ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ತಮ್ಮ ಭೇಟಿಯ ಭಾಗವಾಗಿ 14 ಪಕ್ಷಗಳ ಮೈತ್ರಿಕೂಟದ ಸಂಚಾಲಕರು ಮತ್ತು ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದರು. ಉಭಯ ದೇಶಗಳ ನಡುವಿನ ಸಂಬಂಧ ಬಲವರ್ಧನೆಗೆ ಸಂಬಂಧಸಿದಂತೆ ನಡೆದ ಮಾತುಕತೆಯಲ್ಲಿ ದ್ವಿಪಕ್ಷೀಯ ಸಂಬಂಧಗಳ ವಿಭಿನ್ನ ವಿಚಾರಗಳನ್ನು ಕೇಂದ್ರೀಕರಿಸಿ ಸಮಾಲೋಚನೆ ನಡೆಸಲಾಯಿತು.