ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶದ ಯುವಜನರಿಗೆ ಸ್ವಾಮಿ ವಿವೇಕಾನಂದರ ಸಾಯಕತ್ವದ ಸಲಹೆ ಪಾಲಿಸುವಂತೆ ತಿಳಿಸಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿಕಸನಕ್ಕೆ ಕೊಡುಗೆ ನೀಡಿದ ಹೆಮ್ಮೆಯ ಸನ್ಯಾಸಿಯನ್ನು ಶ್ಲಾಘಿಸಿದ್ದಾರೆ. ಎರಡನೇ ರಾಷ್ಟ್ರೀಯ ಯುವ ಸಂಸತ್ತು ಉತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ, ವ್ಯಕ್ತಿಯ ವಿಕಸನದಿಂದ ಸಾಂಸ್ಥಿಕ ನಿರ್ಮಾಣದವರೆಗೆ ಸದ್ಗುಣ ಚಕ್ರದ ಕುರಿತಂತೆ ಸ್ವಾಮೀಜಿಯವರ ಕೊಡುಗೆಯ ಬಗ್ಗೆ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಪ್ರಭಾವ ಕ್ಷೇತ್ರದ ಸಂಪರ್ಕಕ್ಕೆ ಬಂದ ವ್ಯಕ್ತಿಗಳು, ಸಂಸ್ಥೆಗಳನ್ನು ಕಟ್ಟುತ್ತಾರೆ, ಈ ಸಂಸ್ಥೆಗಳು ಅದಕ್ಕೆ ಪ್ರತಿಯಾಗಿ ಹೊಸ ಸಾಂಸ್ಥಿಕ ನಿರ್ಮಾಣಗಾರರನ್ನೇ ಸೃಷ್ಟಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು. ಇದು ವ್ಯಕ್ತಿಯ ವಿಕಸನದಿಂದ ಸಾಂಸ್ಥಿಕ ನಿರ್ಮಾಣರವರೆಗೆ ಮತ್ತು ಪರಸ್ಪರ ಸದ್ಗುಣ ವಲಯ ಆರಂಭಿಸುತ್ತದೆ ಎಂದರು. ಉದ್ಯಮಶೀಲತೆಯ ಉದಾಹರಣೆಯೊಂದಿಗೆ ಪ್ರಧಾನಮಂತ್ರಿಯವರು ಇದು ಭಾರತದ ದೊಡ್ಡ ಶಕ್ತಿ ಎಂದು ವಿವರಿಸಿದರು. ಒಬ್ಬ ವ್ಯಕ್ತಿಯು ಶ್ರೇಷ್ಠ ಕಂಪನಿಯನ್ನು ಕಟ್ಟುತ್ತಾನೆ ಮತ್ತು ಕಂಪನಿಯ ಪರಿಸರ ವ್ಯವಸ್ಥೆ ಅನೇಕ ಪ್ರತಿಭಾವಂತ ವ್ಯಕ್ತಿಗಳ ಸೃಷ್ಟಿಗೆ ಕಾರಣವಾಗುತ್ತದೆ, ಅವರು ತಮ್ಮ ಸಮಯದಲ್ಲಿ, ಹೊಸ ಕಂಪನಿಗಳನ್ನು ಹುಟ್ಟುಹಾಕುತ್ತಾರೆ.
ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿ ಒದಗಿಸಲು ಉದ್ದೇಶಿಸಿರುವ ನಾವಿನ್ಯಪೂರ್ಣ ಕಲಿಕಾ ವಿಧಾನದ ನಮ್ಯತೆಯ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಯುವಜನರಿಗೆ ಕರೆ ನೀಡಿದರು. ನೀತಿಯು ಯುವಜನರ ಆಕಾಂಕ್ಷೆಗಳು, ಕೌಶಲ್ಯಗಳು, ತಿಳಿವಳಿಕೆ ಮತ್ತು ಆಯ್ಕೆಗೆ ಆದ್ಯತೆ ನೀಡುವ ಮೂಲಕ ಉತ್ತಮ ವ್ಯಕ್ತಿಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ. ದೇಶದ ಯುವಜನರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯಮಶೀಲತೆ ಅವಕಾಶಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಒತ್ತಿಹೇಳಿದರು. "ನಾವು ದೇಶದಲ್ಲಿ ಪರಿಸರ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ, ಅದರ ಅನುಪಸ್ಥಿತಿಯಿಂದಾಗಿ ಯುವಜನರು ವಿದೇಶಗಳತ್ತ ನೋಡುವಂತಾಗಿದೆ." ಎಂದು ಪ್ರಧಾನಮಂತ್ರಿ ಹೇಳಿದರು.
ಆತ್ಮವಿಶ್ವಾಸವಿರುವ, ನಿರ್ಮಲ ಹೃದಯದ, ನಿರ್ಭೀತ ಮತ್ತು ಧೈರ್ಯಶಾಲಿ ಯುವಕರನ್ನು ರಾಷ್ಟ್ರದ ಬುನಾದಿ ಎಂದು ಗುರುತಿಸಿದವರು ಸ್ವಾಮಿ ವಿವೇಕಾನಂದರು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಯುವಜನರಿಗಾಗಿ ಸ್ವಾಮಿ ವಿವೇಕಾನಂದರು ನೀಡಿದ ಮಂತ್ರಗಳನ್ನು ಶ್ರೀ ಮೋದಿ ವ್ಯಾಖ್ಯಾನಿಸಿದರು. ದೈಹಿಕ ಸಾಮರ್ಥ್ಯ ಎಂದರೆ ‘ಕಬ್ಬಿಣದಂಥ ಸ್ನಾಯುಗಳು ಮತ್ತು ಉಕ್ಕಿನ ನರಮಂಡಲ’, ಹೀಗಾಗಿ ಸರ್ಕಾರವು ಫಿಟ್ ಇಂಡಿಯಾ ಚಳವಳಿ, ಯೋಗವನ್ನು ಉತ್ತೇಜಿಸುತ್ತಿದೆ ಮತ್ತು ಕ್ರೀಡೆಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು. ವ್ಯಕ್ತಿತ್ವ ವಿಕಸನಕ್ಕಾಗಿ, ನೀಡಿದ ಸಲಹೆ ‘ನಿಮ್ಮಲ್ಲಿ ನಂಬಿಕೆ ಇಡಿ’; ನಾಯಕತ್ವ ಮತ್ತು ತಂಡದ ಕೆಲಸಕ್ಕಾಗಿ ಸ್ವಾಮೀಜಿ ಅವರು ‘ಎಲ್ಲರನ್ನೂ ನಂಬಿರಿ’ ಎಂದು ಹೇಳಿದ್ದರು ಎಂದರು.