Steps are being taken to double farmers' income by 2022: PM
Our efforts are on modernizing the agriculture sector by incorporating latest technology: PM Modi
Govt is focussing on promoting agricultural technology-based startups: PM Modi

ವಿಡಿಯೋ ಕಾನ್ಫೆರೆನ್ಸ್ ಮೂಲಕ ಇಂದು ಪ್ರಧಾನ ಮಂತ್ರಿಯವರು ಗುಜರಾತ್ ನ ಗಾಂಧಿನಗರದಲ್ಲಿ ಆಯೋಜಿಸಿರುವ 3 ನೇ ಜಾಗತಿಕ ಆಲೂಗಡ್ಡೆ ಸಮಾವೇಶ ಉದ್ದೇಶಿಸಿ ಮಾತನಾಡಿದರು ಹಿಂದಿನ 2 ಜಾಗತಿಕ ಆಲೂಗಡ್ಡೆ ಸಮಾವೇಶಗಳನ್ನು 1999 ಮತ್ತು 2008 ರಲ್ಲಿ ಆಯೋಜಿಸಲಾಗಿತ್ತು. ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕೇಂದ್ರ ಆಲೂಗಡ್ಡೆ ಸಂಶೋಧನಾ ಸಂಸ್ಥೆ (ಐಸಿಎಆರ್), ಶಿಮ್ಲಾ ಹಾಗೂ ಪೆರುವಿನ ಲಿಮಾದ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರ (ಸಿಐಪಿ) ಸಹಭಾಗಿತ್ವದಲ್ಲಿ ಭಾರತೀಯ ಆಲೂಗಡ್ಡೆ ಸಂಶೋಧನ ಸಂಸ್ಥೆ ಈ ಸಮಾವೇಶವನ್ನು ಆಯೋಜಿಸುತ್ತಿದೆ.    

ಆಹಾರ ಮತ್ತು ಪೌಷ್ಟಿಕಾಂಶದ ಬೇಡಿಕೆಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಮುಂದಿನ ಕೆಲ ದಿನಗಳ ಕಾಲ ಚರ್ಚಿಸಲು ವಿಜ್ಞಾನಿಗಳು, ಆಲೂಗಡ್ಡೆ ಬೆಳೆಗಾರರು ಮತ್ತು ಪಾಲುದಾರರು ಜಾಗತಿಕ ಆಲೂಗಡ್ಡೆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.   

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು ಅಗ್ರಿ ಎಕ್ಸ್ ಪೊ ಮತ್ತು ಆಲೂಗಡ್ಡೆ ಕ್ಷೇತ್ರ ದಿನ ಒಟ್ಟಿಗೇ ಜರುಗುತ್ತಿರುವುದು ಈ 3 ನೇ ಸಮಾವೇಶದ ಪ್ರಮುಖ ಆಕರ್ಷಣೆಯಾಗಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಕ್ಷೇತ್ರ ದಿನದಂದು ಸುಮಾರು 6 ಸಾವಿರ ರೈತರು ಭೇಟಿ ನೀಡುತ್ತಿರುವುದು ಶ್ಲಾಘನೀಯ ಪ್ರಯತ್ನ ಎಂದು ಅವರು ಹೇಳಿದರು.

ದೇಶದಲ್ಲಿ ಆಲೂಗಡ್ಡೆ ಉತ್ಪಾದನೆ ಮತ್ತು ಉತ್ಪಾದಕತೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಗುಜರಾತ್ ನಲ್ಲಿ ಜಾಗತಿಕ ಆಲೂಗಡ್ಡೆ ಸಮಾವೇಶವನ್ನು ಆಯೋಜಿಸಿರುವುದು ಗಮನಾರ್ಹ ವಿಷಯವಾಗಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಕಳೆದ 11 ವರ್ಷಗಳಲ್ಲಿ ಭಾರತದಲ್ಲಿ ಆಲೂಗಡ್ಡೆ ಬೆಳೆಯುವ ಕ್ಷೇತ್ರದ ವ್ಯಾಪ್ತಿ ಶೇಕಡಾ 20 ರಷ್ಟು ವೃದ್ಧಿಸಿದ್ದರೆ ಗುಜರಾತ್ ವೊಂದರಲ್ಲೇ 170% ರಷ್ಟು ವೃದ್ಧಿಸಿದೆ ಎಂದು ತಿಳಿಸಿದರು.   

ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಬಳಸುವುದರಿಂದಾಗಿ ಹಾಗೂ ಅತ್ಯುತ್ತಮ ಶೀತಲ ಗೃಹ ಸೌಲಭ್ಯಗಳು ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಸಂಪರ್ಕ ಕಲ್ಪಿಸಿರುವುದರಿಂದಾಗಿ ರಾಜ್ಯ ಆಧುನಿಕ ಕೃಷಿ ಪದ್ಧತಿಗಳ ಬಳಕೆಗೆ ಹೆಚ್ಚಿನ ನೀತಿ ನಿಯಮಗಳು ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಇಂದು ಗುಜರಾತ್ ನಲ್ಲಿ ಹೆಚ್ಚಿನ ಆಲೂಗಡ್ಡೆ ಸಂಸ್ಕರಣಾ ಕಂಪನಿಗಳಿವೆ ಮತ್ತು ಹೆಚ್ಚಿನ ರಫ್ತುದಾರರು ಗುಜರಾತ್ ನಲ್ಲಿ ನೆಲೆಸಿದ್ದಾರೆ. ಈ ಕಾರಣಗಳಿಂದಾಗಿ ದೇಶದಲ್ಲೇ ಗುಜರಾತ್ ಪ್ರಮುಖ ಆಲೂಗಡ್ಡೆ ಕೇಂದ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ.   

2022 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವತ್ತ ಸರ್ಕಾರ ದಾಪುಗಾಲಿಟ್ಟಿದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ರೈತರ ಶ್ರಮ ಮತ್ತು ಸರ್ಕಾರದ ನೀತಿಗಳಿಂದಾಗಿ ಭಾರತ ಇಂದು ಸಿರಿಧಾನ್ಯಗಳು ಮತ್ತು ಇತರ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಭಾರತ 3 ನೇ ಸ್ಥಾನ ಪಡೆದಿದೆ ಎಂದು ಕೂಡಾ ಹೇಳಿದರು. ಆಹಾರ ಸಂಸ್ಕರಣಾ ಉದ್ಯಮಗಳನ್ನು ಪ್ರೋತ್ಸಾಹಿಸಲು 100% ವಿದೇಶಿ ನೇರ ಬಂಡವಾಳ ಹೂಡಿಕೆ, ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ ಮೂಲಕ ಮೌಲ್ಯವರ್ಧನೆ ಮತ್ತು ಮೌಲ್ಯಯುತ ಸರಪಳಿ ಅಭಿವೃದ್ಧಿ ಹೀಗೆ ಪ್ರತಿ ಹಂತದಲ್ಲೂ ತಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿದರು.     

ಈ ತಿಂಗಳ ಆರಂಭದಲ್ಲಿ  ನೇರ ವರ್ಗಾವಣೆ ಮೂಲಕ 6 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ರೂ. 12,000 ಕೋಟಿ ಪಾವತಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಲಾಗಿದೆ ಎಂದೂ ಸಹ ಪ್ರಧಾನ ಮಂತ್ರಿಯವರು ಹೇಳಿದರು. ರೈತರು ಮತ್ತು ಗ್ರಾಹಕರ ಮಧ್ಯೆ ಮಧ್ಯವರ್ತಿಗಳನ್ನು ಕಡಿಮೆಗೊಳಿಸುವುದು ತಮ್ಮ ಸರ್ಕಾರದ ಆದ್ಯತೆ ಎಂದು ಅವರು ಉಲ್ಲೇಖಿಸಿದರು. ನೈಪುಣ್ಯತೆಯುಕ್ತ ಮತ್ತು ನಿಖರ ಕೃಷಿ ಕೈಗೊಳ್ಳಲು ರೈತರ ದತ್ತಾಂಶ ಹಾಗೂ ಕೃಷಿ ಸರಕುಗಳ ವಿವರಗಳನ್ನು ಬಳಸಿಕೊಳ್ಳಲು ಕೃಷಿ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸುವಲ್ಲಿ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಅವರು ತಿಳಿಸಿದರು.

ಆಧುನಿಕ ಜೈವಿಕ ತಂತ್ರಜ್ಞಾನ, ಬ್ಲಾಕ್ ಚೈನ್, ಡ್ರೋನ್ ತಂತ್ರಜ್ಞಾನ ಬಳಸಿ ಕೃಷಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಪ್ರಧಾನ ಮಂತ್ರಿಯವರು ವಿಜ್ಞಾನಿಗಳನ್ನು ಕೋರಿದ್ದಾರೆ.  ಹಸಿವು ಅಥವಾ ಅಪೌಷ್ಟಿಕತೆಯಿಂದ ಯಾರೂ ಬಳಲಬಾರದು ಎಂಬುದು ವೈಜ್ಞಾನಿಕ ಸಮುದಾಯ ಮತ್ತು ನೀತಿ ನಿರೂಪಕರ ಹೊಣೆಯಾಗಿದೆ ಎಂದು ಅವರು ಹೇಳಿದರು.  

ಹಿನ್ನೆಲೆ:

ಆಲೂಗಡ್ಡೆ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ವರೂ ಒಗ್ಗೂಡಿ ಭವಿಷ್ಯದ ಯೋಜನೆಗಳನ್ನು ರೂಪಿಸಲು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು 3 ನೇ ಜಾಗತಿಕ ಆಲೂಗಡ್ಡೆ ಸಮಾವೇಶ ಎಲ್ಲ ಸಹಭಾಗಿಗಳನ್ನು ಒಗ್ಗೂಡಿಸುವ ಅವಕಾಶವನ್ನು ಕಲ್ಪಿಸಿದೆ.  ಆಲೂಗಡ್ಡೆ ಸಂಶೋಧನೆಯಲ್ಲಿ ಪರಿಣಿತಿ ಮತ್ತು ನಾವೀನ್ಯತೆ ಹೊಂದಿರುವವರಿಗೆ ದೇಶದ ವಿವಿಧ ಪಾಲುದಾರರನ್ನು ಪರಿಚಯಿಸಲು ಇದು ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಈ ಬೃಹತ್ ಸಮಾವೇಶ 3 ಪ್ರಮುಖ ಅಂಶಗಳನ್ನು ಒಳಗೊಂಡಿದೆ:  1) ಆಲೂಗಡ್ಡೆ ಸಮಾವೇಶ 2) ಕೃಷಿ ಎಕ್ಸ್ ಪೊ ಮತ್ತು 3) ಆಲೂಗಡ್ಡೆ ಕ್ಷೇತ್ರ ದಿನ

2020 ರ ಜನವರಿ 28- 30 ರವರೆಗೆ 3 ದಿನಗಳ ಕಾಲ  ಆಲೂಗಡ್ಡೆ ಸಮಾವೇಶ ನಡೆಯುವುದು. ಇದರಲ್ಲಿ 10 ವಿಚಾರಗಳಿದ್ದು ಅವುಗಳಲ್ಲಿ 8 ಮೂಲ ಮತ್ತು ಸಂಶೋಧನೆಗಳನ್ನು ಆಧರಿಸಿದ್ದಾಗಿವೆ. ಉಳಿದ 2 ವಿಷಯಗಳು ಆಲೂಗಡ್ಡೆ ವ್ಯಾಪಾರ, ಮೌಲ್ಯವರ್ಧನಾ ಸರಪಳಿ ನಿರ್ವಹಣೆ ಮತ್ತು ನೀತಿಗೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಿರುತ್ತವೆ. 

ಆಲೂಗಡ್ಡೆ ಆಧಾರಿತ ಉದ್ಯಮಗಳ ಸ್ಥಿತಿ ಮತ್ತು ವ್ಯಾಪಾರ, ಸಂಸ್ಕರಣೆ, ಆಲೂಗಡ್ಡೆ ಬೀಜೋತ್ಪಾದನೆ, ಜೈವಿಕ ತಂತ್ರಜ್ಞಾನ, ತಂತ್ರಜ್ಞಾನ ಹಂಚಿಕೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮತ್ತು ರೈತರ ಉತ್ಪನ್ನಗಳು ಇತ್ಯಾದಿಗಳನ್ನು ಪ್ರದರ್ಶಿಸಲು  2020 ರ ಜನವರಿ 28- 30 ರವರೆಗೆ ಕೃಷಿ ಎಕ್ಸ್ ಪೊ ಆಯೋಜಿಸಲಾಗಿದೆ.

2020 ರ ಜನವರಿ 31 ರಂದು ಆಲೂಗಡ್ಡೆ ಕ್ಷೇತ್ರ ದಿನವನ್ನು ಹಮ್ಮಿಕೊಳ್ಳಲಾಗಿದೆ. ವಿಭಿನ್ನ ಆಲೂಗಡ್ಡೆ ತಳಿಗಳು, ಯಾತ್ರೀಕರಣ ಮತ್ತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಕುರಿತಾದ ಪ್ರದರ್ಶನವನ್ನೂ ಇದು ಒಳಗೊಂಡಿದೆ.

ಉತ್ಪಾದನೆ ಮತ್ತು ಅಧಿಕೃತ ಬೀಜಗಳ ಬಳಕೆಗೆ, ದೂರದ ಸಾಗಾಣಿಕೆ ಮತ್ತು ರಫ್ತು ಪ್ರೋತ್ಸಾಹಕ್ಕೆ ಪ್ರಮುಖ ಸಮಸ್ಯೆಗಳಾದ ನಾಟಿ ಮಾಡುವ ಸಾಮಗ್ರಿ ಕೊರತೆ, ಸರಬರಾಜು ಸರಪಳಿ, ಕಟಾವು ನಂತರದ ನಷ್ಟಗಳು, ಹೆಚ್ಚುವರಿ ಸಂಸ್ಕರಣೆ ಅವಶ್ಯಕತೆಗಳು, ರಫ್ತು ಹಾಗೂ ವೈವಿಧ್ಯಮಯ ಬಳಕೆ ಮತ್ತು ಅವಶ್ಯಕ ನೀತಿ ಸಹಕಾರವನ್ನು ಸರಿಪಡಿಸಬೇಕಾಗಿದೆ.     

 

 

 

 

 

 

 

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones