“ಕಳೆದ ಕೆಲವು ದಿನಗಳಿಂದೀಚೆಗೆ ಸುಮಾರು 1ಲಕ್ಷಕ್ಕೂ ಅಧಿಕ ಠೇವಣಿದಾರರಿಗೆ ಹಲವು ವರ್ಷಗಳಿಂದ ದೊರಕದಿದ್ದ ಹಣ ವಾಪಸ್ ಬಂದಿದೆ. ಆ ಮೊತ್ತ 1300 ಕೋಟಿಗೂ ಅಧಿಕ”
“ಇಂದಿನ ನವ ಭಾರತವು ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತದೆ, ಇಂದಿನ ಭಾರತವು ಸಮಸ್ಯೆಗಳನ್ನು ತಪ್ಪಿಸುವುದಿಲ್ಲ”
“ಬಡವರ ಕಾಳಜಿಯನ್ನು ಅರ್ಥ ಮಾಡಿಕೊಂಡು, ಮಧ್ಯಮವರ್ಗದ ಆಂತಕವನ್ನು ಅರ್ಥಮಾಡಿಕೊಂಡು ನಾವು ಖಾತ್ರಿ ಮೊತ್ತವನ್ನು 5 ಲಕ್ಷಕ್ಕೆ ಹೆಚ್ಚಿಸಿದ್ದೇವೆ”
“ಹಿಂದೆ ಮರುಪಾವತಿಗೆ ಯಾವುದೇ ಸಮಯದ ಮಿತಿ ಇರಲಿಲ್ಲ, ಆದರೆ ನಮ್ಮ ಸರ್ಕಾರ 90 ದಿನಗಳೊಳಗೆ ಮರುಪಾವತಿ ಕಡ್ಡಾಯಗೊಳಿಸಿದೆ”
ದೇಶದ ಏಳಿಗೆಯಲ್ಲಿ ಬ್ಯಾಂಕುಗಳು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಲಿವೆ. ಬ್ಯಾಂಕುಗಳ ಏಳಿಗೆಗೆ ಠೇವಣಿದಾರರ ಹಣವೂ ಕೂಡ ಸುರಕ್ಷಿತವಾಗಿರುವುದು ಅಷ್ಟೇ ಮುಖ್ಯವಾಗುತ್ತದೆ. ನಾವು ಬ್ಯಾಂಕುಗಳನ್ನು ಉಳಿಸಬೇಕಾದರೆ, ಠೇವಣಿದಾರರನ್ನೂ ಕೂಡ ರಕ್ಷಿಸಬೇಕಾಗುತ್ತದೆ”
“ಜಗತ್ತಿನ ಅಭಿವೃದ್ಧಿಶೀಲ ಹೊಂದಿದ ರಾಷ್ಟ್ರಗಳು ನಾಗರಿಕರಿಗೆ ಸಹಾಯ ಮಾಡಲು ಹೆಣಗಾಡುತ್ತಿರಬೇಕಾದರೆ, ಭಾರತ ಮಾತ್ರ ದೇಶದ ಬಹುತೇಕ ಪ್ರತಿಯೊಂದು ವರ್ಗದ ಪ್ರಜೆಯನ್ನೂ ತ್ವರಿತವಾಗಿ ಒದಗಿಸುತ್ತದೆ”
“ಜನ್ ಧನ್ ಯೋಜನೆಯಡಿ ತೆರೆದಿರುವ ಕೋಟಿಗಟ್ಟಲೆ ಬ್ಯಾಂಕು ಖಾತೆಗಳಲ್ಲಿ ಅರ್ಧದಷ್ಟು ಹೆಚ್ಚು ಮಹಿಳೆಯರಿಗೆ ಸೇರಿವೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು “ಠೇವಣಿದಾರರು ಮೊದಲು: ಕಾಲಮಿತಿಯಲ್ಲಿ 5 ಲಕ್ಷ ರೂ.ಗಳವರೆಗೆ ಖಾತ್ರಿಪಡಿಸಿದ ಠೇವಣಿ ವಿಮೆ ಪಾವತಿ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಕೇಂದ್ರ ಹಣಕಾಸು ಸಚಿವರು, ಹಣಕಾಸು ಖಾತೆ ರಾಜ್ಯ ಸಚಿವರು ಮತ್ತು ಆರ್ ಬಿಐ ಗೌರ್ನರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಅವರು ಕೆಲವು ಠೇವಣಿದಾರರಿಗೆ ಚಕ್ ಗಳನ್ನು ವಿತರಿಸಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮತ್ತು ಕೋಟ್ಯಂತರ ಬ್ಯಾಂಕ್ ಖಾತೆದಾರರಿಗೆ ಇಂದು ಅತ್ಯಂತ ಮಹತ್ವದ ದಿನವಾಗಿದೆ, ಏಕೆಂದರೆ ದಶಕಗಳಿಂದ ಇದ್ದ ಸಮಸ್ಯೆ ಹೇಗೆ ಬಗೆಹರಿದಿದೆ ಎಂಬುದಕ್ಕೆ ಈ ದಿನ ಸಾಕ್ಷಿಯಾಗಿದೆ. “ಠೇವಣಿದಾರರು ಮೊದಲು” ಎನ್ನುವ  ಮನೋಭಾವ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಕಳೆದ ಕೆಲವು ದಿನಗಳಿಂದೀಚೆಗೆ ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರು ಹಲವು ವರ್ಷಗಳಿಂದ ಸಿಲುಕಿಕೊಂಡಿದ್ದ ತಮ್ಮ ಹಣವನ್ನು ಮರಳಿ ಪಡೆದಿದ್ದಾರೆ. ಈ ಮೊತ್ತವು 1300 ಕೋಟಿ ರೂ.ಗೂ ಅಧಿಕವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಯಾವುದೇ ದೇಶವು ಸಮಸ್ಯೆಗಳಿಗೆ ಸಮಯೋಚಿತ ಪರಿಹಾರದಿಂದ ಮಾತ್ರ ಸಮಸ್ಯೆಗಳು ಉಲ್ಬಣವಾಗುವುದನ್ನು ತಪ್ಪಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ವರ್ಷಗಟ್ಟಲೆ ಸಮಸ್ಯೆಗಳನ್ನು ತಪ್ಪಿಸುವ ಪವೃತ್ತಿ ಇತ್ತು ಎಂದರು. ಆದರೆ ಇಂದಿನ ನವ ಭಾರತವು ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತದೆ. ಇಂದು ಭಾರತವು ಸಮಸ್ಯೆಗಳನ್ನು ತಪ್ಪಿಸುವುದಿಲ್ಲ.

ಭಾರತದಲ್ಲಿ ಬ್ಯಾಂಕ್ ಠೇವಣಿದಾರರಿಗೆ ವಿಮಾ ವ್ಯವಸ್ಥೆ 1960ರ ದಶಕದಲ್ಲಿಯೇ ಜಾರಿಗೆ ಬಂದಿತು ಎಂದು ಪ್ರಧಾನಮಂತ್ರಿ ಹೇಳಿದರು. ಮೊದಲು ಬ್ಯಾಂಕ್ ನಲ್ಲಿ ಠೇವಣಿ ಮಾಡಲಾದ ಒಟ್ಟು ಮೊತ್ತಕ್ಕೆ ಕೇವಲ 50ಸಾವಿರ ರೂಪಾಯಿಗಳವರೆಗೆ ಮಾತ್ರ ಖಾತ್ರಿ ದೊರಕುತ್ತಿತ್ತು. ಆನಂತರ

ಆ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು. ಅಂದರೆ ಬ್ಯಾಂಕು ಮುಳುಗಡೆಯಾದರೆ ಠೇವಣಿದಾರರಿಗೆ 1 ಲಕ್ಷ ರೂ.ಗಳವರೆಗೆ ಮಾತ್ರ ಸಿಗುವ ಅವಕಾಶವಿತ್ತು. ಈ ಹಣವನ್ನು ಯಾವಾಗ ಪಾವತಿಸಬೇಕು ಎಂಬುದಕ್ಕೆ ಕಾಲಮಿತಿ ಇರಲಿಲ್ಲ. “ಬಡವರು ಮತ್ತು ಮಧ್ಯಮ ವರ್ಗದವರ ಕಾಳಜಿಯನ್ನು ಅರ್ಥಮಾಡಿಕೊಂಢು  ನಾವು ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆವು”. ಮತ್ತೊಂದು ಸಮಸ್ಯೆ ಎಂದರೆ ಕಾನೂನು ತಿದ್ದುಪಡಿಯ ಮೂಲಕ ಪರಿಹರಿಸಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. “ಹಿಂದೆ ಮರುಪಾವತಿಗೆ ಯಾವುದೇ ಸಮಯದ ಮಿತಿ ಇರಲಿಲ್ಲ. ಈಗ ನಮ್ಮ ಸರ್ಕಾರವು 90 ದಿನಗಳಲ್ಲಿ ಅಂದರೆ 3 ತಿಂಗಳೊಳಗೆ ಅದನ್ನು ಕಡ್ಡಾಯಗೊಳಿಸಿದೆ. ಅಂದರೆ ಬ್ಯಾಂಕು ಮುಳುಗಡೆಯಾದರೂ ಸಹ ಠೇವಣಿದಾರರು 90 ದಿನಗಳಲ್ಲಿ ಮರಳಿ ಪಡೆಯುತ್ತಾರೆ” ಎಂದು ಅವರು ಹೇಳಿದರು.

ದೇಶದ ಏಳಿಗೆಯಲ್ಲಿ ಬ್ಯಾಂಕುಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಮತ್ತು ಬ್ಯಾಂಕುಗಳ ಏಳಿಗೆಗೆ ಠೇವಣಿದಾರರ ಹಣ ಸುರಕ್ಷಿತವಾಗಿರುವುದು ಅಷ್ಟೇ ಮುಖ್ಯ, ನಾವು ಬ್ಯಾಂಕನ್ನು ಉಳಿಸಲು ಬಯಸಿದರೆ ನಾವು ಠೇವಣಿದಾರನನ್ನು ರಕ್ಷಿಸಬೇಕು. 

ಕಳೆದ ಕೆಲವು ವರ್ಷಗಳಿಂದೀಚೆಗೆ ಸಣ್ಣ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳ ಜೊತೆ ವಿಲೀನಗೊಳಿಸುವ ಮೂಲಕ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಎಲ್ಲ ರೀತಿಯಲ್ಲೂ ಪಾರದರ್ಶಕತೆಯನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ. ಆರ್ ಬಿಐ ಸಹಕಾರಿ ಬ್ಯಾಂಕುಗಳ ಮೇಲೆ ನಿಗಾ ವಹಿಸತೊಡಗಿದ್ದಾಗ, ಸಾಮಾನ್ಯ ಠೇವಣಿದಾರರಿಗೆ ಅವುಗಳ ಮೇಲೆ ವಿಶ್ವಾಸವೃದ್ಧಿಯಾಗುತ್ತದೆ.

ಸಮಸ್ಯೆ ಕೇವಲ ಬ್ಯಾಂಕ್ ಖಾತೆಯ ಮಾತ್ರವಲ್ಲ, ದೂರದ ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಬಗ್ಗೆಯೂ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ದೇಶದ ಬಹುತೇಕ ಎಲ್ಲ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಸೌಕರ್ಯ ಅಥವಾ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್ ಪ್ರತಿನಿಧಿ ಲಭ್ಯವಿದ್ದಾರೆ ಎಂದರು.

ಇಂದು ಭಾರತದ ಸಾಮಾನ್ಯ ನಾಗರಿಕರು ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಡಿಜಿಟಲ್ ಮೂಲಕ ಸಣ್ಣ ವಹಿವಾಟು ನಡೆಸಲು ಸಾಧ್ಯವಿದೆ ಎಂದು ಅವರು ಹೇಳಿದರು. 100 ವರ್ಷಗಳಲ್ಲಿ ಹಿಂದೆಂದೂ ಕಾಣದಂತಹ ವಿಪತ್ತಿನ ನಡುವೆಯೂ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಗಮವಾಗಿ ಸಾಗಲು ಅಂತಹ ಹಲವು ಸುಧಾರಣೆಗಳು ಕಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು.

“ಪ್ರಪಂಚದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ತಮ್ಮ ನಾಗರಿಕರಿಗೆ ಸಹಾಯವನ್ನು ಒದಗಿಸಲು ಹೆಣಗಾಡುತ್ತಿರುವಾಗ, ಭಾರತ ದೇಶವು ಪ್ರತಿಯೊಂದು ವರ್ಗದವರಿಗೂ ತ್ವರಿತಗತಿಯಲ್ಲಿ ನೇರ ಸಹಾಯ ಮಾಡಿತು” ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಕ್ರಮಗಳು ವಿಮೆ, ಬ್ಯಾಂಕ್ ಸಾಲಗಳು ಮತ್ತು ಅರ್ಥಿಕ ಸಬಲೀಕರಣದಂತಹ ಸೌಲಭ್ಯಗಳನ್ನು ಬಡವರು, ಮಹಿಳೆಯರು, ಬೀದಿ ವ್ಯಾಪಾರಿಗಳು ಮತ್ತು ಸಣ್ಣ ರೈತರಿಗೆ ಹೆಚ್ಚಿನ ಹಿಂದುಳಿದ ವರ್ಗಕ್ಕೆ ತೆಗೆದುಕೊಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಹಿಂದೆ ಯಾವುದೇ ಮಹತ್ವದ ರೀತಿಯಲ್ಲಿ ಬ್ಯಾಂಕಿಂಗ್ ದೇಶದ ಮಹಿಳೆಯರನ್ನು ತಲುಪಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಇದನ್ನು ತಮ್ಮ ಸರ್ಕಾರ ಆದ್ಯತೆಯಾಗಿ ತೆಗೆದುಕೊಂಡಿದೆ ಎಂದು ಹೇಳಿದರು. ಜನ್ ಧನ್ ಯೋಜನೆಯಡಿ ತೆರೆದಿರುವ ಕೋಟಿಗಟ್ಟಲೆ ಬ್ಯಾಂಕ್ ಖಾತೆಗಳಲ್ಲಿ ಅರ್ಧದಷ್ಟು ಮಹಿಳೆಯರದ್ದೇ ಆಗಿವೆ. “ಈ ಬ್ಯಾಂಕ್ ಖಾತೆಗಳು ಮಹಿಳೆಯರ ಆರ್ಥಿಕ ಸಬಲೀಕರಣದ ಮೇಲೆ ಬೀರುವ ಪರಿಣಾಮವನ್ನು ನಾವು ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ನೋಡಿದ್ದೇವೆ”ಎಂದು ಅವರು ಹೇಳಿದರು.

ಠೇವಣಿ ವಿಮೆಯು ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ವಾಣಿಜ್ಯ ಬ್ಯಾಂಕುಗಳಲ್ಲಿನ ಉಳಿತಾಯ, ಸ್ಥಿರ, ಚಾಲ್ತಿ, ನವೀಕರಿಸಬಹುದಾದ ಠೇವಣಿಗಳಂತಹ ಎಲ್ಲ ಠೇವಣಿಗಳನ್ನು ಒಳಗೊಂಡಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ರಾಜ್ಯ, ಕೇಂದ್ರ ಮತ್ತು ಪ್ರಾಥಮಿಕ ಸಹಕಾರಿ ಬ್ಯಾಂಕುಗಳಲ್ಲಿನ ಠೇವಣಿಗಳನ್ನೂ ಸಹ ಒಳಗೊಂಡಿದೆ. ಮಹತ್ವದ ಸುಧಾರಣೆಯೊಂದರಲ್ಲಿ ಬ್ಯಾಂಕ್ ಠೇವಣಿ ವಿಮಾ ಯೋಜನೆಯ ವ್ಯಾಪ್ತಿಯನ್ನು 1 ಲಕ್ಷ ರೂ,ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು.

ಪ್ರತಿ ಬ್ಯಾಂಕ್ ನ ಪ್ರತಿಯೊಬ್ಬ ಠೇವಣಿದಾರರಿಗೆ 5 ಲಕ್ಷ ರೂ.ಗಳವರೆಗೆ ಠೇವಣಿ ವಿಮಾ ರಕ್ಷಣೆಯೊಂದಿಗೆ ಹಿಂದಿನ ಹಣಕಾಸು ವರ್ಷದ ಕೊನೆಯಲ್ಲಿ ಸಂರಕ್ಷಿತ ಖಾತೆಗಳ ರಕ್ಷಣೆ ಪ್ರಮಾಣ ಶೇ.98.1ರಷ್ಟಿದೆ. ಅಂತಾರಾಷ್ಟ್ರೀಯ ಮಾನದಂಡ ಶೇ.80ರಷ್ಟಿದೆ.

ಆರ್ ಬಿಐ ನಿಂದ ನಿರ್ಬಂಧಿತವಾಗಿರುವ 16 ನಗರ ಸಹಕಾರಿ ಬ್ಯಾಂಕುಗಳ ಠೇವಣಿದಾರರಿಂದ ಪಡೆದ ಕ್ಲೈಮ್ ಗಳ ವಿರುದ್ಧ ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ ಇತ್ತೀಚೆಗೆ ಮಧ್ಯಂತರ ಪರಿಹಾರದ ಮೂಲಕ ಮೊದಲ ಕಂತನ್ನು ಪಾವತಿಸಲಾಗಿದೆ. 1ಲಕ್ಷಕ್ಕೂ ಅಧಿಕ ಠೇವಣಿದಾರರಿಗೆ ಪರ್ಯಾಯ ಬ್ಯಾಂಕ್ ಖಾತೆಗಳಿಗೆ ಅವರು ಕ್ಲೈಮುಗಳಿಗೆ ವಿರುದ್ಧವಾಗಿ 1300 ಕೋಟಿ ರೂ. ಗಳನ್ನು ಪಾವತಿಸಲಾಗಿದೆ.

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Prime Minister Narendra Modi to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.