ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂಟೆಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ಯಾಟ್ ಗೆಲ್ಸಿಂಗರ್ ಅವರನ್ನು ಭೇಟಿ ಮಾಡಿದರು ಮತ್ತು ತಂತ್ರಜ್ಞಾನ, ಸಂಶೋಧನೆ ಹಾಗೂ ಆವಿಷ್ಕಾರಗಳ ಕುರಿತಂತೆ ಚರ್ಚೆ ನಡೆಸಿದರು. ಪ್ಯಾಟ್ ಗೆಲ್ಸಿಂಗರ್ ಅವರು ಭಾರತದ ಬಗ್ಗೆ ಸಕಾರಾತ್ಮಕ ಮನೋಭಾವ ಹೊಂದಿರುವುದಕ್ಕಾಗಿ ಅವರನ್ನು ಶ್ಲಾಘಿಸಿದರು.
ಇಂಟೆಲ್ ಸಿಇಒ ಅವರ ಟ್ವೀಟ್ ಗೆ ಪ್ರತಿಯಾಗಿ ಪ್ರಧಾನಮಂತ್ರಿ ಅವರು "ಪ್ಯಾಟ್ ಗೆಲ್ಸಿಂಗರ್ ಭೇಟಿ ಹರ್ಷ ತಂದಿದೆ. ನಾವು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ ವಿಷಯಗಳ ಕುರಿತು ಉತ್ತಮ ಚರ್ಚೆ ನಡೆಸಿದೆವು. ಭಾರತದ ಬಗೆಗಿನ ಅವರ ಸಕಾರಾತ್ಮಕ ಭಾವನೆಗೆ ತಾವು ಮೆಚ್ಚುಗೆ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
Celebrating three decades of @intel partnership with India! pic.twitter.com/jlV2KNKsMO
— Pat Gelsinger (@PGelsinger) April 6, 2022