ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್.ಡಿ.ಎಮ್.ಎ.) ಆರನೇ ಸಭೆಯು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ದೇಶದ ಮೇಲೆ ಪರಿಣಾಮ ಬೀರುವ ವಿಪತ್ತುಗಳಿಗೆ ಪ್ರತಿಸ್ಪಂದಿಸುವ ಮತ್ತು ಅವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ಎನ್.ಡಿ.ಎಮ್.ಎ. ಚಟುವಟಿಕೆಗಳನ್ನು ಹಾಗೂ ಪ್ರಸಕ್ತ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಅವಲೋಕನ ಮಾಡಿದರು.
ಜೀವ ಮತ್ತು ಆಸ್ತಿಪಾಸ್ತಿ ರಕ್ಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಗಿ ಪ್ರತಿಸ್ಪಂದಿಸಲು ಹೆಚ್ಚಿನ ಜಂಟಿ ಕಾರ್ಯಗಳನ್ನು ನಡೆಸುವುದರ ಜತೆಗೆ, ವಿವಿಧ ಭಾಗೀದಾರರ ನಡುವೆ ಇರಬೇಕಾದ ಉತ್ತಮ ಸಹಕಾರದ ಕುರಿತು ಮಾತನಾಡಿದ ಪ್ರಧಾನಮಂತ್ರಿ ,ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಜಾಗತಿಕ ನೈಪುಣ್ಯತೆಯನ್ನು ಪರಿಚಯಿಸುವ ಅಗತ್ಯತೆಗೆ ಒತ್ತು ನೀಡಿದರು.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಶ್ರೀ ರಾಜ್ ನಾಥ್ ಸಿಂಗ್, ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೇಟ್ಲಿ ಮತ್ತು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶ್ರೀ ರಾಧಾ ಮೋಹನ್ ಸಿಂಗ್ ಅವರು ಉಪಸ್ಥಿತರಿದ್ದರು. ಎನ್.ಡಿ.ಎಮ್.ಎ.ಯ ಸದಸ್ಯರು ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.