ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಕರ್ನಾಟಕದ ಕಲ್ಬುರ್ಗಿ ಮತ್ತು ತಮಿಳುನಾಡಿನ ಕಾಂಚೀಪುರಂಗಳಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಕರ್ನಾಟಕದ ಕಲ್ಬುರ್ಗಿಯಲ್ಲಿ ಪ್ರಧಾನಮಂತ್ರಿಯವರು ಫಲಕ ಅನಾವರಣ ಮಾಡುವ ಮೂಲಕ ಬೆಂಗಳೂರಿನ ಇಎಸ್.ಐ.ಸಿ. ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ದೇಶಕ್ಕೆ ಸಮರ್ಪಿಸಿದರು. ಹುಬ್ಬಳ್ಳಿಯ ಕಿಮ್ಸ್ ನ ಸೂಪರ್ ಸ್ಪೆಷಾಲಿಟಿ ವಿಭಾಗ, ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಕಟ್ಟಡ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈಶಾನ್ಯ ವಲಯದ ವಿದ್ಯಾರ್ಥಿಗಳಿಗಾಗಿ ಮಹಿಳಾ ಹಾಸ್ಟೆಲ್ ಅನ್ನೂ ಅವರೂ ಗುಂಡಿ ಒತ್ತುವ ಮೂಲಕ ಉದ್ಘಾಟಿಸಿದರು, ರಾಯಚೂರಿನಲ್ಲಿರುವ ಬಿಪಿಸಿಎಲ್ ಡಿಪೋವನ್ನು ಕಲ್ಬುರ್ಗಿಗೆ ಸ್ಥಳಾಂತರಿಸುವುದಕ್ಕೆ ಪ್ರಧಾನ ಮಂತ್ರಿಯವರು ಫಲಕ ಅನಾವರಣ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ – ಆಯುಷ್ಮಾನ್ ಭಾರತ್ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.
ತಮಿಳುನಾಡಿನ ಕಾಂಚೀಪುರಂನಲ್ಲಿ ಪ್ರಧಾನಮಂತ್ರಿಯವರು ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು. ಇದರಲ್ಲಿ ರಾ.ಹೆ.45ಸಿರಲ್ಲಿ ವಿಕ್ರವಂಡಿಯಿಂದ ತಂಜಾವೂರುವರೆಗಿನ ಚತುಷ್ಪಥ ಮತ್ತು ರಾ.ಹೆ.4ರಲ್ಲಿ ಕಾರೈಪೆಟ್ಟೈನಿಂದ ವಲಾಜಪೇಟೆ ವಿಭಾಗದಲ್ಲಿ ಷಟ್ಪಥದ ಶಂಕುಸ್ಥಾಪನೆಯೂ ಸೇರಿದೆ. ಅವರು 5 ಎಂಎಂಟಿಪಿಎ ಸಾಮರ್ಥ್ಯದ ಎಲ್.ಎನ್.ಜಿ. ಟರ್ಮಿನಲ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಎಲ್.ಎನ್.ಜಿ. ಟರ್ಮಿನಲ್ ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿನ ಎಲ್.ಎನ್.ಜಿ. ಬೇಡಿಕೆ ಪೂರೈಸಲಿದೆ. ಅವರು ವಿದ್ಯುದ್ದೀಕರಣಗೊಂಡ ಈರೋಡ್ – ಕರೂರು – ತಿರುಚಿರಾಪಳ್ಳಿ ಮತ್ತು ಸೇಲಂ – ಕರೂರ್ – ದಿಂಡಿಗಲ್ ರೈಲು ಮಾರ್ಗವನ್ನೂ ದೇಶಕ್ಕೆ ಸಮರ್ಪಿಸಿದರು.
ಪ್ರಧಾನಮಂತ್ರಿಯವರು ವಿಡಿಯೋ ಸಂಪರ್ಕದ ಮೂಲಕ ಚೆನ್ನೈನ ಡಾ.ಎಂ.ಜಿ.ಆರ್. ಜಾನಕಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡಾ. ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆಯನ್ನು ಅನಾವರಣ ಮಾಡಿದರು.
ಇಂದು ಚಾಲನೆ ನೀಡಲಾದ ಅಭಿವೃದ್ಧಿ ಕಾಮಗಾರಿಗಳು ಕರ್ನಾಟಕ ಮತ್ತು ತಮಿಳುನಾಡಿನ ಜನತೆಗೆ ಉಪಯುಕ್ತವಾಗಿವೆ.