ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಜಲ ವಿಮಾನ ನಿಲ್ದಾಣ ಮತ್ತು ಕೆವಾಡಿಯಾದ ಏಕತಾ ಪ್ರತಿಮೆ ಮತ್ತು ಸಬರಮತಿ ಅಹಮದಾಬಾದ್ ನ ರಿವರ್ ಫ್ರಂಟ್ ಸಂಪರ್ಕಿಸುವ ಸಮುದ್ರ ವಿಮಾನ ಸೇವೆಯನ್ನು ಉದ್ಘಾಟಿಸಿದರು.
ಶ್ರೀ ಮೋದಿ ಅವರು ಅಹಮದಾಬಾದ್ ನ ಸಬರಮತಿ ರಿವರ್ ಫ್ರಂಟ್ ನಲ್ಲಿ ಜಲ ವಿಮಾನ ನಿಲ್ದಾಣ ಹಾಗೂ ಸಬರಮತಿ ರಿವರ್ ಫ್ರಂಟ್ ನಿಂದ ಕೆವಾಡಿಯಾ ನಡುವಿನ ಸಮುದ್ರ ವಿಮಾನ ಸೇವೆಯನ್ನೂ ಉದ್ಘಾಟಿಸಿದರು. ಕೊನೆಯ ಮೈಲಿಗೂ ಸಂಪರ್ಕವನ್ನು ಕಲ್ಪಿಸುವ ಜಲ ವಿಮಾನ ನಿಲ್ದಾಣಗಳ ಸರಣಿ ಯೋಜನೆಯ ಭಾಗ ಇದಾಗಿದೆ.
ಸಮುದ್ರ ವಿಮಾನಗಳು ನೀರಿನಲ್ಲಿ ಇಳಿಯುವ ಮತ್ತು ನೀರಿನಿಂದಲೇ ಮೇಲೆ ಹಾರುವ ಸಾಮರ್ಥ್ಯವನ್ನು ಹೊಂದಿದ್ದು, ಇಳಿದಾಣ ಅಥವಾ ರನ್ ವೇ ಇಲ್ಲದ ಪ್ರದೇಶಗಳಿಗೆ ವಿಮಾನಯಾನ ಸೇವೆ ಒದಗಿಸುತ್ತವೆ. ಹೀಗಾಗಿ ಅವು ಭೌಗೋಳಿಕ ಕಾರಣದಿಂದಾಗಿ ಸವಾಲು ಎದುರಿಸುತ್ತಿದ್ದ ಭೌಗೋಳಿಕ/ಪ್ರದೇಶಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ ಮತ್ತು ವಿಮಾನ ನಿಲ್ದಾಣಗಳು ಮತ್ತು ಹೆಚ್ಚಿನ ವೆಚ್ಚದ ರನ್ ವೇಗಳನ್ನು ನಿರ್ಮಾಣದ ಅಗತ್ಯವಿಲ್ಲದೆ ಭಾರತದ ದೂರದ ಭಾಗಗಳನ್ನು ವಾಯುಯಾನ ಮುಖ್ಯವಾಹಿನಿಯ ಜಾಲಕ್ಕೆ ತರಲು ನೆರವಾಗುತ್ತದೆ. ಸಣ್ಣ ಸ್ಥಿರ ರೆಕ್ಕೆಯ ವಿಮಾನಗಳು ಸರೋವರಗಳು, ಹಿನ್ನೀರು ಮತ್ತು ಅಣೆಕಟ್ಟುಗಳಂಥ ಜಲಮೂಲಗಳಲ್ಲಿ ಇಳಿಯಬಲ್ಲುವಾಗಿವೆ, ಇದರಿಂದಾಗಿ ಹಲವಾರು ಪ್ರವಾಸಿ ತಾಣಗಳಿಗೆ ಸುಲಭವಾಗಿ ತಲುಪಬಹುದು.