ಪ್ರಧಾನಮಂತ್ರಿ ಅವರಿಂದು ಲೋಕಮಾನ್ಯ ಮಾರ್ಗದಲ್ಲಿರುವ ತಮ್ಮ ಮನೆಗೆ ಸ್ತಬ್ದ ಚಿತ್ರ ಕಲಾವಿದರು, ಬುಡಕಟ್ಟು ಜನಾಂಗದ ಅತಿಥಿಗಳು, ಎನ್.ಸಿ.ಸಿ. ಕೆಡೆಟ್ ಗಳು ಮತ್ತು ಎನ್.ಎಸ್.ಎಸ್. ಕಾರ್ಯಕರ್ತರನ್ನು ಬರಮಾಡಿಕೊಂಡು ಸ್ವಾಗತಿಸಿದರು.
ಗಣರಾಜ್ಯೋತ್ಸವ ಪರೇಡ್ ಮತ್ತು ಇತರ ಆ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿರುವ ಕಲಾವಿದರು ಮತ್ತು ಇತರರನ್ನು ಅಭಿನಂದಿಸಿದ ಪ್ರಧಾನಮಂತ್ರಿ ಅವರು ಇದು ಅವರ ಜೀವನದ ಅತ್ಯಂತ ದೊಡ್ಡ ಅವಕಾಶ ಎಂದರು. ಇಡೀ ದೇಶ ಅವರಿಂದ ಪ್ರೇರಣೆ ಪಡೆಯುತ್ತದೆ ಎಂದೂ ಅವರು ಹೇಳಿದರು.
ದೈನಂದಿನ ಜೀವನದಲ್ಲಿ ಶಿಸ್ತಿನ ಮಹತ್ವವನ್ನು ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು ಶಿಸ್ತು ಎನ್ನುವುದು ಎನ್.ಸಿ.ಸಿ.ಯ ಅವಿಭಾಜ್ಯ ಅಂಗ ಎಂದರು. ನಾಗರಿಕರು ಎಲ್ಲಾ ಸಮಯದಲ್ಲಿಯೂ ತಮ್ಮ ನಾಗರಿಕ ಕರ್ತವ್ಯಗಳ ಬಗ್ಗೆ ಜಾಗೃತರಾಗಿರಬೇಕು ಎಂದೂ ನುಡಿದ ಪ್ರಧಾನಮಂತ್ರಿ ಅವರು ಇದು ಜನತೆಯ ಅಶೋತ್ತರಗಳ ಜೊತೆಗೂಡಿ ಭಾರತವನ್ನು ಔನ್ನತ್ಯಕ್ಕೆ ಏರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಕೆಲವು ಆಹ್ವಾನಿತರ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.