ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘನತೆವೆತ್ತ ತುನ್ ಡಾ. ಮಹಾತಿರ್ ಮೊಹಮದ್ ಅವರಿಗೆ ದೂರವಾಣಿ ಕರೆ ಮಾಡಿ, ಮಲೇಷಿಯಾದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಮಲೇಷಿಯಾದ ಸ್ನೇಹಪರ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಧಾನಮಂತ್ರಿ ಮೋದಿ ಶುಭ ಕೋರಿದರು. ಆಪ್ತ ಮತ್ತು ಪರಸ್ಪರ ಉಪಯುಕ್ತವಾದ ಭಾರತ ಮತ್ತು ಮಲೇಷಿಯಾದ ಬಾಂಧವ್ಯ ಹಂಚಿಕೆಯ ಮೌಲ್ಯ, ಹಿತ ಮತ್ತು ಚೈತನ್ಯದಾಯಕ ಜನರೊಂದಿಗಿನ ಬಾಂಧವ್ಯದ ಬಲವಾದ ಬುನಾದಿಯನ್ನಾಧರಿಸಿದೆ ಎಂದು ಪ್ರತಿಪಾದಿಸಿದರು. ಭಾರತ ಮತ್ತು ಮಲೇಷಿಯಾದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ಮಹಾತಿರ್ ಮೊಹಮದ್ ಅವರೊಂದಿಗೆ ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು.