ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಮೀನಾಕ್ಷಿ ಕ್ಷತ್ರಿಯ ಎಂಬ 13-ವರ್ಷದ ಬಾಲಕಿ ನಿ-ಕ್ಷಯ ಮಿತ್ರ ಎಂದು ನೋಂದಾಯಿಸಿಕೊಂಡು ತನ್ನ ಉಳಿತಾಯದಿಂದ ಕ್ಷಯ ರೋಗಿಗಳನ್ನು ಆರೈಕೆ ಮಾಡುತ್ತಿರುವ ಗಮನಾರ್ಹ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು:
"ಗಮನಾರ್ಹ ವರ್ತನೆ. ಇದು ಟಿಬಿ ಮುಕ್ತ ಭಾರತವನ್ನು ನಿರ್ಮಿಸುವ ಪ್ರಯತ್ನವನ್ನು ಹೆಚ್ಚಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
Noteworthy gesture, which will boost the efforts towards achieving TB-free India. https://t.co/IAFh4k65Em
— Narendra Modi (@narendramodi) February 4, 2023