"ಬಜೆಟ್‌ನಲ್ಲಿ ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾಗೆ ಹಲವು ಮಹತ್ವದ ನಿಬಂಧನೆಗಳಿವೆ"
"ಯುವ ಮತ್ತು ಪ್ರತಿಭಾವಂತ ಜನಸಂಖ್ಯೆಯ ಲಾಭಪಡೆಯಬೇಕು, ಪ್ರಜಾಸತ್ತಾತ್ಮಕ ಸ್ಥಾಪನೆ, ನೈಸರ್ಗಿಕ ಸಂಪನ್ಮೂಲಗಳಂತಹ ಧನಾತ್ಮಕ ಅಂಶಗಳು ದೃಢಸಂಕಲ್ಪದೊಂದಿಗೆ ಮೇಕ್ ಇನ್ ಇಂಡಿಯಾ ಕಡೆಗೆ ಸಾಗಲು ನಮ್ಮನ್ನು ಪ್ರೋತ್ಸಾಹಿಸಬೇಕು"
"ನಾವು ರಾಷ್ಟ್ರೀಯ ಭದ್ರತೆಯ ಪ್ರಿಸ್ಮ್ ನಿಂದ (ತ್ರಿಭುಜ) ನೋಡಿದರೆ ಆತ್ಮನಿರ್ಭರತೆಯು ಹೆಚ್ಚು ಮುಖ್ಯವಾಗಿದೆ"
"ಜಗತ್ತು ಭಾರತವನ್ನು ಉತ್ಪಾದನಾ ಶಕ್ತಿಯಾಗಿ ನೋಡುತ್ತಿದೆ"
"ನಿಮ್ಮ ಕಂಪನಿ ತಯಾರಿಸುವ ಉತ್ಪನ್ನಗಳ ಬಗ್ಗೆ ಹೆಮ್ಮೆಯಿರಲಿ ಮತ್ತು ನಿಮ್ಮ ಭಾರತೀಯ ಗ್ರಾಹಕರಲ್ಲಿಯೂ ಈ ಹೆಮ್ಮೆಯ ಭಾವವನ್ನು ಮೂಡಿಸಿ"
"ನೀವು ಜಾಗತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಮತ್ತು ನೀವು ಜಾಗತಿಕವಾಗಿ ಸ್ಪರ್ಧಿಸಬೇಕಾಗುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಆಯೋಜಿಸಿದ್ದ ಬಜೆಟ್ ನಂತರದ ವೆಬಿ‌ನಾರ್ ಉದ್ದೇಶಿಸಿ ಮಾತನಾಡಿದರು. ಇದು ಪ್ರಧಾನಮಂತ್ರಿ ಅವರು  ಬಜೆಟ್ ನಂತರದ ಎಂಟನೇ ವೆಬಿ‌ನಾರ್ ಅನ್ನು ಉದ್ದೇಶಿಸಿ ಭಾಷಣವಾಗಿದೆ. ಈ ವೆಬ್‌ನಾರ್‌ನ ಥೀಮ್ (ಘೋಷ ವಾಕ್ಯ) 'ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್' ಆಗಿತ್ತು.

ಬಜೆಟ್‌ನಲ್ಲಿ ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾಗೆ ಹಲವು ಮಹತ್ವದ ನಿಬಂಧನೆಗಳಿವೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಭಾರತದಂತಹ ದೇಶವು ಕೇವಲ ಮಾರುಕಟ್ಟೆಯಾಗಿ ಕೊನೆಗೊಳ್ಳುವುದನ್ನು ಒಪ್ಪಲಾಗದು ಎಂದು ಅವರು ಹೇಳಿದರು. ಮೇಕ್ ಇನ್ ಇಂಡಿಯಾದ ನಿರ್ಣಾಯಕ ಪ್ರಾತ್ರವನ್ನು ಒತ್ತಿಹೇಳಲು ಸಾಂಕ್ರಾಮಿಕ ಮತ್ತು ಇತರ ಅನಿಶ್ಚಿತತೆಗಳ ಸಮಯದಲ್ಲಿ ಪೂರೈಕೆ ಸರಪಳಿ ಅಡೆತಡೆಗಳ ಕಡೆಗೆ ಅವರು ಗಮನಸೆಳೆದರು. ಮತ್ತೊಂದೆಡೆ, ಯುವ ಮತ್ತು ಪ್ರತಿಭಾವಂತ ಜನಸಂಖ್ಯೆಯ ಲಾಭವನ್ನು ಪಡೆಯುವಂತೆ, ಪ್ರಜಾಸತ್ತಾತ್ಮಕ ವ್ಯವಸ್ಥೆ, ನೈಸರ್ಗಿಕ ಸಂಪನ್ಮೂಲಗಳಂತಹ ಸಕಾರಾತ್ಮಕ ಅಂಶಗಳೂ ಸಹ ಸಂಕಲ್ಪದೊಂದಿಗೆ ಮೇಕ್ ಇನ್ ಇಂಡಿಯಾದತ್ತ ಸಾಗಲು ನಮ್ಮನ್ನು ಪ್ರೋತ್ಸಾಹಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಇದೇವೇಳೆ ಕೆಂಪು ಕೋಟೆಯ ಪ್ರಾಂಗಣದಿಂದ ನೀಡಿದ ಶೂನ್ಯ ದೋಷ-ಶೂನ್ಯ ಪರಿಣಾಮ ತಯಾರಿಕೆಯ ಕರೆಯನ್ನು ಸಹ ಉಲ್ಲೇಖಿಸಿದರು. ನಾವು ರಾಷ್ಟ್ರೀಯ ಭದ್ರತೆಯ ಪ್ರಿಸ್ಮ್‌ನಿಂದ ನೋಡಿದರೆ ಆತ್ಮನಿರ್ಭರತೆಯು ಹೆಚ್ಚು ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಜಗತ್ತು ಭಾರತವನ್ನು ಉತ್ಪಾದನಾ ಶಕ್ತಿ ಕೇಂದ್ರವಾಗಿ ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ಉತ್ಪಾದನೆಯು ಭಾರತದ ಜಿಡಿಪಿಯ ಶೇಕಡ 15 ರಷ್ಟಿದೆ. ಆದರೆ ಮೇಕ್ ಇನ್ ಇಂಡಿಯಾದ ಮೊದಲು ಅನಂತ ಸಾಧ್ಯತೆಗಳಿವೆ ಮತ್ತು ಭಾರತದಲ್ಲಿ ದೃಢವಾದ ಉತ್ಪಾದನಾ ನೆಲೆಯನ್ನು ರಚಿಸಲು ನಾವು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಅರೆ ಕಂಡಕ್ಟರ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ವಲಯಗಳಲ್ಲಿ ಹೊಸ ಬೇಡಿಕೆ ಮತ್ತು ಅವಕಾಶಗಳ ಉದಾಹರಣೆಗಳನ್ನು ಪ್ರಧಾನಿ ನೀಡಿದರು. ಅಲ್ಲಿ ತಯಾರಕರು ವಿದೇಶಿ ಮೂಲಗಳ ಮೇಲಿನ ಅವಲಂಬನೆಯನ್ನು ತೆಗೆದುಹಾಕುವ ಅರ್ಥದಲ್ಲಿ ಮುಂದುವರಿಯಬೇಕು. ಅಂತೆಯೇ, ಉಕ್ಕು ಮತ್ತು ವೈದ್ಯಕೀಯ ಉಪಕರಣಗಳಂತಹ ಕ್ಷೇತ್ರಗಳನ್ನು ಸ್ಥಳೀಯ ಉತ್ಪಾದನೆಗೆ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಮಾರುಕಟ್ಟೆಯಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನದ ಲಭ್ಯತೆಗೆ ವಿರುದ್ಧವಾಗಿ ಉತ್ಪನ್ನದ ಲಭ್ಯತೆಯ ನಡುವಿನ ವ್ಯತ್ಯಾಸವನ್ನು ಪ್ರಧಾನಿ ಒತ್ತಿ ಹೇಳಿದರು. ಭಾರತದ ವಿವಿಧ ಉತ್ಸವಗಳಿಗೆ ಹಲವಾರು ಸರಬರಾಜುದಾರರು ವಿದೇಶಿ ಪೂರೈಕೆದಾರರನ್ನು ನೋಡುತ್ತಿವೆ ಮತ್ತು ಸ್ಥಳೀಯ ತಯಾರಕರು ಅವುಗಳನ್ನು ಸುಲಭವಾಗಿ ಒದಗಿಸಬಹುದು ಎಂದು ಅವರು ತಮ್ಮ ನಿರಾಶೆಯನ್ನು ಪುನರುಚ್ಚರಿಸಿದರು. ದೀಪಾವಳಿಯಂದು 'ದಿಯಾಸ್' ಖರೀದಿಸುವುದನ್ನು ಮೀರಿ 'ಲೋಕಲ್ ಫಾರ್ ವೋಕಲ್' ಎಂಬ ಆಶಯವು ಉತ್ತಮವಾಗಿದೆ ಎಂದು ಅವರು ಪ್ರತಿಪಾದಿಸಿದರು. ತಮ್ಮ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್ ಪ್ರಯತ್ನಗಳಲ್ಲಿ ಸ್ಥಳೀಯ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ಸ್ಥಳೀಯತೆಗೆ ಧ್ವನಿ ಎಂಬ ಅಂಶಗಳನ್ನು ಪ್ಲುರಚುರಪಡಿಸಲು ಅವರು ಖಾಸಗಿ ವಲಯವನ್ನು ಕೋರಿದರು. “ನಿಮ್ಮ ಕಂಪನಿ ತಯಾರಿಸುವ ಉತ್ಪನ್ನಗಳ ಬಗ್ಗೆ ಹೆಮ್ಮೆಯಿರಲಿ ಮತ್ತು ನಿಮ್ಮ ಭಾರತೀಯ ಗ್ರಾಹಕರಲ್ಲಿಯೂ ಈ ಹೆಮ್ಮೆಯ ಭಾವವನ್ನು ಮೂಡಿಸಿ. ಇದಕ್ಕಾಗಿ ಕೆಲವು ಸಾಮಾನ್ಯ ಬ್ರ್ಯಾಂಡಿಂಗ್ ಅನ್ನು ಸಹ ಪರಿಗಣಿಸಬಹುದು" ಎಂದು ಅವರು ಹೇಳಿದರು.

ಸ್ಥಳೀಯ ಉತ್ಪನ್ನಗಳಿಗೆ ಹೊಸ ತಾಣಗಳನ್ನು ಹುಡುಕುವ ಅಗತ್ಯವನ್ನು ಪ್ರಧಾನಮಂತ್ರಿ ಮನವರಿಕೆ ಮಾಡಿಕೊಟ್ಟರು. ಆರ್ & ಡಿ ಮೇಲಿನ ವೆಚ್ಚವನ್ನು ಹೆಚ್ಚಿಸಲು ಮತ್ತು ಅವರ ಉತ್ಪನ್ನ ಬಂಡವಾಳವನ್ನು ವೈವಿಧ್ಯಗೊಳಿಸಲು ಹಾಗು ನವೀಕರಿಸಲು ಅವರು ಖಾಸಗಿ ವಲಯಕ್ಕೆ ಸೂಚಿಸಿದರು. 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದ ಪ್ರಧಾನಿ, “ವಿಶ್ವದಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವಿಶ್ವ ಮಾರುಕಟ್ಟೆಗಳನ್ನು ಅಧ್ಯಯನ ಮಾಡುವ ಮೂಲಕ ಗರಿಷ್ಠ ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ಗಾಗಿ ನಾವು ನಮ್ಮ ಗಿರಣಿಗಳನ್ನು ಮುಂಚಿತವಾಗಿ ಸಿದ್ಧಪಡಿಸಬೇಕು ಎಂದರು.

ಗಣಿಗಾರಿಕೆ, ಕಲ್ಲಿದ್ದಲು ಮತ್ತು ರಕ್ಷಣೆಯಂತಹ ಕ್ಷೇತ್ರಗಳನ್ನು ತೆರೆಯುವ ಕಾರಣದಿಂದ ಹೊಸ ಸಾಧ್ಯತೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಹೊಸ ಕಾರ್ಯತಂತ್ರವನ್ನು ಸಿದ್ಧಪಡಿಸುವಂತೆ ಸೂಚಿಸಿದರು. "ನೀವು ಜಾಗತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಮತ್ತು ನೀವು ಜಾಗತಿಕವಾಗಿ ಸ್ಪರ್ಧಿಸಬೇಕಾಗುತ್ತದೆ" ಎಂದು ಅವರು ಹೇಳಿದರು.

ಈ ಬಜೆಟ್ ಸಾಲ ಸೌಲಭ್ಯ ಮತ್ತು ತಂತ್ರಜ್ಞಾನದ ಉನ್ನತೀಕರಣದ ಮೂಲಕ ಎಮ್ ಎಸ್ ಎಮ್ ಇಗೆ ಮಹತ್ವ ನೀಡಿದೆ. ಸರ್ಕಾರವು ಎಮ್ ಎಸ್ ಎಮ್ ಇಗಳಿಗೆ 6,000 ಕೋಟಿ ರೂಪಾಯಿಗಳ  ಆರ್ ಎಎಮ್ ಪಿ ಕಾರ್ಯಕ್ರಮವನ್ನು ಘೋಷಿಸಿದೆ. ಬೃಹತ್ ಕೈಗಾರಿಕೆಗಳು ಮತ್ತು ಎಂಎಸ್‌ಎಂಇಗಳಿಗೆ ರೈತರಿಗೆ ಹೊಸ ರೈಲ್ವೇ ಲಾಜಿಸ್ಟಿಕ್ಸ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಬಜೆಟ್ ಗಮನಹರಿಸಿದೆ. ಅಂಚೆ ಮತ್ತು ರೈಲ್ವೆ ಜಾಲಗಳ ಏಕೀಕರಣವು ಸಣ್ಣ ಉದ್ಯಮಗಳು ಮತ್ತು ದೂರದ ಪ್ರದೇಶಗಳಲ್ಲಿ ಸಂಪರ್ಕದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಈಶಾನ್ಯ ಪ್ರದೇಶಕ್ಕೆ ಘೋಷಿಸಿರುವ ಪಿಎಮ್  ಡಿವೈನ್  ಮಾದರಿಯನ್ನು ಬಳಸಿಕೊಂಡು ಪ್ರಾದೇಶಿಕ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಬಹುದು ಎಂದು ಅವರು ಹೇಳಿದರು. ಅದೇ ರೀತಿ, ವಿಶೇಷ ಆರ್ಥಿಕ ವಲಯ ಕಾಯ್ದೆಯಲ್ಲಿನ ಸುಧಾರಣೆಗಳು ರಫ್ತಿಗೆ ಉತ್ತೇಜನ ನೀಡುತ್ತವೆ ಎಂದರು.

ನರೇಂದ್ರ ಮೋದಿ‌ ಅವರು ಸುಧಾರಣೆಗಳ ಪರಿಣಾಮವನ್ನು ವಿವರಿಸಿದರು. ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಪಿಎಲ್ ಐನಲ್ಲಿ, 2021ರ ಡಿಸೆಂಬರ್  ನಲ್ಲಿ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪಾದನೆಯ ಗುರಿಯನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಅನೇಕ ಇತರ  ಪಿಎಲ್ ಐ ಯೋಜನೆಗಳು ಸದ್ಯ ಅನುಷ್ಠಾನದ ಪ್ರಮುಖ ಹಂತಗಳಲ್ಲಿವೆ.

25 ಸಾವಿರ ಅನುಸರಣೆಗಳನ್ನು ತೆಗೆದುಹಾಕುವುದು ಮತ್ತು ಪರವಾನಗಿಗಳ ಸ್ವಯಂ ನವೀಕರಣವನ್ನು ಪ್ರಧಾನಿ ಪ್ರಸ್ತಾಪಿಸಿದರು. ಇದು ಅನುಸರಣೆ ಹೊರೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ. ಅಂತೆಯೇ, ಡಿಜಿಟಲೀಕರಣವು ನಿಯಂತ್ರಕ ಚೌಕಟ್ಟಿನಲ್ಲಿ ವೇಗ ಮತ್ತು ಪಾರದರ್ಶಕತೆಯನ್ನು ತರುತ್ತದೆ. "ಕಾಮನ್ ಸ್ಪೈಸ್ ಫಾರ್ಮ್‌ನಿಂದ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ ಕಂಪನಿಯನ್ನು ಸ್ಥಾಪಿಸಲು, ಈಗ ನೀವು ಪ್ರತಿ ಹಂತದಲ್ಲೂ ನಮ್ಮ ಅಭಿವೃದ್ಧಿ ಸ್ನೇಹಿ ವಿಧಾನವನ್ನು ಅನುಭವಿಸುತ್ತಿದ್ದೀರಿ" ಎಂದು ಅವರು ಹೇಳಿದರು.

ಕೆಲವು ಪ್ರದೇಶಗಳನ್ನು ಗುರುತಿಸಿ ಅದರಲ್ಲಿ ವಿದೇಶಿ ಅವಲಂಬನೆಯನ್ನು ತೊಡೆದುಹಾಕಲು ಕೆಲಸ ಮಾಡುವಂತೆ ಪ್ರಧಾನಮಂತ್ರಿ ಅವರು ತಯಾರಿಕಾ ವಲಯದ ಪ್ರಮುಖರಿಗೆ ಕರೆ ನೀಡಿದರು. ಇಂತಹ ವೆಬಿ‌ನಾರ್‌ಗಳು ನೀತಿ ಅನುಷ್ಠಾನದಲ್ಲಿ ಆಯಾ ಕ್ಷೇತ್ರಗಳ ಪ್ರಮುಖರ ಚಿಂತನೆಗೆ ಅನುವು ಮಾಡಿಕೊಡುತ್ತದೆ ಮತ್ತು ಉತ್ತಮ ಫಲಿತಾಂಶಗಳಿಗಾಗಿ ಬಜೆಟ್ ನಿಬಂಧನೆಗಳ ಸರಿಯಾದ, ಸಮಯೋಚಿತ ಮತ್ತು ತಡೆರಹಿತ ಅನುಷ್ಠಾನಕ್ಕಾಗಿ ಸಹಯೋಗದ ವಿಧಾನವನ್ನು ಅಭಿವೃದ್ಧಿಪಡಿಸುವ ಅಭೂತಪೂರ್ವ ಆಡಳಿತ ಕ್ರಮಗಳಾಗಿವೆ ಎಂದು ಅವರು ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."