"ಕಾಶಿಯು ಜ್ಞಾನ, ಕರ್ತವ್ಯ ಮತ್ತು ಸತ್ಯದ ನಿಧಿ ಎಂದು ಹೆಸರುವಾಸಿಯಾಗಿದೆ. ಇದು ನಿಜವಾಗಿಯೂ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯಾಗಿದೆ"
"ಭಾರತದಲ್ಲಿ ನಾವು ನಮ್ಮ ಅನಂತ ಮತ್ತು ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆ ಹೊಂದಿದ್ದೇವೆ. ನಮ್ಮ ಅಮೂರ್ತ ಸಾಂಸ್ಕೃತಿಕ ಪರಂಪರೆಗೆ ನಾವು ಹೆಚ್ಚಿನ ಮೌಲ್ಯವನ್ನು ನೀಡುತ್ತೇವೆ"
'ಯುಗೆ ಯುಗೀನ್‌ ಭಾರತ್‌' ರಾಷ್ಟ್ರೀಯ ವಸ್ತುಸಂಗ್ರಹಾಲಯವು ಪೂರ್ಣಗೊಂಡ ನಂತರ 5,000 ವರ್ಷಗಳ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾಗಿ ನಿಲ್ಲುತ್ತದೆ
"ಸ್ಪಷ್ಟ ಪರಂಪರೆಯು ಭೌತಿಕ ಮೌಲ್ಯ ಮಾತ್ರವಲ್ಲ, ಅದು ರಾಷ್ಟ್ರದ ಇತಿಹಾಸ ಮತ್ತು ಹೆಗ್ಗುರುತಾಗಿದೆ"
"ಪರಂಪರೆಯು ಆರ್ಥಿಕ ಬೆಳವಣಿಗೆ ಮತ್ತು ವೈವಿಧ್ಯೀಕರಣಕ್ಕೆ ಪ್ರಮುಖ ಆಸ್ತಿಯಾಗಿದೆ, ಮತ್ತು ಇದು ಭಾರತದ 'ವಿಕಾಸ್ ಭಿ ವಿರಾಸತ್ ಭಿ' ಮಂತ್ರದಲ್ಲಿ ಪ್ರತಿಧ್ವನಿಸುತ್ತದೆ"
"ಭಾರತದ ರಾಷ್ಟ್ರೀಯ ಡಿಜಿಟಲ್ ಜಿಲ್ಲಾ ಭಂಡಾರವು ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಮರುಶೋಧಿಸಲು ಸಹಾಯ ಮಾಡುತ್ತಿದೆ"
"ಕಾರ್ಯ ಪಡೆಯು ʻಕಲ್ಚರ್‌ʼ(ಸಂಸ್ಕೃತಿ), ʻಕ್ರಿಯೇಟಿವಿಟಿʼ(ಸೃಜನಶೀಲತೆ), ʻಕಾಮರ್ಸ್‌ʼ(ವಾಣಿಜ್ಯ) ಮತ್ತು ʻಕಲ್ಯಾಬರೇಷನ್‌ʼ(ಸಹಯೋಗ) ಎಂಬ ನಾಲ್ಕು ʻಸಿʼಗಳ ಮಹ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ʻಜಿ 20 ಸಂಸ್ಕೃತಿ ಸಚಿವರ ಸಭೆʼಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಿದರು.

ಕಾಶಿ ಎಂದೂ ಕರೆಯಲ್ಪಡುವ ವಾರಣಾಸಿಗೆ ಗಣ್ಯರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ನಗರವು ತಮ್ಮ ಸಂಸದೀಯ ಕ್ಷೇತ್ರವಾಗಿರುವುದರಿಂದ ʻಜಿ 20 ಸಂಸ್ಕೃತಿ ಸಚಿವರ ಸಭೆʼ ಇಲ್ಲಿ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕಾಶಿಯನ್ನು ಅತ್ಯಂತ ಹಳೆಯ ಜೀವಂತ ನಗರಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಭಗವಾನ್ ಬುದ್ಧ ತನ್ನ ಮೊದಲ ಧರ್ಮೋಪದೇಶ ನೀಡಿದ ಸಾರನಾಥ ಪಟ್ಟಣವನ್ನು ಉಲ್ಲೇಖಿಸಿದರು. "ಕಾಶಿಯು ಜ್ಞಾನ, ಕರ್ತವ್ಯ ಮತ್ತು ಸತ್ಯದ ಭಂಡಾರವೆಂದು ಹೆಸರುವಾಸಿಯಾಗಿದೆ ಮತ್ತು ಇದು ನಿಜವಾಗಿಯೂ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯಾಗಿದೆ," ಎಂದು ಪ್ರಧಾನಿ ಹೇಳಿದರು. ಇದE ವೇಳೆ, ಗಂಗಾ ಆರತಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವಂತೆ, ಸಾರನಾಥಕ್ಕೆ ಭೇಟಿ ನೀಡುವಂತೆ ಹಾಗೂ ಬಾಯಲ್ಲಿ ನೀರೂರಿಸುವ ಕಾಶಿಯ ಭಕ್ಷ್ಯಗಳ ಸವಿಯನ್ನು ಅನುಭವಿಸುವಂತೆ ಅತಿಥಿಗಳಿಗೆ ಸಲಹೆ ನೀಡಿದರು.

ವೈವಿಧ್ಯಮಯ ಹಿನ್ನೆಲೆ ಮತ್ತು ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮನ್ನು ಒಗ್ಗೂಡಿಸಲು ಹಾಗೂ ಪರಸ್ಪರ ಅರಿತುಕೊಳ್ಳಲು ಅನುವು ಮಾಡಿಕೊಡುವ ಸಂಸ್ಕೃತಿಯ ಅಂತರ್ಗತ ಸಾಮರ್ಥ್ಯವನ್ನು ಒತ್ತಿ ಹೇಳಿದ ಪ್ರಧಾನಿ, ʻಜಿ 20ʼ ಸಂಸ್ಕೃತಿ ಸಚಿವರ ಕಾರ್ಯಪಡೆಯ ಕೆಲಸವು ಇಡೀ ಮಾನವಕುಲಕ್ಕೆ ಅಪಾರ ಮಹತ್ವದ್ದಾಗಿದೆ ಎಂದು ಹೇಳಿದರು.

"ಭಾರತದಲ್ಲಿ ನಾವು ನಮ್ಮ ಅನಂತ ಮತ್ತು ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ನಮ್ಮ ಅಮೂರ್ತ ಸಾಂಸ್ಕೃತಿಕ ಪರಂಪರೆಗೂ ನಾವು ಹೆಚ್ಚಿನ ಮೌಲ್ಯವನ್ನು ನೀಡುತ್ತೇವೆ", ಎಂದು ಶ್ರೀ ಮೋದಿ ಹೇಳಿದರು. ಭಾರತವು ತನ್ನ ಪಾರಂಪರಿಕ ತಾಣಗಳನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿದೆ ಎಂದು ಒತ್ತಿ ಹೇಳಿದರು. ದೇಶದ ಸಾಂಸ್ಕೃತಿಕ ಸ್ವತ್ತುಗಳು ಮತ್ತು ಕಲಾವಿದರನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಗುರುತಿಸುತ್ತಿರುವುದನ್ನು ಅವರು ಉಲ್ಲೇಖಿಸಿದರು. ಭಾರತದ ಸಂಸ್ಕೃತಿಯನ್ನು ಆಚರಿಸಲು ಹಲವಾರು ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು. ದೇಶದ ವಿವಿಧ ಭಾಗಗಳಲ್ಲಿರುವ ಭಾರತದ ಬುಡಕಟ್ಟು ಸಮುದಾಯಗಳ ರೋಮಾಂಚಕ ಸಂಸ್ಕೃತಿಯನ್ನು ಪ್ರದರ್ಶಿಸುವ ಬುಡಕಟ್ಟು ವಸ್ತುಸಂಗ್ರಹಾಲಯಗಳ ಉದಾಹರಣೆಯನ್ನು ಅವರು ನೀಡಿದರು. ನವದೆಹಲಿಯ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಒಂದು ಪ್ರಯತ್ನವಾಗಿದೆ ಎಂದರು. 'ಯುಗೆ ಯುಗೀನ್ ಭಾರತ್' ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು, ಇದು ಪೂರ್ಣಗೊಂಡ ನಂತರ 5,000 ವರ್ಷಗಳ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾಗಿ ನಿಲ್ಲುತ್ತದೆ ಎಂದು ಮಾಹಿತಿ ನೀಡಿದರು.

ಸಾಂಸ್ಕೃತಿಕ ಆಸ್ತಿಯ ಮರುಸ್ಥಾಪನೆಯ ಮಹತ್ವದ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕಾರ್ಯ ಪಡೆಯ ಪ್ರಯತ್ನಗಳನ್ನು ಸ್ವಾಗತಿಸಿದರು. ಸ್ಪಷ್ಟ ಪರಂಪರೆಯು ಭೌತಿಕ ಮೌಲ್ಯ ಮಾತ್ರವಲ್ಲ, ಅದು ರಾಷ್ಟ್ರದ ಇತಿಹಾಸ ಮತ್ತು ಹೆಗ್ಗುರುತಾಗಿದೆ ಎಂದರು. "ಪ್ರತಿಯೊಬ್ಬರಿಗೂ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಹೊಂದುವ ಮತ್ತು ಆನಂದಿಸುವ ಹಕ್ಕಿದೆ" ಎಂದು ಶ್ರೀ ಮೋದಿ ಹೇಳಿದರು. 2014ರಿಂದ, ಭಾರತವು ತನ್ನ ಪ್ರಾಚೀನ ನಾಗರಿಕತೆಯ ವೈಭವವನ್ನು ಪ್ರದರ್ಶಿಸುವ ಇಂತಹ ನೂರಾರು ಕಲಾಕೃತಿಗಳನ್ನು ಮರಳಿ ತಂದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಜೀವಂತ ಪರಂಪರೆಯೆಡೆಗೆ ನಡೆದಿರುವ ಪ್ರಯತ್ನಗಳ ಬಗ್ಗೆ ಹಾಗೂ 'ಲೈಫ್‌ಗಾಗಿ ಸಂಸ್ಕೃತಿ'ಗೆ ನೀಡಿದ ಕೊಡುಗೆಗಳ ಬಗ್ಗೆ ಅವರು ಶ್ಲಾಘಿಸಿದರು. ಸಾಂಸ್ಕೃತಿಕ ಪರಂಪರೆ ಎಂದರೆ ಕೇವಲ ಅದು ಕೇವಲ ಕಲ್ಲಿನ ಕಟ್ಟಡವಲ್ಲ, ಅದು ತಲೆಮಾರುಗಳಿಗೆ ನೀಡಲಾದ ಸಂಪ್ರದಾಯಗಳು, ಪದ್ಧತಿಗಳು ಮತ್ತು ಹಬ್ಬಗಳ ಒಂದು ಗುಚ್ಛ ಎಂದು ಪ್ರಧಾನಿ ಹೇಳಿದರು. ಕಾರ್ಯಪಡೆಯ ಪ್ರಯತ್ನಗಳು ಸುಸ್ಥಿರ ಪದ್ಧತಿಗಳು ಮತ್ತು ಜೀವನಶೈಲಿಯನ್ನು ಬೆಳೆಸುತ್ತವೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

ಆರ್ಥಿಕ ಬೆಳವಣಿಗೆ ಮತ್ತು ವೈವಿಧ್ಯೀಕರಣಕ್ಕೆ ಪರಂಪರೆಯು ಪ್ರಮುಖ ಆಸ್ತಿಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ಭಾರತದ 'ವಿಕಾಸ್ ಭಿ ವಿರಾಸತ್ ಭಿ' (ಅಭಿವೃದ್ಧಿಯ ಜೊತೆಗೆ ಪರಂಪರೆ) ಮಂತ್ರದಲ್ಲಿ ಪ್ರತಿಧ್ವನಿಸುತ್ತದೆ ಎಂದರು.  "ಸುಮಾರು 3,000 ಅನನ್ಯ ಕಲೆಗಳು ಮತ್ತು ಕರಕುಶಲ ವಸ್ತುಗಳನ್ನು ಹೊಂದಿರುವ ತನ್ನ 2,000 ವರ್ಷಗಳಷ್ಟು ಹಳೆಯದಾದ ಕರಕುಶಲ ಪರಂಪರೆಯ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ" ಎಂದು ಪ್ರಧಾನಿ ಹೇಳಿದರು. ಇದೇ ವೇಳೆ, ಸ್ವಾವಲಂಬನೆಯನ್ನು ಉತ್ತೇಜಿಸುವ ಜೊತೆಗೆ ಭಾರತೀಯ ಕರಕುಶಲತೆಯ ಅನನ್ಯತೆಯನ್ನು ಪ್ರದರ್ಶಿಸುವ 'ಒಂದು ಜಿಲ್ಲೆ, ಒಂದು ಉತ್ಪನ್ನ' ಉಪಕ್ರಮದ ಬಗ್ಗೆ ಒತ್ತಿ ಹೇಳಿದರು. ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ʻಜಿ 20ʼ ರಾಷ್ಟ್ರಗಳ ಪ್ರಯತ್ನಗಳು ಆಳವಾದ ಮಹತ್ವವನ್ನು ಹೊಂದಿವೆ. ಏಕೆಂದರೆ ಅವು ಅಂತರ್ಗತ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುತ್ತವೆ. ಜೊತೆಗೆ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಬೆಂಬಲಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಮುಂಬರುವ ತಿಂಗಳಲ್ಲಿ, ಭಾರತವು 1.8 ಶತಕೋಟಿ ಡಾಲರ್ ಆರಂಭಿಕ ವೆಚ್ಚದೊಂದಿಗೆ ʻಪಿಎಂ ವಿಶ್ವಕರ್ಮ ಯೋಜನೆʼಯನ್ನು ಜಾರಿಗೊಳಿಸಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಇದು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಬೆಂಬಲದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಅವರ ಕರಕುಶಲತೆಯಲ್ಲಿ ಅಭಿವೃದ್ಧಿ ಹೊಂದಲು ನೆರವಾಗುತ್ತದೆ. ಅಲ್ಲದೆ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಸಂಸ್ಕೃತಿಯ ಆಚರಣೆಯಲ್ಲಿ ತಂತ್ರಜ್ಞಾನವು ಪ್ರಮುಖ ಪಾಲುದಾರನಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಭಾರತದ ರಾಷ್ಟ್ರೀಯ ಡಿಜಿಟಲ್ ಜಿಲ್ಲಾ ಭಂಡಾರವನ್ನು ಉಲ್ಲೇಖಿಸಿದರು. ಇದು ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಮರುಶೋಧಿಸಲು ಸಹಾಯ ಮಾಡುತ್ತಿದೆ. ಸಾಂಸ್ಕೃತಿಕ ಹೆಗ್ಗುರುತುಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳನ್ನು ಹೆಚ್ಚು ಪ್ರವಾಸಿ ಸ್ನೇಹಿಯನ್ನಾಗಿ ಮಾಡಲು ಭಾರತದ ತಂತ್ರಜ್ಞಾನದ ಬಳಕೆಯನ್ನು ಅವರು ಒತ್ತಿ ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು, ಜಿ20 ಸಂಸ್ಕೃತಿ ಸಚಿವರ ಕಾರ್ಯಪಡೆಯು 'ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸುತ್ತದೆ' ಅಭಿಯಾನ ಆರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದು ʻವಸುದೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼ ಎಂಬ ಆಶಯ ಒಳಗೊಂಡಿರುವ ಒಳಗೊಂಡಿದೆ ಎಂದರು. ಸ್ಪಷ್ಟ ಫಲಿತಾಂಶಗಳೊಂದಿಗೆ ʻಜಿ 20ʼ ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿ ಈ ಕಾರ್ಯಪಡೆಯ ಪ್ರಮುಖ ಪಾತ್ರವನ್ನು ಅವರು ಶ್ಲಾಘಿಸಿದರು. "ನಿಮ್ಮ ಕೆಲಸವು ʻಕಲ್ಚರ್‌ʼ(ಸಂಸ್ಕೃತಿ), ʻಕ್ರಿಯೇಟಿವಿಟಿʼ(ಸೃಜನಶೀಲತೆ), ʻಕಾಮರ್ಸ್‌ʼ(ವಾಣಿಜ್ಯ) ಮತ್ತು ʻಕಲ್ಯಾಬರೇಷನ್‌ʼ(ಸಹಯೋಗ) ಎಂಬ ನಾಲ್ಕು ʻಸಿʼಗಳ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಸಹಾನುಭೂತಿ, ಸಮಗ್ರ ಮತ್ತು ಶಾಂತಿಯುತ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಸಂಸ್ಕೃತಿಯ ಶಕ್ತಿಯನ್ನು ಬಳಸಿಕೊಳ್ಳಲು ಇದು ನಮಗೆ ಅನುವು ಮಾಡಿಕೊಡುತ್ತದೆ", ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಕ್ತಾಯಗೊಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
5 Days, 31 World Leaders & 31 Bilaterals: Decoding PM Modi's Diplomatic Blitzkrieg

Media Coverage

5 Days, 31 World Leaders & 31 Bilaterals: Decoding PM Modi's Diplomatic Blitzkrieg
NM on the go

Nm on the go

Always be the first to hear from the PM. Get the App Now!
...
Prime Minister urges the Indian Diaspora to participate in Bharat Ko Janiye Quiz
November 23, 2024

The Prime Minister Shri Narendra Modi today urged the Indian Diaspora and friends from other countries to participate in Bharat Ko Janiye (Know India) Quiz. He remarked that the quiz deepens the connect between India and its diaspora worldwide and was also a wonderful way to rediscover our rich heritage and vibrant culture.

He posted a message on X:

“Strengthening the bond with our diaspora!

Urge Indian community abroad and friends from other countries  to take part in the #BharatKoJaniye Quiz!

bkjquiz.com

This quiz deepens the connect between India and its diaspora worldwide. It’s also a wonderful way to rediscover our rich heritage and vibrant culture.

The winners will get an opportunity to experience the wonders of #IncredibleIndia.”