"ಆಂಟಿಫ್ರಾಜೈಲ್ (ಸವಾಲನ್ನು ಅವಕಾಶವಾಗಿ ಮಾಡುವುದು) ಎಂದರೇನು ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿದೆ"
"100 ವರ್ಷಗಳಲ್ಲಿಯೇ ಅತಿದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಭಾರತ ತೋರಿಸಿದ ಸಾಮರ್ಥ್ಯವನ್ನು ಅಧ್ಯಯನ ಮಾಡುವ ಮೂಲಕ 100 ವರ್ಷಗಳ ನಂತರವೂ ಮಾನವತೆ ತನ್ನ ಬಗ್ಗೆ ಹೆಮ್ಮೆ ಪಡುತ್ತದೆ"
"2014 ರ ನಂತರ ಆಡಳಿತದ ಪ್ರತಿಯೊಂದು ಅಂಶವನ್ನು ಮರುಕಲ್ಪಿಸಲು, ಮರು-ಆವಿಷ್ಕರಿಸಲು ನಾವು ನಿರ್ಧರಿಸಿದ್ದೇವೆ"
"ಬಡವರನ್ನು ಸಬಲೀಕರಣಗೊಳಿಸಲು ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳ ವಿತರಣೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನಾವು ಮರುಕಲ್ಪಿಸಿದ್ದೇವೆ"
"ಬಡವರನ್ನು ಸಬಲೀಕರಣಗೊಳಿಸುವುದು ಮತ್ತು ಸಂಪೂರ್ಣ ಸಾಮರ್ಥ್ಯದೊಂದಿಗೆ ದೇಶದ ತ್ವರಿತ ಪ್ರಗತಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುವುದು ಸರ್ಕಾರದ ಗಮನವಾಗಿದೆ"
"ನಮ್ಮ ಸರ್ಕಾರವು ಇಲ್ಲಿಯವರೆಗೆ ಡಿಬಿಟಿ ಮೂಲಕ ವಿವಿಧ ಯೋಜನೆಗಳ ಅಡಿಯಲ್ಲಿ 28 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ"
"ನಾವು ಮೂಲಸೌಕರ್ಯಗಳನ್ನು ಹಗೇವುಗಳಲ್ಲಿಟ್ಟು ನೋಡುವ ರೂಢಿಯನ್ನು ನಿಲ್ಲಿಸಿದ್ದೇವೆ ಮತ್ತು ಮೂಲಸೌಕರ್ಯ ನಿರ್ಮಾಣವನ್ನು ಒಂದು ದೊಡ್ಡ ಕಾರ್ಯತಂತ್ರವಾಗಿ ಮರುಕಲ್ಪಿಸಿದೇವೆ"
ಕಳೆದ 9 ವರ್ಷಗಳಲ್ಲಿ ಸುಮಾರು 3.5 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆಗಳು ಮತ್ತು 80 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ
"ಇಂದು ಭಾರತವು ಮೆಟ್ರೋ ಮಾರ್ಗದ ಉದ್ದದ ವಿಷಯದಲ್ಲಿ 5 ನೇ ಸ್ಥಾನದಲ್ಲಿದೆ ಮತ್ತು ಶೀಘ್ರದಲ್ಲೇ ಭಾರತವು 3 ನೇ ಸ್ಥಾನಕ್ಕೇರುತ್ತದೆ"
"ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ಮೂಲಸೌಕರ್ಯಗಳ ನಿರ್ಮಾಣಕ್ಕೆ ವೇಗವನ್ನು ನೀಡುವುದಲ್ಲದೆ, ಪ್ರದೇಶ ಅಭಿವೃದ್ಧಿ ಮತ್ತು ಜನರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ"
"ದೇಶದಲ್ಲಿ ಇಂಟರ್ನೆಟ್ ಡೇಟಾದ ದರವು 25 ಪಟ್ಟು ಕಡಿಮೆಯಾಗಿದೆ, ಇದು ವಿಶ್ವದಲ್ಲೇ ಅಗ್ಗವಾಗಿದೆ"
"2014 ರ ನಂತರ, 'ಸರ್ಕಾರ-ಮೊದಲು' ಮನಸ್ಥಿತಿಯನ್ನು 'ಜನರಿಗೆ ಮೊದಲು' ವಿಧಾನವೆಂದು ಮರುಕಲ್ಪಿಸಲಾಯಿತು
"ಪಾವತಿಸಿದ ತೆರಿಗೆಯನ್ನು ಸಮರ್ಥವಾಗಿ ಖರ್ಚು ಮಾಡಲಾಗುತ್ತಿದೆ ಎಂದು ತಿಳಿದಾಗ ತೆರಿಗೆದಾರರು ಪ್ರೇರಿತರಾಗುತ್ತಾರೆ"
"ಜನರನ್ನು ನಂಬುವುದು ಪ್ರತಿಯೊಂದು ಕಾರ್ಯಕ್ರಮ ಮತ್ತು ನೀತಿಯಲ್ಲಿ ನಮ್ಮ ಮಂತ್ರವಾಗಿದೆ"
"ನೀವು ಭಾರತದ ಬೆಳವಣಿಗೆಯ ಪ್ರಯಾಣದೊಂದಿಗೆ ಸಹಯೋಗ ಹೊಂದಿದಾಗ, ಭಾರತವು ನಿಮಗೆ ಬೆಳವಣಿಗೆಯ ಖಾತರಿಯನ್ನು ನೀಡುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮೂರು ವರ್ಷಗಳ ಹಿಂದೆ ಇಟಿ ಜಾಗತಿಕ ವಾಣಿಜ್ಯ ಶೃಂಗಸಭೆಯಲ್ಲಿ ಕೊನೆಯ ಬಾರಿಗೆ ಪಾಲ್ಗೊಂಡ ನಂತರ ಆಗಿರುವ ಬದಲಾವಣೆಗಳನ್ನು ಉಲ್ಲೇಖಿಸಿದರು. ಕಳೆದ ಶೃಂಗಸಭೆ ನಡೆದ  ಕೇವಲ ಮೂರು ದಿನಗಳ ಬಳಿಕ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯು.ಎಚ್.ಓ) ಸಾಂಕ್ರಾಮಿಕ ರೋಗವೆಂದು ಕೋವಿಡ್ ಅನ್ನು ಘೋಷಿಸಿದ ನಂತರ ಜಾಗತಿಕವಾಗಿ ಮತ್ತು ಭಾರತದಲ್ಲಿ ಭಾರಿ ತ್ವರಿತ ಬದಲಾವಣೆಗಳಿಗೆ ಕಾರಣವಾಯಿತು ಎಂಬುದನ್ನು ಸ್ಮರಿಸಿದರು.

ಈ ಸಂದರ್ಭವು 'ಆಂಟಿಫ್ರಾಜೈಲ್' (ಸವಾಲನ್ನು ಅವಕಾಶವಾಗಿ ಪರಿವರ್ತಿಸುವುದು) ಪರಿಕಲ್ಪನೆಯ ಬಗ್ಗೆ ಚರ್ಚೆಗೆ ಕಾರಣವಾಯಿತು, ಅಂದರೆ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಚೇತರಿಕೆಯನ್ನು ಹೊಂದುವ ಆದರೆ ಆ ಪ್ರತಿಕೂಲ ಪರಿಸ್ಥಿತಿಗಳನ್ನು ಬಳಸಿಕೊಂಡು ಬಲಗೊಳ್ಳುವ ವ್ಯವಸ್ಥೆ ಎಂದು ಪ್ರಧಾನಮಂತ್ರಿ ಹೇಳಿದರು. ಆಂಟಿಫ್ರಾಜೈಲ್ ಪರಿಕಲ್ಪನೆಯು 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪದಿಂದ ತಮ್ಮ ಮನಸ್ಸಿಗೆ ಬಂದಿತು ಎಂದು ಅವರು ಹೇಳಿದರು. ಈ ಮೂರು ವರ್ಷಗಳ ಸಮರ ಮತ್ತು ಪ್ರಾಕೃತಿಕ ವಿಕೋಪದ ಅವಧಿಯಲ್ಲಿ ಭಾರತ ಮತ್ತು ಭಾರತೀಯರು ಅದ್ಭುತ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. "ಆಂಟಿಫ್ರಾಜೈಲ್ ಎಂದರೇನು ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿದೆ. ಈ ಹಿಂದೆ ಪ್ರಾಜೈಲ್ ಫೈವ್ ಎಂಬ ಮಾತು ಕೇಳಿಬರುತ್ತಿತ್ತು, ಈಗ ಭಾರತವನ್ನು ಆಂಟಿಫ್ರಾಜೈಲ್ ಎಂದು ಗುರುತಿಸಲಾಗುತ್ತಿದೆ. ವಿಪತ್ತುಗಳನ್ನು ಅವಕಾಶಗಳಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿದೆ. 100 ವರ್ಷಗಳ ಅತಿದೊಡ್ಡ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತೋರಿಸಿದ ಸಾಮರ್ಥ್ಯವನ್ನು ಅಧ್ಯಯನ ಮಾಡುವ ಮೂಲಕ 100 ವರ್ಷಗಳ ನಂತರವೂ ಮಾನವತೆಯು ತನ್ನ ಬಗ್ಗೆ ಹೆಮ್ಮೆ ಪಡುತ್ತದೆ ", ಎಂದು ಪ್ರಧಾನಮಂತ್ರಿ ಹೇಳಿದರು. 

ಈ ವರ್ಷದ ಶೃಂಗಸಭೆಯ ವಿಷಯ 'ರೀ-ಇಮ್ಯಾಜಿನ್ ಬಿಸಿನೆಸ್, ರೀ-ಇಮ್ಯಾಜಿನ್ ದಿ ವರ್ಲ್ಡ್' (ವ್ಯಾಪಾರವನ್ನು ಮರು ಕಲ್ಪಿಸಿ, ವಿಶ್ವವನ್ನು ಮರಿ ಕಲ್ಪಿಸಿಕೊಳ್ಳಿ) ಎಂಬುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 2014ರಲ್ಲಿ ದೇಶವು ಪ್ರಸ್ತುತ ಸರ್ಕಾರಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ ಮರುಕಲ್ಪನೆ ಹೇಗೆ ಕಾರ್ಯರೂಪಕ್ಕೆ ಬಂದಿತು ಎಂಬುದನ್ನು ವಿವರಿಸಿದರು. ಹಗರಣಗಳು, ಭ್ರಷ್ಟಾಚಾರದಿಂದಾಗಿ ಬಡವರು ವಂಚಿತರಾದರು, ವಂಶಪಾರಂಪರ್ಯದ ಬಲಿಪೀಠದ ಮೇಲೆ ಯುವಕರ ಹಿತಾಸಕ್ತಿಗಳನ್ನು ಬಲಿಕೊಟ್ಟ ಸ್ವಜನಪಕ್ಷಪಾತ ಮತ್ತು ನೀತಿ ನಿಷ್ಕ್ರಿಯತೆಯು ಯೋಜನೆಗಳನ್ನು ವಿಳಂಬಗೊಳಿಸುತ್ತಿದ್ದುದನ್ನು ಅವರು ಸ್ಮರಿಸಿದರು. ಅದಕ್ಕಾಗಿಯೇ ನಾವು ಆಡಳಿತದ ಪ್ರತಿಯೊಂದು ಅಂಶವನ್ನು ಮರುಕಲ್ಪಿಸಲು, ಮರು ಆವಿಷ್ಕರಿಸಲು ನಿರ್ಧರಿಸಿದೆವು. ಬಡವರನ್ನು ಸಬಲೀಕರಣಗೊಳಿಸಲು ಸರ್ಕಾರವು ಕಲ್ಯಾಣ ವಿತರಣೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನಾವು ಮರುಕಲ್ಪಿಸಿದೆವು. ಸರ್ಕಾರವು ಮೂಲಸೌಕರ್ಯಗಳನ್ನು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಹೇಗೆ ರಚಿಸಬಹುದು ಎಂಬುದನ್ನು ನಾವು ಮರುಕಲ್ಪಿಸಿದ್ದೇವೆ. ದೇಶದ ನಾಗರಿಕರೊಂದಿಗೆ ಸರ್ಕಾರ ಯಾವ ರೀತಿಯ ಸಂಬಂಧವನ್ನು ಹೊಂದಿರಬೇಕು ಎಂಬುದನ್ನು ನಾವು ಮರುಕಲ್ಪನೆ ಮಾಡಿದ್ದೇವೆ", ಎಂದು ಪ್ರಧಾನಮಂತ್ರಿ ಹೇಳಿದರು.

ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನದ ವಿತರಣೆಯನ್ನು ಮರು ಕಲ್ಪಿಸಿರುವ ಕುರಿತು ವಿವರಿಸಿದ ಪ್ರಧಾನಮಂತ್ರಿಯವರು, ಬ್ಯಾಂಕ್ ಖಾತೆಗಳು, ಸಾಲಗಳು, ವಸತಿ, ಆಸ್ತಿ ಹಕ್ಕುಗಳು, ಶೌಚಾಲಯಗಳು, ವಿದ್ಯುತ್ ಮತ್ತು ಶುದ್ಧ ಅಡುಗೆ ಇಂಧನ ಬಗ್ಗೆ ಮಾತನಾಡಿದರು. "ಬಡವರು ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ದೇಶದ ತ್ವರಿತ ಬೆಳವಣಿಗೆಗೆ ಕೊಡುಗೆ ನೀಡಲು ಅನುವು ಮಾಡಿಕೊಡಲು ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಗಮನವಾಗಿದೆ" ಎಂದು ಅವರು ಹೇಳಿದರು. ನೇರ ಸವಲತ್ತು ವರ್ಗಾವಣೆಯ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಸೋರಿಕೆಯ ಬಗ್ಗೆ ಮಾಜಿ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ಅವರ ಹೇಳಿದ್ದ, ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಉದ್ದೇಶಿತ ಫಲಾನುಭವಿಗಳಿಗೆ ತಲುಪುತ್ತಿದೆ ಎಂಬುದನ್ನು ಸ್ಮರಿಸಿದರು. "ನಮ್ಮ ಸರ್ಕಾರವು ಇಲ್ಲಿಯವರೆಗೆ ಡಿಬಿಟಿ ಮೂಲಕ ವಿವಿಧ ಯೋಜನೆಗಳ ಅಡಿಯಲ್ಲಿ 28 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ರಾಜೀವ್ ಗಾಂಧಿ ಅವರ ಹೇಳಿಕೆ ಇಂದಿಗೂ ನಿಜವಾಗಿದ್ದರೆ, ಅದರಲ್ಲಿ 85 ಪ್ರತಿಶತ ಅಂದರೆ 24 ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗುತ್ತಿತ್ತು. ಆದರೆ ಇಂದು ಅದು ಬಡವರನ್ನೂ ತಲುಪುತ್ತಿದೆ", ಎಂದು ಪ್ರಧಾನಮಂತ್ರಿ ಹೇಳಿದರು.

 ಪ್ರತಿಯೊಬ್ಬ ಭಾರತೀಯನಿಗೂ ಶೌಚಾಲಯ ಸೌಲಭ್ಯವಿದ್ದಾಗ ಮಾತ್ರ, ಭಾರತವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತದೆ ಎಂದರ್ಥ ಎಂಬುದು ನೆಹರೂ ಅವರಿಗೂ ತಿಳಿದಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. 2014 ರ ನಂತರ 10 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶೇ.40ಕ್ಕಿಂತ ಕಡಿಮೆ ಇದ್ದ ನೈರ್ಮಲ್ಯ ವ್ಯಾಪ್ತಿಯನ್ನು ಶೇ. 100 ಕ್ಕೆ ಹೆಚ್ಚಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, 2014ರಲ್ಲಿ 100ಕ್ಕೂ ಹೆಚ್ಚು ಜಿಲ್ಲೆಗಳು ಅತ್ಯಂತ ಹಿಂದುಳಿದಿದ್ದವು ಎಂದರು. "ನಾವು ಹಿಂದುಳಿಯುವಿಕೆಯ ಪರಿಕಲ್ಪನೆಯನ್ನು ಮರುಕಲ್ಪಿಸಿದ್ದೇವೆ ಮತ್ತು ಈ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನಾಗಿ ಮಾಡಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರ ಪ್ರದೇಶದ ಮಹತ್ವಾಕಾಂಕ್ಷೆಯ ಜಿಲ್ಲೆ ಫತೇಪುರದಲ್ಲಿ ಸಾಂಸ್ಥಿಕ ಹೆರಿಗೆ ಪ್ರಮಾಣ ಶೇ.47ರಿಂದ ಶೇ.91ಕ್ಕೆ ಏರಿಕೆಯಾಗಿರುವುದೂ ಸೇರಿ ಹಲವು ಉದಾಹರಣೆಗಳನ್ನು ಪ್ರಧಾನಮಂತ್ರಿ ನೀಡಿದರು. ಮಧ್ಯಪ್ರದೇಶದ ಮಹತ್ವಾಕಾಂಕ್ಷೆಯ ಜಿಲ್ಲೆ ಬರ್ವಾನಿಯಲ್ಲಿ ಸಂಪೂರ್ಣ ರೋಗನಿರೋಧಕ ಲಸಿಕೆ ಪಡೆದ ಮಕ್ಕಳ ಸಂಖ್ಯೆ ಈಗ ಶೇಕಡಾ 40 ರಿಂದ 90 ಕ್ಕೆ ಏರಿದೆ. ಮಹಾರಾಷ್ಟ್ರದ ಮಹತ್ವಾಕಾಂಕ್ಷೆಯ ಜಿಲ್ಲೆ ವಾಶಿಮ್ ನಲ್ಲಿ, 2015 ರಲ್ಲಿ, ಟಿಬಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಶೇಕಡಾ 48 ರಿಂದ ಸುಮಾರು 90 ಕ್ಕೆ ಏರಿದೆ. ಈಗ ಕರ್ನಾಟಕದ ಮಹತ್ವಾಕಾಂಕ್ಷೆಯ ಜಿಲ್ಲೆಯಾದ ಯಾದಗಿರಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಹೊಂದಿರುವ ಗ್ರಾಮ ಪಂಚಾಯಿತಿಗಳ ಸಂಖ್ಯೆ ಶೇಕಡಾ 20 ರಿಂದ 80 ಕ್ಕೆ ಏರಿದೆ. "ಮಹತ್ವಾಕಾಂಕ್ಷೆಯ ಜಿಲ್ಲೆಗಳ ವ್ಯಾಪ್ತಿಯು ಇಡೀ ದೇಶದ ಸರಾಸರಿಗಿಂತ ಉತ್ತಮವಾಗುತ್ತಿರುವ ಇಂತಹ ಅನೇಕ ಮಾನದಂಡಗಳಿವೆ" ಎಂದು ಪ್ರಧಾನಮಂತ್ರಿ ಹೇಳಿದರು. ಶುದ್ಧ ನೀರು ಸರಬರಾಜಿಗೆ ಸಂಬಂಧಿಸಿದಂತೆ ಮಾತನಾಡಿ, 2014ರಲ್ಲಿ ಕೇವಲ 3 ಕೋಟಿ ನಲ್ಲಿ ಸಂಪರ್ಕಗಳಿದ್ದವು ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ಮೂರೂವರೆ ವರ್ಷಗಳಲ್ಲಿ 8 ಕೋಟಿ ಹೊಸ ನಲ್ಲಿ ಸಂಪರ್ಕಗಳನ್ನು ನೀಡಲಾಗಿದೆ ಎಂದರು.

ಅಂತೆಯೇ, ಮೂಲಸೌಕರ್ಯದಲ್ಲಿ, ದೇಶದ ಅಗತ್ಯಗಳಿಗಿಂತ ರಾಜಕೀಯ ಮಹತ್ವಾಕಾಂಕ್ಷೆಗೆ ಆದ್ಯತೆ ನೀಡಲಾಗಿತ್ತು, ಮತ್ತು ಮೂಲಸೌಕರ್ಯದ ಶಕ್ತಿಯನ್ನು ಪರಿಗಣಿಸಲಾಗಿರಲಿಲ್ಲ. "ನಾವು ಮೂಲಸೌಕರ್ಯಗಳನ್ನು ಹಗೇವುಗಳಲ್ಲಿ ನೋಡುವ ಅಭ್ಯಾಸವನ್ನು ನಿಲ್ಲಿಸಿದ್ದೇವೆ ಮತ್ತು ಮೂಲಸೌಕರ್ಯ ನಿರ್ಮಾಣವನ್ನು ಒಂದು ದೊಡ್ಡ ಕಾರ್ಯತಂತ್ರವಾಗಿ ಮರುಕಲ್ಪಿಸಿದ್ದೇವೆ. ಇಂದು, ಭಾರತದಲ್ಲಿ ದಿನಕ್ಕೆ 38 ಕಿ.ಮೀ ವೇಗದಲ್ಲಿ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಪ್ರತಿದಿನ 5 ಕಿ.ಮೀ.ಗಿಂತ ಹೆಚ್ಚು ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಬಂದರು ಸಾಮರ್ಥ್ಯವು ಮುಂದಿನ 2 ವರ್ಷಗಳಲ್ಲಿ 3000 ಎಂಟಿಪಿಎ ತಲುಪಲಿದೆ. 2014ಕ್ಕೆ ಹೋಲಿಸಿದರೆ, ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 147 ಕ್ಕೆ ದುಪ್ಪಟ್ಟಾಗಿದೆ. ಈ 9 ವರ್ಷಗಳಲ್ಲಿ, ಸುಮಾರು 3.5 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆಗಳು ಮತ್ತು 80 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಈ 9 ವರ್ಷಗಳಲ್ಲಿ 3 ಕೋಟಿ ಬಡವರಿಗೆ ಮನೆಗಳನ್ನು ನಿರ್ಮಿಸಲಾಗಿದೆ.

1984 ರಿಂದ ಭಾರತದಲ್ಲಿ ಮೆಟ್ರೋ ಪರಿಣತಿ ಇತ್ತು ಆದರೆ 2014 ರವರೆಗೆ ಪ್ರತಿ ತಿಂಗಳು ಕೇವಲ ಅರ್ಧ ಕಿಲೋಮೀಟರ್ ಮೆಟ್ರೋ ಮಾರ್ಗಗಳನ್ನು ಹಾಕಲಾಗುತ್ತಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಅದು ಈಗ ತಿಂಗಳಿಗೆ 6 ಕಿ.ಮೀ.ಗೆ ಏರಿದೆ. ಇಂದು ಭಾರತವು ಮೆಟ್ರೋ ಮಾರ್ಗದ ಉದ್ದದ ವಿಷಯದಲ್ಲಿ 5 ನೇ ಸ್ಥಾನದಲ್ಲಿದೆ ಮತ್ತು ಶೀಘ್ರದಲ್ಲೇ ಭಾರತವು 3 ನೇ ಸ್ಥಾನದಲ್ಲಿರುತ್ತದೆ. "ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾನ್ ಯೋಜನೆ ಮೂಲಸೌಕರ್ಯಗಳ ನಿರ್ಮಾಣಕ್ಕೆ ವೇಗವನ್ನು ನೀಡುವುದಷ್ಟೇ ಅಲ್ಲದೆ, ಪ್ರದೇಶ ಅಭಿವೃದ್ಧಿ ಮತ್ತು ಜನರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ" ಎಂದ ಪ್ರಧಾನಮಂತ್ರಿಯವರು,  ಗತಿಶಕ್ತಿ ವೇದಿಕೆಯಲ್ಲಿ ಲಭ್ಯವಿರುವ ಮೂಲಸೌಕರ್ಯ ನಕ್ಷೆಯ 1600 ಕ್ಕೂ ಹೆಚ್ಚು ದತ್ತಾಂಶ ಪದರಗಳ ಬಗ್ಗೆ ಒತ್ತಿ ಹೇಳಿದರು. ಕಡಿಮೆ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವನ್ನು ನಿರ್ಧರಿಸಲು ಭಾರತದ ಎಕ್ಸ್ ಪ್ರೆಸ್ ದಾರಿಗಳು ಅಥವಾ ಇತರ ಮೂಲಸೌಕರ್ಯಗಳನ್ನು ಎಐಗೆ ಸಂಪರ್ಕಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಇದರಿಂದ ಜನಸಂಖ್ಯಾ ಸಾಂದ್ರತೆ ಮತ್ತು ಯಾವುದೇ ಒಂದು ಪ್ರದೇಶದಲ್ಲಿನ ಶಾಲೆಗಳ ಲಭ್ಯತೆಯನ್ನು ಸಹ ಮ್ಯಾಪ್ ಮಾಡಬಹುದು ಎಂದು ಅವರು ಹೇಳಿದರು. ತಂತ್ರಜ್ಞಾನದ ಬಳಕೆಯೊಂದಿಗೆ, ಬೇಡಿಕೆ ಅಥವಾ ರಾಜಕೀಯ ಪರಿಗಣನೆಯ ಆಧಾರದ ಮೇಲೆ ಹಂಚಿಕೆ ಮಾಡುವ ಬದಲು ಅಗತ್ಯವಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ನಿರ್ಮಿಸಬಹುದು ಎಂದು ಅವರು ಒತ್ತಿಹೇಳಿದರು.

ಭಾರತದ ವಾಯುಯಾನ ವಲಯದಲ್ಲಿ ಮೂಲಸೌಕರ್ಯಗಳನ್ನು ಮರುರೂಪಿಸುವ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈ ಹಿಂದೆ ವಾಯುಪ್ರದೇಶದ ಹೆಚ್ಚಿನ ಭಾಗವನ್ನು ರಕ್ಷಣೆಗಾಗಿ ನಿರ್ಬಂಧಿಸಲಾಗಿತ್ತು, ಇದರಿಂದಾಗಿ ವಿಮಾನಗಳು ತಮ್ಮ ಗಮ್ಯಸ್ಥಾನವನ್ನು ತಲುಪಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದವು ಎಂದು ತಿಳಿಸಿದರು. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು, ಸರ್ಕಾರವು ಸಶಸ್ತ್ರ ಪಡೆಗಳೊಂದಿಗೆ ಮಾತುಕತೆನಡೆಸಿದ್ದು, ಇದರ ಪರಿಣಾಮವಾಗಿ ಇಂದು ನಾಗರಿಕ ವಿಮಾನಗಳ ಸಂಚಾರಕ್ಕೆ 128 ವಾಯು ಮಾರ್ಗಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು. ಇದು ಹಾರಾಟದ ಮಾರ್ಗಗಳು ಕಡಿಮೆಯಾಗಲು ಕಾರಣವಾಗಿದ್ದು, ಇದರಿಂದಾಗಿ ಸಮಯ ಮತ್ತು ಇಂಧನ ಎರಡನ್ನೂ ಉಳಿಸುತ್ತದೆ. ಈ ನಿರ್ಧಾರದಿಂದ ಸುಮಾರು 1 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಸಹ ತಗ್ಗಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಅಭಿವೃದ್ಧಿಯ ಹೊಸ ಮಾದರಿಯನ್ನು ಭಾರತವು ವಿಶ್ವದ ಮುಂದಿಟ್ಟಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಅಲ್ಲಿ ಭಾರತದ ಡಿಜಿಟಲ್ ಮೂಲಸೌಕರ್ಯವು ಇದಕ್ಕೆ ಸಂಯೋಜಿತ ಉದಾಹರಣೆಯಾಗಿದೆ. ಕಳೆದ 9 ವರ್ಷಗಳಲ್ಲಿನ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ದೇಶದಲ್ಲಿ 6 ಲಕ್ಷ ಕಿಲೋಮೀಟರ್ ಗಿಂತಲೂ ಹೆಚ್ಚು ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ, ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ ಮತ್ತು ದೇಶದಲ್ಲಿ ಇಂಟರ್ನೆಟ್ ಡೇಟಾದ ದರವು 25 ಪಟ್ಟು ಕಡಿಮೆಯಾಗಿದೆ, ಇದು ವಿಶ್ವದಲ್ಲೇ ಅಗ್ಗವಾಗಿದೆ ಎಂದರು. 2012 ರಲ್ಲಿ ಜಾಗತಿಕ ಮೊಬೈಲ್ ಡೇಟಾ ದಟ್ಟಣೆಯಲ್ಲಿ ಭಾರತದ ಕೊಡುಗೆ ಶೇಕಡಾ 2 ರಷ್ಟಿತ್ತು, ಪಾಶ್ಚಿಮಾತ್ಯ ಮಾರುಕಟ್ಟೆಯ ಕೊಡುಗೆ 75 ಪ್ರತಿಶತಕ್ಕೆ ಹೋಲಿಸಿದರೆ, 2022 ರಲ್ಲಿ, ಭಾರತವು ಜಾಗತಿಕ ಮೊಬೈಲ್ ಡೇಟಾ ಸಾಂದ್ರತೆಯಲ್ಲಿ ಶೇ.21ರಷ್ಟು ಪಾಲನ್ನು ಹೊಂದಿದ್ದರೆ, ಉತ್ತರ ಅಮೆರಿಕಾ ಮತ್ತು ಯುರೋಪ್ ಕೇವಲ ನಾಲ್ಕನೇ ಒಂದು ಭಾಗಕ್ಕೆ ಸೀಮಿತವಾಗಿದೆ. ಇಂದು, ವಿಶ್ವದ ಸಕಾಲಿಕ ಡಿಜಿಟಲ್ ಪಾವತಿಗಳಲ್ಲಿ 40 ಪ್ರತಿಶತದಷ್ಟು ಭಾರತದಲ್ಲಿ ನಡೆಯುತ್ತವೆ ಎಂದು ಅವರು ಹೇಳಿದರು.

ಹಿಂದಿನ ಸರ್ಕಾರಗಳ ಪ್ರಚಲಿತ 'ಮೈ-ಬಾಪ್' ಸಂಸ್ಕೃತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಆಳಿದವರು ತಮ್ಮ ದೇಶದ ನಾಗರಿಕರಲ್ಲಿ ಯಜಮಾನರಂತೆ ವರ್ತಿಸುತ್ತಿದ್ದರು ಎಂದರು. ಇದನ್ನು 'ಪರಿವಾರವಾದ' ಮತ್ತು 'ಭಾಯಿ-ಭತೀಜವಾದ' (ಸ್ವಜನಪಕ್ಷಪಾತ) ಎಂದು ಗೊಂದಲಗೊಳಿಸಬಾರದು ಎಂದು ಅವರು ವಿವರಿಸಿದರು. ಆ ಸಮಯದಲ್ಲಿನ ವಿಚಿತ್ರ ವಾತಾವರಣದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಪರಿಸ್ಥಿತಿ ಹೇಗಿದೆಯೆಂದರೆ, ಸರ್ಕಾರವು ತನ್ನ ನಾಗರಿಕರನ್ನು ಅವರು ಏನು ಮಾಡಿದರೂ ಅನುಮಾನದಿಂದ ನೋಡುತ್ತದೆ ಎಂದು ಉಲ್ಲೇಖಿಸಿದರು. ನಾಗರಿಕರು ಏನನ್ನಾದರೂ ಮಾಡುವ ಮೊದಲು ಸರ್ಕಾರದಿಂದ ಅನುಮತಿ ಪಡೆಯಬೇಕಾಗಿತ್ತು ಎಂದು ಅವರು ಹೇಳಿದರು.

ಇದು ಸರ್ಕಾರ ಮತ್ತು ನಾಗರಿಕರ ನಡುವೆ ಪರಸ್ಪರ ಅಪನಂಬಿಕೆ ಮತ್ತು ಅನುಮಾನದ ವಾತಾವರಣಕ್ಕೆ ಕಾರಣವಾಗಿತ್ತು ಎಂದು ಪ್ರಧಾನಮಂತ್ರಿ ಗಮನಸೆಳೆದರು. ಟಿವಿ ಮತ್ತು ರೇಡಿಯೋ ಅಥವಾ ಇನ್ನಾವುದೇ ವಲಯವನ್ನು ನಡೆಸಲು ಅಗತ್ಯವಿದ್ದ ನವೀಕರಿಸಬಹುದಾದ ಪರವಾನಗಿಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ಪತ್ರಕರ್ತರಿಗೆ ನೆನಪಿಸಿದರು. ತೊಂಬತ್ತರ ದಶಕದ ಹಳೆಯ ತಪ್ಪುಗಳನ್ನು ಬಲವಂತವಾಗಿ ಸರಿಪಡಿಸಲಾಗಿದ್ದರೂ, ಹಳೆಯ 'ಮೈ-ಬಾಪ್' ಮನಃಸ್ಥಿತಿ ಸಂಪೂರ್ಣವಾಗಿ ಕಣ್ಮರೆಯಾಗಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. 2014 ರ ನಂತರ, 'ಸರ್ಕಾರ-ಮೊದಲು' ಮನಃಸ್ಥಿತಿಯನ್ನು 'ಜನ ಮೊದಲು' ವಿಧಾನವಾಗಿ ಮರುಕಲ್ಪಿಸಲಾಯಿತು ಮತ್ತು ಸರ್ಕಾರವು ತನ್ನ ನಾಗರಿಕರನ್ನು ನಂಬುವ ತತ್ವದ ಮೇಲೆ ಕೆಲಸ ಮಾಡಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಸ್ವಯಂ ದೃಢೀಕರಣ, ಕೆಳ ಶ್ರೇಣಿಯ ಉದ್ಯೋಗಗಳಿಗೆ ಸಂದರ್ಶನಗಳನ್ನು ರದ್ದುಗೊಳಿಸುವುದು, ಸಣ್ಣ ಆರ್ಥಿಕ ಅಪರಾಧಗಳನ್ನು ಅಪರಾಧಮುಕ್ತಗೊಳಿಸುವುದು, ಜನ ವಿಶ್ವಾಸ್ ಮಸೂದೆ, ಮೇಲಾಧಾರ ರಹಿತ ಮುದ್ರಾ ಸಾಲಗಳು ಮತ್ತು ಎಂಎಸ್ಎಂಇಗಳಿಗೆ ಸರ್ಕಾರ ಖಾತರಿ ನೀಡುವ ಉದಾಹರಣೆಗಳನ್ನು ಪ್ರಧಾನಮಂತ್ರಿ ನೀಡಿದರು. "ಪ್ರತಿಯೊಂದು ಕಾರ್ಯಕ್ರಮ ಮತ್ತು ನೀತಿಯಲ್ಲಿ ಜನರನ್ನು ನಂಬುವುದು ನಮ್ಮ ಮಂತ್ರವಾಗಿದೆ", ಎಂದು ಪ್ರಧಾನಮಂತ್ರಿ ಹೇಳಿದರು.

ತೆರಿಗೆ ಸಂಗ್ರಹದ ಉದಾಹರಣೆಯ ಕುರಿತು ವಿವರಿಸಿದ ಪ್ರಧಾನಮಂತ್ರಿಯವರು, 2013-14ರಲ್ಲಿ ದೇಶದ ಒಟ್ಟು ತೆರಿಗೆ ಆದಾಯವು ಸರಿಸುಮಾರು 11 ಲಕ್ಷ ಕೋಟಿ ರೂ.ಗಳಷ್ಟಿತ್ತು, ಆದರೆ 2023-24ರಲ್ಲಿ ಅದು 33 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ತೆರಿಗೆ ಆದಾಯದ ಹೆಚ್ಚಳಕ್ಕೆ ತೆರಿಗೆಗಳ ಕಡಿತವನ್ನು ಶ್ಲಾಘಿಸಿದ ಪ್ರಧಾನಮಂತ್ರಿ, "9 ವರ್ಷಗಳಲ್ಲಿ, ಒಟ್ಟು ತೆರಿಗೆ ಆದಾಯವು 3 ಪಟ್ಟು ಹೆಚ್ಚಾಗಿದೆ ಮತ್ತು ನಾವು ತೆರಿಗೆ ದರಗಳನ್ನು ಕಡಿಮೆ ಮಾಡಿದಾಗ ಇದು ಸಂಭವಿಸಿದೆ" ಎಂದು ಹೇಳಿದರು. ಪಾವತಿಸಿದ ತೆರಿಗೆಯನ್ನು ಸಮರ್ಥವಾಗಿ ಖರ್ಚು ಮಾಡಲಾಗುತ್ತಿದೆ ಎಂದು ತಿಳಿದಾಗ ತೆರಿಗೆದಾರರು ಪ್ರೇರಿತರಾಗುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. "ನೀವು ಅವರನ್ನು ನಂಬಿದಾಗ ಜನರು ನಿಮ್ಮನ್ನು ನಂಬುತ್ತಾರೆ" ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಕ್ರಿಯೆಗಳನ್ನು ಸರಳಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಮುಖಾಮುಖಿರಹಿತ ನಿರ್ಧರಣೆ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಆದಾಯ ತೆರಿಗೆ ರಿಟರ್ನ್ಸ್ ಅನ್ನು ಈ ಹಿಂದೆ ಸರಾಸರಿ 90 ದಿನಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತಿತ್ತು ಎಂದು ತಿಳಿಸಿದ ಪ್ರಧಾನಮಂತ್ರಿ, ಆದಾಯ ತೆರಿಗೆ ಇಲಾಖೆ ಈ ವರ್ಷ 6.5 ಕೋಟಿಗೂ ಹೆಚ್ಚು ರಿಟರ್ನ್ ಗಳನ್ನು ಪ್ರಕ್ರಿಯೆಗೊಳಿಸಿದೆ, ಇದರಲ್ಲಿ 3 ಕೋಟಿ ರಿಟರ್ನ್ ಗಳ ಪ್ರಕ್ರಿಯೆಯನ್ನು 24 ಗಂಟೆಗಳಲ್ಲಿ ಮಾಡಲಾಗಿದೆ ಮತ್ತು ಕೆಲವೇ ದಿನಗಳಲ್ಲಿ ಹಣವನ್ನು ಮರುಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಭಾರತದ ಸಮೃದ್ಧಿ ವಿಶ್ವದ ಸಮೃದ್ಧಿಯಾಗಿದೆ ಮತ್ತು ಭಾರತದ ಪ್ರಗತಿ ವಿಶ್ವದ ಪ್ರಗತಿಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಜಿ-20 ಶೃಂಗಸಭೆಗಾಗಿ ಆಯ್ಕೆ ಮಾಡಲಾದ ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಧ್ಯೇಯವಾಕ್ಯ ವಿಶ್ವದ ಅನೇಕ ಸವಾಲುಗಳಿಗೆ ಪರಿಹಾರಗಳನ್ನು ಒಳಗೊಂಡಿದೆ ಎಂದು ಅವರು ಒತ್ತಿ ಹೇಳಿದರು. ಸಾಮಾನ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಎಲ್ಲರ ಹಿತಾಸಕ್ತಿಗಳನ್ನು ರಕ್ಷಿಸುವ ಮೂಲಕ ಮಾತ್ರ ಜಗತ್ತು ಉತ್ತಮವಾಗಲು ಸಾಧ್ಯ ಎಂದು ಅವರು ಹೇಳಿದರು. "ಈ ದಶಕ ಮತ್ತು ಮುಂದಿನ 25 ವರ್ಷಗಳು ಭಾರತದ ಮೇಲೆ ಅಭೂತಪೂರ್ವ ವಿಶ್ವಾಸವನ್ನು ಮೂಡಿಸುತ್ತವೆ ಎಂದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, 'ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನಗಳು) ಮೂಲಕ ಮಾತ್ರ ಭಾರತದ ಗುರಿಗಳನ್ನು ವೇಗವಾಗಿ ಸಾಧಿಸಬಹುದು ಎಂದು ಹೇಳಿದರು ಮತ್ತು ಭಾರತದ ಅಭಿವೃದ್ಧಿಯ ಪಯಣದಲ್ಲಿ ಸಾಧ್ಯವಾದಷ್ಟು ತೊಡಗಿಸಿಕೊಳ್ಳುವಂತೆ ಹಾಜರಿದ್ದ ಎಲ್ಲರಿಗೂ ಕರೆ ನೀಡಿದರು. "ನೀವು ಭಾರತದ ಬೆಳವಣಿಗೆಯ ಪಯಣದೊಂದಿಗೆ ಸಹಯೋಗ ಹೊಂದಿದಾಗ, ಭಾರತವು ನಿಮಗೆ ಬೆಳವಣಿಗೆಯ ಖಾತರಿಯನ್ನು ನೀಡುತ್ತದೆ" ಎಂದು ಅವರು ಮಾತು ಮುಗಿಸಿದರು.

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”