ಪುಣೆಯಲ್ಲಿ 2019ರ ಡಿಸೆಂಬರ್‌ 7 ಮತ್ತು 8ರಂದು ನಡೆದ 54ನೇ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಅವರು ಮಹತ್ವದ ಸಲಹೆಗಳನ್ನು ನೀಡುವ ಜತೆಗೆ, ಸಮಾರೋಪ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಗುಪ್ತದಳ ಇಲಾಖೆಯ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕವನ್ನು ಪ್ರಧಾನಿ ಅವರು ಪ್ರದಾನ ಮಾಡಿದರು.

ಪ್ರಧಾನಿ ಅವರ ಮಾರ್ಗದರ್ಶನದಲ್ಲಿ ಅರ್ಥಪೂರ್ಣವಾದ ಅಭಿಪ್ರಾಯಗಳು ಮತ್ತು‌ ಅನುಭವಗಳನ್ನು ವಿನಿಯಮ ಮಾಡಿಕೊಳ್ಳಲಾಯಿತು. ಈ ಮೊದಲು ಒಂದು ದಿನ ನಡೆಯುತ್ತಿದ್ದ ಸಮ್ಮೇಳನವನ್ನು 2015ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗುತ್ತಿದೆ. ಜತೆಗೆ ಕೇವಲ ದೆಹಲಿಗೆ ಬದಲಾಗಿ ದೇಶದ ವಿವಿಧ ಭಾಗಗಳಲ್ಲಿಯೂ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ಸಮ್ಮೇಳನದ ಕಾರ್ಯಸೂಚಿಯಲ್ಲೂ ಹಲವು ಮಹತ್ವದ ಬದಲಾವಣೆಗಳನ್ನು ಕೈಗೊಳ್ಳಲಾಯಿತು. ಸಮ್ಮೇಳನದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರು ಪಾಲ್ಗೊಳ್ಳುತ್ತಿದ್ದಾರೆ. ಸಮ್ಮೇಳನಕ್ಕಾಗಿ ಡಿಜಿಪಿಗಳ ಸಮಿತಿಗಳನ್ನು ರಚಿಸಿ ವಿಷಯಗಳನ್ನು ಪ್ರಸ್ತುತಪಡಿಸುವ ಕುರಿತು ಚರ್ಚಿಸಲಾಯಿತು. ಅದರಲ್ಲೂ ಭದ್ರತೆಗೆ ಬೆದರಿಕೆಯಾಗಿರುವ ವಿಷಯಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಹೆಚ್ಚುವರಿಯಾಗಿ, ಸಮ್ಮೇಳನದಲ್ಲಿ ಭದ್ರತೆ ಕುರಿತ ನೀತಿ ವಿಷಯಗಳನ್ನು ಮತ್ತಷ್ಟು ಸಮಗ್ರವಾಗಿ ಪರಿಷ್ಕರಿಸುವ ಕುರಿತು ಸಮಾಲೋಚಿಸಲಾಯಿತು. ಈ ವರ್ಷ, ಭಯೋತ್ಪಾದನೆ, ನಕ್ಸಲ್‌ ಸಮಸ್ಯೆ, ಕರಾವಳಿ ಭದ್ರತೆ, ಸೈಬರ್‌ ಬೆದರಿಕೆ, ಮೂಲಭೂತವಾದ ನಿಗ್ರಹ ಮತ್ತು ಮಾದಕ ದ್ರವ್ಯಗಳು ಮುಂತಾದ ಗಂಭೀರ ವಿಷಯಗಳನ್ನು ಚರ್ಚಿಸಲು 11 ಕೋರ್‌ ಸಮಿತಿಗಳನ್ನು ರಚಿಸಲಾಗಿತ್ತು. ಯೋಜನೆಗಳು ಮತ್ತು ನೀತಿಗಳನ್ನು ಅನುಷ್ಠಾನಗೊಳಿಸುವ ಕುರಿತು ಒತ್ತು ನೀಡಿದ ಪ್ರಧಾನಿ ಅವರು ಅಂತಿಮವಾಗಿ ಕೈಗೊಂಡ ಕ್ರಿಯಾ ಅಂಶಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುವ ಕುರಿತು ಪ್ರಸ್ತಾಪಿಸಿದರು.

ದೇಶದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಜನಸಾಮಾನ್ಯರ ಜೀವನ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವಲ್ಲಿ ಶ್ರಮವಹಿಸುವ ಪೊಲೀಸ್‌ ಪಡೆಗಳ ಕೈಂಕರ್ಯವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಪೊಲೀಸರ ಕಾರ್ಯಕ್ಕೆ ಬೆನ್ನಲುಬಾಗಿ ನಿಂತಿರುವ ಅವರ ಕುಟುಂಬಗಳ ಸಮರ್ಪಣಾ ಮನೋಭಾವವನ್ನು ಸಹ ಮರೆಯಬಾರದು ಎಂದು ಹೇಳಿದರು. ಎಲ್ಲ ಕಾಲದಲ್ಲೂ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಪೊಲೀಸ್‌ ಪಡೆಯ ವರ್ಚಸ್ಸನ್ನು ಹೆಚ್ಚಿಸಲು ಎಲ್ಲರೂ ಶ್ರಮವಹಿಸಬೇಕು ಎಂದು ಪ್ರಧಾನಿ ಅವರು ಸಲಹೆ ನೀಡಿದರು. ಮಹಿಳೆಯರ ಸುರಕ್ಷತೆಗೆ ಮತ್ತು ಭದ್ರತೆಗೆ ಪೊಲೀಸಿಂಗ್‌ಗೂ ಹೆಚ್ಚು ಆದ್ಯತೆ ನೀಡಬೇಕು ಎಂದು ಪ್ರಧಾನಿ ಹೇಳಿದರು.

ಸಮ್ಮೇಳನದಿಂದ ಪಡೆದಿರುವ ಉತ್ಸಾಹ ಮತ್ತು ಹೊಸದಾಗಿ ತಿಳಿದುಕೊಂಡಿರುವ ವಿಷಯಗಳನ್ನು ರಾಜ್ಯಮಟ್ಟದಿಂದ ಜಿಲ್ಲಾಮಟ್ಟದಲ್ಲಿನ ಕೊನೆಯ ಹಂತದ ಎಲ್ಲ ಪೊಲೀಸ್‌ ಠಾಣೆಗಳವರೆಗೆ ತಲುಪಿಸಿ ಪೊಲೀಸ್‌ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ವಿವಿಧ ರಾಜ್ಯಗಳ ಪೊಲೀಸ್‌ ಪಡೆಗಳ ಉನ್ನತ ಅಧಿಕಾರಿಗಳು ಪ್ರಸ್ತುತಪಡಿಸಿದ ವಿಷಯಗಳನ್ನು ವಿಶ್ಲೇಷಿಸಿದ ಪ್ರಧಾನಿ ಅವರು, ಅತ್ಯುತ್ತಮ ಪದ್ಧತಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಸಲಹೆ ನೀಡಿದರು.

ತಂತ್ರಜ್ಞಾನವು ಪರಿಣಾಮಕಾರಿ ಅಸ್ತ್ರವಾಗಿದೆ. ಇದರಿಂದ, ಕ್ರಿಯಾಶೀಲವಾದ ಪೊಲಿಸಿಂಗ್‌ ಮಾಡಬಹುದು ಮತ್ತು ಜನಸಾಮಾನ್ಯರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಸೂಚಿಸಿದರು.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿರುವುದಾಗಿ ಪ್ರಧಾನಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಪೂರಕ ವಾತಾವರಣ ನಿರ್ಮಿಸುವಂತೆ ಈ ರಾಜ್ಯಗಳ ಡಿಜಿಪಿಗಳಿಗೆ ಪ್ರಧಾನಿ ಸೂಚಿಸಿದರು.
ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಪೊಲೀಸ್‌ ಅಧಿಕಾರಿಗಲು ಒತ್ತಡಕ್ಕೆ ಒಳಗಾಗುವುದು ಸಹಜ. ಅವರ ಕಾರ್ಯ ಶ್ಲಾಘನೀಯ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸಮಾರೋಪ ಭಾಷಣದಲ್ಲಿ ಹೇಳಿದರು. ಆದರೆ, ಯಾವುದೇ ಸಂದರ್ಭದಲ್ಲಿ ಅನುಮಾನಗಳು ಮೂಡಿದಾಗ, ಸಿದ್ಧಾಂತ ಮತ್ತು ಉತ್ಸಾಹ, ಕ್ರಿಯಾಶೀಲತೆಯನ್ನು ಮರೆಯಬಾರದು. ಯಾವ ಉದ್ದೇಶದಿಂದ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ರಾಷ್ಟ್ರೀಯ ಹಿತಾಸಕ್ತಿ ಉದ್ದೇಶದಿಂದ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿನ ದುರ್ಬಲರು ಮತ್ತು ಬಡ ವರ್ಗದವರ ಕಲ್ಯಾಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. 

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi