ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಉನ್ನತ ಕಂಪನಿಗಳ ಸಿಇಒಗಳೊಂದಿಗೆ ವ್ಯಾಪಾರ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಉಕ್ಕು, ಬ್ಯಾಂಕಿಂಗ್, ಇಂಧನ, ಗಣಿಗಾರಿಕೆ ಮತ್ತು ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಂಪನಿಗಳ ಸಿಇಒಗಳು ಇದರಲ್ಲಿ ಭಾಗವಹಿಸಿದರು. ಆಸ್ಟ್ರೇಲಿಯಾದ ಕೆಲವು ಪ್ರಮುಖ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳೂ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು.
ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸಲು ಸರ್ಕಾರವು ಪ್ರಾರಂಭಿಸಿದ ಹಲವಾರು ಆರ್ಥಿಕ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಇವುಗಳಲ್ಲಿ, ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಮಗ್ರ ವಿಧಾನಕ್ಕಾಗಿ ಮಿಷನ್ ಗತಿ ಶಕ್ತಿ; ಜನ್ ಧನ್-ಆಧಾರ್-ಮೊಬೈಲ್ ಟ್ರಿನಿಟಿ; ರಾಷ್ಟ್ರೀಯ ಶಿಕ್ಷಣ ನೀತಿ; ಹೈಡ್ರೋಜನ್ ಮಿಷನ್ 2050; ಪಿಎಲ್‌ಐ ಯೋಜನೆ; ಬಾಹ್ಯಾಕಾಶ ಮತ್ತು ಜಿಯೋಸ್ಪೇಷಿಯಲ್ ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಮುಕ್ತಗೊಳಿಸುವುದು; ವೈದ್ಯಕೀಯ ಸಾಧನಗಳ ತಯಾರಿಕೆಯ ಹೊಸ ನೀತಿ; ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ, ಇತ್ಯಾದಿಗಳು ಸೇರಿದವು.
ಡಿಜಿಟಲ್ ಮೂಲಸೌಕರ್ಯ, ಐಟಿ, ಫಿನ್‌ಟೆಕ್, ಟೆಲಿಕಾಂ, ಸೆಮಿಕಂಡಕ್ಟರ್‌ಗಳು, ಬಾಹ್ಯಾಕಾಶ, ಹಸಿರು ಹೈಡ್ರೋಜನ್ ಸೇರಿದಂತೆ ನವೀಕರಿಸಬಹುದಾದ ಇಂಧನ, ಶಿಕ್ಷಣ, ಫಾರ್ಮಾ, ಆರೋಗ್ಯ ಸೇರಿದಂತೆ ವೈದ್ಯಕೀಯ ಸಾಧನಗಳ ತಯಾರಿಕೆ, ಗಣಿಗಾರಿಕೆ ಸೇರಿದಂತೆ ಪ್ರಮುಖ ಖನಿಜಗಳು, ಜವಳಿ, ಕೃಷಿ ಮತ್ತು ಆಹಾರ ಸಂಸ್ಕರಣೆ ವಲಯಗಳಲ್ಲಿ ಭಾರತ ಒದಗಿಸುವ ಹೂಡಿಕೆ ಅವಕಾಶಗಳ ಲಾಭ ಪಡೆಯುವಂತೆ ಪ್ರಧಾನಮಂತ್ರಿ ಸಿಇಒಗಳನ್ನು ಆಹ್ವಾನಿಸಿದರು.
ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ರೂಪಿಸುವಂತೆ ಸಿಇಒಗಳನ್ನು ಪ್ರಧಾನಮಂತ್ರಿ ಉತ್ತೇಜಿಸಿದರು.
Interacted with top CEOs during the business roundtable in Sydney. Elaborated on the business opportunities in India and the reform trajectory of our Government. Invited Australian businesses to invest in India. pic.twitter.com/vxxCY3P5ez
— Narendra Modi (@narendramodi) May 24, 2023