ಕತಾರ್ ದೇಶಕ್ಕೆ ಅಧಿಕೃತ ಭೇಟಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೋಹಾಕ್ಕೆ ಆಗಮಿಸಿದರು. ಕತಾರ್ ಗೆ ಇದು ಪ್ರಧಾನಮಂತ್ರಿಯವರ ಎರಡನೇ ಭೇಟಿಯಾಗಿದೆ, ಅವರು ಜೂನ್ 2016 ರಲ್ಲಿ ಮೊದಲ ಬಾರಿಗೆ ಕತಾರ್ ಗೆ ಭೇಟಿ ನೀಡಿದ್ದರು.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಘನತೆವೆತ್ತ ಶ್ರೀ ಸೋಲ್ತಾನ್ ಬಿನ್ ಸಾದ್ ಅಲ್-ಮುರೈಖಿ ಅವರು ಪ್ರಧಾನಮಂತ್ರಿಯವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು.
ತಮ್ಮ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಹಲವಾರು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಯವರ ಗೌರವಾರ್ಥ ಕತಾರ್ ನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರು ಇಂದು ರಾತ್ರಿ ಏರ್ಪಡಿಸಿರುವ ಭೋಜನಕೂಟದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ಫೆಬ್ರವರಿ 15 ರಂದು, ಕತಾರ್ ನ ಅಮೀರ್, ಘನತೆವೆತ್ತ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಪ್ರಧಾನಮಂತ್ರಿಯವರು ಭೇಟಿಯಾಗಲಿದ್ದಾರೆ, ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.
Landed in Doha. Looking forward to a fruitful Qatar visit which will deepen India-Qatar friendship. pic.twitter.com/h6QHKpqYcm
— Narendra Modi (@narendramodi) February 14, 2024