಕಲ್ಪ ಈಡೇರುತ್ತದೆ ಎಂದು ಹೇಳಿದರು.  

75 ವರ್ಷಗಳ ಕಾಲ ದೇಶ‌ ಅಪರಾಧ ಸಂಹಿತೆಯಡಿ ಬದುಕಿತ್ತು. ಇದೀಗ ನಾವು ನ್ಯಾಯ ಸಂಹಿತೆಯಡಿ ಬದುಕುವುದಾಗಿ ಹೆಮ್ಮೆಯಿಂದ ಹೇಳುತ್ತೇವೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಹೊಸ ಕಾನೂನು ಸಂಹಿತೆ ಅಡಕಗೊಳಿಸಿರುವುದನ್ನು ಉಲ್ಲೇಖಿಸಿದರು.

ಹೊಸ ಸಂಸತ್ ಭವನದಲ್ಲಿ ನಾರಿಶಕ್ತಿ ವಂದನ್ ಅಧಿನಿಯಮ್ ಮಸೂದೆ ಅಂಗೀಕಾರಗೊಳ್ಳಲು ಸಭಾಧ್ಯಕ್ಷರು ಕೈಗೊಂಡ ಕ್ರಮಗಳಿಗೆ ಧನ್ಯವಾದ ಸಲ್ಲಿಸಿದರು. ಇಲ್ಲಿನ ಮೊದಲ ಅಧಿವೇಶನ ಉಳಿದವುಗಳಿಗಿಂತ ಕಡಿಮೆ ಇದ್ದರೂ ಮುಂದಿನ ದಿನಗಳಲ್ಲಿ ಸದನ ಮಹಿಳಾ ಸದಸ್ಯರಿಂದ ತುಂಬಿರಲಿದೆ. ಇದು ನಾರಿ ಶಕ್ತಿ ವಂದನ್ ಅಧಿನಿಯಮ್ ಅಂಗೀಕಾರದ ಫಲಿತಾಂಶವಾಗಲಿದೆ. 17 ನೇ ಲೋಕಸಭೆ ತ್ರಿವಳಿ ತಲಾಖ್ ರದ್ದುಗೊಳಿಸಿ ಮಹಿಳೆಯರ ಹಕ್ಕುಗಳನ್ನು ಖಚಿತಪಡಿಸಿತು ಎಂದರು.

ದೇಶಕ್ಕೆ ಮುಂದಿನ 25 ವರ್ಷಗಳ ಮಹತ್ವದ ಕುರಿತು ಪ್ರಸ್ತಾಪಿಸಿದ ಅವರು, ದೇಶ ತನ್ನ ಕನಸುಗಳನ್ನು ನನಸಾಗಿಸುವ ಸಂಕಲ್ಪನವನ್ನು ತೆಗೆದುಕೊಂಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 1930 ರಲ್ಲಿ ಮಹಾತ್ಮಾ ಗಾಂಧೀಜಿ ಅವರ ಉಪ್ಪಿನ ಸತ್ಯಾಗ್ರಹ ಮತ್ತು ಸ್ವದೇಶಿ ಆಂದೋಲನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದರ ಆರಂಭದಲ್ಲಿ ಈ ಘಟನೆಗಳು ಅತ್ಯಲ್ಪವಾಗಿರಬಹುದು, ಆದರೆ 1947 ರಲ್ಲಿ ಸ್ವಾತಂತ್ರ್ಯ ಪಡೆಯಲು ಇವು ಕಾರಣವಾಯಿತು. ಅಲ್ಲದೇ ಮುಂದಿನ 25 ವರ್ಷಗಳ ಅಡಿಪಾಯವನ್ನು ಗಟ್ಟಿಗೊಳಿಸಿತು.  ಬರುವ 2047 ರ ವೇಳೆಗೆ ದೇಶ ಅಭಿವೃದ್ಧಿ ಹೊಂದಿದ ಭಾರತವಾಗಬೇಕು ಎಂಬುದು ಪ್ರತಿಯೊಬ್ಬರ ಭಾವನೆಯಾಗಿದೆ ಎಂದರು.

ಯುವ ಸಮೂಹದ ಪರವಾದ ಕಾನೂನುಗಳು ಮತ್ತು ಉಪಕ್ರಮಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗಿದೆ. ಪ್ರಧಾನಮಂತ್ರಿಯವರು ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ದೂರಗಾಮಿ ಪ್ರಾಮುಖ್ಯತೆಯ ಬಗ್ಗೆ ಪ್ರಸ್ತಾಪಿಸಿದರು. ಈ ಕಾಯ್ದೆ ಭಾರತವನ್ನು ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ಜಾಗತಿಕ ತಾಣವನ್ನಾಗಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

21 ನೇ ಶತಮಾನದಲ್ಲಿ ಬದಲಾದ ಜಗತ್ತಿನಲ್ಲಿ ಮೂಲ ಅಗತ್ಯತೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದತ್ತಾಂಶದ ಮೌಲ್ಯದ ಬಗ್ಗೆ ಹೇಳಿದರು. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂಸರಕ್ಷಣಾ ಕಾಯ್ದೆಯ ಅಂಗೀಕಾರ ಪ್ರಸ್ತುತ ಪೀಳಿಗೆಯ ದತ್ತಾಂಶವನ್ನು ರಕ್ಷಿಸಿದೆ ಮತ್ತು ಪ್ರಪಂಚದಾದ್ಯಂತ ಕೌತುಕಕ್ಕೆ ಕಾರಣವಾಗಿದೆ ಎಂದರು. ಭಾರತದ ಮಹತ್ವದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೇಶದ ವೈವಿಧ್ಯತೆ ಮತ್ತು ವೈವಿಧ್ಯಯಮ ದತ್ತಾಂಶ ದೇಶದಲ್ಲಿಯೇ ಸೃಷ್ಟಿಯಾಗುತ್ತಿದೆ ಎಂದರು.

ಭದ್ರತೆಯ ಹೊಸ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಸಮುದ್ರ, ಬಾಹ್ಯಾಕಾಶ ಮತ್ತು ಸೈಬರ್ ಭದ್ರತೆ ಬಗ್ಗೆ ಮಾತನಾಡಿದರು. “ಈ ವಲಯಗಳಲ್ಲಿ ನಾವು ಸಕಾರಾತ್ಮಕ ಸಾಮರ್ಥ್ಯವನ್ನು ಸೃಜಿಸಬೇಕು ಮತ್ತು ನಕಾರಾತ್ಮಕ ಶಕ್ತಿಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಬಾಹ್ಯಾಕಾಶ ವಲಯದ ಸುಧಾರಣೆಗಳಿಂದಾಗಿ ದೀರ್ಘಕಾಲದ ಪರಿಣಾಮಕ್ಕೆ ಕಾರಣವಾಗುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

17 ನೇ ಲೋಕಸಭೆ ಕೈಗೊಂಡ ಆರ್ಥಿಕ ಸುಧಾರಣೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಸಾಮಾನ್ಯ ನಾಗರಿಕ ಜೀವನವನ್ನು ಸುಗಮಗೊಳಿಸಲು ಸಹಸ್ರಾರು ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ‘ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಅಡಳಿತ’ ದ ಬಗ್ಗೆ ನಂಬಿಕೆ ಬರುವಂತಾಗಿದೆ. ನಾಗರಿಕರ ಜೀವನದಲ್ಲಿ ಕನಿಷ್ಠ ಸರ್ಕಾರ ಇರುವುದನ್ನು ಖಾತ್ರಿಪಡಿಸುವ ಮೂಲಕ ಯಾವುದೇ ಪ್ರಜಾಪ್ರಭುತ್ವ ತನ್ನ ಸಾಮರ್ಥ್ಯಗಳನ್ನು ಗರಿಷ್ಠಗೊಳಿಸಬಹುದು ಎಂದು ಹೇಳಿದರು.

ಅಡೆತಡೆಗೆ ಕಾರಣವಾಗಿದ್ದ 60 ಕಾನೂನುಗಳನ್ನು ತೆರೆವುಗೊಳಿಸಲಾಗಿದೆ. ಸುಗಮ ವ್ಯವಹಾರದ ಸುಧಾರಣೆಗಾಗಿ ಇದು ಅಗತ್ಯವಾಗಿತ್ತು. ಜನರ ನಂಬಿಕೆಯನ್ನು ಹೆಚ್ಚಿಸಬೇಕಾಗಿತ್ತು. ಜನ ವಿಶ್ವಾಸ ಕಾಯ್ದೆಯಡಿ 180 ಚಟುವಟಿಕೆಗಳನ್ನು ಅಪರಾಧೀಕರಣಗೊಳಿಸಲಾಗಿದೆ. ಮಧ್ಯಸ್ಥಿಕೆ ಕಾಯ್ದೆ ಅನಗತ್ಯವಾಗಿ ವ್ಯಾಜ್ಯಗಳನ್ನು ನಿವಾರಿಸಲು ಸಹಕಾರಿಯಾಗಿದೆ ಎಂದರು.

ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ದುರವಸ್ಥೆ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು,  ಈ ಸಮುದಾಯಕ್ಕಾಗಿ ಕಾಯ್ದೆ ಜಾರಿಗೆ ತರಲು ಕಾರಣರಾದ ಸದಸ್ಯರನ್ನು ಅಭಿನಂದಿಸಿದರು. ದುರ್ಬಲ ವರ್ಗಗಳಿಗೆ ಸೂಕ್ಷ್ಮ ನಿಬಂಧನೆಗಳು ಜಾಗತಿಕ ಮೆಚ್ಚುಗೆ ವಿಷಯವಾಗಿದೆ ಎಂದು ಹೇಳಿದರು. ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯ ತನ್ನ ಗುರುತನ್ನು ಪಡೆಯುತ್ತಿದೆ ಮತ್ತು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಉದ್ಯಮಶೀಲರಾಗುತ್ತಿದ್ದಾರೆ. ಪದ್ಮ ಪ್ರಶಸ್ತಿ ಪಟ್ಟಿಯಲ್ಲೂ ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸ್ಥಾನ ದೊರೆತಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಸದನದ ಕಾರ್ಯಕಲಾಪದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಆಗಿನ ಕಾಲದಲ್ಲಿ ಜೀವ ಕಳೆದುಕೊಂಡ ಸದಸ್ಯರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

“ಭಾರತದ ಪ್ರಜಾಪ್ರಭುತ್ವದ ಪಯಣ ಶಾಶ್ವತವಾಗಿದೆ ಮತ್ತು ಮಾನವೀಯತೆ ಸೇವೆ ಸಲ್ಲಿಸುವುದು ದೇಶದ ಉದ್ದೇಶವಾಗಿದೆ. ಇಡೀ ಜಗತ್ತು ಭಾರತದ ಜೀವನ ಪದ್ಧತಿಯನ್ನು ಒಪ್ಪಿಕೊಂಡಿದೆ ಮತ್ತು ಈ ಸತ್ ಸಂಪ್ರದಾಯವನ್ನು ಸದಸ್ಯರು ಮುಂದುವರೆಸಬೇಕು ಎಂದರು.

ಮುಂಬರುವ ಚುನಾವಣೆಗಳ ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪ್ರಜಾತಂತ್ರ ವ್ಯವಸ್ಥೆಯ ಆಯಾಮಗಳಿಗೆ ಚುನಾವಣೆಗಳು ಅಗತ್ಯ ಮತ್ತು ಸಹಜವಾದದು. ನಮ್ಮ ಪ್ರಜಾತಂತ್ರದ ವೈಭವಕ್ಕೆ ಅನುಗುಣವಾಗಿ ಚುನಾವಣೆಗಳು ನಡೆಯುತ್ತವೆ ಎಂದು ತಮಗೆ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

17 ನೇ ಲೋಕಸಭೆಯಲ್ಲಿ ಎಲ್ಲಾ ಸದಸ್ಯರು ತನ್ನ ಕೊಡುಗೆ ನೀಡಿದ್ದಕ್ಕಾಗಿ ಪ್ರಧಾನಂತ್ರಿಯವರು ಧನ್ಯವಾದ ಸಲ್ಲಿಸಿದರು. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕುರಿತು ನಿರ್ಣಯ ಅಂಗೀಕರಿಸಿರುವುದರಿಂದ ಮುಂದಿನ ಪೀಳಿಗೆಗೆ ಇದು ಸಂವಿಧಾನಾತ್ಮಕ ಅಧಿಕಾರ ನೀಡುತ್ತದೆ ಮತ್ತು ಈ ಪರಂಪರೆಯ ಬಗ್ಗೆ ದೇಶ ಹೆಮ್ಮೆ ಪಡುತ್ತದೆ. “ಇಂದಿನ ರಾಮಮಂದಿರ ನಿರ್ಣಯ  ‘ಸಂವೇದನ’, ‘ಸಂಕಲ್ಪ’ ಮತ್ತು ‘ಸಹಾನುಭೂತಿ’ ಜೊತೆಗೆ “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಮಂತ್ರವನ್ನು ಒಳಗೊಂಡಿದೆ.

ಸಂಸತ್ತು ತನ್ನ ಸದಸ್ಯರ ಮೂಲಕ ಭವಿಷ್ಯದ ಪೀಳಿಗೆಗೆ ಪರಂಪರೆಯನ್ನು ಬಿಟ್ಟುಹೋಗುವಂತೆ ಪ್ರೇರೇಪಿಸುತ್ತದೆ ಮತ್ತು ತನ್ನ ಎಲ್ಲಾ ಸದಸ್ಯರ ಸಾಮೂಹಿಕ ಪ್ರಯತ್ನದಿಂದ ಮುಂದಿನ ಪೀಳಿಗೆಯ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿ ಪ್ರಧಾನಮಂತ್ರಿಯವರು ತಮ್ಮ ಭಾಷಣ ಪೂರ್ಣಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi