ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುಜರಾತ್ ನ ಗಾಂಧೀನಗರದ ಪಂಡಿತ್ ದೀನ್ ದಯಾಳ್ ಪೆಟ್ರೊಲಿಯಂ ವಿಶ್ವ ವಿದ್ಯಾಲಯದ 8 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅದರ ಗೌರವವನ್ನು ಹೆಚ್ಚಿಸಿದರು. 45 ಮೆಗಾವ್ಯಾಟ್ ಸಾಮರ್ಥ್ಯದ ‘ಮೊನೊಕ್ರಿಸ್ಟಲೈನ್ ಸೋಲಾರ್ ಫೊಟೊ ವೋಲ್ಟೇಕ್ ಪ್ಯಾನೆಲ್’ ಮತ್ತು ‘ಜಲತಂತ್ರಜ್ಞಾನದ ಉತ್ಕೃಷ್ಟ ಕೇಂದ್ರಕ್ಕೆ’ ಅಡಿಗಲ್ಲು ಸಮಾರಂಭ ನೆರವೇರಿಸಿದರು. ವಿಶ್ವವಿದ್ಯಾಲಯದಲ್ಲಿ ‘ಆವಿಷ್ಕಾರ ಮತ್ತು ವಿಕಾಸ ಕೇಂದ್ರ – ತಂತ್ರಜ್ಞಾನ ವ್ಯಾಪಾರ ವಿಕಾಸ ಕೇಂದ್ರ’, ‘ತರ್ಜುಮೆ ಮಾಡಬಹುದಾದ ಸಂಶೋಧನಾ ಕೇಂದ್ರ’ ಮತ್ತು ‘ಕ್ರೀಡಾ ಸಂಕೀರ್ಣವನ್ನು’ ಕೂಡಾ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು ವಿಶ್ವ ಇಂಥ ದೊಡ್ಡ ಸಂದಿಗ್ಧತೆಯನ್ನು ಎದುರಿಸುತ್ತಿರುವಾಗ ಪದವಿ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಈ ಸವಾಲುಗಳಿಗಿಂತ ನಿಮ್ಮ ಸಾಮರ್ಥ್ಯ ಅತ್ಯಂತ ಬೃಹತ್ ಪ್ರನಾಣದ್ದು ಎಂದು ಹೇಳಿದರು. ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ವಿಶ್ವದೆಲ್ಲೆಡೆ ಇಂಧನ ವಲಯದಲ್ಲಿ ಪ್ರಮುಖ ಬದಲಾವಣೆಗಳಾಗುತ್ತಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳು ಉದ್ಯಮಕ್ಕೆ ಕಾಲಿಡುತ್ತಿದ್ದಾರೆ ಎಂದೂ ಕೂಡಾ ಅವರು ಹೇಳಿದರು
ಈ ರೀತಿ ಇಂದು ಭಾರತದ ಇಂಧನ ಕ್ಷೇತ್ರ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಉದ್ಯೋಗಕ್ಕೆ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. ಇಂದು ದೇಶ ಇಂಗಾಲದ ಪ್ರಮಾಣವನ್ನು 30-35% ರಷ್ಟು ತಗ್ಗಿಸುವ ಗುರಿಯತ್ತ ಸಾಗಿದೆ ಮತ್ತು ಈ ದಶಕದಲ್ಲಿ ನಮ್ಮ ಇಂಧನ ಅವಶ್ಯಕತೆಯಲ್ಲಿ ನೈಸರ್ಗಿಕ ಅನಿಲದ ಪಾಲುದಾರಿಕೆಯನ್ನು 4 ಪಟ್ಟು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಘೋಷಿಸಿದರು. ಮುಂದಿನ 5 ವರ್ಷಗಳಲ್ಲಿ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಕೆಲಸ ಮುಂದುವರಿದಿದೆ, ಇಂಧನ ಭದ್ರತೆ ಸಂಬಂಧಿಸಿದ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಮತ್ತು ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೋಸ್ಕರ ಒಂದು ನಿಧಿಯನ್ನು ರಚಿಸಲಾಗಿದೆ ಎಂದು ಪ್ರಧಾನಮಂತ್ರಿಗಳು ಮಾಹಿತಿ ನೀಡಿದರು
ಜೀವನಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಳ್ಳುವಂತೆ ಪ್ರಧಾನಮಂತ್ರಿಗಳು ವಿದ್ಯಾರ್ಥಿಗಳನ್ನು ಕೇಳಿದರು. ಯಶಸ್ವಿ ಜನರಿಗೆ ಸಮಸ್ಯೆಗಳು ಇಲ್ಲ ಎಂದಲ್ಲ, ಆದರೆ ಯಾರು ಸವಾಲುಗಳನ್ನು ಸ್ವೀಕರಿಸುತ್ತಾರೋ ಅವುಗಳನ್ನು ಎದುರಿಸುತ್ತಾರೆ, ಸದೆಬಡಿಯುತ್ತಾರೆ ಮತ್ತು ಮೆಟ್ಟಿ ನಿಲ್ಲುತ್ತಾರೆ, ಪರಿಹರಿಸಿಕೊಳ್ಳುತ್ತಾರೆಯೋ ಅವರು ಯಶಸ್ಸು ಗಳಿಸುತ್ತಾರೆ. ಯಾರು ಸವಾಲುಗಳನ್ನು ಸ್ವೀಕರಿಸುತ್ತಾರೋ ಅವರೇ ಜೀವನದಲ್ಲಿ ಯಶಸ್ವಿಯಾಗುತ್ತಾರೆ. 1922-47 ರ ಅವಧಿಯ ಯುವಜನತೆ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು ಎಂದು ಅವರು ಹೇಳಿದರು. ದೇಶಕ್ಕಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಆಗ್ರಹಿಸಿದ ಅವರು ಸ್ವಾವಲಂಬಿ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮತ್ತು ಜವಾಬ್ದಾರಿಯುತ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತೆ ಹೇಳಿದರು.
ಜವಾಬ್ದಾರಿಯ ಪ್ರಜ್ಞೆಯಲ್ಲಿಯೇ ಯಶಸ್ಸಿನ ಮೂಲವಡಗಿದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿಗಳು ಜವಾಬ್ದಾರಿಯ ಪ್ರಜ್ಞೆ ಜೀವನದ ಉದ್ದೇಶವಾಗಿ ಪರಿವರ್ತನೆಯಾಗಬೇಕು ಎಂದು ಹೇಳಿದರು. ಇಂಥ ಜನರೇ ಜೀವನದಲ್ಲಿ ಯಶಸ್ವಿಯಾಗುತ್ತಾರೆ, ಜವಾಬ್ದಾರಿಯ ಪ್ರಜ್ಞೆ ಮೂಡುವಂತೆ ಏನನ್ನಾದರೂ ಮಾಡುತ್ತಾರೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಜೀವನದಲ್ಲಿ ಒತ್ತಡದಲ್ಲಿದ್ದೇವೆ ಎಂಬ ಭಾವನೆಯಿಂದ ಜೀವಿಸುವವರು ವಿಫಲರಾಗುತ್ತಾರೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಜವಾಬ್ದಾರಿಯ ಪ್ರಜ್ಞೆ ಅವಕಾಶದ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಕೂಡಾ ಅವರು ಹೇಳಿದರು. ಭಾರತ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಯುವ ಪದವೀಧರರು ಬದ್ಧತೆಯೊಂದಿಗೆ ಮುಂದುವರಿಯಬೇಕು ಎಂದು ಅವರು ಹೇಳಿದರು. ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆಯೂ ಅವರು ಒತ್ತು ನೀಡಿದರು.
ಪ್ರಸ್ತುತ ಪೀಳಿಗೆ 21 ನೇ ಶತಮಾನದ ಯುವಜನತೆಯನ್ನು ಸ್ವಚ್ಛ ವಾತಾವರಣದೊಂದಿಗೆ ಮುಂದುವರಿಯಿರಿ ಎಂದು ಪ್ರಧಾನಮಂತ್ರಿಗಳು ಆಗ್ರಹಿಸಿದರು. ಸ್ವಚ್ಛ ವಾತಾವರಣ ಮತ್ತು ಸ್ವಚ್ಛ ಹೃದಯ ಎಂದರೆ ಸ್ಪಷ್ಟ ಉದ್ದೇಶಗಳು ಎಂದರ್ಥ.21 ನೇ ಶತಮಾನದಲ್ಲಿ ಭಾರತದ ಮೇಲೆ ವಿಶ್ವದ ಆಶಯಗಳು ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ ಮತ್ತು ಭಾರತದ ಆಶಯಗಳು ಮತ್ತು ನಿರೀಕ್ಷೆಗಳು ವಿದ್ಯಾರ್ಥಿಗಳು ಹಾಗೂ ವೃತ್ತಿಪರರ ಮೇಲೆ ಆಧರಿಸಿವೆ ಎಂದು ಅವರು ಸೂಚಿಸಿದರು
आज आप ऐसे समय में इंडस्ट्री में कदम रख रहे हैं, जब pandemic के चलते पूरी दुनिया के Energy sector में भी बड़े बदलाव हो रहे हैं।
— PMO India (@PMOIndia) November 21, 2020
ऐसे में आज भारत में Energy Sector में Growth की,
Entrepreneurship की, Employment की, असीम संभावनाएं हैं: PM
आज देश अपने carbon footprint को 30-35% तक कम करने का लक्ष्य लेकर आगे बढ़ रहा है।
— PMO India (@PMOIndia) November 21, 2020
प्रयास है कि इस दशक में अपनी ऊर्जा ज़रूरतों में Natural Gas की हिस्सेदारी को हम 4 गुणा तक बढ़ाएं: PM
एक ऐसे समय में graduate होना जब दुनिया इतने बड़े संकट से जूझ रही है,ये कोई आसान बात नहीं है।
— PMO India (@PMOIndia) November 21, 2020
लेकिन आपकी क्षमताएँ इन चुनौतियों से कहीं ज्यादा बड़ी हैं।
Problems क्या हैं, इससे ज्यादा महत्वपूर्ण ये है कि आपका purpose क्या है, आपकी Preference क्या है और आपका plan क्या है?: PM
ऐसा नहीं है कि सफल व्यक्तियों के पास समस्याएं नहीं होतीं,
— PMO India (@PMOIndia) November 21, 2020
लेकिन जो चुनौतियों को स्वीकार करता है, उनका मुकाबला करता है, उन्हें हराता है, समस्याओं का समाधान करता है, वो सफल होता है: PM
आप देखिए जीवन में वही लोग सफल होते है, वही लोग कुछ कर दिखाते है जिनके जीवन में Sense of Responsibility का भाव होता है। विफल वो होते है जो Sense of Burden में जीते है।
— PMO India (@PMOIndia) November 21, 2020
Sense of Responsibility का भाव व्यक्ति के जीवन में Sense of Opportunity को भी जन्म देता है: PM
आज की जो पीढ़ी है, 21वीं सदी का जो युवा है, उसको एक Clean Slate के साथ आगे बढ़ना होगा।
— PMO India (@PMOIndia) November 21, 2020
कुछ लोंगों के मन में ये जो पत्थर की लकीर बनी हुई है, कि कुछ बदलेगा नहीं, उस लकीर को Clean करना होगा।
और Clean Heart... Clean Heart मतलब साफ नीयत: PM
21वीं सदी में दुनिया की आशाएं और अपेक्षाएं भारत से हैं और भारत की आशा और अपेक्षा आपके साथ जुड़ी हैं।
— PMO India (@PMOIndia) November 21, 2020
हमें तेज गति से चलना ही होगा, आगे बढ़ना ही होगा: PM