“ಈ ವರ್ಷದ ಬಜೆಟ್ 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ‘ಗತಿಶಕ್ತಿ’ ನಿಗದಿ”
‘ಮೂಲಸೌಕರ್ಯ ಆಧಾರಿತ ಅಭಿವೃದ್ಧಿ ಈ ನಿರ್ದೇಶನವು ನಮ್ಮ ಆರ್ಥಿಕತೆಯ ಸಾಮರ್ಥ್ಯವೃದ್ಧಿಯ ಅಸಾಧಾರಣ ಹೆಚ್ಚಳಕ್ಕೆ ದಿಕ್ಸೂಚಿಯಾಗಲಿದೆ”
“2013-14ನೇ ವರ್ಷದಲ್ಲಿ ಭಾರತ ಸರ್ಕಾರದ ನೇರ ಬಂಡವಾಳ ವೆಚ್ಚ ಎರಡೂವರೆ ಲಕ್ಷ ಕೋಟಿ ಇತ್ತು, ಅದು 2022-23ನೇ ವರ್ಷದಲ್ಲಿ ಏಳೂವರೆ ಲಕ್ಷ ಕೋಟಿ ರೂ.ಗಳಿಗೆ ಏರಿದೆ”
“ಮೂಲಸೌಕರ್ಯ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ‘ಗತಿಶಕ್ತಿ’ಗೆ ಹೊಸ ದಿಕ್ಸೂಚಿ ನೀಡಿವೆ, ಅಲ್ಲದೆ ಇದರಿಂದ ಯೋಜನೆಗಳ ವೆಚ್ಚ ಹಾಗೂ ಸಮಯ ಕಡಿತವಾಗಲಿದೆ”
“‘ಗತಿಶಕ್ತಿ’ ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿ ಸದ್ಯ 400ಕ್ಕೂ ಅಧಿಕ ದತ್ತಾಂಶ ಪದರಗಳು ಲಭ್ಯ”
“ಯುಲಿಪ್ ಮೂಲಕ 6 ಸಚಿವಾಲಯಗಳ 24 ಡಿಜಿಟಲ್ ವ್ಯವಸ್ಥೆಗಳ ಸಂಯೋಜನೆ, ಇದು ರಾಷ್ಟ್ರೀಯ ಏಕಗವಾಕ್ಷಿ ಸಾಗಣೆ ಪೋರ್ಟಲ್ ಸೃಷ್ಟಿಗೆ ಕಾರಣವಾಗಿದ್ದು, ಇದರಿಂದ ಸಾಗಣೆ ವೆಚ್ಚ ತಗ್ಗಿಸಲು ಸಹಕಾರಿ”
“‘ಗತಿಶಕ್ತಿ’ಯಿಂದ ನಮ್ಮ ರಫ್ತುಗಳಿಗೆ ಭಾರೀ ಸಹಾಯಕವಾಗಿದ್ದು, ನಮ್ಮ ಎಂಎಸ್ಎಂಇಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಲು ಸಹಾಯ”
“ಪಿಎಂ-ಗತಿ ಶಕ್ತಿ ಮೂಲಸೌಕರ್ಯ ಯೋಜನೆಯಿಂದ ಅಭಿವೃದ್ಧಿ ಮತ್ತು ಬಳಕೆ ಹಂತದವರೆಗೆ ಮೂಲಸೌಕರ್ಯ ಸೃಷ್ಟಿಯಲ್ಲಿ ನಿಜವಾದ ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಖಾತ್ರಿಪಡಿಸಲಿದೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ‘ಗತಿಶಕ್ತಿ’ ದೂರದೃಷ್ಟಿಯ ಮತ್ತು 2022ರ ಕೇಂದ್ರ ಬಜೆಟ್ ನಲ್ಲಿ ಅದನ್ನು ಸಮ್ಮಿಳಿತಗೊಳಿಸುವ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಬಜೆಟ್ ನಂತರದ ಸರಣಿಯಲ್ಲಿ ಪ್ರಧಾನಿ ಅವರು ಭಾಷಣ ಮಾಡಿದ 6ನೇ ವೆಬಿನಾರ್ ಇದಾಗಿದೆ.

ಈ ವರ್ಷದ ಬಜೆಟ್ 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ವೇಗ(ಗತಿಶಕ್ತಿ)ವನ್ನು ನಿಗದಿಪಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮೂಲಸೌಕರ್ಯ ಆಧರಿತ ಅಭಿವೃದ್ಧಿಯ ಈ ನಿರ್ದೇಶನವು ನಮ್ಮ ಆರ್ಥಿಕತೆ ಬಲವರ್ಧನೆಯಲ್ಲಿ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಉದ್ಯೋಗದಲ್ಲಿ ಸಾಕಷ್ಟು ಹೊಸ ಸಾಧ್ಯತೆಗಳನ್ನು ಸೃಷ್ಟಿಸಲಿದೆ ಎಂದು ಹೇಳಿದರು.

ಯೋಜನೆಗಳನ್ನು ಪೂರ್ಣಗೊಳಿಸುವ ಸಾಂಪ್ರದಾಯಿಕ ವಿಧಾನಗಳಲ್ಲಿ ಪಾಲುದಾರರಲ್ಲಿ ಸಾಕಷ್ಟು ಸಮನ್ವಯದ ಕೊರತೆಯಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇದಕ್ಕೆ  ಸಂಬಂಧಿಸಿದಂತೆ ಹಲವು ಇಲಾಖೆಗಳ ನಡುವೆ ಸ್ಪಷ್ಟ ಮಾಹಿತಿಯ ಕೊರತೆಯೇ ಕಾರಣ ಎಂದರು. “ಗತಿಶಕ್ತಿಯಿಂದಾಗಿ ಇದೀಗ ಸಂಪೂರ್ಣ ಮಾಹಿತಿಯೊಂದಿಗೆ ಪ್ರತಿಯೊಬ್ಬರೂ ಯೋಜನೆಗಳನ್ನು ಸಿದ್ಧಪಡಿಸಬಹುದಾಗಿದೆ. ಇದರಿಂದ ದೇಶದ ಸಂಪನ್ಮೂಲವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ” ಎಂದು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ಗತಿಶಕ್ತಿಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. 2013-14ನೇ ವರ್ಷದಲ್ಲಿ ಭಾರತ ಸರ್ಕಾರದ ನೇರ ಬಂಡವಾಳ ವೆಚ್ಚ ಸುಮಾರು ಎರಡೂವರೆ ಲಕ್ಷ ಕೋಟಿ ರೂಪಾಯಿಗಳಾಗಿತ್ತು. 2022-23ನೇ ವರ್ಷದಲ್ಲಿ ಅದು ಏಳೂವರೆ ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ” ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. “ಮೂಲಸೌಕರ್ಯ ಯೋಜನೆ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಪಿಎಂ-ಗತಿಶಕ್ತಿ ಹೊಸ ದಿಕ್ಸೂಚಿಯನ್ನು ನೀಡಲಿದೆ. ಇದರಿಂದ ಯೋಜನೆಗಳ ವೆಚ್ಚ ಹಾಗೂ ಸಮಯ ಗಣನೀಯವಾಗಿ ತಗ್ಗಲಿದೆ” ಎಂದರು.

“ಒಕ್ಕೂಟ ಸಹಕಾರ ತತ್ವವನ್ನು ಬಲವರ್ಧನೆಗೊಳಿಸಲು ನಮ್ಮ ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ರಾಜ್ಯಗಳಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ನೆರವು ನೀಡಲು ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರಗಳು ಈ ಹಣವನ್ನು ಬಹುಮಾದರಿ ಮೂಲಸೌಕರ್ಯ ಮತ್ತು ಇತರೆ ಉತ್ಪಾದಕ ಆಸ್ತಿಗಳ ಸೃಷ್ಟಿಗೆ ಬಳಕೆ ಮಾಡಬಹುದಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಸಂಪರ್ಕವಿಲ್ಲದ ಗುಡ್ಡಗಾಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ರೋಪ್ ವೇ ಅಭಿವೃದ್ಧಿ ಕಾರ್ಯಕ್ರಮ ಆರಂಭಿಸಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಆ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಈಶಾನ್ಯ ಅಭಿವೃದ್ಧಿ ಉಪಕ್ರಮ(ಪಿಎಂ-ಡಿವೈನ್) ಆರಂಭಿಸಲಾಗಿದೆ ಎಂದರು. ಪಿಎಲ್ಐ ಉಪಕ್ರಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಖಾಸಗಿ ವಲಯವೂ ದೇಶದ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಬೇಕೆಂದು ಕರೆ ನೀಡಿದರು.

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಇದೀಗ 400ಕ್ಕೂ ಅಧಿಕ ದತ್ತಾಂಶ ಪದರಗಳು ಲಭ್ಯವಿದೆ ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿ ಅವರು, ಇದು ಹಾಲಿ ಇರುವ ಯೋಜನೆಗಳಿಗೆ ಅಷ್ಟೇ ಅಲ್ಲದೆ, ಉದ್ದೇಶಿತ ಮೂಲಸೌಕರ್ಯ ಯೋಜನೆಗಳ ಮಾಹಿತಿಯನ್ನು ಒಳಗೊಂಡಿದೆ. ಜತೆಗೆ ಅರಣ್ಯ ಭೂಮಿ ಮತ್ತು ಲಭ್ಯವಿರುವ ಕೈಗಾರಿಕಾ ಎಸ್ಟೇಟ್ ಮಾಹಿತಿಯನ್ನು ಸಹ ಒಳಗೊಂಡಿದೆ ಎಂದರು. ಖಾಸಗಿ ವಲಯಕ್ಕೆ ಇದನ್ನು ತಮ್ಮ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ ಮತ್ತು ಎಲ್ಲ ರಾಷ್ಟ್ರೀಯ ಕ್ರಿಯಾಯೋಜನೆಯ ಮಾಹಿತಿ  ಒಂದೇ ವೇದಿಕೆಯಲ್ಲಿ ಲಭ್ಯವಿದೆ ಎಂದರು.

“ಇದರಿಂದಾಗಿ ಡಿಪಿಆರ್ ಹಂತದಲ್ಲೇ ಹಲವು ಯೋಜನೆಗಳಿಗೆ ಅನುಮೋದನೆ ಪಡೆಯಬಹುದಾಗಿದೆ ಮತ್ತು ಅವುಗಳನ್ನು ಸಂಯೋಜಿಸಲು ಸಾಧ್ಯವಾಗಲಿದೆ. ಇದರಿಂದಾಗಿ ನಿಮ್ಮ ಅನುಪಾಲನಾ ಹೊರೆ ತಗ್ಗಿಸಲು ಸಹಕಾರಿಯಾಗಲಿದೆ” ಎಂದು ಹೇಳಿದರು. ರಾಜ್ಯ ಸರ್ಕಾರಗಳು ಪಿಎಂ-ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ತಮ್ಮ ಯೋಜನೆಗಳು ಮತ್ತು ಆರ್ಥಿಕ ವಲಯಗಳಿಗೆ ಮೂಲವನ್ನಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

“ಇಂದಿಗೂ ಭಾರತದಲ್ಲಿ ಸಾಗಣೆ ದರ ಜಿಡಿಪಿಯ ಶೇ.13ರಿಂದ ಶೇ.14ರಷ್ಟಿದೆ ಎಂದು ಪರಿಗಣಿಸಲ್ಪಟ್ಟಿದೆ. ಇದು ಇತರೆ ರಾಷ್ಟ್ರಗಳಿಗಿಂತ ಅಧಿಕವಾಗಿದೆ ಪಿಎಂ-ಗತಿಶಕ್ತಿ ಯೋಜನೆ ಮೂಲಸೌಕರ್ಯ ದಕ್ಷತೆ ಸುಧಾರಣೆಯಲ್ಲಿ ಬಹುದೊಡ್ಡ ಪಾತ್ರವಹಿಸಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಏಕೀಕೃತ ಸಾಗಣೆ ಮುಖಾಮುಖಿ ವೇದಿಕೆ – ಯೂನಿಫೈಡ್ ಲಾಜಿಸ್ಟಿಕ್ ಇಂಟರ್ ಫೇಸ್ ಪ್ಲಾಟ್ ಫಾರಂ – ಯುಲಿಪ್, ಈ ಬಜೆಟ್ ನಲ್ಲಿ ಒದಗಿಸಲಾಗಿದ್ದು, ಇದನ್ನು ಹಲವು ಸರ್ಕಾರಿ ಇಲಾಖೆಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ಅಳವಡಿಸಿಕೊಳ್ಳುವ ಮೂಲಕ ಸಾಗಣೆ ವೆಚ್ಚವನ್ನು ತಗ್ಗಿಸಬಹುದಾಗಿದೆ ಎಂದರು. “ಯುಲಿಪ್ ಮೂಲಕ ಆರು ಸಚಿವಾಲಯಗಳ 24 ಡಿಜಿಟಲ್ ಸೇವೆಗಳನ್ನು ಸಂಯೋಜಿಸಲಾಗಿದೆ. ಇದು ರಾಷ್ಟ್ರೀಯ ಏಕಗವಾಕ್ಷಿ ಸಾಗಣೆ ಪೋರ್ಟಲ್ ಅನ್ನು ಸೃಷ್ಟಿಸಲಿದ್ದು, ಇದರಿಂದ ಸಾಗಣೆ ವೆಚ್ಚ ತಗ್ಗಿಸಲು ಸಹಕಾರಿಯಾಗಲಿದೆ” ಎಂದು ಹೇಳಿದರು. 

ಪ್ರತಿಯೊಂದು ಇಲಾಖೆಯಲ್ಲೂ ಸಾಗಣೆ ವಿಭಾಗಗಳ ಸೃಷ್ಟಿ ಮತ್ತು ಉತ್ತಮ ಸಮನ್ವಯದ ಮೂಲಕ ಸಾಗಣೆಯ ದಕ್ಷತೆ ಸುಧಾರಿಸಲು ಉನ್ನತಾಧಿಕಾರ ಕಾರ್ಯದರ್ಶಿಗಳ ಸಮಿತಿಯನ್ನು ರಚನೆ ಮತ್ತಿತರ ಕ್ರಮಗಳ ಬಗ್ಗೆ ಅವರು ವಿವರಿಸಿದರು. “ನಮ್ಮ ರಫ್ತುಗಳಿಗೆ ಪಿಎಂ-ಗತಿಶಕ್ತಿ ದೊಡ್ಡ ಪ್ರಮಾಣದಲ್ಲಿ ಸಹಕಾರಿಯಾಗುತ್ತಿದೆ. ನಮ್ಮ ಎಂಎಸ್ಎಂಇಗಳಿಗೆ ಜಾಗತಿಕವಾಗಿ ಪೈಪೋಟಿ ನೀಡಲು ಸಾಧ್ಯವಾಗುತ್ತಿದೆ” ಎಂದು ಹೇಳಿದರು.

ಗತಿಶಕ್ತಿ ಮೂಲಸೌಕರ್ಯ ಯೋಜನೆಯಿಂದ ಅಭಿವೃದ್ಧಿ ಮತ್ತು ಬಳಕೆ ಹಂತದವರೆಗೆ  ಮೂಲಸೌಕರ್ಯ ಸೃಷ್ಟಿಯಲ್ಲಿ ನಿಜವಾದ ಸಾರ್ವಜನಿಕ- ಖಾಸಗಿ ಪಾಲುದಾರಿಕೆಯನ್ನು ಖಾತ್ರಿಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ಈ ವೆಬಿನಾರ್ ನಲ್ಲಿ ಸರ್ಕಾರಿ ವ್ಯವಸ್ಥೆಯ ಜತೆ ಸೇರಿ ಖಾಸಗಿ ವಲಯ ಹೇಗೆ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು ಎನ್ನುವ ಕುರಿತು ಚಿಂತನ ಮಂಥನ ನಡೆಯಬೇಕು” ಎಂದು ನರೇಂದ್ರ ಮೋದಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi