ಸೆಣಬಿನ 2023-24ನೇ ಸಾಲಿನಲ್ಲಿ, ಪ್ಯಾಕೇಜಿಂಗ್ ನಲ್ಲಿ ಸೆಣಬನ್ನು ಕಡ್ಡಾಯವಾಗಿ ಬಳಕೆ ಮಾಡುವ ನಿರ್ಧಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುರಸ್ಕರಿಸಿದ್ದಾರೆ. ಈ ನಿರ್ಧಾರವು ಸೆಣಬು ಕ್ಷೇತ್ರದ ಪುನಶ್ಚೇತನಕ್ಕೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಇದು ನಮ್ಮ ಕುಶಲಕರ್ಮಿಗಳು ಮತ್ತು ರೈತರಿಗೆ ಪ್ರಮುಖ ಉತ್ತೇಜನವನ್ನು ಸಹ ನೀಡಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಈ ನಿರ್ಧಾರದ ಕುರಿತು ಹೆಚ್ಚಿನ ವಿವರಗಳನ್ನು ಈ ಕೊಂಡಿ ಮೂಲಕ ಪಡೆಯಬಹುದು:
https://pib.gov.in/PressReleasePage.aspx?PRID=1984208
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಾಕಿದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, ಈ ರೀತಿ ಹೇಳಿದ್ದಾರೆ;
"ಈ ನಿರ್ಧಾರವು ಸೆಣಬಿನ ವಲಯವನ್ನು ಪುನಶ್ಚೇತನಗೊಳಿಸಲು ಕೊಡುಗೆ ನೀಡುತ್ತದೆ! ಇದು ನಮ್ಮ ಕುಶಲಕರ್ಮಿಗಳು ಮತ್ತು ರೈತರಿಗೆ ಪ್ರಮುಖ ಉತ್ತೇಜನ ನೀಡುವುದನ್ನು ಸೂಚಿಸುತ್ತದೆ.”
This decision will contribute towards the revitalizing the jute sector! It also marks a major boost for our artisans and farmers. https://t.co/lCUKZDpw2y
— Narendra Modi (@narendramodi) December 9, 2023