ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿ ಮುಖಂಡ ಶ್ರೀ ಅರುಣ್ ಜೇಟ್ಲಿ ಅವರ ನಿಧನಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
 
“ಅರುಣ್ ಜೇಟ್ಲಿಯವರು  ಒಬ್ಬ ರಾಜಕೀಯ ದಿಗ್ಗಜ , ಅತ್ಯುನ್ನತ ಬೌದ್ಧಿಕ ಮತ್ತು ಪ್ರತಿಭಾಶಾಲಿ ಕಾನೂನು ಪಂಡಿತರು. ಅವರು ಭಾರತಕ್ಕೆ ಶಾಶ್ವತ ಕೊಡುಗೆ ನೀಡಿದ ಸ್ಪಷ್ಟ ನಾಯಕರಾಗಿದ್ದರು. ಅವರ ನಿಧನ ಬಹಳ ದುಃಖ ತಂದಿದೆ. ಅವರ ಪತ್ನಿ ಸಂಗೀತ ಜೀ ಮತ್ತು ಮಗ ರೋಹನ್ ಅವರೊಂದಿಗೆ ಮಾತನಾಡಿ  ಸಂತಾಪ ವ್ಯಕ್ತಪಡಿಸಿದ್ದೇನೆ. ಓಂ ಶಾಂತಿ.
 
ಜೀವನಾಸಕ್ತಿ, ಬುದ್ಧಿವಂತಿಕೆ, ಉತ್ತಮ ಹಾಸ್ಯಪ್ರಜ್ಞೆ ಮತ್ತು ವರ್ಚಸ್ಸಿನಿಂದ ಕೂಡಿದ್ದ  ಶ್ರೀ .ಅರುಣ್ ಜೇಟ್ಲಿ ಅವರನ್ನು ಸಮಾಜದ ಎಲ್ಲಾ ವರ್ಗದ ಜನರು ಮೆಚ್ಚಿದ್ದರು. ಅವರು ಭಾರತದ ಸಂವಿಧಾನ, ಇತಿಹಾಸ, ಸಾರ್ವಜನಿಕ ನೀತಿ, ಆಡಳಿತ ಮತ್ತು ಆಡಳಿತದ ಬಗ್ಗೆ ಅಕಳಂಕ ಜ್ಞಾನವನ್ನು ಹೊಂದಿದ್ದರು.
 
ಅವರ ಸುದೀರ್ಘ ರಾಜಕೀಯ ಜೀವನದಲ್ಲಿ, ಶ್ರೀ ಅರುಣ್ ಜೇಟ್ಲಿ  ಅವರು ಅನೇಕ ಸಚಿವ ಜವಾಬ್ದಾರಿಗಳನ್ನು ಹೊಂದಿದ್ದರು. ಇದು ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು, ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು, ಜನಪರ ಕಾನೂನುಗಳನ್ನು ರೂಪಿಸಲು ಮತ್ತು ಇತರ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ವೃದ್ಧಿಸಲು ಅವರಿಗೆ ಅನುವು ಮಾಡಿಕೊಟ್ಟಿತು.
 
ಬಿಜೆಪಿ ಮತ್ತು ಶ್ರೀ ಅರುಣ್ ಜೇಟ್ಲಿ  ಅವರದು ಮುರಿಯಲಾಗದ ಬಾಂಧವ್ಯ. ಉಜ್ವಲ ವಿದ್ಯಾರ್ಥಿ ನಾಯಕರಾಗಿ, ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರು ನಮ್ಮ ಪಕ್ಷದಲ್ಲಿ ಹೆಚ್ಚು ಇಷ್ಟಪಡುವ ನಾಯಕರಾದರು. ಅವರು ಪಕ್ಷದ ಕಾರ್ಯಕ್ರಮಗಳು ಮತ್ತು ಸಿದ್ಧಾಂತವನ್ನು ಸಮಾಜದ ವಿಶಾಲ ವ್ಯಾಪ್ತಿಗೆ ನಿರೂಪಿಸಬಲ್ಲವರಾಗಿದ್ದರು.
 
ಶ್ರೀ. ಅರುಣ್ ಜೇಟ್ಲಿ  ಅವರ ನಿಧನದೊಂದಿಗೆ, ನಾನು ಒಬ್ಬ ಅಮೂಲ್ಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾನು ದಶಕಗಳಿಂದ ಅವರನ್ನು ಬಲ್ಲೆ ಎಂಬ  ಗೌರವವನ್ನು ಹೊಂದಿದ್ದೇನೆ. ಸಮಸ್ಯೆಗಳ ಬಗ್ಗೆ ಅವರ ಒಳನೋಟ ಮತ್ತು ವಿಷಯಗಳ ಸೂಕ್ಷ್ಮ ತಿಳುವಳಿಕೆಗೆ ಬಹಳ ಪರ್ಯಾಯಗಳಿಲ್ಲ. ಅವರು ಚೆನ್ನಾಗಿ ಬದುಕಿದರು, ಅಸಂಖ್ಯಾತ ಸಂತೋಷದ ನೆನಪುಗಳೊಂದಿಗೆ ನಮ್ಮೆಲ್ಲರನ್ನೂ ಅಗಲಿದ್ದಾರೆ. ಅವರ ಅಗಲಿಕೆ ನಮ್ಮನ್ನು ಕಾಡುತ್ತದೆ ” ಎಂದು ಪ್ರಧಾನಿ ಹೇಳಿದ್ದಾರೆ.
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government