ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್ ಪ್ರಧಾನಿ ಪೀಟೊಂಗ್ಟಾರ್ನ್ ಶಿನಾವತ್ರಾ ಅವರ ಅಭಿವ್ಯಕ್ತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ ಅವರು ಇಂದು ಬ್ಯಾಂಕಾಕ್ನ ಲಿಟಲ್ ಇಂಡಿಯಾದ ಪಹರತ್ನಲ್ಲಿ ಅತ್ಯದ್ಭುತ ಥಾಯ್ಲೆಂಡ್ ದೀಪಾವಳಿ ಉತ್ಸವ 2024 ಅನ್ನು ಉದ್ಘಾಟಿಸಿದರು. ಈ ಅದ್ಭುತ ಥಾಯ್ಲೆಂಡ್ ದೀಪಾವಳಿ ಉತ್ಸವಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಶುಭಾಶಯಗಳನ್ನು ಕೋರಿದ್ದಾರೆ. ಇದು ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಆಳವಾಗಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
"ಪ್ರಧಾನಮಂತ್ರಿ ಪೀಟೊಂಗ್ಟಾರ್ನ್ ಶಿನಾವತ್ರಾ ಅವರ ಅಭಿವ್ಯಕ್ತಿಯಿಂದ ಸಂತೋಷವಾಗಿದೆ. ಅತ್ಯದ್ಭುತವಾದ ಥಾಯ್ಲೆಂಡ್ ದೀಪಾವಳಿ ಉತ್ಸವಕ್ಕೆ ನನ್ನ ಶುಭಾಶಯಗಳು. ಇದು ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಗಾಢಗೊಳಿಸುತ್ತದೆ."
@ingshin
Delighted by PM Paetongtarn Shinawatra’s gesture. My best wishes for the Amazing Thailand Diwali Festival. May it deepen the cultural bonds between India and Thailand. @ingshin https://t.co/7TDRP5eKKn
— Narendra Modi (@narendramodi) October 30, 2024