ಜಪಾನ್ ರಾಜಧಾನಿ ಟೋಕಿಯೊದ ನೂತನ ಸುಸಜ್ಜಿತ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಿರುವ ಜಪಾನ್ ಪ್ರಧಾನ ಮಂತ್ರಿ ಯೊಶಿಹಿದೆ ಸುಗಾ ಅವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಟೋಕಿಯೊದಲ್ಲಿ ಒಲಿಂಪಿಕ್ಸ್ ಮತ್ತು ಪ್ಯಾರಾಂಲಿಪಿಕ್ಸ್ ಕ್ರೀಡಾಕೂಟ ಆಯೋಜಿಸಿರುವ ಜಪಾನ್ ಪ್ರಧಾನ ಮಂತ್ರಿ ಯೊಶಿಹಿದೆ ಸುಗಾ ಮತ್ತು ಜಪಾನ್ ಜನತೆಗೆ ಈ ಸುಸಂದರ್ಭದಲ್ಲಿ ಶುಭಾಶಯ ಕೋರುತ್ತೇನೆ. ಟೋಕಿಯೊ-ಒಲಿಪಿಕ್ಸ್|ನಲ್ಲಿ ವಿಶ್ವದ ಅತ್ಯುತ್ತಮ ಕ್ರೀಡಾಪಟು(ಅಥ್ಲೀಟ್)ಗಳ ಅದ್ಭುತ ಪ್ರದರ್ಶನಗಳನ್ನು ನೋಡಲು ನಾವೆಲ್ಲಾ ಎದುರು ನೋಡುತ್ತಿದ್ದೇವೆ, ಕಾತರರಾಗಿದ್ದೇವೆ!” ಎಂದಿದ್ದಾರೆ.
Wishing PM @sugawitter and 🇯🇵 the very best for #Tokyo2020 @Olympics and @Paralympics. We look forward to a season of incredible performances by the world's best sportspersons! @Tokyo2020
— Narendra Modi (@narendramodi) July 23, 2021