‘2014 ರಲ್ಲಿ 25,000 ಕೋಟಿ ರೂಪಾಯಿ ಇದ್ದ ಕೃಷಿ ಆಯವ್ಯಯ ಇದೀಗ 1,25,000 ಕೋಟಿ ರೂಪಾಯಿಗೆ ಏರಿಕೆ’
“ ಇತ್ತೀಚಿನ ಪ್ರತಿಯೊಂದು ಮುಂಗಡಪತ್ರವನ್ನು “ಗೋಯನ್ – ಗರೀಬ್ – ಕಿಸಾನ್’ ಆಯವ್ಯಯ ಪತ್ರ ಎಂದು ಕರೆಯಲಾಗುತ್ತದೆ”
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳು ರೈತರಿಗೆ ದೊರೆಯುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ”
“ಕೃಷಿ ವಲಯವನ್ನು ಉತ್ತೇಜಿಸಲು ಮುಂಗಡಪತ್ರದಲ್ಲಿ ನಿರಂತರವಾಗಿ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದ ದೇಶ ಸ್ವಾವಲಂಬಿ ಭಾರತ ಆಗಲಿದೆ ಮತ್ತು ಆಮದು ಉದ್ದೇಶಕ್ಕೆ ಬಳಸುವ ಹಣ ನಮ್ಮ ರೈತರ ಕೈ ಸೇರಲಿದೆ”
“ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಸವಾಲುಗಳನ್ನು ನಿರ್ಮೂಲನೆ ಮಾಡದ ಹೊರತು ಸಮಗ್ರ ಅಭಿವೃದ್ಧಿ ಗುರಿ ಸಾಧನೆ ಸಾಧ್ಯವಾಗದು”
“9 ವರ್ಷಗಳ ಹಿಂದೆ ಏನೂ ಇರಲಿಲ್ಲ, ಇದೀಗ ಭಾರತ 3000 ಕ್ಕೂ ಹೆಚ್ಚು ಕೃಷಿ-ನವೋದ್ಯಮಗಳ ತಾಣವಾಗಿದೆ”
“ಸಿರಿಧಾನ್ಯಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ; ಇದು ಭಾರತೀಯರಿಗೆ ಜಾಗತಿಕ ಮಾರುಕಟ್ಟೆಯ ಹೆಬ್ಬಾಗಿಲು”
“ಭಾರತದ ಸಹಕಾರ ವಲಯದಲ್ಲಿ ಒಂದು ಹೊಸ ಕ್ರಾಂತಿ ಆರಂಭವಾಗಿದೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಯುವ್ಯಯ ನಂತರದಲ್ಲಿ “ಕೃಷಿ ಮತ್ತು ಸಹಕಾರ” ಕುರಿತ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. 2023 ರ ಕೇಂದ್ರ ಆಯವ್ಯಯದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು 12 ಆಯವ್ಯಯ ನಂತರದ ವೆಬಿನಾರ್ ಗಳನ್ನು ಆಯೋಜಿಸಿದ್ದು, ಈ ಪೈಕಿ ಇದು ಎರಡನೇ ವೆಬಿನಾರ್ ಆಗಿದೆ.

ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ವರ್ಷದ ಮುಂಗಡಪತ್ರ ಹಾಗೂ ಕಳೆದ 8-9 ವರ್ಷಗಳಿಂದ ಕೃಷಿ ವಲಯಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದರು. 2014 ರಲ್ಲಿ 25,000 ಕೋಟಿ ರೂಪಾಯಿ ಇದ್ದ ಕೃಷಿ ಆಯವ್ಯಯ ಇದೀಗ 1,25,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. “ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಆಯವ್ಯಯವನ್ನು “ಗೋಯನ್ – ಗರೀಬ್ – ಕಿಸಾನ್’ ಆಯವ್ಯಯ ಎಂದು ಕರೆಯಲಾಗುತ್ತದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.  

ಸ್ವಾತಂತ್ರ್ಯೋತ್ತರದ ನಂತರ ದೀರ್ಘಕಾಲ ಕೃಷಿ ವಲಯ ಸಂಕಷ್ಟದಲ್ಲಿತ್ತು. ನಮ್ಮ ಆಹಾರ ಭದ್ರತೆಗಾಗಿ ಹೊರ ಪ್ರಪಂಚದ ಮೇಲೆ ದೇಶ ಅವಲಂಬಿತವಾಗಿತ್ತು. ಭಾರತದ ರೈತರು ದೇಶವನ್ನು “ಆತ್ಮನಿರ್ಭರ” [ಸ್ವಾವಲಂಬಿ] ಭಾರತವನ್ನಷ್ಟೇ ನಿರ್ಮಾಣ ಮಾಡುತ್ತಿಲ್ಲ, ಆಹಾರ ಧಾನ್ಯಗಳನ್ನು ರಫ್ತು ಮಾಡುವ ಹಂತಕ್ಕೆ ತಲುಪಿದ್ದಾರೆ. “ಭಾರತ ಇಂದು ಹಲವಾರು ವಿಧದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ” ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ರೈತರಿಗೆ ಪ್ರವೇಶಿಸುವಂತೆ ಮಾಡಲು ಸರ್ಕಾರದ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ಸ್ವಾವಲಂಬನೆ ಅಥವಾ ರಫ್ತು ವಿಚಾರಕ್ಕೆ ಬಂದಾಗ ಭಾರತದ ಗುರಿ ಅಕ್ಕಿ ಇಲ್ಲವೆ ಗೋಧಿಗೆ ಮಾತ್ರ ಸೀಮಿತವಾಗಬಾರದು ಎಂದರು.

ಕೃಷಿ ವಲಯದಲ್ಲಿ ಆಮದು ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, 2021-22 ರಲ್ಲಿ ಬೇಳೆಕಾಳುಗಳ ಆಮದಿಗಾಗಿ 17,000 ಕೋಟಿ ರೂಪಾಯಿ, ಮೌಲ್ಯ ವರ್ಧಿತ ಆಹಾರ ಉತ್ಪನ್ನಗಳ ಆಮದಿಗಾಗಿ 25,000 ಕೋಟಿ ರೂಪಾಯಿ, 2021-22 ರಲ್ಲಿ ಖಾದ್ಯ ತೈಲ ಆಮದು ಮಾಡಿಕೊಳ್ಳಲು 1.5 ಲಕ್ಷ ಕೋಟಿ ರೂಪಾಯಿ ಮೊತ್ತ ವೆಚ್ಚಮಾಡಲಾಗಿದೆ. ಕೆಲವು ಕೃಷಿ ಆಮದಿಗಾಗಿ 2 ಲಕ್ಷ ಕೋಟಿ ರೂಪಾಯಿ  ವೆಚ್ಚ ಮಾಡಲಾಗಿದೆ ಎಂದು ಹೇಳಿದರು. ಕೃಷಿ ವಲಯದ ಉತ್ತೇಜನಕ್ಕಾಗಿ ಆಯವ್ಯಯದಲ್ಲಿ ನಿರಂತರವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದ ದೇಶ ಸ್ವಾವಲಂಬಿಯಾಗುತ್ತಿದೆ ಮತ್ತು ಆಮದು ಉದ್ದೇಶಕ್ಕೆ ವೆಚ್ಚ ಮಾಡುವ ಹಣ ರೈತರಿಗೆ ಉಳಿತಾಯವಾಗಲಿದೆ. ಕನಿಷ್ಠ ಬೆಂಬಲ ಬೆಲೆ ಎಂ.ಎಸ್.ಪಿ ಹೆಚ್ಚಿಸಿರುವುದನ್ನು ಉದಾಹರಣೆಯಾಗಿ ನೀಡಿದ ಅವರು, ಬೇಳೆಕಾಳುಗಳ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ, ಆಹಾರ ಸಂಸ್ಕರಣಾ ಪಾರ್ಕ್ ಗಳನ್ನು ಹೆಚ್ಚಿಸಲಾಗಿದೆ ಮತ್ತು ಖಾದ್ಯ ತೈಲ ವಲಯದಲ್ಲಿ ಸ್ವಾವಲಂಬಿಯಾಗಲು ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.  

ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಸವಾಲುಗಳನ್ನು ನಿರ್ಮೂಲನೆ ಮಾಡದ ಹೊರತು ಸಮಗ್ರ ಅಭಿವೃದ್ಧಿ ಗುರಿ ಸಾಧನೆ ಸಾಧ್ಯವಾಗದು. ಖಾಸಗಿ ನಾವೀನ್ಯತಾ ವಲಯ ಮತ್ತು ಹೂಡಿಕೆದಾರರು ಕೃಷಿ ವಲಯದಿಂದ ಅಂತರ ಕಾಯ್ದುಕೊಂಡಿದ್ದು, ಇದು ಸಕ್ರಿಯ ಭಾಗವಹಿಸುವಿಕೆ ಮತ್ತು ಬೆಳವಣಿಗೆಗೆ ಸಾಕ್ಷಿಯಾಗುವ ಇತರೆ ವಲಯಗಳಿಗೆ ಹೋಲಿಸಿದರೆ ಭಾರತದ ಯುವ ಸಮೂಹ ಕೂಡ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಕಡಿಮೆಯಿದೆ. ಈ ಕೊರತೆಯನ್ನು ತುಂಬಲು ಈ ವರ್ಷದ ಬಜೆಟ್ ನಲ್ಲಿ ವಿವಿಧ ಘೋಷಣೆಗಳನ್ನು ಮಾಡಲಾಗಿದೆ ಎಂದರು. ಯುಪಿಐ ಮುಕ್ತ ವೇದಿಕೆ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯದಲ್ಲಿ ಕೃಷಿ ತಂತ್ರಜ್ಞಾನ ವಲಯಗಳಲ್ಲಿ ಹೂಡಿಕೆ ಮತ್ತು ನಾವೀನ್ಯತೆಯ ಅಪಾರ ಸಾಧ್ಯತೆಗಳ ಕುರಿತು ಪ್ರಸ್ತಾಪಿಸಿದರು. ಸಾಗಾಣೆ ವಲಯದ ಸುಧಾರಣೆ, ದೊಡ್ಡ ಮಾರುಕಟ್ಟೆಗಳನ್ನು ಹೆಚ್ಚು ಸುಲಭವಾಗಿಸುವುದು, ತಂತ್ರಜ್ಞಾನದ ಮೂಲಕ ಹನಿ ನೀರಾವರಿಯನ್ನು ಉತ್ತೇಜಿಸುವ, ವೈದ್ಯಕೀಯ ಪ್ರಯೋಗಾಲಯಗಳ ಸಾಲಿನಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಯಂತಹ ಅವಕಾಶಗಳ ಬಗ್ಗೆ ಪ್ರಧಾನಮಂತ್ರಿ ಅವರು ವಿವರಿಸಿದರು. ಯುವ ಸಮೂಹ ತಮ್ಮ ಆವಿಷ್ಕಾರಗಳ ಬಗ್ಗೆ ಸರ್ಕಾರ ಮತ್ತು ರೈತರ ನಡುವೆ ಮಾಹಿತಿಯ ಸೇತುವೆಯನ್ನು ರಚಿಸುವಾಗ ಮತ್ತು ನೀತಿ ನಿರೂಪಣೆಯಲ್ಲಿ ಸಹಾಯಮಾಡುವಾಗ ಸರಿಯಾದ ಸಮಯಕ್ಕೆ ಸರಿಯಾದ ಸಲಹೆಯನ್ನು ತಲುಪಿಸಲು ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಹವಾಮಾನ ಬದಲಾವಣೆ ಕುರಿತು ಸೂಕ್ತ ಸಮಯಕ್ಕೆ ಮಾಹಿತಿ ಪಡೆಯಲು ಬೆಳೆ ಪರಿಶೀಲನೆಗಾಗಿ ಡ್ರೋನ್ ಗಳ ಬಳಕೆ ಕುರಿತಂತೆಯೂ ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು.  

ಕೃಷಿ ತಂತ್ರಜ್ಞಾನ ನವೋದ್ಯಮಗಳಿಗೆ ತ್ವರಿತ ನಿಧಿ ಒದಗಿಸುವ ಕುರಿತು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು ಮತ್ತು ಸರ್ಕಾರ ಕೇವಲ ಡಿಜಿಟಲ್ ಮೂಲ ಸೌಕರ್ಯವನ್ನಷ್ಟೇ ಸೃಜಿಸುತ್ತಿಲ್ಲ, ಹಣಕಾಸಿನ ಮಾರ್ಗಗಳನ್ನು ಸಹ ಸಿದ್ಧಪಡಿಸುತ್ತಿದೆ. ಯುವ ಮತ್ತು ಯುವ ಉದ್ದಿಮೆದಾರರು ತಮ್ಮ ಗುರಿಗಳನ್ನು ತಲುಪಲು ಮುಂದಾಗಬೇಕು ಮತ್ತು ಸಾಧಿಸಬೇಕು. 9 ವರ್ಷಗಳ ಹಿಂದೆ ಏನೂ ಇರಲಿಲ್ಲ, ಇದೀಗ ಭಾರತದಲ್ಲಿ 3000 ಕ್ಕೂ ಹೆಚ್ಚು ಕೃಷಿ-ನವೋದ್ಯಮಗಳ ತಾಣವಾಗಿದೆ ಎಂದರು.   

ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಸಿರಿಧಾನ್ಯಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದ್ದು, ಇದು ಭಾರತೀಯರಿಗೆ ಜಾಗತಿಕ ಮಾರುಕಟ್ಟೆಯ ಹೆಬ್ಬಾಗಿಲು. “ದೇಶ ಈಗ ಮುಂಗಡಪತ್ರದಲ್ಲಿ ಒರಟು ಧಾನ್ಯಗಳಿಗೆ ಶ್ರೀ ಅನ್ನ ಎಂದು ಹೆಸರಿಸಿದೆ” ಎಂದು ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು. ಶ್ರೀ ಅನ್ನವನ್ನು ಉತ್ತೇಜಿಸಿ ಸಣ್ಣ ರೈತರಿಗೆ ಲಾಭ ದೊರಕಿಸಿಕೊಡಬೇಕಷ್ಟೇ ಅಲ್ಲದೇ ಈ ವಲಯದಲ್ಲಿ ನವೋದ್ಯಮಗಳ ಕ್ಷೇತ್ರವನ್ನು  ಹೆಚ್ಚಿಸಬೇಕು ಎಂದು ಹೇಳಿದರು.   

“ಭಾರತದ ಸಹಕಾರ ವಲಯದಲ್ಲಿ ಒಂದು ಹೊಸ ಕ್ರಾಂತಿ ಆರಂಭವಾಗಿದೆ”, ಇದು ಇನ್ನು ಮುಂದೆ ದೇಶದ ಕೆಲವು ರಾಜ್ಯಗಳು ಮತ್ತು ಕೆಲವು ಪ್ರದೇಶಗಳಿಗೆ ಸೀಮಿತವಾಗಿಲ್ಲ ಎಂದರು.  ಉತ್ಪಾದನಾ ವಲಯದಲ್ಲಿ ತೊಡಗಿಕೊಂಡಿರುವ ಹೊಸ ಸಹಕಾರ ಸಂಘಗಳಿಗೆ ಈ ವರ್ಷದ ಬಜೆಟ್ ನಲ್ಲಿ ತೆರಿಗೆ ಸಂಬಂಧಿತ ಪರಿಹಾರಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಹಕಾರ ಸಂಘಗಳಿಗೆ ಮೂರು ಕೋಟಿ ರೂಪಾಯಿವರೆಗಿನ ನಗದು ಹಿಂಪಡೆಯುವಿಕೆಗೆ ಟಿಡಿಎಸ್ ವಿಧಿಸುವುದಿಲ್ಲ. 2016 – 17 ರ ಮೊದಲು ಸಕ್ಕರೆ ಸಹಕಾರಿ ಸಂಘದ ಪಾವತಿಗೆ ನೀಡಲಾದ ತೆರಿಗೆ ವಿನಾಯಿತಿಯ ಮಹತ್ವದ ನಿರ್ಧಾರವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು ಇದರಿಂದ ಸಕ್ಕರೆ ಸಹಕಾರಿ ಸಂಘಗಳಿಗೆ 10,000 ಕೋಟಿ ರೂಪಾಯಿ ಲಾಭವಾಗಲಿದೆ ಎಂದರು.

ಈ ಹಿಂದೆ ಹೈನುಗಾರಿಕೆ ಮತ್ತು ಮೀನುಗಾರಿಕೆ ವಲಯಗಳು ಸಹಕಾರಿ ಕ್ಷೇತ್ರದಲ್ಲಿರಲಿಲ್ಲ, ಇಂದು ಈ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಮೀನುಗಾರಿಕೆ ವಲಯದಲ್ಲಿ ರೈತರಿಗೆ ಹೆಚ್ಚಿನ ಅವಕಾಶಗಳಿವೆ, ಕಳೆದ 8-9 ವರ್ಷಗಳಲ್ಲಿ ದೇಶದಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ 70 ಲಕ್ಷ ಮೆಟ್ರಿಕ್ ಟನ್ ನಷ್ಟು ಉತ್ಪಾದನೆ ಹೆಚ್ಚಾಗಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 6000 ಕೋಟಿ ರೂಪಾಯಿ ಮೊತ್ತದ ಹೊಸ ಉಪ ಘಟಕ ಕುರಿತು ಪ್ರಸ್ತಾಪಿಸಿ, ಇದು ಮೀನುಗಾರರಿಗೆ ಮೌಲ್ಯ ಸರಪಳಿ ಹಾಗೂ ಮಾರುಕಟ್ಟೆ ವಲಯಲದಲ್ಲಿ ಪುಷ್ಟಿ ನೀಡಲಿದೆ ಎಂದರು.  

ಪ್ರಧಾನಮಂತ್ರಿ ಪ್ರಣಾಮ್ ಯೋಜನೆ ಮತ್ತು ಗೋಬ್ರಧನ್ ಯೋಜನೆ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಸರ್ಕಾರ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದೆ ಮತ್ತು ರಾಸಾಯನಿಕ ಆಧಾರಿತ ಕೃಷಿಯನ್ನು ಕಡಿಮೆ ಮಾಡಲಿದೆ ಎಂದು ಹೇಳಿ ತಮ್ಮ ಭಾಷಣ ಪೂರ್ಣಗೊಳಿಸಿದರು.

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Double engine govt becoming symbol of good governance, says PM Modi

Media Coverage

Double engine govt becoming symbol of good governance, says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government