ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಯೆನ್ನಾದಲ್ಲಿ ತಮ್ಮ ಗೌರವಾರ್ಥವಾಗಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರನ್ನು ಭಾರತೀಯರು ವಿಶೇಷ ಪ್ರೀತಿ ಮತ್ತು ಅಕ್ಕರೆಯಿಂದ ಸ್ವಾಗತಿಸಿದರು. ಆಸ್ಟ್ರಿಯನ್ ಫೆಡರಲ್ ನ ಕಾರ್ಮಿಕ ಮತ್ತು ಆರ್ಥಿಕ ಸಚಿವ ಶ್ರೀ ಮಾರ್ಟಿನ್ ಕೋಚರ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಸ್ಟ್ರಿಯಾದಾದ್ಯಂತ ನೆಲೆಸಿರುವ ಭಾರತೀಯರು ಭಾಗವಹಿಸುವಿಸಿದ್ದು ವಿಶೇಷವಾಗಿತ್ತು.
ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಭಾರತ ಮತ್ತು ಆಸ್ಟ್ರಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಆ ದೇಶದಲ್ಲಿ ನೆಲೆಸಿರುವ ಭಾರತೀಯರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಎರಡು ಸ್ನೇಹಿತ ರಾಷ್ಟ್ರಗಳು 75 ವರ್ಷಗಳ ರಾಜತಾಂತ್ರಿಕ ಬಾಂಧವ್ಯವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ತಾವು ಈ ದೇಶಕ್ಕೆ ಭೇಟಿ ನೀಡಿರುವುದು ನಿಜವಾಗಿಯೂ ವಿಶೇಷ ಕ್ಷಣ ಎಂದು ಅವರು ಹೇಳಿದರು. ಎರಡು ದೇಶಗಳ ನಡುವೆ ಸಾಮಾನ್ಯವಾಗಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಬಹುತ್ವದ ನೀತಿಗಳನ್ನು ಪ್ರಸ್ತಾಪಿಸಿದ ಅವರು, ಇತ್ತೀಚಿಗೆ ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳ ವಿಸ್ತಾರ, ಪ್ರಮಾಣ ಮತ್ತು ಯಶಸ್ಸಿನ ಬಗ್ಗೆ ಮಾತನಾಡುತ್ತ ತಮಗೆ ಐತಿಹಾಸಿಕ ಮೂರನೇ ಅವಧಿಗೆ ಜನಾದೇಶವನ್ನು ನೀಡುವ ಮೂಲಕ ಭಾರತದ ಜನರು ನಿರಂತರತೆಗಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ಕಳೆದ 10 ವರ್ಷಗಳಲ್ಲಿ ದೇಶವು ಸಾಧಿಸಿರುವ ಪರಿವರ್ತನಾಶೀಲ ಪ್ರಗತಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಹಾದಿಯಲ್ಲಿದ್ದು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಸಿರು ಬೆಳವಣಿಗೆ (ಗ್ರೀನ್ ಗ್ರೋಥ್) ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಆಸ್ಟ್ರಿಯಾ ಭಾರತದ ಉನ್ನತ ಬೆಳವಣಿಗೆಯ ಪಥ ಮತ್ತು ಜಾಗತಿಕವಾಗಿ ಹೆಸರು ಮಾಡಿರುವ ಸ್ಟಾರ್ಟ್-ಅಪ್ ಪರಿಸರವನ್ನು ಉಪಯೋಗಿಸಿಕೊಂಡು ಹೇಗೆ ಭಾರತದೊಂದಿಗೆ ಪಾಲುದಾರನಾಗಬಹುದು ಎಂಬ ಕುರಿತು ಪ್ರಧಾನ ಮಂತ್ರಿಗಳು ಮಾತನಾಡಿದರು. ಭಾರತವು "ವಿಶ್ವಬಂಧು" ವಾಗಿರುವ ಬಗ್ಗೆ ಮತ್ತು ಜಾಗತಿಕ ಪ್ರಗತಿ ಮತ್ತು ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತಿರುವ ಕುರಿತೂ ಅವರು ಮಾತನಾಡಿದರು. ತಾಯ್ನಾಡಿನೊಂದಿಗೆ ತಮ್ಮ ಆಸ್ಟ್ರಿಯಾದಲ್ಲಿ ತಾವು ಏಳಿಗೆ ಕಂಡುಕೊಂಡಿದ್ದರೂ ತಮ್ಮ ತಾಯ್ನಾಡಿನೊಂದಿಗಿನ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುವಂತೆ ಅವರು ಅಲ್ಲಿನ ಭಾರತೀಯರಿಗೆ ಕರೆ ನೀಡಿದರು. ಈ ಹಿನ್ನೆಯಲ್ಲಿ, ಶತಮಾನಗಳಿಂದ ಆಸ್ಟ್ರಿಯಾ ಭಾರತೀಯ ತತ್ವಶಾಸ್ತ್ರ, ಭಾಷೆಗಳು ಮತ್ತು ಚಿಂತನೆಯಲ್ಲಿ ಆಳವಾದ ಬೌದ್ಧಿಕ ಆಸಕ್ತಿ ಹೊಂದಿದೆ ಎಂದು ಅವರು ಪ್ರಸ್ತಾಪಿಸಿದರು.
ಆಸ್ಟ್ರಿಯಾ ಸುಮಾರು 31,000 ಭಾರತೀಯರಿಗೆ ನೆಲೆಯಾಗಿದೆ. ಇವರೆಲ್ಲರೂ ಮುಖ್ಯವಾಗಿ ಆರೋಗ್ಯ ಮತ್ತು ಇತರ ವಲಯಗಳಲ್ಲಿ ಮತ್ತು ವಿವಿಧ UN ಸಂಸ್ಥೆಗಳಲ್ಲಿ ಕೆಲಸ ಮಾಡುವ ವೃತ್ತಿಪರರಾಗಿದ್ದಾರೆ. ಆಸ್ಟ್ರಿಯಾದಲ್ಲಿ ಸುಮಾರು 500 ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
Click here to read full text speech
A significant visit to Austria. pic.twitter.com/7K07bb0Kg7
— PMO India (@PMOIndia) July 10, 2024
Democracy connects India and Austria. pic.twitter.com/OOKCPQx39t
— PMO India (@PMOIndia) July 10, 2024
आज दुनिया के लोग भारत के elections के बारे में सुनकर हैरान रह जाते हैं: PM @narendramodi pic.twitter.com/VQ44fPJk9E
— PMO India (@PMOIndia) July 10, 2024
The relationships between two countries are not built solely by governments. Public participation is crucial in strengthening these ties. pic.twitter.com/VxPJ1BpCN6
— PMO India (@PMOIndia) July 10, 2024
हर कोई भारत के बारे में जानना-समझना चाहता है: PM @narendramodi pic.twitter.com/mvWGw42kQM
— PMO India (@PMOIndia) July 10, 2024
Today, India is working towards being the best, the brightest, achieving the biggest and reaching the highest milestones. pic.twitter.com/sKj1bcGw2x
— PMO India (@PMOIndia) July 10, 2024