ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಡೆದ ʻಶಿಕ್ಷಕ್ ಪರ್ವ್ʼ ಉದ್ಘಾಟನಾ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಭಾರತೀಯ ಸಂಜ್ಞೆ ಭಾಷಾ ನಿಘಂಟು (ಶ್ರವಣ ದೋಷವುಳ್ಳವರಿಗೆ ಸಾರ್ವತ್ರಿಕ ಕಲಿಕಾ ವಿನ್ಯಾಸಕ್ಕೆ ಅನುಗುಣವಾಗಿ ಆಡಿಯೋ ಮತ್ತು ಪಠ್ಯ ಸಂಯೋಜಿತ ಸಂಜ್ಞೆ ಭಾಷೆಯ ವೀಡಿಯೊ), ಟಾಕಿಂಗ್ ಬುಕ್ಸ್ (ದೃಷ್ಟಿಹೀನರಿಗೆ ಆಡಿಯೋಬುಕ್‌ಗಳು) ಅನ್ನು ಪ್ರಧಾನಿ ಬಿಡುಗಡೆ ಮಾಡಿದರು. ಇದೇ ವೇಳೆ ʻಸಿಬಿಎಸ್‌ಇʼಯ ಶಾಲಾ ಗುಣಮಟ್ಟ ಭರವಸೆ ಮತ್ತು ಮೌಲ್ಯಮಾಪನ ಚೌಕಟ್ಟು, ʻನಿಪುಣ್ ಭಾರತ್ʼ ಮತ್ತು ʻವಿದ್ಯಾಂಜಲಿʼ ಪೋರ್ಟಲ್‌ಗಾಗಿ ʻನಿಷ್ಠಾʼ ಶಿಕ್ಷಕರ ತರಬೇತಿ ಕಾರ್ಯಕ್ರಮಕ್ಕೂ (ಶಾಲಾ ಅಭಿವೃದ್ಧಿಗಾಗಿ ಶಿಕ್ಷಣ ಸ್ವಯಂಸೇವಕರು / ದಾನಿಗಳು / ಸಿಎಸ್ಆರ್ ಕೊಡುಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ) ಚಾಲನೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕರನ್ನು ಅಭಿನಂದಿಸಿದರು. ಕಷ್ಟದ ಸಮಯದಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿಕ್ಷಕರು ನೀಡಿದ ಕೊಡುಗೆಯನ್ನು ಅವರು ಶ್ಲಾಘಿಸಿದರು. ಇಂದು ʻಶಿಕ್ಷಕ ಪರ್ವʼದ ಸಂದರ್ಭದಲ್ಲಿ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ದೇಶವು ಪ್ರಸ್ತುತ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯ ಪಡೆದ 100 ವರ್ಷಗಳ ನಂತರ ಭಾರತ ಹೇಗಿರಬೇಕು ಎಂಬ ಮುನ್ನೋಟದೊಂದಿಗೆ ಹೊಸ ನಿರ್ಣಯಗಳನ್ನು ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಗಳೂ ಸಹ ಮುಖ್ಯವಾಗಿವೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗದ ಸವಾಲನ್ನು ಎದುರಿಸಲು ಬೆಂಬಲಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಡೀ ಶೈಕ್ಷಣಿಕ ಸಮುದಾಯವನ್ನು ಶ್ಲಾಘಿಸಿದ ಪ್ರಧಾನಿ, ಆ ಕಠಿಣ ಸಮಯವನ್ನು ಎದುರಿಸಲು ಅಭಿವೃದ್ಧಿಪಡಿಸಿದ ಸಾಮರ್ಥ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವಂತೆ ಮನವಿ ಮಾಡಿದರು. "ನಾವು ಪರಿವರ್ತನೆಯ ಅವಧಿಯ ಮಧ್ಯದಲ್ಲಿದ್ದೇವೆ. ಅದೃಷ್ಟವಶಾತ್, ನಾವು ಆಧುನಿಕ ಮತ್ತು ಭವಿಷ್ಯದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಹ ಹೊಂದಿದ್ದೇವೆ," ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಅನುಷ್ಠಾನದ ಪ್ರತಿಯೊಂದು ಹಂತದಲ್ಲೂ ಶಿಕ್ಷಣ ತಜ್ಞರು, ತಜ್ಞರು, ಶಿಕ್ಷಕರ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. ಈ ಪಾಲ್ಗೊಳ್ಳುವಿಕೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಮತ್ತು ಅದರಲ್ಲಿ ಸಮಾಜವನ್ನು ತೊಡಗಿಸಿಕೊಳ್ಳಲು ಶ್ರಮಿಸಬೇಕು ಎಂದು ಅವರು ಒತ್ತಾಯಿಸಿದರು. ಶಿಕ್ಷಣ ಕ್ಷೇತ್ರದಲ್ಲಿನ ಈ ಪರಿವರ್ತನೆಗಳು ಕೇವಲ ನೀತಿ ಆಧಾರಿತವಲ್ಲ, ಪಾಲ್ಗೊಳ್ಳುವಿಕೆ ಆಧಾರಿತವಾಗಿವೆ ಎಂದು ಅವರು ಹೇಳಿದರು.
ದೇಶದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್' ಜೊತೆಗೆ 'ಸಬ್ ಕಾ ಪ್ರಯಾ' ಸಂಕಲ್ಪಕ್ಕೆ 'ವಿದ್ಯಾಂಜಲಿ 2.0' ಒಂದು ವೇದಿಕೆ ಇದ್ದಂತೆ ಎಂದು ಪ್ರಧಾನಿ ಬಣ್ಣಿಸಿದರು. ಈ ಸಮಾಜದಲ್ಲಿ, ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಮ್ಮ ಖಾಸಗಿ ವಲಯವು ಮುಂದೆ ಬರಬೇಕು ಮತ್ತು ಕೊಡುಗೆ ನೀಡಬೇಕು ಎಂದು ಪ್ರಧಾನಿ ಕರೆ ನೀಡಿದರು.
ಕಳೆದ ಕೆಲವು ವರ್ಷಗಳಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯು ಮತ್ತೆ ಭಾರತದ ರಾಷ್ಟ್ರೀಯ ಗುಣವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ 6-7 ವರ್ಷಗಳಲ್ಲಿ, ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಶಕ್ತಿಯಿಂದಾಗಿ, ಭಾರತದಲ್ಲಿ ಅನೇಕ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ಮುಂಚಿನ ಅವಧಿಯಲ್ಲಿ ಆ ಕೆಲಸಗಳನ್ನು ಊಹಿಸುವುದೂ ಕಷ್ಟಕರವಾಗಿತ್ತು. ಸಮಾಜವು ಒಟ್ಟಿಗೆ ನಿಂತು ಏನನ್ನಾದರೂ ಮಾಡಿದಾಗ, ಅಪೇಕ್ಷಿತ ಫಲಗಳು ನಿಶ್ಚಿತವಾಗಿ ದೊರೆಯುತ್ತವೆ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ಅವರು ಜೀವನದ ಯಾವುದೇ ಹಂತದಲ್ಲಿದ್ದರೂ ದೇಶದ ಯುವಜನರ ಭವಿಷ್ಯವನ್ನು ರೂಪಿಸುವಲ್ಲಿ ಪಾತ್ರವನ್ನು ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು. ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳ ಅದ್ಭುತ ಪ್ರದರ್ಶನವನ್ನು ಅವರು ಸ್ಮರಿಸಿದರು. ʻಆಜಾದಿ ಕಾ ಅಮೃತ ಮಹೋತ್ಸವʼದ ಸಂದರ್ಭದಲ್ಲಿ ಪ್ರತಿಯೊಬ್ಬ ಆಟಗಾರ ಕನಿಷ್ಠ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಮಾಡಲಾದ ಮನವಿಗೆ ಕ್ರೀಡಾಪಟುಗಳು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ಇದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕವಾಗಲಿದೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯಲು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ದೇಶದ ಪ್ರಗತಿಗಾಗಿ, ಶಿಕ್ಷಣದಲ್ಲಿ ಸರ್ವರ ಒಳಗೊಳ್ಳುವಿಕೆ ಮಾತ್ರವಲ್ಲ, ಸಮಾನತೆಯೂ ಇರಬೇಕು ಎಂದು ಪ್ರಧಾನಿ ಹೇಳಿದರು. ಶಿಕ್ಷಣ ಮತ್ತು ಅದರ ಆಧುನೀಕರಣದಲ್ಲಿರುವ ಅಸಮಾನತೆ ನಿರ್ಮೂಲನೆ ಮಾಡುವಲ್ಲಿ ʻರಾಷ್ಟ್ರೀಯ ಡಿಜಿಟಲ್ ನೀಲನಕ್ಷೆʼ ಅಂದರೆ ʻಎನ್-ಡಿಯರ್ʼ (N-DEAR) ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ʻಯುಪಿಐʼ ವ್ಯವಸ್ಥೆಯು ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಗೆ ಕಾರಣವಾದ ರೀತಿಯಲ್ಲೇ ʻಎನ್-ಡಿಯರ್ʼ ವಿವಿಧ ಶೈಕ್ಷಣಿಕ ಚಟುವಟಿಕೆಗಳ ನಡುವೆ 'ಮಹಾ ಸಂಪರ್ಕ ವೇದಿಕೆʼಯಾಗಿ ಕಾರ್ಯನಿರ್ವಹಿಸುತ್ತದೆ. ದೇಶವು ʻಟಾಕಿಂಗ್ ಬುಕ್ಸ್ʼ ಮತ್ತು ʻಆಡಿಯೋಬುಕ್ʼಗಳಂತಹ ತಂತ್ರಜ್ಞಾನವನ್ನು ಶಿಕ್ಷಣದ ಭಾಗವನ್ನಾಗಿ ಮಾಡುತ್ತಿದೆ ಎಂದು ಅವರು ಹೇಳಿದರು
ಪಠ್ಯಕ್ರಮ, ಬೋಧನಾ ಶಾಸ್ತ್ರ, ಮೌಲ್ಯಮಾಪನ, ಮೂಲಸೌಕರ್ಯ, ಸಮಗ್ರ ಅಭ್ಯಾಸಗಳು ಮತ್ತು ಆಡಳಿತ ಪ್ರಕ್ರಿಯೆಯಂತಹ ಆಯಾಮಗಳಿಗೆ ಸಾಮಾನ್ಯ ವೈಜ್ಞಾನಿಕ ಚೌಕಟ್ಟಿನ ಅನುಪಸ್ಥಿತಿಯ ಕೊರತೆಯನ್ನು ಇಂದು ಕಾರ್ಯರೂಪಕ್ಕೆ ತರಲಾದ ʻಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಭರವಸೆ ಚೌಕಟ್ಟುʼ(ಎಸ್.ಕ್ಯೂ.ಎ.ಎ.ಎಫ್) ಪರಿಹರಿಸುತ್ತದೆ. ಈ ಅಸಮಾನತೆಯನ್ನು ನಿವಾರಿಸಲು ʻಎಸ್ .ಕ್ಯೂ.ಎ.ಎ.ಎಫ್ʼ ಸಹಾಯ ಮಾಡುತ್ತದೆ ಎಂದರು.
ವೇಗವಾಗಿ ಬದಲಾಗುತ್ತಿರುವ ಈ ಯುಗದಲ್ಲಿ, ನಮ್ಮ ಶಿಕ್ಷಕರು ಹೊಸ ವ್ಯವಸ್ಥೆಗಳು ಮತ್ತು ತಾಂತ್ರಿಕಗತೆಗಳ ಬಗ್ಗೆ ತ್ವರಿತವಾಗಿ ಕಲಿಯಬೇಕಾಗಿದೆ ಎಂದು ಅವರು ಕರೆ ನೀಡಿದರು. ಈ ಬದಲಾವಣೆಗಳಿಗೆ ದೇಶವು ತನ್ನ ಶಿಕ್ಷಕರನ್ನು 'ನಿಷ್ಠಾ' ತರಬೇತಿ ಕಾರ್ಯಕ್ರಮಗಳ ಮೂಲಕ ಸಿದ್ಧಪಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತದ ಶಿಕ್ಷಕರು ಯಾವುದೇ ಜಾಗತಿಕ ಮಾನದಂಡವನ್ನು ಪೂರೈಸುವುದಷ್ಟೇ ಅಲ್ಲದೆ, ವಿಶೇಷ ಬಂಡವಾಳವೊಂದನ್ನು ಸಹ ಅವರು ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ವಿಶೇಷ ಬಂಡವಾಳವೆಂದರೆ, ಈ ವಿಶೇಷ ಶಕ್ತಿಯೆಂದರೆ ಅದು ಅವರೊಳಗಿನ ಭಾರತೀಯ ಸಂಸ್ಕೃತಿ. ನಮ್ಮ ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ವೃತ್ತಿ ಎಂದು ಪರಿಗಣಿಸುವುದಿಲ್ಲ, ಬೋಧನೆಯನ್ನು ಅವರು ಮಾನವ ಸಹಾನುಭೂತಿ, ಪವಿತ್ರ ನೈತಿಕ ಕರ್ತವ್ಯವಾಗಿ ಗುರುತಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಆದ್ದರಿಂದಲೇ ನಾವು ಶಿಕ್ಷಕರು ಮತ್ತು ಮಕ್ಕಳ ನಡುವೆ ಕೇವಲ ವೃತ್ತಿಪರ ಸಂಬಂಧವನ್ನು ಹೊಂದಿಲ್ಲ, ಬದಲಿಗೆ ಕೌಟುಂಬಿಕ ಸಂಬಂಧವನ್ನು ಹೊಂದಿದ್ದೇವೆ. ಮತ್ತು ಈ ಸಂಬಂಧ ಇಡೀ ಜೀವನದುದ್ದಕ್ಕೂ ವ್ಯಾಪಿಸಿರುತ್ತದೆ ಎಂದು ಪ್ರಧಾನಿ ಹೇಳಿದರು.
मैं सबसे पहले, राष्ट्रीय पुरस्कार प्राप्त करने वाले हमारे शिक्षकों को बहुत-बहुत बधाई देता हूँ।
— PMO India (@PMOIndia) September 7, 2021
आप सभी ने कठिन समय में देश में शिक्षा के लिए, विद्यार्थियों के भविष्य के लिए जो योगदान दिया है, वो अतुलनीय है, सराहनीय है: PM @narendramodi
आज शिक्षक पर्व के अवसर पर अनेक नई योजनाओं का प्रारंभ हुआ है।
— PMO India (@PMOIndia) September 7, 2021
ये initiatives इसलिए भी अहम है क्योंकि देश अभी आज़ादी का अमृत महोत्सव मना रहा है।
आज़ादी के 100 वर्ष होने पर भारत कैसा होगा, इसके लिए नए संकल्प ले रहा है: PM @narendramodi
NEP के formulation से लेकर implementation तक, हर स्तर पर academicians का, experts का, teachers का, सबका योगदान रहा है।
— PMO India (@PMOIndia) September 7, 2021
आप सभी इसके लिए प्रशंसा के पात्र हैं।
अब हमें इस भागीदारी को एक नए स्तर तक लेकर जाना है, हमें इसमें समाज को भी जोड़ना है: PM @narendramodi #ShikshakParv
देश ने ‘सबका साथ, सबका विकास, सबका विश्वास’ के साथ ‘सबका प्रयास’ का जो संकल्प लिया है, ‘विद्यांजलि 2.0’ उसके लिए एक platform की तरह है।
— PMO India (@PMOIndia) September 7, 2021
इसमें हमारे समाज को, हमारे प्राइवेट सेक्टर को आगे आना है और सरकारी स्कूलों में शिक्षा की गुणवत्ता बढ़ाने में अपना योगदान देना है: PM
जब समाज मिलकर कुछ करता है, तो इच्छित परिणाम अवश्य मिलते हैं। और आपने ये देखा है कि बीते कुछ वर्ष में जनभागीदारी अब फिर भारत का नेशनल कैरेक्टर बनता जा रहा है।
— PMO India (@PMOIndia) September 7, 2021
पिछले 6-7 वर्षों में जनभागीदारी की ताकत से भारत में ऐसे-ऐसे कार्य हुए हैं, जिनकी कोई कल्पना भी नहीं कर सकता था: PM
शिक्षा में असमानता को खत्म करके उसे आधुनिक बनाने में National Digital Educational Architecture यानी, N-DEAR की भी बड़ी भूमिका होने वाली है।
— PMO India (@PMOIndia) September 7, 2021
जैसे UPI इंटरफेस ने बैंकिंग सेक्टर को revolutionize किया है, वैसे ही N-DEAR सभी academic activities के बीच एक सुपर कनेक्ट का काम करेगा: PM
आप सभी इस बात से परिचित हैं कि किसी भी देश की प्रगति के लिए education न केवल Inclusive होनी चाहिए बल्कि equitable भी होनी चाहिए।
— PMO India (@PMOIndia) September 7, 2021
इसीलिए, आज देश Talking बुक्स और Audio बुक्स जैसी तकनीक को शिक्षा का हिस्सा बना रहा है: PM @narendramodi
तेजी से बदलते इस दौर में हमारे शिक्षकों को भी नई व्यवस्थाओं और तकनीकों के बारे में तेजी से सीखना होता है।
— PMO India (@PMOIndia) September 7, 2021
‘निष्ठा’ ट्रेनिंग प्रोग्राम्स के जरिए देश अपने टीचर्स को इन्हीं बदलावों के लिए तैयार कर रहा है: PM @narendramodi #ShikshakParv
भारत के शिक्षकों में किसी भी ग्लोबल स्टैंडर्ड पर खरा उतरने की क्षमता तो है ही, साथ ही उनके पास अपनी विशेष पूंजी भी है।
— PMO India (@PMOIndia) September 7, 2021
उनकी ये विशेष पूंजी, ये विशेष ताकत है उनके भीतर के भारतीय संस्कार: PM @narendramodi #ShikshakParv
हमारे शिक्षक अपने काम को केवल एक पेशा नहीं मानते, उनके लिए पढ़ाना एक मानवीय संवेदना है, एक पवित्र नैतिक कर्तव्य है।
— PMO India (@PMOIndia) September 7, 2021
इसीलिए, हमारे यहाँ शिक्षक और बच्चों के बीच professional रिश्ता नहीं होता, बल्कि एक पारिवारिक रिश्ता होता है।
और ये रिश्ता, ये संबंध पूरे जीवन का होता है: PM