ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ ವಿಮಾನ ನಿಲ್ದಾಣಕ್ಕಾಗಿ ಮಧ್ಯಪ್ರದೇಶದ ರೇವಾ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಮಾನ ನಿಲ್ದಾಣದ ನಿರ್ಮಾಣದಿಂದ ರೇವಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಜನರ ಜೀವನ ಸುಲಭವಾಗಲಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.
ರೇವಾದ ಸಂಸತ್ ಸದಸ್ಯ ಜನಾರ್ದನ ಮಿಶ್ರಾ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:
"ಅನೇಕಾನೇಕ ಅಭಿನಂದನೆಗಳು. ಈ ವಿಮಾನ ನಿಲ್ದಾಣದ ನಿರ್ಮಾಣದೊಂದಿಗೆ, ರೇವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರ ಜೀವನವು ಸುಲಭವಾಗುತ್ತದೆ ಮತ್ತು ಅಭಿವೃದ್ಧಿಯ ವೇಗದೊಂದಿಗೆ ಅಲ್ಲಿನ ಜನರ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ."
बहुत-बहुत बधाई। इस हवाई अड्डे के बनने से रीवा और आसपास के लोगों का जीवन आसान होगा और वे विकास की तेज रफ्तार से जुड़ेंगे। https://t.co/DqM4NOtPwT
— Narendra Modi (@narendramodi) February 16, 2023