Quoteಪ್ರಧಾನಮಂತ್ರಿ ಅವರ ಜನ್ಮದಿನದಂದು ‘ಅಖಂಡ್‌ ಪಾಠ್ ’ ಆಯೋಜಿಸಿದ್ದ ಗುರುದ್ವಾರ ಶ್ರೀ ಬಾಲಾ ಸಾಹಿಬ್‌ ಜೀ ಅವರಿಂದ ನಿಯೋಗವು ಪ್ರಸಾದ ಮತ್ತು ಆಶೀರ್ವಾದವನ್ನು ನೀಡಿತು.
Quoteನಿಯೋಗವು ಪಗ್ಡಿಯನ್ನು ಕಟ್ಟುವ ಮತ್ತು ಸಿರೋಪಾವನ್ನು ಅರ್ಪಿಸುವ ಮೂಲಕ ಪ್ರಧಾನಮಂತ್ರಿ ಅವರನ್ನು ಗೌರವಿಸಿತು
Quoteಸಿಖ್‌ ಸಮುದಾಯದ ಗೌರವ ಮತ್ತು ಕಲ್ಯಾಣಕ್ಕಾಗಿ ಕೈಗೊಂಡ ಮಾರ್ಗೋಪಾಯಗಳಿಗಾಗಿ ನಿಯೋಗವು ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿತು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 7ನೇ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಸಿಖ್‌ ನಿಯೋಗವನ್ನು ಭೇಟಿಯಾದರು.

ದೆಹಲಿಯ ಗುರುದ್ವಾರ ಶ್ರೀ ಬಾಲಾ ಸಾಹಿಬ್‌ ಜೀ ಅವರು ಪ್ರಧಾನಮಂತ್ರಿ ಅವರ ಜನ್ಮದಿನದ ಅಂಗವಾಗಿ ‘ಅಖಂಡ್‌ ಪಾಠ್’ ಅನ್ನು ಆಯೋಜಿಸಿದ್ದರು. ಸೆಪ್ಟೆಂಬರ್‌ 15 ರಂದು ಪ್ರಾರಂಭವಾದ ‘ಅಖಂಡ್‌ ಪಾಠ್’ ಪ್ರಧಾನ ಮಂತ್ರಿ ಅವರ ಜನ್ಮದಿನ ಸೆಪ್ಟೆಂಬರ್‌ 17ರಂದು ಕೊನೆಗೊಂಡಿತು. ಸಿಖ್‌ ನಿಯೋಗವು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಗುರುದ್ವಾರದಿಂದ ಪ್ರಸಾದ ಮತ್ತು ಆಶೀರ್ವಾದವನ್ನು ನೀಡಿತು.

ಸಭೆಯಲ್ಲಿ, ಸಿಖ್‌ ನಿಯೋಗವು ಪಗ್ಡಿಯನ್ನು ಕಟ್ಟುವ ಮತ್ತು ಸಿರೋಪಾವನ್ನು ಅರ್ಪಿಸುವ ಮೂಲಕ ಪ್ರಧಾನಮಂತ್ರಿ ಅವರನ್ನು ಗೌರವಿಸಿತು. ಪ್ರಧಾನ ಮಂತ್ರಿ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನು  ಸಹ ಮಾಡಲಾಯಿತು. ಸಿಖ್‌ ಸಮುದಾಯದ ಗೌರವ ಮತ್ತು ಕಲ್ಯಾಣಕ್ಕಾಗಿ ಅವರು ಕೈಗೊಂಡ  ಮಾರ್ಗೋಪಾಯಗಳಿಗಾಗಿ  ನಿಯೋಗವು ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿತು. ಡಿಸೆಂಬರ್‌ 26ನ್ನು ವೀರ್‌ ಬಾಲ್‌ ದಿವಸ್‌ ಎಂದು ಘೋಷಿಸುವುದು, ಕರ್ತಾಪುರ್‌ ಸಾಹಿಬ್‌ ಕಾರಿಡಾರ್‌ ಅನ್ನು ಮತ್ತೆ ತೆರೆಯುವುದು, ಗುರುದ್ವಾರಗಳು ನಡೆಸುವ ಲಂಗರ್‌ಗಳ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕುವುದು, ಗುರು ಗ್ರಂಥ ಸಾಹಿಬ್‌ನ ಪ್ರತಿಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಪ್ರಧಾನಮಂತ್ರಿ ಅವರು ಮಾಡಿದ ಹಲವಾರು ಪ್ರಯತ್ನಗಳನ್ನು ಅವರು ವಿವರಿಸಿದರು.

ಸಿಖ್‌ ನಿಯೋಗದಲ್ಲಿ ಅಖಿಲ ಭಾರತ ಕೇಂದ್ರೀಯ ಗುರು ಸಿಂಗ್‌ ಸಭಾದ ಅಧ್ಯಕ್ಷ ರಾದ ಶ್ರೀ ತರ್ವಿಂದರ್‌ ಸಿಂಗ್‌ ಮಾರ್ವಾ ಅವರನ್ನು ಒಳಗೊಂಡಿತ್ತು. ಅಖಿಲ ಭಾರತ ಕೇಂದ್ರೀಯ ಗುರು ಸಿಂಗ್‌ ಸಭಾದ ಕಾರ್ಯಾಧ್ಯಕ್ಷ  ಶ್ರೀ ವೀರ್‌ ಸಿಂಗ್‌;  ದೆಹಲಿ ಕೇಂದ್ರೀಯ ಗುರು ಸಿಂಗ್‌ ಸಭಾದ  ಮುಖ್ಯಸ್ಥ ಶ್ರೀ ನವೀನ್‌ ಸಿಂಗ್‌ ಭಂಡಾರಿ; ತಿಲಕ್‌ ನಗರ ಗುರುದ್ವಾರ ಸಿಂಗ್‌ ಸಭಾದ ಅಧ್ಯಕ್ಷ  ಶ್ರೀ ಹರ್ಬನ್ಸ್‌ ಸಿಂಗ್‌ ಮತ್ತು ಗುರುದ್ವಾರ ಸಿಂಗ್‌ ಸಭಾದ ಮುಖ್ಯಸ್ಥ ಗ್ರಂಥಿ ಶ್ರೀ ರಾಜಿಂದರ್‌ ಸಿಂಗ್‌ ನಿಯೋಗದಲ್ಲಿದ್ದರು.

 

  • Ashok bhai dhadhal September 07, 2024

    Jai ma bharti
  • kumarsanu Hajong September 05, 2024

    delegation Bharat
  • Ranjeet Kumar September 27, 2022

    nmo
  • Chowkidar Margang Tapo September 26, 2022

    namo namo namo namo namo
  • Sanjay Kumar Singh September 26, 2022

    Jai Shri Ram
  • शिवानन्द राजभर September 26, 2022

    जय माता दी
  • Jayantilal Parejiya September 25, 2022

    Jay Hind 3
  • Chowkidar Margang Tapo September 25, 2022

    Jai jai jai jai shree ram
  • SRS RSS SwayamSewak September 25, 2022

    यहाँ जीना है तो नींद में भी पैर हिलाते रहिये, वर्ना दफ़न कर देगा ये शहर मुर्दा समझकर..!
  • Ranjeet Kumar September 24, 2022

    jay sri ram
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India Is Positioned To Lead New World Order Under PM Modi

Media Coverage

India Is Positioned To Lead New World Order Under PM Modi
NM on the go

Nm on the go

Always be the first to hear from the PM. Get the App Now!
...
PM Modi pays tribute to Swami Ramakrishna Paramhansa on his Jayanti
February 18, 2025

The Prime Minister, Shri Narendra Modi paid tributes to Swami Ramakrishna Paramhansa on his Jayanti.

In a post on X, the Prime Minister said;

“सभी देशवासियों की ओर से स्वामी रामकृष्ण परमहंस जी को उनकी जयंती पर शत-शत नमन।”