ಕೊರೊನಾ ನಿರ್ವಹಣೆಯಲ್ಲಿ ಮನೆಯಲ್ಲಿನ ಬುದ್ಧಿಶಕ್ತಿ ಮತ್ತು ಯೋಗ-ಆಯುರ್ವೇದ ಪ್ರಮುಖ ಪಾತ್ರ
ಸ್ವಾಸ್ಥ್ಯ ಭಾರತೀಯ ಕಲ್ಪನೆ ರೋಗವನ್ನು ಗುಣಪಡಿಸುವುದನ್ನು ಮೀರಿದೆ
ಯೋಗ ಮತ್ತು ಆಯುರ್ವೇದವನ್ನು ಜಗತ್ತು ಅರ್ಥೈಸಿಕೊಳ್ಳುವ ಭಾಷೆಯಲ್ಲಿ ಪ್ರಸ್ತುತಪಡಿಸಬೇಕು
ಭಾರತವನ್ನು ಆಧ್ಯಾತ್ಮಿಕ ಮತ್ತು ಯೋಗಕ್ಷೇಮ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಪ್ರಧಾನಮಂತ್ರಿ ಕರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ರಾಮಚಂದ್ರ ಮಿಷನ್ ನ 75ನೇ ವರ್ಷಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿ ಅವರು ಜನರಲ್ಲಿ ಅರ್ಥಪೂರ್ಣ ಜೀವನ, ಶಾಂತಿ ಆರೋಗ್ಯ ಮತ್ತು ಆಧ್ಯಾತ್ಮಿಕ ಯೋಗ ಕ್ಷೇಮ ತತ್ವಗಳನ್ನು ತಿಳಿಸಿ ಕೊಡುತ್ತಿರುವ ಮಿಷನ್ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೆ ಮಿಷನ್ ಯೋಗವನ್ನು ಜನಪ್ರಿಯಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ವೇಗದ ಮತ್ತು ಒತ್ತಡದ ಜೀವನದಲ್ಲಿ ವಿಶ್ವ ಜೀವನ ಶೈಲಿ ಸಂಬಂಧಿ ಕಾಯಿಲೆಗಳು ಮತ್ತು ಸಾಂಕ್ರಾಮಿಕಗಳ ಎದುರು ಹೋರಾಡುತ್ತಿದೆ. ಸಹಜ ಮಾರ್ಗ, ಹೃದಯವಂತಿಕೆ ಮತ್ತು ಯೋಗ ಜಗತ್ತಿನ ಭರವಸೆಯ ಆಶಾಕಿರಣವಾಗಿದೆ ಎಂದರು.

ಭಾರತ ಕೊರೊನಾ ನಿರ್ವಹಿಸಿದ ಬಗೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, 130 ಕೋಟಿ ಭಾರತೀಯ ಜನರು ಜಾಗೃತರಾಗಿದ್ದು, ಇಡೀ ವಿಶ್ವಕ್ಕೆ ಉದಾಹರಣೆಯಾಗಿದೆ. ಇದರಲ್ಲಿ ಮನೆಯಲ್ಲಿನ ಬುದ್ಧಿವಂತಿಕೆ ಮತ್ತು ಯೋಗ-ಆಯುರ್ವೇದ ಅತ್ಯಂತ ಮಹತ್ವದ ಪಾತ್ರವಹಿಸಿತು.

ಜಾಗತಿಕ ಒಳಿತಿಗಾಗಿ ಭಾರತ ಮಾನವ ಕೇಂದ್ರಿತ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮಾನವ ಸಂಬಂಧಿ ಧೋರಣೆ ಕಲ್ಯಾಣ, ಸ್ವಾಥ್ಯ ಮತ್ತು ಸಂಪತ್ತಿನ ಆರೋಗ್ಯಕರ ಸಮತೋಲನವನ್ನು ಆಧರಿಸಿದೆ. ಕಳೆದ ಆರು ವರ್ಷಗಳಲ್ಲಿ ಭಾರತ ವಿಶ್ವದ ಅತಿದೊಡ್ಡ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಬಡಜನರು ಗೌರವಯುತವಾಗಿ ಬಾಳ್ವೆ ನಡೆಸುವಂತಾಗಲು ಮತ್ತು ಅವರಿಗೆ ಅವಕಾಶಗಳನ್ನು ಸೃಷ್ಟಿಸುವುದು ಈ ಪ್ರಯತ್ನಗಳ ಗುರಿಯಾಗಿದೆ. ಸಾರ್ವತ್ರಿಕ ನೈರ್ಮಲೀಕರಣದಿಂದ ಹಿಡಿದು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ವರೆಗೆ, ಹೊಗೆರಹಿತ ಅಡುಗೆ ಕೋಣೆಗಳಿಂದ ಹಿಡಿದು, ಬ್ಯಾಂಕಿಂಗ್ ಸೇವೆ ಇಲ್ಲದವರಿಗೆ ಬ್ಯಾಂಕಿಂಗ್ ಸೇವೆ ಒದಗಿಸುವವರೆಗೆ, ತಂತ್ರಜ್ಞಾನದ ಒದಗಿಸುವುದರಿಂದ ಹಿಡಿದು ಸರ್ವರಿಗೂ ವಸತಿವರೆಗೆ, ಭಾರತ ಪ್ರತಿಯೊಬ್ಬರ ಜೀವನಕ್ಕೂ ತಲುಪುವಂತಹ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂಬುದನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ ಯೋಗಕ್ಷೇಮದ ತತ್ವ ಕೇವಲ ರೋಗವನ್ನು ಆರೈಕೆ ಮಾಡುವುದಲ್ಲ ಅದಕ್ಕೂ ಮಿಗಿಲಾದುದು ಎಂದರು. ಮುನ್ನೆಚ್ಚರಿಕೆ ಆರೋಗ್ಯ ರಕ್ಷಣೆ ಕುರಿತು ವ್ಯಾಪಕ ಕಾರ್ಯ ನಡೆದಿದೆ ಎಂದರು. ಭಾರತದ ಮಹತ್ವಾಕಾಂಕ್ಷೆಯ ಆರೋಗ್ಯ ರಕ್ಷಣಾ ಯೋಜನೆ ಆಯುಷ್ಮಾನ್ ಭಾರತ್ ಅನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಅದರಡಿ ಅಮೆರಿಕದ ಜನಸಂಖ್ಯೆಗಿಂತ ಹೆಚ್ಚಿನ ಫಲಾನುಭವಿಗಳು ಮತ್ತು ಐರೋಪ್ಯ ರಾಷ್ಟ್ರಗಳಿಗಿಂತ ಹೆಚ್ಚಿನ ಜನಸಂಖ್ಯೆಯ ಫಲಾನುಭವಿಗಳಿದ್ದಾರೆ ಎಂದರು. ಇದು ವಿಶ್ವದ ಅತಿ ದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದೆ. ವೈದ್ಯಕೀಯ ಚಿಕಿತ್ಸೆ ಮತ್ತು ವೈದ್ಯಕೀಯ ಸಾಧನಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ.

ಜಾಗತಿಕ ಲಸಿಕೀಕರಣ ಕಾರ್ಯಕ್ರಮದಲ್ಲಿ ಭಾರತ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯೋಗಕ್ಷೇಮದ ನಮ್ಮ ಮುನ್ನೋಟ ಕೇವಲ ದೇಶಕ್ಕೆ ಸೀಮಿತವಾಗಿಲ್ಲ, ಜಗತ್ತನ್ನು ಒಳಗೊಂಡಿದೆ. ಭಾರತ ಎಷ್ಟು ಸಾಧ್ಯವೋ ಅಷ್ಟು ಆರೋಗ್ಯ ಮತ್ತು ಯೋಗಕ್ಷೇಮವನ್ನು ಎಲ್ಲರಿಗೂ ಒದಗಿಸಲು ಪ್ರಯತ್ನಿಸುತ್ತಿದೆ. ಜನರು ಭಾರತವನ್ನು ಆಧ್ಯಾತ್ಮಿಕ ಮತ್ತು ಯೋಗಕ್ಷೇಮ ಪ್ರವಾಸೋದ್ಯಮದ ತಾಣವನ್ನಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು. ನಮ್ಮ ಯೋಗ ಮತ್ತು ಆಯುರ್ವೇದ ಆರೋಗ್ಯಕರ ಭೂಮಿಗೆ ಕೊಡುಗೆ ನೀಡಲಿವೆ. ಅದನ್ನು ಜಗತ್ತು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ವಿಶ್ವಕ್ಕೆ ನೀಡುವ ಗುರಿ ನಮ್ಮದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಯೋಗ ಮತ್ತು ಧ್ಯಾನವನ್ನು ಜಗತ್ತು ಗಂಭೀರವಾಗಿ ಪರಿಗಣಿಸುತ್ತಿರುವುದು ಹೆಚ್ಚಾಗುತ್ತಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ ಅವರು ಒತ್ತಡದ ಸವಾಲು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ಅರ್ಥಪೂರ್ಣ ಕಾರ್ಯಕ್ರಮ ಅದನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು. “ಕಾಯಿಲೆ ರಹಿತ ಪ್ರಜೆಗಳು, ಮಾನಸಿಕವಾಗಿ ಸದೃಢವಾಗಿರುವ ನಾಗರಿಕರು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ” ಎಂದು ಹೇಳಿ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಸಮಾಪ್ತಿಗೊಳಿಸಿದರು.

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
In young children, mother tongue is the key to learning

Media Coverage

In young children, mother tongue is the key to learning
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಡಿಸೆಂಬರ್ 2024
December 11, 2024

PM Modi's Leadership Legacy of Strategic Achievements and Progress