ಜೋರ್ಡಾನ್ ರಾಜ್ಯ ಸ್ಥಾಪನೆಯಾದ 100 ನೇ ವರ್ಷಾಚರಣೆಯ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಘನತೆವೆತ್ತ ದೊರೆ ಎರಡನೇ ಅಬ್ದುಲ್ಲಾ ಮತ್ತು ಜೋರ್ಡಾನ್ ಹಶೆಮಿತ್ ಸಾಮ್ರಾಜ್ಯದ ಜನರನ್ನು ಅಭಿನಂದಿಸಿದರು.

ಪ್ರಧಾನಿ ತಮ್ಮ ವಿಡಿಯೋ ಸಂದೇಶದಲ್ಲಿ, ಘನತೆವೆತ್ತ ದೊರೆ ಎರಡನೇ ಅಬ್ದುಲ್ಲಾ ಮತ್ತು ಜೋರ್ಡಾನ್ ಜನರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಆತ್ಮೀಯ ಶುಭಾಶಯಗಳನ್ನು ಸಲ್ಲಿಸಿದರು. ಜೋರ್ಡಾನ್ ನ ಸುಸ್ಥಿರ ಮತ್ತು ಸಮಗ್ರ ಪ್ರಗತಿಗೆ ಕಾರಣರಾದ ಹಾಗೂ ಆರ್ಥಿಕ ಮತ್ತು ಸಾಮಾಜಿಕ–ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆಗೆ ಕಾರಣರಾದ ಘನತೆವೆತ್ತ ದೊರೆಗಳ ದೂರದೃಷ್ಟಿಯ ನಾಯಕತ್ವವನ್ನು ಪ್ರಧಾನ ಮಂತ್ರಿ ಮೋದಿಯವರು ಶ್ಲಾಘಿಸಿದರು.  ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಘನತೆವೆತ್ತ ದೊರೆ ಎರಡನೇ ಅಬ್ದುಲ್ಲಾ ಅವರ ಪ್ರಮುಖ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಇಂದು ವಿಶ್ವದ ಪ್ರಮುಖ ಪ್ರಾಂತ್ಯದಲ್ಲಿರುವ ಜೋರ್ಡಾನ್, ಮಂದಗಾಮಿತ್ವದ ಪ್ರಬಲ ಧ್ವನಿ ಮತ್ತು ಜಾಗತಿಕ ಸಂಕೇತವಾಗಿ ಹೊರಹೊಮ್ಮಿದೆ ಎಂದರು.

ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧಗಳು ಗಾಢವಾಗುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, 2018ರಲ್ಲಿ ಘನತೆವೆತ್ತ ದೊರೆ ಎರಡನೇ ಅಬ್ದುಲ್ಲಾ ಅವರು ಭಾರತಕ್ಕೆ ಭೇಟಿ ನೀಡಿದ ಐತಿಹಾಸಿಕ ಕ್ಷಣವನ್ನು ಪ್ರೀತಿಯಿಂದ ಸ್ಮರಿಸಿದರು. ಈ ಸಮಯದಲ್ಲಿ ಘನತೆವೆತ್ತ ದೊರೆ ಅಬ್ದುಲ್ಲಾ ಅವರು ಸಹಿಷ್ಣುತೆ, ಏಕತೆ ಮತ್ತು ಮಾನವೀಯತೆಯನ್ನು ಗೌರವಿಸುವ ಕುರಿತಾದ 2004ರ ʻಅಮ್ಮನ್ ಸಂದೇಶʼವನ್ನು ಪುನರುಚ್ಚರಿಸಿದ್ದರು ಎಂದು ಮೋದಿ ಹೇಳಿದರು.

ಶಾಂತಿ ಮತ್ತು ಸಮೃದ್ಧಿಗಾಗಿ  ಮಂದಗಾಮಿತ್ವ ಮತ್ತು ಶಾಂತಿಯುತ ಸಹಬಾಳ್ವೆ ಅತ್ಯಗತ್ಯ ಎಂಬ ಸಮಾನ ನಂಬಿಕೆಯನ್ನು ಭಾರತ ಮತ್ತು ಜೋರ್ಡಾನ್ ಹೊಂದಿವೆ ಎಂದು ಪ್ರಧಾನಿ ಗಮನ ಸೆಳೆದರು.  ಸಮಸ್ತ ಮನುಕುಲದ ಉತ್ತಮ ಭವಿಷ್ಯಕ್ಕಾಗಿ ತಮ್ಮ ಜಂಟಿ ಪ್ರಯತ್ನದಲ್ಲಿ ಎರಡು ದೇಶಗಳು ಜೊತೆ ಜೊತೆಯಲ್ಲಿ ಸಾಗಲಿವೆ ಎಂದು ಪ್ರಧಾನಿ ಅವರು ಒತ್ತಿ ಹೇಳಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bad loans decline: Banks’ gross NPA ratio declines to 13-year low of 2.5% at September end, says RBI report

Media Coverage

Bad loans decline: Banks’ gross NPA ratio declines to 13-year low of 2.5% at September end, says RBI report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಡಿಸೆಂಬರ್ 2024
December 27, 2024

Citizens appreciate PM Modi's Vision: Crafting a Global Powerhouse Through Strategic Governance