ವಿಪತ್ತಿನಿಂದ ಮೂಲ ಸ್ಥಿತಿಗೆ ಚೇತರಿಸಿಕೊಳ್ಳುವ ಮೂಲ ಸೌಕರ್ಯ [Disaster Resilient Infrastructure] ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟನಾ ಭಾಷಣ ಮಾಡಿದರು. ಈ ಸಮಾರಂಭದಲ್ಲಿ ಫಿಜಿ ಪ್ರಧಾನಿ, ಇಟಲಿ ಪ್ರಧಾನಿ ಮತ್ತು ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಿ ಅವರು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಂಘಟನೆಗಳ ತಜ್ಞರು, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ವಲಯದ ಪ್ರಮುಖರು ಸಹ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.
ಈಗಿನ ಪರಿಸ್ಥಿತಿ ಹಿಂದೆಂದೂ ಕಂಡರಿಯದ್ದು ಎಂದು ಹೇಳಿದ ಪ್ರಧಾನಮಂತ್ರಿ ಅವರು, ನೂರು ವರ್ಷಗಳಿಗೊಮ್ಮೆ ಸಂಭವಿಸುವ ವಿಪತ್ತಿಗೆ ನಾವು ಸಾಕ್ಷಿಯಾಗಿದ್ದೇವೆ. ಕೋವಿಡ್ 19 ಸಾಂಕ್ರಾಮಿಕ ಪರಸ್ಪರ ಅವಲಂಬಿತ ಮತ್ತು ಅಂತರ್ ಸಂಪರ್ಕಿತ ಜಗತ್ತಿನಲ್ಲಿ ಶ್ರೀಮಂತರು, ಬಡವರು, ಪೂರ್ವ ಅಥವಾ ಪಶ್ವಿಮ, ಉತ್ತರ ಅಥವಾ ದಕ್ಷಿಣ ಎಂಬ ಭೇದವಿಲ್ಲದೇ ಜಾಗತಿಕ ವಿಪತ್ತುಗಳ ಪರಿಣಾಮದಿಂದ ಯಾವುದೇ ದೇಶವೂ ರಕ್ಷಣೆ ಪಡೆದಿಲ್ಲ ಎಂದರು.
ಈ ಸಾಂಕ್ರಾಮಿಕದಿಂದ ಜಗತ್ತು ಹೇಗೆ ಒಟ್ಟಾಗಿದೆ ಎಂಬುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, “ ಜಾಗತಿಕ ಸವಾಲುಗಳನ್ನು ಎದುರಿಸಲು ಹೊಸಶೋಧಗಳು ಎಲ್ಲಿಂದ ಬಂದರೂ ಅದು ಸ್ವೀಕಾರಾರ್ಹ ಎಂಬುದು ಸಾಂಕ್ರಾಮಿಕ ಸಂದರ್ಭದಲ್ಲಿ ನಮಗೆ ತಿಳಿದು ಬಂದಿದೆ “ ಎಂದು ಹೇಳಿದರು. ಇದಕ್ಕಾಗಿ ಜಗತ್ತಿನ ಎಲ್ಲಾ ಭಾಗಗಳಲ್ಲಿ ಹೊಸತನವನ್ನು ಬೆಂಬಲಿಸುವ, ಜಾಗತಿಕ ಪರಿಸರ ವ್ಯವಸ್ಥೆಯನ್ನು ಬೆಳೆಸಲು ಮತ್ತು ಅಗತ್ಯವಿರುವ ಹೆಚ್ಚಿನ ಸ್ಥಳಗಳಿಗೆ ಇವುಗಳನ್ನು ವರ್ಗಾಯಿಸಲು ಮುಂದಾಗಬೇಕು ಎಂದು ಕರೆ ನೀಡಿದರು. 2021 ನೇ ವರ್ಷ ಸಾಂಕ್ರಾಮಿಕದಿಂದ ಶೀಘ್ರ ಚೇತರಿಸಿಕೊಳ್ಳುವ ವರ್ಷ ಎಂಬ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಾಂಕ್ರಾಮಿಕದಿಂದ ಕಲಿತ ಪಾಠಗಳನ್ನು ಎಂದಿಗೂ ಮರೆಯಬಾರದು ಎಂದು ಎಚ್ಚರಿಕೆ ನೀಡಿದ ಪ್ರಧಾನಮಂತ್ರಿ ಅವರು, ಇವು ಸಾರ್ವಜನಿಕ ಆರೋಗ್ಯ ವಿಪತ್ತುಗಳಿಗೆ ಮಾತ್ರವಲ್ಲದೇ ಇತರೆ ವಿಪತ್ತುಗಳಿಗೂ ಸಹ ಅನ್ವಯಿಸುತ್ತದೆ. ಹವಾಮಾನ ಬದಲಾವಣೆಯನ್ನು ತಗ್ಗಿಸಲು ಇದು ನಿರಂತರ ಮತ್ತು ಸಂಘಟಿತ ಪ್ರಯತ್ನಗಳನ್ನು ಕೈಗೊಳ್ಳಲು ಸಹಕಾರಿ ಎಂದು ಹೇಳಿದರು.
ಮೂಲ ಸೌಕರ್ಯ ಹೆಚ್ಚಿಸಲು ದೇಶಗಳು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಭಾರತದಂತಹ ದೇಶದಲ್ಲಿ ಇದು ಅಪಾಯದ ಸಂದರ್ಭದಲ್ಲಿ ಮಾಡಿದ ಹೂಡಿಕೆಯಲ್ಲ, ಮೂಲ ಸ್ಥಿತಿಗೆ ಮರಳಲು ಅಂದರೆ ಸ್ಥಿತಿ ಸ್ಥಾಪಕತ್ವಕ್ಕಾಗಿ ಮಾಡಿದ ಹೂಡಿಕೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಡಿಜಿಟಲ್ ಮೂಲ ಸೌಕರ್ಯ, ಹಡಗು ಮಾರ್ಗ, ವಿಮಾನಯಾನ ಸಂಪರ್ಕಜಾಲಗಳು ಇಡೀ ಜಗತ್ತನ್ನು ಒಳಗೊಂಡಿದ್ದು, ಯಾವುದೇ ಒಂದು ಭಾಗದಲ್ಲಿ ವಿಪತ್ತು ಸಂಭವಿಸಿದರೆ ತ್ವರಿತವಾಗಿ ಇದು ಜಗತ್ತಿನಾದ್ಯಂತ ಪಸರಿಸುತ್ತದೆ. ಜಾಗತಿಕ ವ್ಯವಸ್ಥೆಯ ಸ್ಥಿತಿ ಸ್ಥಾಪಕತ್ವವನ್ನು ಖಚಿತಪಡಿಸಿಕೊಳ‍್ಳಲು ಸಹಕಾರ ಅಗತ್ಯ. ದಕ್ಷಿಣದಲ್ಲಿನ ಜಾಗತಿಕ ಸಹಕಾರ ಕಾರ್ಯವಿಧಾನದ ಕಾರ್ಯಸೂಚಿಯನ್ನು ಮುನ್ನಡೆಸಲು ಮೂಲ ಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ – ಸಿ.ಡಿ.ಆರ್.ಐ ಸೂಕ್ತ ವೇದಿಕೆಯಾಗಿದೆ. ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ದೀರ್ಘಕಾಲ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
2021 ನೇ ವರ್ಷ ನಿರ್ದಿಷ್ಟವಾಗಿ ಅತ್ಯಂತ ಪ್ರಮುಖ ವರ್ಷವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಸುಸ್ಥಿರ ಅಭಿವೃದ್ಧಿ ಗುರಿಗಳು, ಪ್ಯಾರೀಸ್ ಒಪ್ಪಂದ ಮತ್ತು ಸಂಡೈ ಚೌಕಟ್ಟಿನ ಮದ್ಯದ ಹಂತವನ್ನು ನಾವು ತಲುಪುತ್ತಿದ್ದೇವೆ. ಈ ವರ್ಷಾಂತ್ಯದಲ್ಲಿ ಯುನೈಟೆಡ್ ಕಿಂಗ್ ಡಂ ಮತ್ತು ಇಟಲಿ ರಾಷ್ಟ್ರಗಳು ಆಯೋಜಿಸುತ್ತಿರುವ ಸಿಒಪಿ–26 ನಿಂದ ಹೆಚ್ಚಿನ ನಿರೀಕ್ಷೆಗಳಿವೆ. ಈ ಸಹಭಾಗಿತ್ವ ಚೇತರಿಸಿಕೊಳ್ಳುವ ಮೂಲ ಸೌಕರ್ಯ ವಲಯದಲ್ಲಿ ಹಲವು ನಿರೀಕ್ಷೆಗಳನ್ನು ಪೂರೈಸಲು ಸಹಾಯ ಮಾಡಲಿದ್ದು, ಈ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರವಹಿಸಬೇಕು ಎಂದರು.
ಪ್ರಮುಖ ಆದ್ಯತಾ ವಲಯಗಳ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದ ಪ್ರಧಾನಮಂತ್ರಿ ಅವರು, ಮೊದಲನೆಯದಾಗಿ ಸಿ.ಡಿ.ಆರ್.ಐ ಸುಸ್ಥಿರ ಅಭಿವೃದ್ಧಿ ಗುರಿಗಳ ಭರವಸೆಯನ್ನು ಸಾಕಾರಗೊಳಿಸಬೇಕು. ಅಂದರೆ ಯಾರನ್ನೂ ಹಿಂದೆ ಉಳಿಯಲು ಬಿಡಬಾರದು. ಅಂದರೆ ಇದರ ಅರ್ಥ ನಾವು ಹೆಚ್ಚು ದುರ್ಬಲ ರಾಷ್ಟ್ರಗಳು ಮತ್ತು ಸಮುದಾಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂಬುದಾಗಿದೆ. ಎರಡನೆಯದಾಗಿ ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿದ ಕೆಲವು ಪ್ರಮುಖ ಮೂಲ ಸೌಕರ್ಯ ಕ್ಷೇತ್ರಗಳು, ವಿಶೇಷವಾಗಿ ಆರೋಗ್ಯ ಮೂಲ ಸೌಕರ್ಯ ಮತ್ತು ಡಿಜಿಟಲ್ ಮೂಲ ಸೌಕರ್ಯಗಳ ಕಾರ್ಯಕ್ಷಮತೆಯನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು. ಈ ವಲಯಗಳಲ್ಲಿ ನಾವು ಯಾವ ಪಾಠಗಳನ್ನು ಕಲಿತಿದ್ದೇವೆ?. ಮತ್ತು ಭವಿಷ್ಯಕ್ಕಾಗಿ ನಾವು ಹೇಗೆ ಹೆಚ್ಚು ಚೇತರಿಸಿಕೊಳ್ಳುವಂತೆ ಮಾಡಬಹುದು? ಎಂಬ ಕುರಿತು ಗಮನಹರಿಸಬೇಕು. ಮೂರನೆಯದಾಗಿ ಮೂಲ ಸ್ಥಿತಿಗೆ ಮರಳುವ ಅಂದರೆ ಸ್ಥಿತಿ ಸ್ಥಾಪಕತ್ವಕ್ಕಾಗಿ ನಮ್ಮ ಅನ್ವೇಷಣೆಯಲ್ಲಿ ಯಾವುದೇ ತಾಂತ್ರಿಕ ವ್ಯವಸ್ಥೆಯನ್ನು ಅತಿ ಹೆಚ್ಚು ಮೂಲ ಮತ್ತು ಅತ್ಯಾಧುನಿಕ ಎಂದು ಪರಿಗಣಿಸಬಾರದು. ಸಿ.ಡಿ.ಆರ್.ಐ ಮೂಲಕ ತಂತ್ರಜ್ಞಾನ ಆಧರಿತ ಪ್ರದರ್ಶನದ ಪರಿಣಾಮವನ್ನು ಗರಿಷ್ಠಗೊಳಿಸಬೇಕು. ಮತ್ತು ಅಂತಿಮವಾಗಿ ಮೂಲ ಸ್ಥಿತಿಗೆ ಮರಳುವ ಸ್ಥಿತಿಸ್ಥಾಪಕತ್ವದಲ್ಲಿ ಮೂಲ ಸೌಕರ್ಯ ಎಂಬ ಪರಿಕಲ್ಪನೆಯು ಕೇವಲ ತಜ್ಞರು, ಔಪಚಾರಿಕ ಸಂಸ್ಥೆಗಳ ಶಕ್ತಿಯನ್ನು ಹೆಚ್ಚಿಸುವ ಸಾಮೂಹಿಕ ಸಾಮೂಹಿಕ ಚಳವಳಿಯಾಗಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು.
COVID-19 pandemic has taught us that in an inter-dependent and inter-connected world, no country- rich or poor, in the east or west, north or south- is immune to the effect of global disasters: PM @narendramodi
— PMO India (@PMOIndia) March 17, 2021
On one hand, the pandemic has shown us how impacts can quickly spread across the world.
— PMO India (@PMOIndia) March 17, 2021
And on the other hand, it has shown how the world can come together to fight a common threat: PM @narendramodi
Many infrastructure systems- digital infrastructure, shipping lines, aviation networks-cover the entire world!
— PMO India (@PMOIndia) March 17, 2021
Effect of disaster in one part of the world can quickly spread across the world.
Cooperation is a must for ensuring the resilience of the global system: PM
Just as the fight against the pandemic mobilized the energies of the world's seven billion people, our quest for resilience must build on the initiative and imagination of each and every individual on this planet: PM @narendramodi
— PMO India (@PMOIndia) March 17, 2021