"ವ್ಯೂಹಾತ್ಮಕ ದಾಳಿಯ ಜಲಂರ್ಗಾಮಿ ಪರಮಾಣು ನೌಕೆ (ಎಸ್.ಎಸ್.ಬಿ.ಎನ್.) ಐ.ಎನ್.ಎಸ್. ಅರಿಹಂತ್ ನ ಸಿಬ್ಬಂದಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರಮಾಡಿಕೊಂಡರು. ದೇಶದ ಅಸ್ಥಿತ್ವದಲ್ಲಿರಬಹುದಾದಂತಹ ನ್ಯೂಕ್ಲಿಯರ್ ಟ್ರಿಯಾಡಿನ ಸ್ಥಾಪನೆಯನ್ನು ಪೂರ್ಣಗೊಳಿಸಿ, ಇತ್ತೀಚೆಗೆ ಜಲಂರ್ಗಾಮಿ ನೌಕೆ, ತನ್ನ ಪ್ರಥಮ ಪ್ರತಿರೋಧ ಗಸ್ತಿನ ಬಳಿಕ ಹಿಂತಿರುಗಿದೆ. "
ಎಸ್.ಎಸ್.ಬಿ.ಎನ್.ಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯ ನಿರ್ವಹಣೆ ಮೂಲಕ ಇಂತಹ ಸಾಮರ್ಥ್ಯವಿರುವ ಬೆರಳೆಣಿಕೆಯಷ್ಟು ದೇಶಗಳ ಸಾಲಿಗೆ ಭಾರತವನ್ನು ಸೇರಿಸಿದೆ ಐ.ಎನ್.ಎಸ್. ಅರಿಹಂತ್
ಐ.ಎನ್.ಎಸ್. ಅರಿಹಂತ್ ಸಾಧನೆ ದೇಶದ ಸುರಕ್ಷತೆಯನ್ನು ಹೆಚ್ಚಿಸುವ ಪ್ರವರ್ತಕ ಸಾಧನೆ
ಪರಮಾಣು ಬೆದರಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಐಎನ್ಎಸ್ ಅರಿಹಂತ್ ಯಶಸ್ಸು ಸೂಕ್ತ ಪ್ರತಿಕ್ರಿಯೆ ನೀಡುತ್ತದೆ: ಪ್ರಧಾನಿ ನರೇಂದ್ರ ಮೋದಿ
ನ್ಯೂಕ್ಲಿಯರ್ ಟ್ರಿಯಾಡ್ ಭಾರತವು ಜಾಗತಿಕ ಸ್ಥಿರತೆ ಮತ್ತು ಶಾಂತಿಯ ಪ್ರಮುಖ ಆಧಾರ ಸ್ಥಂಭವಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು ಪ್ರಧಾನಿ ಮೋದಿ
ಭಾರತವು ಶಾಂತಿಯುತ ಭೂಮಿಯಾಗಿದೆ. ಒಗ್ಗಟ್ಟಿನ ಮೌಲ್ಯಗಳು ನಮ್ಮ ಸಂಸ್ಕೃತಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ಶಾಂತಿ ನಮ್ಮ ಶಕ್ತಿ, ನಮ್ಮ ದೌರ್ಬಲ್ಯವಲ್ಲ: ಪ್ರಧಾನಿ ಮೋದಿ
ವಿಶ್ವ ಶಾಂತಿ ಮತ್ತು ಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸುವ ಭಾರತದ ಪ್ರಯತ್ನಗಳಾಗಿ ನಮ್ಮ ಪರಮಾಣು ಕಾರ್ಯಕ್ರಮವನ್ನು ನೋಡಬೇಕು: ಪ್ರಧಾನಿ ಮೋದಿ

ವ್ಯೂಹಾತ್ಮಕ ದಾಳಿಯ ಜಲಂರ್ಗಾಮಿ ಪರಮಾಣು ನೌಕೆ (ಎಸ್.ಎಸ್.ಬಿ.ಎನ್.) ಐ.ಎನ್.ಎಸ್. ಅರಿಹಂತ್ ನ ಸಿಬ್ಬಂದಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರಮಾಡಿಕೊಂಡರು. ದೇಶದ ಅಸ್ಥಿತ್ವದಲ್ಲಿರಬಹುದಾದಂತಹ ನ್ಯೂಕ್ಲಿಯರ್ ಟ್ರಿಯಾಡಿನ  ಸ್ಥಾಪನೆಯನ್ನು ಪೂರ್ಣಗೊಳಿಸಿ, ಇತ್ತೀಚೆಗೆ ಜಲಂರ್ಗಾಮಿ ನೌಕೆ, ತನ್ನ ಪ್ರಥಮ ಪ್ರತಿರೋಧ ಗಸ್ತಿನ ಬಳಿಕ ಹಿಂತಿರುಗಿದೆ. 
 
ಭಾರತದ ನ್ಯೂಕ್ಲಿಯರ್ ಟ್ರಿಯಾಡನ್ನು  ಐ.ಎನ್.ಎಸ್. ಅರಿಹಂತ್  ಪೂರ್ಣಗೊಳಿಸಿದೆ. ತನ್ನ ನಿಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಐ.ಎನ್.ಎಸ್. ಅರಿಹಂತ್ ನ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ವಿವರಿಸಿದರು.  ಎಸ್.ಎಸ್.ಬಿ.ಎನ್.ಗಳ ವಿನ್ಯಾಸ, ನಿರ್ಮಾಣ ಮತ್ತು  ಕಾರ್ಯ ನಿರ್ವಹಣೆ  ಮೂಲಕ ಇಂತಹ ಸಾಮರ್ಥ್ಯವಿರುವ ಬೆರಳೆಣಿಕೆಯಷ್ಟು ದೇಶಗಳ ಸಾಲಿಗೆ ಭಾರತವನ್ನು ಸೇರಿಸಿದ ಸಾಧನೆಗಾಗಿ  ಐ.ಎನ್.ಎಸ್.  ಅರಿಹಂತ್ ನ    ಸಿಬ್ಬಂದಿಗಳು ಮತ್ತು ಸಂಬಂಧಪಟ್ಟವರನ್ನು ಪ್ರಧಾನಮಂತ್ರಿ   ಅಭಿನಂದಿಸಿದರು.  
ಎಸ್.ಎಸ್.ಬಿ.ಎನ್.ಗಳು  ಸಂಪೂರ್ಣವಾಗಿ ದೇಶೀಯ ನಿರ್ಮಾಣವಾಗಿದ್ದು, ಇದನ್ನು ಕಾರ್ಯ ನಿರ್ವಹಣೆ ಗೊಳಿಸುವುದು ದೇಶದ ತಾಂತ್ರಿಕ ಕೌಶಲ್ಯತೆ,  ಒಗ್ಗೂಡುವಿಕೆ ಮತ್ತು ಸಂಬಂಧಪಟ್ಟವರೆಲ್ಲರ ಸಹಕಾರಗಳನ್ನು ದೃಢೀಕರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೇಶದ ಸುರಕ್ಷತೆಯನ್ನು ಹೆಚ್ಚಿಸುವ ಪ್ರವರ್ತಕ ಸಾಧನೆ ಇದೆಂದು   ಅರ್ಥೈಸಿಕೊಂಡು,  ಸಮರ್ಪಣಾಭಾವ ಮತ್ತು ಬದ್ಧತೆಯಿಂದ ಕೆಲಸ ಪೂರೈಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಧನ್ಯವಾದ ಹೇಳಿದರು.  
 
ಭಾರತದ ಪರಾಕ್ರಮಿ ಸೈನಿಕರ ಬದ್ಧತೆ ಮತ್ತು ಧೈರ್ಯವನ್ನು ಹಾಗೂ ಬುದ್ದಿವಂತ ಮತ್ತು ಪರಿಶ್ರಮಿ ವಿಜ್ಞಾನಿಗಳ ಅವಿರತ ಪ್ರಯತ್ನಗಳನ್ನು ಪ್ರಧಾನಮಂತ್ರಿ  ಪ್ರಶಂಸಿಸಿದರು. ಇವರ ಪ್ರಯತ್ನದ ಫಲವಾಗಿ, ನ್ಯೂಕ್ಲಿಯರ್ ಪರೀಕ್ಷೆ ಮೂಲಕ ಅತ್ಯಂತ ಸಂಕೀರ್ಣವಾದ ಮತ್ತು ಮಹತ್ವಪೂರ್ಣ ನ್ಯೂಕ್ಲಿಯರ್ ಟ್ರಿಯಾಡ್ ಸ್ಥಾಪನೆಯಾಗಿದೆ. ಇಂತಹ ಕಾರ್ಯದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಇದ್ದ ಎಲ್ಲಾ ಸಂಶಯ-ಪ್ರಶ್ನೆಗಳನ್ನೂ ದೂರಮಾಡುವ ಮೂಲಕ ವೈಜ್ಞಾನಿಕ ಸಾಧನೆ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಪ್ರಶಂಸಿಸಿದರು.
ಭಾರತದ ಪ್ರಜೆಗಳು “ಶಕ್ತಿಮಾನ್ ಭಾರತ” ವನ್ನು ಮತ್ತು ನವ ಭಾರತದ ನಿರ್ಮಾಣವನ್ನು ಬಯಸುತ್ತಾರೆ,  ಈ ಹಾದಿಯ ಎಲ್ಲ ಸವಾಲುಗಳನ್ನೂ ಮೀರಿ ಸಾಗಲು ದಣಿವರಿಯದೆ ಪ್ರಯತ್ನಿಸುತ್ತಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಬಲಿಷ್ಠ ಭಾರತವು ಶತಕೋಟಿಗೂ ಮಿಕ್ಕ ಭಾರತೀಯರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರ್ತಿಗೊಳಿಸುತ್ತದೆ. ಅನಿರೀಕ್ಷಿತತೆ ಮತ್ತು ಕಾಳಜಿಗಳೇ ತುಂಬಿರುವ ಪ್ರಪಂಚದಲ್ಲಿ, ಭಾರತವು ಜಾಗತಿಕ ಸ್ಥಿರತೆ ಮತ್ತು ಶಾಂತಿಯ ಪ್ರಮುಖ ಆಧಾರ ಸ್ಥಂಭವಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.    
 
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ಭಾಗವಹಿಸಿದವರಿಗೆ ಮತ್ತು ಅವರ ಕುಟುಂಬಕ್ಕೆ ದೀಪಗಳ ಹಬ್ಬ , ದೀಪಾವಳಿಯ ಶುಭಾಶಯ ತಿಳಿಸಿದರು. ಯಾವ ರೀತಿಯಲ್ಲಿ ಬೆಳಕು ಕತ್ತಲೆ ಮತ್ತು ಭಯಗಳನ್ನು ಇಲ್ಲವಾಗಿಸುತ್ತದೋ ಅದೇ ರೀತಿ, ಐ.ಎನ್.ಎಸ್. ಅರಿಹಂತ್ ಕೂಡಾ ದೇಶದ ನಿರ್ಭಯತೆಯನ್ನು ಸೂಚಿಸುವ ಮುಂಗಾಮಿಯಾಗಿರುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.    
ಜವಾಬ್ದಾರಿಯುತ ದೇಶವಾಗಿ, ಭಾರತ ತನ್ನ ನ್ಯೂಕ್ಲಿಯರ್  ಕಮಾಂಡ್ ಪ್ರಾಧಿಕಾರದಡಿ ,  ಸದೃಢ ಪರಮಾಣು ಪಡೆ ಮತ್ತು ನಿಯಂತ್ರಣ ಸ್ವರೂಪ, ಪರಿಣಾಮಕಾರಿ ಸುರಕ್ಷಾ ಭರವಸೆಯ ಸಂರಚನೆ ಮತ್ತು ಕಠಿಣ ರಾಜಕೀಯ ನಿಯಂತ್ರಣ  ಹೊಂದಿದೆ.     ಅಂದಿನ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಜನವರಿ 04,2003ರಂದು ನಡೆದ ಭದ್ರತೆಯ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ  ‘ಕ್ರೆಡಿಬಲ್ ಮಿನಿಮಮ್ ಡಿಟರೆನ್ಸ್ ಆಂಡ್ ನೋ ಫಸ್ಟ್ ಯೂಸ್’ ಎಂಬ ಕಟ್ಟುಪಾಡಿಗೆ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi