ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾತನಾಡಿದರು. ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್‌ಗಳ ನ್ಯಾಯಾಧೀಶರು, ಖ್ಯಾತ ವಕೀಲರು ಮತ್ತು ವಿದೇಶಿ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
ವಿಶ್ವದ ಎಲ್ಲ ನಾಗರಿಕರಿಗೆ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ತುಂಬುವ ನ್ಯಾಯಾಂಗದ ನಡುವೆ ತಾವು ಹಾಜರಿರುವ ಬಗ್ಗೆ ಹೆಮ್ಮೆಪಟ್ಟುಕೊಂಡ ಪ್ರಧಾನಿಯವರು, 21 ನೇ ಶತಮಾನದ 3 ನೇ ದಶಕದ ಆರಂಭದಲ್ಲಿ ನ್ಯಾಯಾಂಗ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಗಮನಸೆಳೆದರು.
ಇದು ಭಾರತಕ್ಕೆ ಮಾತ್ರವಲ್ಲದೆ ಪ್ರಪಂಚದಲ್ಲೂ ತ್ವರಿತ ಬದಲಾವಣೆಗಳನ್ನು ತರುವ ದಶಕವಾಗಿದೆ ಎಂದು ಪ್ರಧಾನಿ ಹೇಳಿದರು. ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ. ಈ ಬದಲಾವಣೆಗಳು ತರ್ಕ, ಸಮಾನ ನ್ಯಾಯವನ್ನು ಆಧರಿಸಿರಬೇಕು ಎಂದು ಅವರು ಹೇಳಿದರು. ಆದ್ದರಿಂದ ಈ ಸಮ್ಮೇಳನದ ವಿಷಯವಾದ “ನ್ಯಾಯಾಂಗ ಮತ್ತು ಬದಲಾಗುತ್ತಿರುವ ಜಗತ್ತು” ಹೆಚ್ಚು ಸೂಕ್ತವಾಗಿದೆ ಮತ್ತು ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
“ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯನ್ನು ದೇಶವು ಆಚರಿಸುತ್ತಿರುವ ಸಂದರ್ಭದಲ್ಲಿಯೇ ಈ ಸಮ್ಮೇಳನವೂ ನಡೆಯುತ್ತಿದೆ” ಎಂದು ಅವರು ಹೇಳಿದರು.
ಮಹಾತ್ಮಗಾಂಧೀಜಿಯವರು ವಕೀಲರಾಗಿ ಪ್ರಕರಣವೊಂದನ್ನು ಪಡೆಯಲು ಆಯೋಗಕ್ಕೆ ಕಮೀಷನ್ ನೀಡಲು ನಿರಾಕರಿಸಿದ್ದನ್ನು ಅವರು ನೆನಪು ಮಾಡಿಕೊಂಡರು. ಮಹಾತ್ಮರ ಪ್ರಾಮಾಣಿಕತೆ ಮತ್ತು ಸೇವೆಯಲ್ಲಿನ ನಂಬಿಕೆಗೆ ಅವರು ಬೆಳೆದ ಪರಿಸರ ಹಾಗೂ ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಅಧ್ಯಯನ ಕಾರಣ ಎಂದು ಹೇಳಿದರು.
ಭಾರತದ ತತ್ವಶಾಸ್ತ್ರವು “ಕಾನೂನು ದೊರೆಗಳ ದೊರೆ, ಕಾನೂನೇ ಸರ್ವೋಚ್ಚ” ಎಂಬ ಮಾದರಿಯನ್ನು ಆಧರಿಸಿದ್ದು ಎಂದು ಪ್ರಧಾನಿ ಹೇಳಿದರು.
ಈ ತತ್ವದ ನಂಬಿಕೆಯಿಂದಾಗಿಯೇ 130 ಕೋಟಿ ಭಾರತೀಯರು ಇತ್ತೀಚಿನ ನ್ಯಾಯಾಂಗದ ತೀರ್ಪುಗಳನ್ನು ಶಾಂತಿಯುತವಾಗಿ ಸ್ವೀಕರಿಸುವಂತೆ ಮಾಡಿತು ಎಂದರು.
ಭಾರತದ ತತ್ವಶಾಸ್ತ್ರವು “ಕಾನೂನು ದೊರೆಗಳ ದೊರೆ, ಕಾನೂನೇ ಸರ್ವೋಚ್ಚ” ಎಂಬ ಮಾದರಿಯನ್ನು ಆಧರಿಸಿದ್ದು ಎಂದು ಪ್ರಧಾನಿ ಹೇಳಿದರು.
ಈ ತತ್ವದ ನಂಬಿಕೆಯಿಂದಾಗಿಯೇ 130 ಕೋಟಿ ಭಾರತೀಯರು ಇತ್ತೀಚಿನ ನ್ಯಾಯಾಂಗದ ತೀರ್ಪುಗಳನ್ನು ಶಾಂತಿಯುತವಾಗಿ ಸ್ವೀಕರಿಸುವಂತೆ ಮಾಡಿತು ಎಂದರು.
“ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ, ಅದೊಂದು ಜೀವನದ ವಾಹಕ ಮತ್ತು ಅದರ ಚೈತನ್ಯವು ಯಾವಾಗಲೂ ಕಾಲಾತೀತವಾದುದು” ಎಂಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೇಳಿಕೆಯನ್ನು ಪ್ರಧಾನಿ ಉಲ್ಲೇಖಿಸಿದರು. ಈ ಭಾವನೆಯನ್ನು ನಮ್ಮ ದೇಶದ ನ್ಯಾಯಾಲಯಗಳು ಮುಂದುವರಿಸಿಕೊಂಡು ಬರುತ್ತಿವೆ. ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗಗಳು ಇವುಗಳನ್ನು ಜೀವಂತವಾಗಿರಿಸಿವೆ ಎಂದರು.
“ಎಲ್ಲಾ ಸವಾಲುಗಳ ನಡುವೆ ಪರಸ್ಪರರ ಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಸಂವಿಧಾನದ ಮೂರು ಸ್ತಂಭಗಳು ಅನೇಕ ಬಾರಿ ದೇಶಕ್ಕೆ ಸರಿಯಾದ ಮಾರ್ಗವನ್ನೇ ಕಂಡುಕೊಂಡಿವೆ. ಕಳೆದ ಐದು ವರ್ಷಗಳಲ್ಲಿ ಭಾರತದ ವಿವಿಧ ಸಂಸ್ಥೆಗಳು ಈ ಸಂಪ್ರದಾಯವನ್ನು ಬಲಪಡಿಸಿವೆ ”ಎಂದು ಅವರು ಹೇಳಿದರು.
ದೇಶದಲ್ಲಿ ಪ್ರಸ್ತುತವಲ್ಲದ ಸುಮಾರು 1500 ಕಾನೂನುಗಳನ್ನು ತ್ವರಿತಗತಿಯಲ್ಲಿ ರದ್ದುಪಡಿಸಲಾಗಿದೆ ಮತ್ತು ಸಮಾಜವನ್ನು ಬಲಪಡಿಸುವ ಅನೇಕ ಹೊಸ ಕಾನೂನುಗಳನ್ನು ಅದೇ ಗತಿಯಲ್ಲಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಹೇಳಿದರು.
ಈ ಸಮ್ಮೇಳನದಲ್ಲಿ ‘ಜೆಂಡರ್ ಜಸ್ಟ್ ವರ್ಲ್ಡ್’ ವಿಷಯವನ್ನು ಪರಿಚಯಿಸಿದ ಬಗ್ಗೆ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದರು. “ವಿಶ್ವದ ಯಾವುದೇ ದೇಶ, ಯಾವುದೇ ಸಮಾಜ ಲಿಂಗ ಸಮಾನತೆಯಿಲ್ಲದೇ ಪರಿಪೂರ್ಣ ಅಭಿವೃದ್ಧಿಯನ್ನು ಸಾಧಿಸಲು ಅಥವಾ ನ್ಯಾಯವನ್ನು ಪಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು. ಮಿಲಿಟರಿ ಸೇವೆಯಲ್ಲಿ ಮಹಿಳೆಯರ ನೇಮಕಾತಿ, ಫೈಟರ್ ಪೈಲಟ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿನ ಬದಲಾವಣೆಗಳು ಮತ್ತು ಗಣಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯದಂತಹ ಲಿಂಗ ಸಮಾನತೆಯನ್ನು ತರಲು ಸರ್ಕಾರ ಮಾಡಿದ ಬದಲಾವಣೆಗಳನ್ನು ಪ್ರಧಾನಿಯವರು ಪಟ್ಟಿ ಮಾಡಿದರು. ದೇಶದ ದುಡಿಯುವ ಮಹಿಳೆಯರಿಗೆ 26 ವಾರಗಳ ಪಾವತಿ ರಜೆ ನೀಡುವ ವಿಶ್ವದ ಕೆಲವೇ ದೇಶಗಳಲ್ಲಿ ಇಂದು ಭಾರತವೂ ಒಂದಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಂಡಿರುವುದಕ್ಕಾಗಿ ಮತ್ತು ಆ ಕುರಿತು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವುದಕ್ಕಾಗಿ ಪ್ರಧಾನಿಯವರು ನ್ಯಾಯಾಂಗಕ್ಕೆ ಧನ್ಯವಾದ ಸಲ್ಲಿಸಿದರು. ಮೂಲಸೌಕರ್ಯಗಳ ನಿರ್ಮಾಣದ ಜೊತೆಯಲ್ಲಿಯೇ ಪರಿಸರವನ್ನೂ ಸಹ ಸಂರಕ್ಷಿಸಬಹುದು ಎಂಬುದನ್ನು ಭಾರತ ತೋರಿಸಿದೆ ಎಂದು ಅವರು ಹೇಳಿದರು.
ತ್ವರಿತವಾಗಿ ನ್ಯಾಯ ಒದಗಿಸಲು ತಂತ್ರಜ್ಞಾನದ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿಯವರು, ದೇಶದ ಪ್ರತಿಯೊಂದು ನ್ಯಾಯಾಲಯವನ್ನು ಇ-ಕೋರ್ಟ್ ಇಂಟಿಗ್ರೇಟೆಡ್ ಮಿಷನ್ ಮೋಡ್ ಯೋಜನೆಗೆ ಸಂಪರ್ಕಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ ಎಂದು ಹೇಳಿದರು. “ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲ ಸ್ಥಾಪನೆಯು ನ್ಯಾಯಾಲಯದ ಕಾರ್ಯವಿಧಾನಗಳನ್ನು ಸರಳಗೊಳಿಸುತ್ತದೆ” ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆ ಮತ್ತು ಮಾನವನ ಆತ್ಮಸಾಕ್ಷಿಯ ಸಂಯೋಜನೆಯು ಭಾರತದಲ್ಲಿನ ನ್ಯಾಯಾಂಗ ಪ್ರಕ್ರಿಯೆಗಳಿಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
दुनिया के करोड़ों नागरिकों को न्याय और गरिमा सुनिश्चित करने वाले आप सभी दिग्गजों के बीच आना, अपने आप में बहुत सुखद अनुभव है।
— PMO India (@PMOIndia) February 22, 2020
न्याय की जिस chair पर आप सभी बैठते हैं, वो सामाजिक जीवन में भरोसे और विश्वास का महत्वपूर्ण स्थान है: PM @narendramodi
पूज्य बापू का जीवन सत्य और सेवा को समर्पित था, जो किसी भी न्यायतंत्र की नींव माने जाते हैं।
— PMO India (@PMOIndia) February 22, 2020
औऱ हमारे बापू खुद भी तो वकील थे, बैरिस्टर थे।
अपने जीवन का जो पहला मुकदमा उन्होंने लड़ा, उसके बारे में गांधी जी ने बहुत विस्तार से अपनी आत्मकथा में लिखा है: PM @narendramodi
हाल में कुछ ऐसे बड़े फैसले आए हैं, जिनको लेकर पूरी दुनिया में चर्चा थी।
— PMO India (@PMOIndia) February 22, 2020
फैसले से पहले अनेक तरह की आशंकाएं व्यक्त की जा रही थीं।
लेकिन हुआ क्या?
130 करोड़ भारतवासियों ने न्यायपालिका द्वारा दिए गए इन फैसलों को पूरी सहमति के साथ स्वीकार किया: PM @narendramodi
तमाम चुनौतियों के बीच, कई
— PMO India (@PMOIndia) February 22, 2020
बार देश के लिए संविधान के तीनों Pillars ने उचित रास्ता ढूंढा है।
और हमें गर्व है कि भारत में इस तरह की एक समृद्ध परंपरा विकसित हुई है।
बीते पाँच वर्षों में भारत की अलग-अलग संस्थाओं ने, इस परंपरा को और सशक्त किया है: PM @narendramodi
तमाम चुनौतियों के बीच, कई
— PMO India (@PMOIndia) February 22, 2020
बार देश के लिए संविधान के तीनों Pillars ने उचित रास्ता ढूंढा है।
और हमें गर्व है कि भारत में इस तरह की एक समृद्ध परंपरा विकसित हुई है।
बीते पाँच वर्षों में भारत की अलग-अलग संस्थाओं ने, इस परंपरा को और सशक्त किया है: PM @narendramodi
मुझे खुशी है कि इस कॉन्फ्रेंस में ‘Gender Just World’ के विषय को भी रखा गया है।
— PMO India (@PMOIndia) February 22, 2020
दुनिया का कोई भी देश, कोई भी समाज Gender Justice के बिना पूर्ण विकास नहीं कर सकता और ना ही न्यायप्रियता का दावा कर सकता है: PM @narendramodi
इसी तरह सैन्य सेवा में बेटियों की नियुक्ति हो, फाइटर पाइलट्स की चयन प्रक्रिया हो, माइन्स में रात में काम करने की स्वतंत्रता हो, सरकार द्वारा अनेक बदलाव किए गए हैं: PM @narendramodi
— PMO India (@PMOIndia) February 22, 2020
मैं आज इस अवसर पर, भारत की न्यायपालिका का भी आभार व्यक्त करना चाहता हूं, जिसने विकास और पर्यावरण के बीच संतुलन की गंभीरता को समझा है, उसमें निरंतर मार्गदर्शन किया है: PM @narendramodi
— PMO India (@PMOIndia) February 22, 2020
सरकार का भी प्रयास है कि देश की हर कोर्ट को e-court Integrated Mission Mode Project से जोड़ा जाए।
— PMO India (@PMOIndia) February 22, 2020
National Judicial Data Grid की स्थापना से भी कोर्ट की प्रक्रियाएं आसान बनेंगी: PM @narendramodi